ಮೇಷ ರಾಶಿ: ಶನಿಯ ಹಿಮ್ಮುಖ ಚಲನೆಯು ಮೇಷ ರಾಶಿಯ ಜನರ ವೃತ್ತಿಜೀವನದ ಮೇಲೆ ಬಹಳ ನಿರ್ಣಾಯಕ ಪರಿಣಾಮವನ್ನು ಬೀರುತ್ತದೆ. ನೀವು ಕೆಲಸದಲ್ಲಿ ಒಂದೆಲ್ಲಾ ಒಂದು ಸಮಸ್ಯೆ ಅನುಭವಿಸಬೇಕಾಗುತ್ತದೆ. ವಿದ್ಯಾರ್ಥಿಗಳು ಕೂಡ ಈ ಸಮಯದಲ್ಲಿ ಕಠಿಣ ಪರಿಶ್ರಮ ಪಡಬೇಕಾಗುತ್ತದೆ. ಪರಿಹಾರವಾಗಿ ಶನಿವಾರದಂದು ಅಶ್ವಥ ಮರದ ಕೆಳಗೆ ಸಾಸಿವೆ ಎಣ್ಣೆಯ ದೀಪವನ್ನು ಹಚ್ಚಬೇಕು.ಇದ್ದಕ್ಕಿದ್ದಂತೆ ಕೆಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ
ವೃಶ್ಚಿಕ ರಾಶಿ: ಶನಿಯ ಹಿಮ್ಮುಖ ಚಲನೆಯು ವೃಶ್ಚಿಕ ರಾಶಿಯ ಜೀವನದಲ್ಲಿ ಬಹಳಷ್ಟು ಕಷ್ಟಗಳು ಎದುರಾಗುತ್ತದೆ. ಅನೇಕ ಕುಟುಂಬ ಸದಸ್ಯರ ಆರೋಗ್ಯವು ಹದಗೆಡಬಹುದು, ಈ ಕಾರಣದಿಂದಾಗಿ ನೀವು ಸಾಕಷ್ಟು ಓಡಬೇಕಾಗುತ್ತದೆ. ಭೂ ಆಸ್ತಿಗೆ ಸಂಬಂಧಿಸಿದಂತೆ ಯಾರೊಂದಿಗಾದರೂ ವಿವಾದ ಆಗುತ್ತದೆ. ಆದರೆ ಕೆಲಸದ ಸ್ಥಳದಲ್ಲಿ ಪರಿಸ್ಥಿತಿಯು ನಿಮಗೆ ಅನುಕೂಲಕರವಾಗಿರುತ್ತದೆ ಮತ್ತು ನಿಮ್ಮ ಪ್ರಯತ್ನಗಳು ಯಶಸ್ವಿಯಾಗುತ್ತವೆ.
ಕುಂಭ ರಾಶಿ: ಶನಿಯು ಕುಂಭ ರಾಶಿಯಲ್ಲಿ ಹಿಮ್ಮೆಟ್ಟುವುದರಿಂದ ಜಾಸ್ತಿ ಸಮಸ್ಯೆ ಇವರಿಗೇ ಆಗುತ್ತದೆ. ಈ ಸಮಯದಲ್ಲಿ ನೀವು ಎಲ್ಲಾ ಕ್ಷೇತ್ರದಲ್ಲಿ ಸಹ ಹೆಚ್ಚು ಜಾಗರೂಕರಾಗಿರಬೇಕು. ನಿಮ್ಮ ಕುಟುಂಬ ಜೀವನದಲ್ಲಿ ಅನೇಕ ಏರಿಳಿತ ಆಗುತ್ತದೆ. ಸಂಗಾತಿಯೊಂದಿಗಿನ ಸಂಬಂಧದಲ್ಲಿನ ಒತ್ತಡ ಹೆಚ್ಚಾಗುತ್ತದೆ. ಅದೇ ಸಮಯದಲ್ಲಿ, ನೀವು ವೃತ್ತಿಜೀವನದಲ್ಲಿ ಕೂಡ ಸಾಲು ಸಾಲು ಸಮಸ್ಯೆ ಎದುರಿಸಬೇಕಾಗುತ್ತದೆ.