ಕಳ್ಳಿ ಅಥವಾ ಮುಳ್ಳಿನ ಗಿಡಗಳು: ಮನೆಯನ್ನು ಸುಂದರವಾಗಿಸಲು ಜನರು ಹೆಚ್ಚಾಗಿ ಒಳಾಂಗಣ ಸಸ್ಯಗಳನ್ನು ನೆಡುತ್ತಾರೆ. ಆದರೆ ಮನೆಯಲ್ಲಿ ಇಡಬಾರದ ಗಿಡವೂ ಇದೆ ಎಂದು ನಿಮಗೆ ತಿಳಿದಿದ್ಯಾ? ಹೌದು, ಕಳ್ಳಿ ಗಿಡವನ್ನು ಮನೆಯಲ್ಲಿ ಇಡಬಾರದು ಎಂದು ಜ್ಯೋತಿಷಿಗಳು ಹೇಳುತ್ತಾರೆ. ಅದು ಬೆಳೆದಂತೆ ಅದರಲ್ಲಿ ಮುಳ್ಳುಗಳು ಬೆಳೆಯತೊಡಗುತ್ತವೆ. ಅಲ್ಲದೆ, ಮನೆಯಲ್ಲಿ ನಕಾರಾತ್ಮಕ ಶಕ್ತಿ ಮತ್ತು ಜೀವನದಲ್ಲಿ ಸಮಸ್ಯೆಗಳು ಸಹ ಹೆಚ್ಚಾಗುತ್ತವೆ. ನೀವು ಈ ಸಸ್ಯವನ್ನು ಮನೆಯೊಳಗೆ ಇರಿಸಿದರೆ, ಇಂದೇ ಅದನ್ನು ತೆಗೆದು ಬೀಸಾಕಿ. (Image credits pixabay)
ಹಳೆ ನ್ಯೂಸ್ ಪತ್ರಿಕೆಗಳು : ಹಲವು ಮನೆಗಳಲ್ಲಿ ಹಳೆ ಪತ್ರಿಕೆಗಳು ಬಿದ್ದಿರುವುದನ್ನು ನೀವು ಆಗಾಗ ನೋಡಿರಬಹುದು. ಮನೆಯಲ್ಲಿ ಈ ವಸ್ತುಗಳು ಇದ್ದರೆ ಎಷ್ಟು ಅಶುಭ ಗೊತ್ತಾ? ಹಳೆಯ ದಿನಪತ್ರಿಕೆಗಳ ಮೇಲಿನ ಧೂಳು ಮತ್ತು ಕೊಳೆಯಿಂದಾಗಿ ನಕಾರಾತ್ಮಕ ಶಕ್ತಿಯು ಮನೆಯೊಳಗೆ ಪ್ರವೇಶಿಸುತ್ತದೆ. ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಕಾರಣ, ಕುಟುಂಬದಲ್ಲಿ ಜಗಳಗಳು ಹೆಚ್ಚಾಗುತ್ತವೆ. ಕುಂಠಿತ ಪ್ರಗತಿಯಿಂದಾಗಿ ಕುಟುಂಬ ಸದಸ್ಯರು ಆರ್ಥಿಕವಾಗಿ ತೊಂದರೆ ಅನುಭವಿಸಬೇಕಾಗುತ್ತದೆ. (Image credits pixabay)
ತುಕ್ಕು ಹಿಡಿದ ಬೀಗ: ಹಾಳಾದ ಬೀಗಗಳು, ತುಕ್ಕು ಹಿಡಿದ ಬೀಗಗಳು ಮತ್ತು ನಿರುಪಯುಕ್ತ ಬೀಗಗಳನ್ನು ಮನೆಯಲ್ಲಿ ಇಡಬಾರದು ಎಂದು ವಾಸ್ತು ಶಾಸ್ತ್ರ ತಜ್ಞರು ಸಲಹೆ ನೀಡುತ್ತಾರೆ. ಹಳೆಯ ಬೀಗಗಳನ್ನು ಮನೆಯಲ್ಲಿ ಇಡುವುದು ಅಶುಭ ಸೂಚಕ. ಈ ಬೀಗಗಳು ಮನೆಯಲ್ಲಿದ್ದರೆ ನಿಮ್ಮ ಅದೃಷ್ಟವನ್ನೂ ಹಾಳು ಮಾಡುತ್ತವೆ ಎಂದು ಹೇಳುತ್ತಾರೆ. ಮನೆಯಲ್ಲಿ ಹಳೆಯ ಬೀಗಗಳು ಹಾಳಾದರೆ ಯಾವುದೇ ಪ್ರಗತಿ ಮತ್ತು ಆರ್ಥಿಕ ಪ್ರಗತಿಯಾಗುವುದಿಲ್ಲ. ಹಾಗಾಗಿ ಹಾನಿಗೊಳಗಾದ ಹಳೆಯ ಬೀಗಗಳನ್ನು ಮನೆಯಿಂದ ತೆಗೆದು ಬೀಸಾಕುವುದು ಉತ್ತಮ. (Image credits pixabay)
ಹಳೆಯ, ಮುರಿದ ಗಡಿಯಾರಗಳು: ಹಳೆಯ ಮತ್ತು ಮುರಿದ ಗಡಿಯಾರಗಳನ್ನು ಮನೆಯಲ್ಲಿ ಇಡುವುದು ಒಳ್ಳೆಯದಲ್ಲ. ಅಸಮರ್ಪಕ ಗಡಿಯಾರಗಳು ಜೀವನದಲ್ಲಿ ಅಡೆತಡೆಗಳನ್ನು ಸೃಷ್ಟಿಸುತ್ತವೆ. ಜೀವನದಲ್ಲಿ ಒಳ್ಳೆಯ ಸಮಯವನ್ನು ಆನಂದಿಸದಂತೆ ತಡೆಯುತ್ತದೆ. ಹಾಗಾಗಿ ಕೆಲಸ ಮಾಡದ ಗಡಿಯಾರ ಮತ್ತು ವಾಚ್ಗಳನ್ನು ಮನೆಯಲ್ಲಿ ಇಡಬಾರದು ಎಂದು ವಾಸ್ತು ಶಾಸ್ತ್ರ ತಜ್ಞರು ಸಲಹೆ ನೀಡುತ್ತಾರೆ. (Image credits pixabay)
ಮುರಿದ ವಿಗ್ರಹಗಳು, ದೇವರ ಫೋಟೋಗಳು: ಹಳೆಯ ಅಥವಾ ಮುರಿದ ವಿಗ್ರಹಗಳು, ದೇವರುಗಳ ಫೋಟೋಗಳನ್ನು ಮನೆಯಲ್ಲಿ ಇಡಬಾರದು. ಈ ವಿಷಯಗಳು ಮನೆಗೆ ನಕಾರಾತ್ಮಕತೆಯನ್ನು ತರುತ್ತವೆ. ಹಾಗಾಗಿ ಹಳೆಯ ವಿಗ್ರಹಗಳು ಮತ್ತು ಫೋಟೋಗಳನ್ನು ಕಾಲಕಾಲಕ್ಕೆ ಬದಲಾಯಿಸಬೇಕು. ಅವುಗಳನ್ನು ಸಮಯಕ್ಕೆ ತಕ್ಕಂತೆ ತೆಗೆದುಹಾಕಬೇಕು. ಈ ಐದು ವಸ್ತುಗಳನ್ನು ಆದಷ್ಟು ಬೇಗ ಎಸೆದರೆ ಮನೆಯಲ್ಲಿನ ಋಣಾತ್ಮಕ ಪರಿಣಾಮ ಸ್ವಲ್ಪ ಮಟ್ಟಿಗೆ ಕಡಿಮೆಯಾಗಲಿದೆ ಎನ್ನಲಾಗಿದೆ. (Image credits pixabay)