ಸಂಪ್ರದಾಯದ ಪ್ರಕಾರ ಮಹಾಶಿವರಾತ್ರಿಯು ಶಿವನ ಆರಾಧನೆಗೆ ಬಹಳ ಪವಿತ್ರವಾಗಿದೆ. ಈ ಕಾರಣಕ್ಕಾಗಿಯೇ ಶಿವ ಭಕ್ತರು ವರ್ಷವಿಡೀ ಈ ಶುಭ ಸಂದರ್ಭಕ್ಕಾಗಿ ಕಾಯುತ್ತಾರೆ. ಹಿಂದೂ ನಂಬಿಕೆಯ ಪ್ರಕಾರ, ಮಹಾಶಿವರಾತ್ರಿಯಂದು ಮಾಡಿದ ಆರಾಧನೆಯು ಸಂಪೂರ್ಣ ಫಲಿತಾಂಶವನ್ನು ನೀಡುತ್ತದೆ, ಇದರಿಂದಾಗಿ ಜೀವನದ ತೊಂದರೆಗಳು ಕಣ್ಣು ಮಿಟುಕಿಸುವುದರಲ್ಲಿ ದೂರವಾಗುತ್ತವೆ ಎನ್ನುವ ನಂಬಿಕೆ ಇದೆ.
ಶಿವ ಪೂಜೆಯು ಶನಿ ಸಂಬಂಧಿತ ದೋಷಗಳನ್ನು ನಿವಾರಣೆ ಆಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಿಮ್ಮ ಜಾತಕದಲ್ಲಿ ಶನಿ ದೋಷವು ನಿಮ್ಮ ತೊಂದರೆಗಳಿಗೆ ಮುಖ್ಯ ಕಾರಣವಾಗಿದ್ದರೆ, ಅದನ್ನು ತಪ್ಪಿಸಲು, ನೀವು ಈ ಮಹಾಶಿವರಾತ್ರಿಯಂದು ಮಹಾದೇವನ ಆರಾಧನೆಯನ್ನು ಮಾಡಬೇಕು. ಮಹಾಶಿವರಾತ್ರಿಯಂದು ಶಿವನ ಆರಾಧನೆಯಲ್ಲಿ ಶಮಿ ಎಲೆಯನ್ನ ಸಲ್ಲಿಸಿ, ಮಹಾಮೃತ್ಯುಂಜಯ ಮಂತ್ರವನ್ನು ಜಪಿಸಿದರೆ, ಶನಿ ದೋಷ ನಿವಾರಣೆ ಆಗುತ್ತದೆ.