Shani Jayanti: ಶನಿ ಜಯಂತಿಯಂದು ಯಾವ ರಾಶಿಯವರು ಯಾವ ದಾನ ನೀಡಿದ್ರೆ ಒಳ್ಳೆಯದು
ಶನಿ ಜಯಂತಿಯ ಹಬ್ಬವನ್ನು ಪ್ರತಿ ವರ್ಷ ಜ್ಯೇಷ್ಠ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆಯಂದು ಆಚರಿಸಲಾಗುತ್ತದೆ. ಈ ವರ್ಷ ಶನಿ ಜಯಂತಿಯನ್ನು ಮೇ 30 ರಂದು ಆಚರಿಸಲಾಗುತ್ತದೆ. ಶನಿ ಜಯಂತಿಯಂದು ಸೋಮಾವತಿ ಅಮವಾಸ್ಯೆ ಮತ್ತು ವಟ ಸಾವಿತ್ರಿ ವ್ರತವನ್ನು ಆಚರಿಸಲಾಗುತ್ತದೆ. ಈ ದಿನದಂದು ದಾನಕ್ಕೆ ವಿಶೇಷ ಮಹತ್ವ ಇದೆ. ದಾನ ನೀಡುವುದರಿಂದ ಅನೇಕ ತೊಂದರೆಗಳಿಂದ ಮುಕ್ತಿ ಪಡೆಯಬಹುದಾಗಿದೆ.
ಮೇಷ ರಾಶಿ - ಈ ರಾಶಿಯವರು ಎಣ್ಣೆ ಮತ್ತು ಕಪ್ಪು ಎಳ್ಳನ್ನು ದಾನ ಮಾಡುವುದರಿಂದ ಫಲ ಪಡೆಯಬಹುದು
2/ 12
ವೃಷಭ ರಾಶಿ - ಶನಿದೇವನ ಆಶೀರ್ವಾದ ಪಡೆಯಲು ವೃಷಭ ರಾಶಿಯವರು ಶನಿ ಜಯಂತಿಯ ದಿನದಂದು ಶನಿ ಚಾಲೀಸವನ್ನು ಪಠಿಸುವ ಜೊತೆಗೆ ಕಂಬಳಿಗಳನ್ನು ದಾನ ಮಾಡಬೇಕು.
3/ 12
ಮಿಥುನ ರಾಶಿ - ಇವರು ಶನಿ ಜಯಂತಿಯ ದಿನದಂದು ನಿರ್ಗತಿಕರಿಗೆ ಕಪ್ಪು ಬಟ್ಟೆಯನ್ನು ದಾನ ಮಾಡಬೇಕು.
4/ 12
ಕಟಕ ರಾಶಿ: ಉದ್ದಿನ ಬೇಳೆ, ಎಣ್ಣೆ ಮತ್ತು ಎಳ್ಳನ್ನು ದಾನ ಮಾಡುವುದರಿಂದ ಶುಭ ಫಲಿತಾಂಶಗಳನ್ನು ಪಡೆಯಬಹುದು.
5/ 12
ಸಿಂಹ - ಈ ದಿನದಂದು ಓಂ ವರೇಣ್ಯೈ ನಮಃ ಎಂಬ ಮಂತ್ರವನ್ನು ಪಠಿಸುವ ಜೊತೆಗೆ ನೀಲಮಣಿಯನ್ನು ದಾನ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ.
6/ 12
ಕನ್ಯಾ ರಾಶಿ - ಕನ್ಯಾ ರಾಶಿಯ ಜನರು ಬಡ ವ್ಯಕ್ತಿಗೆ ಪಾದರಕ್ಷೆ ಅಥವಾ ಚಪ್ಪಲಿಯನ್ನು ದಾನ ಮಾಡಬಹುದು
7/ 12
ತುಲಾ - ತುಲಾ ರಾಶಿಯವರು ಈ ದಿನ ಕಪ್ಪು ಬಟ್ಟೆ ಮತ್ತು ಎಣ್ಣೆಯನ್ನು ದಾನ ಮಾಡಬೇಕು.
8/ 12
ವೃಶ್ಚಿಕ ರಾಶಿ- ಶನಿದೇವನ ಆಶೀರ್ವಾದ ಪಡೆಯಲು ವೃಶ್ಚಿಕ ರಾಶಿಯ ಜನರು ಈ ದಿನ ಕಬ್ಬಿಣದ ವಸ್ತುವನ್ನು ದಾನ ಮಾಡಬೇಕು.
9/ 12
ಧನು ರಾಶಿ - ಈ ದಿನ ಶನಿ ದೇವರಿಗೆ ಅಭಿಷೇಕವನ್ನು ಮಾಡಬೇಕು ಮತ್ತು ಹಳದಿ ಬಟ್ಟೆ ಅಥವಾ ಅರಿಶಿನವನ್ನು ದಾನ ಮಾಡಬಹುದು.ಧನು ರಾಶಿ - ಈ ದಿನ ಶನಿ ದೇವರಿಗೆ ಅಭಿಷೇಕವನ್ನು ಮಾಡಬೇಕು ಮತ್ತು ಹಳದಿ ಬಟ್ಟೆ ಅಥವಾ ಅರಿಶಿನವನ್ನು ದಾನ ಮಾಡಬಹುದು.
10/ 12
ಮಕರ ರಾಶಿ - ಶನಿ ಜಯಂತಿಯ ದಿನದಂದು ಹಸುವನ್ನು ದಾನ ಮಾಡುವುದು ಫಲದಾಯಕವೆಂದು ಪರಿಗಣಿಸಲಾಗಿದೆ. ಆದರೆ ನಿಮಗೆ ಗೋವನ್ನು ದಾನ ಮಾಡಲು ಸಾಧ್ಯವಾಗದಿದ್ದರೆ, ನೀವು ಬೆಳ್ಳಿ ಹಸುವನ್ನು ದಾನ ಮಾಡಬಹುದು.
11/ 12
ಕುಂಭ- ಈ ದಿನ ನೀವು ಚಿನ್ನವನ್ನು ದಾನ ಮಾಡಬೇಕು. ಇದರಿಂದ ಒಳಿತಾಗಲಿದೆ
12/ 12
ಮೀನ ರಾಶಿ - ಮೀನ ರಾಶಿಯವರು ಶನಿ ಜಯಂತಿಯ ಶುಭ ಸಂದರ್ಭದಲ್ಲಿ ತುಪ್ಪ, ಹಳದಿ ಬಟ್ಟೆ ಅಥವಾ ಅರಿಶಿನವನ್ನು ದಾನ ಮಾಡಬಹುದು. (ಮೇಲಿನ ಲೇಖನದ ವರದಿಯೂ ಧಾರ್ಮಿಕ ನಂಬಿಕೆಗಳು ನಡೆದ ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)