ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿಯು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸ್ಥಳಾಂತರಗೊಂಡಾಗ ಕೆಲವು ಪರಿಣಾಮ ಬೀರುತ್ತವೆ. ಕೆಲವು ರಾಶಿಗಳಿಗೆ ಶುಭವಾದ್ರೆ, ಮತ್ತೆ ಕೆಲವರಿಗೆ ಸಾಡೇ ಸಾತಿ ಶುರುವಾಗುತ್ತದೆ. ಶನಿಯು ಜನವರಿ 17, 2023 ರಂದು ಕುಂಭ ರಾಶಿಯನ್ನು ಪ್ರವೇಶಿಸಲಿದೆ. (ಸಾಂದರ್ಭಿಕ ಚಿತ್ರ )
2/ 8
ಶನಿ ಪ್ರವೇಶದ ಕಾರಣದಿಂದ ಮಕರ, ಕುಂಭ ಮತ್ತು ಮೀನ ರಾಶಿಗಳಲ್ಲಿ ಸಾಡೇ ಸಾತಿಯ ಪರಿಣಾಮ ಬೀರಲಿದೆ. ಆದ್ದರಿಂದ ಈ ರಾಶಿಯವರಿಗೆ ಕಷ್ಟದ ಸಮಯಗಳು ಎದುರಾಗಲಿದೆ. ವ್ಯಾಪಾರಸ್ಥರು ಆರ್ಥಿಕ ಸಂಕಷ್ಟಕ್ಕೆ ಸಿಲುಕಬಹುದು. (ಸಾಂದರ್ಭಿಕ ಚಿತ್ರ)
3/ 8
ಈ ವೇಳೆ ಕೆಲಸದಲ್ಲಿ ಹಿನ್ನಡೆ ಆಗಬಹುದು. ಮೇಲಾಧಿಕಾರಿ ಅಥವಾ ಸಹೋದ್ಯೋಗಿಗಳ ಜೊತೆ ಭಿನ್ನಾಬಿಪ್ರಾಯಗಳು ಉಂಟಾಗಬಹುದು. ಈ ಸಮಯದಲ್ಲಿ ಜನರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡಬೇಕು. ಸಾಡೇಸಾತಿ ಸಮಯದಲ್ಲಿಅಪಘಾತಗಳು ಉಂಟಾಗುವ ಸಾಧ್ಯತೆಗಳಿರುತ್ತವೆ. (ಸಾಂದರ್ಭಿಕ ಚಿತ್ರ)
4/ 8
ಸಾಡೇಸಾತಿ ಸಮಯದಲ್ಲಿ ಯಾವ ರಾಶಿ ಯಾವ ಮನೆಯಲ್ಲಿದೆ ಎಂಬುದನ್ನು ನೋಡಿಕೊಳ್ಳಬೇಕು. ಶನಿಯು ಮಂಗಳ ಗ್ರಹದಿಂದ ಪೀಡಿತನಾಗಿದ್ದರೆ ಅಪಾಯ ಸಂಭವಿಸುವ ಸಾಧ್ಯೆತಗಳಿರುತ್ತವೆ. ಈ ಸಮಯದಲ್ಲಿ ಜೈಲುವಾಸ ಅನುಭವಿಸುವ ಸನ್ನಿವೇಶಗಳು ಸೃಷ್ಟಿಯಾಗುತ್ತವೆ. (ಸಾಂದರ್ಭಿಕ ಚಿತ್ರ)
5/ 8
ವಯಸ್ಸು, ಆರೋಗ್ಯ, ರೋಗ, ಉದ್ಯೋಗ, ವ್ಯಾಪಾರ, ಹಣಕಾಸಿನ ಸಮಸ್ಯೆಗಳ ಮೇಲೆಯೂ ಶನಿಯ ಪ್ರಭಾವ ಬೀರುತ್ತದೆ. ಹಾಗಾಗಿ ಶನಿ ದೇವರಿಗೆ ಜನರು ವಿಶೇಷ ಪೂಜೆ ಸಲ್ಲಿಕೆ ಮಾಡುತ್ತಾರೆ. (ಸಾಂದರ್ಭಿಕ ಚಿತ್ರ)
6/ 8
ಶನಿ ದೇವನು ಮಕರ ರಾಶಿಯ ಅಧಿಪತಿ. ಶನಿ ದೇವನನ್ನು ತುಲಾ ರಾಶಿಯಲ್ಲಿ ಶ್ರೇಷ್ಠ ಎಂದು ಪರಿಗಣಿಸಲಾಗುತ್ತದೆ, ಆದರೆ ಮೇಷವು ಶನಿಯ ದುರ್ಬಲ ಚಿಹ್ನೆಯಾಗಿದೆ. ಜಾತಕದಲ್ಲಿ ಶನಿಯು ಲಾಭದಾಯಕನಾಗಿದ್ದರೆ, ಅದೃಷ್ಟ ಸಿಗಲಿದೆ. (ಸಾಂದರ್ಭಿಕ ಚಿತ್ರ)
7/ 8
ಜ್ಯೋತಿಷ್ಯದಲ್ಲಿ ಶನಿ ಪರಿಣಾಮ ಕ್ಯಾನ್ಸರ್, ಪಾರ್ಶ್ವವಾಯು, ಶೀತ, ಅಸ್ತಮಾ, ಚರ್ಮ ರೋಗಗಳು, ಮುರಿತಗಳು ಮುಂತಾದ ರೋಗಗಳಿಗೆ ಕಾರಣವೆಂದು ಪರಿಗಣಿಸಲಾಗಿದೆ. ಆಟೋಮೊಬೈಲ್ ವ್ಯಾಪಾರ, ಲೋಹ ಸಂಬಂಧಿತ ವ್ಯಾಪಾರ, ಇಂಜಿನಿಯರಿಂಗ್ ಇತ್ಯಾದಿಗಳಲ್ಲಿ ಶನಿಯು ಮೇಲುಗೈ ಇರುತ್ತದೆ. (ಸಾಂದರ್ಭಿಕ ಚಿತ್ರ)
8/ 8
(Disclaimer:ಮೇಲಿನ ಲೇಖನದ ವರದಿಯೂ ಧಾರ್ಮಿಕ ನಂಬಿಕೆಗಳು ನಡೆದ ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)