Chanakya Niti: ನಿಮ್ಮ ಜೀವನವನ್ನು ಇತರರೊಂದಿಗೆ ಹೋಲಿಕೆ ಮಾಡ್ತೀರಾ; ಹಾಗಾದ್ರೆ ಚಾಣಕ್ಯನ ಈ ಮಾತು ಕೇಳಿ
ಆಚಾರ್ಯ ಚಾಣಕ್ಯ (Chanakya) ಮಹಾನ್ ವಿದ್ವಾಂಸನಲ್ಲದೆ, ಉತ್ತಮ ಶಿಕ್ಷಕರೆಂದು ಪರಿಗಣಿಸಲ್ಪಟ್ಟಿದ್ದಾನೆ. ಆಚಾರ್ಯ ಚಾಣಕ್ಯರು ತಮ್ಮ ನೀತಿಯಲ್ಲಿ ಹಣ, ಆರೋಗ್ಯ, ವ್ಯಾಪಾರ, ವೈವಾಹಿಕ ಜೀವನ, ಸಮಾಜ, ಜೀವನದ ಯಶಸ್ಸಿಗೆ ಸಂಬಂಧಿಸಿದ ಎಲ್ಲಾ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ ಒಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಆಚಾರ್ಯ ಚಾಣಕ್ಯರ ಮಾತುಗಳನ್ನು ಅನುಸರಿಸಿದರೆ, ಅವನು ಜೀವನದಲ್ಲಿ ಯಶಸ್ವಿ ಹಂತವನ್ನು ತಲುಪಬಹುದು.
ಆಚಾರ್ಯ ಚಾಣಕ್ಯರು ತಮ್ಮ ನೀತಿಗಳಿಂದ ಸಮಾಜಕ್ಕೆ ಸದಾ ಮಾರ್ಗದರ್ಶನ ನೀಡಿದ್ದಾರೆ. ಆಚಾರ್ಯ ಚಾಣಕ್ಯರ ಪ್ರಕಾರ, ಒಬ್ಬನು ತನ್ನ ಜೀವನವನ್ನು ಎಂದಿಗೂ ಇತರರ ಜೀವನಕ್ಕೆ ಹೋಲಿಸಬಾರದು. ಈ ರೀತಿ ಹೋಲಿಕೆ ಮಾಡುವುದರಿಂದ ನಷ್ಟವೇ ಹೆಚ್ಚು.
2/ 8
ನಿಮ್ಮ ಜೀವನವನ್ನು ಇತರ ಜೀವನದ ಖುಷಿ, ಸಂತೋಷದೊಂದಿಗೆ ಹೋಲಿಕೆ ಮಾಡಬೇಡಿ. ಇದರಿಂದ ನಿಮ್ಮ ಖುಷಿ ಸಂತೋಷದ ಜೊತೆ ನೆಮ್ಮದಿ ಹಾಳಾಗುತ್ತದೆ ಎಂಬುದನ್ನು ಮರೆಯಬಾರದು.
3/ 8
ಮನುಷ್ಯನು ಇತರರೊಂದಿಗೆ ಸ್ಪರ್ಧಿಸುವ ಅಭ್ಯಾಸವನ್ನು ಹೊಂದಿದ್ದಾನೆ, ಈ ಕಾರಣದಿಂದಾಗಿ ಅವನು ತನ್ನನ್ನು ಅಥವಾ ಇತರ ವ್ಯಕ್ತಿಯನ್ನು ಇತರ ವ್ಯಕ್ತಿಯೊಂದಿಗೆ ಹೋಲಿಸುತ್ತಾನೆ. ಆಚಾರ್ಯ ಚಾಣಕ್ಯರ ಈ ಹೇಳಿಕೆಯ ಪ್ರಕಾರ ಯಾವುದೇ ವ್ಯಕ್ತಿ ತನ್ನ ಜೀವನವನ್ನು ಇತರರೊಂದಿಗೆ ಹೋಲಿಸಿಕೊಳ್ಳಬಾರದು.
4/ 8
ಸಾಮಾನ್ಯವಾಗಿ ಈ ಹೋಲಿಕೆಯು ವೃತ್ತಿ, ಬಟ್ಟೆ, ಮನೆ ಮತ್ತು ಕೆಲವೊಮ್ಮೆ ಹಣದ ಬಗ್ಗೆಯೂ ಇರುತ್ತದೆ. ಹೀಗೆ ಮಾಡುವುದರಿಂದ ನೀವು ಇನ್ನೊಬ್ಬ ವ್ಯಕ್ತಿಯೊಳಗಿನ ಕೀಳರಿಮೆಯನ್ನು ತುಂಬಬಹುದು. ನಿಮಗೂ ಈ ಅಭ್ಯಾಸವಿದ್ದರೆ ಕೂಡಲೇ ಈ ಅಭ್ಯಾಸವನ್ನು ಬದಲಿಸಿಕೊಳ್ಳಿ.
5/ 8
ಆಚಾರ್ಯ ಚಾಣಕ್ಯರ ಪ್ರಕಾರ ಮನುಷ್ಯ ಅನೇಕ ರೀತಿಯ ಜನರನ್ನು ಭೇಟಿಯಾಗುತ್ತಾನೆ. ಪ್ರತಿಯೊಬ್ಬರ ಜೀವನ ಪದ್ಧತಿಗಳು ಪರಸ್ಪರ ಭಿನ್ನವಾಗಿರಬಹುದು. ನಿಮ್ಮ ಮುಂದಿರುವ ವ್ಯಕ್ತಿ ಹೊಂದಿರುವ ವಸ್ತುಗಳು ನಿಮಗೆ ಇಲ್ಲದಿರುವ ಸಾಧ್ಯತೆಯಿದೆ.
6/ 8
ನಿಮ್ಮ ಮುಂದಿರುವ ವ್ಯಕ್ತಿ ಬದುಕುತ್ತಿರುವ ಜೀವನಶೈಲಿಯನ್ನು ನೀವು ಬದುಕಲು ಸಾಧ್ಯವಾಗುವುದಿಲ್ಲ. ಆದರೆ ನಿಮ್ಮನ್ನು ಎಂದಿಗೂ ಇತರರೊಂದಿಗೆ ಹೋಲಿಸಬೇಡಿ. ಈ ರೀತಿ ಹೋಲಿಕೆ ಮಾಡುವುದರಿಂದ ವ್ಯಕ್ತಿಯ ಮನಸ್ಸಿನಲ್ಲಿ ಅಸೂಯೆಯ ಭಾವನೆಗಳನ್ನು ಹುಟ್ಟುಹಾಕುತ್ತದೆ.
7/ 8
ಆಚಾರ್ಯ ಚಾಣಕ್ಯರ ಪ್ರಕಾರ, ಆಕಾಶದಲ್ಲಿ ಚಂದ್ರ ಮತ್ತು ಸೂರ್ಯನ ಬೆಳಕು ಹೇಗೆ ವಿಭಿನ್ನವಾಗಿರುತ್ತದೆ, ಅದೇ ರೀತಿಯಲ್ಲಿ ಮನುಷ್ಯನ ಜೀವನದಲ್ಲಿ ಅವನು ಏನು ಪಡೆಯುತ್ತಾನೆಯೋ ಅದು ಅವನ ಸಮಯಕ್ಕೆ ಅನುಗುಣವಾಗಿ ಸಿಗುತ್ತದೆ.
8/ 8
ಪ್ರತಿಯೊಬ್ಬ ವ್ಯಕ್ತಿಯೂ ತನಗೆ ಅರ್ಹವಾದದ್ದನ್ನು ಪಡೆಯುತ್ತಾನೆ. ಆದ್ದರಿಂದ ತಾಳ್ಮೆಯಿಂದಿರಬೇಕು. ಪ್ರತಿಯೊಬ್ಬರಿಗೂ ಒಂದು ಸಮಯ ಬರುತ್ತದೆ ಎಂಬ ಸಂಯಮ ಇರಬೇಕು.