Dream Meaning: ಕನಸಿನಲ್ಲಿ ಈ ವಸ್ತುಗಳು ಬಂದ್ರೆ ದುಡ್ಡಿನ ಸುರಿಮಳೆ ಆಗೋದು ಗ್ಯಾರಂಟಿ
Dream Meaning: ನಮಗೆ ಕೆಲ ಕನಸು ಅರ್ಥವಿಲ್ಲದಂತೆ ಬೀಳುತ್ತದೆ. ಇನ್ನು ಕೆಲ ಕನಸುಗಳು ನಿಗೂಢ ಅರ್ಥವನ್ನು ಹೊಂದಿರುತ್ತದೆ. ನಿಮ್ಮ ಕನಸಿನಲ್ಲಿ ಕೆಲ ವಸ್ತುಗಳು ಬಂದರೆ ಹಣದ ಹರಿವು ಹೆಚ್ಚಾಗುತ್ತದೆ ಎಂದರ್ಥ. ಹಾಗಾದ್ರೆ ಆ ವಸ್ತುಗಳು ಯಾವುವು ಎಂಬುದು ಇಲ್ಲಿದೆ.
ನಮಗೆ ಕೆಲ ಕನಸು ಅರ್ಥವಿಲ್ಲದಂತೆ ಬೀಳುತ್ತದೆ. ಇನ್ನು ಕೆಲ ಕನಸುಗಳು ನಿಗೂಢ ಅರ್ಥವನ್ನು ಹೊಂದಿರುತ್ತದೆ. ನಿಮ್ಮ ಕನಸಿನಲ್ಲಿ ಕೆಲ ವಸ್ತುಗಳು ಬಂದರೆ ಹಣದ ಹರಿವು ಹೆಚ್ಚಾಗುತ್ತದೆ ಎಂದರ್ಥ. ಹಾಗಾದ್ರೆ ಆ ವಸ್ತುಗಳು ಯಾವುವು ಎಂಬುದು ಇಲ್ಲಿದೆ.
2/ 8
ಹೂವು: ಕನಸಿನಲ್ಲಿ ಹೂವಿನ ಹಾರ, ಗುಲಾಬಿ ಹೂವು ಅಥವಾ ಹೂವಿನ ಹಾಸಿಗೆ ಕಾಣಿಸಿಕೊಂಡರೆ ನಿಮ್ಮ ಆರ್ಥಿಕ ಸಮಸ್ಯೆಗಳು ಮಾಯವಾಗುತ್ತದೆ. ಅಲ್ಲದೇ ಹಣದ ಹರಿವು ಸಹ ಹೆಚ್ಚಾಗುತ್ತದೆ.
3/ 8
ಆಭರಣ: ಈ ಆಭರಣಗಳು ಸಂಪತ್ತು ಹಾಗೂ ಸಮೃದ್ಧಿಯ ಪ್ರತೀಕ ಎನ್ನಲಾಗುತ್ತದೆ. ಹಾಗಾಗಿ ನಿಮ್ಮ ಕನಸಿನಲ್ಲಿ ಆಭರಣ ಕಾಣಿಸಿಕೊಂಡರೆ ಬಹು ಬೇಗ ನೀವೂ ಸಹ ಆಭರಣ ಖರೀದಿ ಮಾಡುತ್ತೀರಿ ಹಾಗೂ ಹಣ ನಿಮ್ಮ ಕೈ ಸೇರಲಿದ ಎಂದರ್ಥ.
4/ 8
ಭಾರಿ ಮಳೆ: ನಮಗೆ ಕೆಲವೊಮ್ಮೆ ಜೋರಾದ ಮಳೆಯಲ್ಲಿ ನೆನೆಯುವ ರೀತಿ ಅಥವಾ ಮಳೆಯ ವಿಚಾರವಾಗಿ ಕೆಲ ಕನಸುಗಳು ಬರುತ್ತದೆ. ಹಾಗೆಯೇ ಕನಸಿನಲ್ಲಿ ಧಾರಾಕಾರವಾಗಿ ಮಳೆ ಬಂದರೆ ಅದರ ಅರ್ಥ ದುಡ್ಡಿನ ಮಳೆ ಆಗಲಿದೆ ಎಂದು.
5/ 8
ಕೆಂಪು ಸೀರೆ: ನೀವು ಸಾಮಾನ್ಯವಾಗಿ ಗಮನಿಸರಬಹುದು, ಲಕ್ಷ್ಮಿ ದೇವಿಗೆ ಕೆಂಪು ಸೀರೆ ಉಡಿಸಲಾಗಿರುತ್ತದೆ. ಹಾಗಾಗಿ ಕೆಂಪು ಸೀರೆಯನ್ನು ಲಕ್ಷ್ಮಿ ದೇವಿಯ ಪ್ರತೀಕ ಎನ್ನಲಾಗುತ್ತದೆ. ನಿಮ್ಮ ಕನಸಿನಲ್ಲಿ ಸಹ ಕೆಂಪು ಸೀರೆ ಬಂದರೆ ದೇವಿಯ ಕೃಪೆ ನಿಮ್ಮ ಮೇಲಿರುತ್ತದೆ ಎಂದರ್ಥ.
6/ 8
ದೇವಸ್ಥಾನ: ದೇವಸ್ಥಾನ ಎಷ್ಟು ಪವಿತ್ರ ಎಂಬುದನ್ನ ನಾವು ಹೇಳಬೇಕಿಲ್ಲ. ದೇವರ ವಾಸ ಸ್ಥಾನ ಅದು. ನಿಮ್ಮ ಕನಸಿನಲ್ಲಿ ದೇವಸ್ಥಾನ ಅಥವಾ ಸಣ್ಣ ಗುಡಿ ಕಾಣಿಸಿಕೊಂಡರೆ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ಎಂದರ್ಥ.
7/ 8
ಉಳಿತಾಯ: ನಿಮ್ಮ ಕನಸಿನ್ಲಲಿ ನೀವು ಹಣ ಉಳಿಸದಂತೆ ಅಥವಾ ಬೇರೆ ರೀತಿಯ ಸೇವಿಂಗ್ಸ್ ಮಾಡಿದ ರೀತಿ ಕಂಡರೆ ನಿಮ್ಮ ಬಳಿ ಹಣ ಹೆಚ್ಚಾಗಲಿದೆ ಎನ್ನಲಾಗುತ್ತದೆ. ಅಲ್ಲದೇ ಅನಗತ್ಯ ಖರ್ಚು ಸಹ ಕಡಿಮೆಯಾಗಲಿದೆಯಂತೆ.
8/ 8
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)