Swapna Shastra: ರಾತ್ರಿ ಕೆಟ್ಟ ಕನಸುಗಳು ಬೀಳ್ತಿವೆಯಾ? ಹಾಗಾದ್ರೆ ಹೀಗೆ ಮಾಡಿ

Dreams: ಕೆಲವೊಮ್ಮೆ ರಾತ್ರಿ ಬೀಳುವ ಕನಸು ನಮ್ಮನ್ನು ಇಡೀ ದಿನವನ್ನು ಗೊಂದಲದಲ್ಲಿರಿಸುತ್ತವೆ. ಅದಕ್ಕೆ ಕಾರಣ ಹಲವಾರು. ಕೆಟ್ಟ ಕನಸುಗಳು ಭವಿಷ್ಯದ ಯಾವುದೋ ಒಂದು ಸುಳಿವು ನೀಡುತ್ತೆ ಅನ್ನೋದು ಬಹುತೇಕರ ನಂಬಿಕೆಯಾಗಿದೆ.

First published:

  • 18

    Swapna Shastra: ರಾತ್ರಿ ಕೆಟ್ಟ ಕನಸುಗಳು ಬೀಳ್ತಿವೆಯಾ? ಹಾಗಾದ್ರೆ ಹೀಗೆ ಮಾಡಿ

    ಕೆಲವರಿಗೆ ಪ್ರತಿದಿನವೂ ಕನಸು ಬೀಳುತ್ತವೆ. ಬೆಳಗಿನ ಜಾವ ಬೀಳುವ ಕನಸು ನನಸು ಆಗುತ್ತೆ ಎಂದು ಸ್ವಪ್ನ ಶಾಸ್ತ್ರ ಹೇಳುತ್ತದೆ. ಆದರೆ ಕನಸಿನಲ್ಲಿ ಆಪ್ತರಿಗೆ ಏನಾದ್ರು ಸಂಕಷ್ಟ ಎದುರಾಗಿದ್ರೆ ಅದು ನಮ್ಮ ಆತಂಕಕ್ಕೆ ತಳ್ಳುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 28

    Swapna Shastra: ರಾತ್ರಿ ಕೆಟ್ಟ ಕನಸುಗಳು ಬೀಳ್ತಿವೆಯಾ? ಹಾಗಾದ್ರೆ ಹೀಗೆ ಮಾಡಿ

    ನಿಮಗೆ ಕನಸುಗಳು ಬೀಳಬಾರದು ಅಂತಿದ್ರೆ ಮಲಗುವಾಗ ಕೆಲವೊಮ್ಮೆ ಟಿಪ್ಸ್ ಫಾಲೋ ಮಾಡಿದ್ರೆ ಸುಖವಾಗಿ ನಿದ್ದೆ ಮಾಡಬಹುದು. ಹಾಗಾದ್ರೆ ಏನು ಮಾಡಬೇಕು ಅಂತ ಈ ಲೇಖನದಲ್ಲಿ ನೋಡೋಣ. (ಸಾಂದರ್ಭಿಕ ಚಿತ್ರ)

    MORE
    GALLERIES

  • 38

    Swapna Shastra: ರಾತ್ರಿ ಕೆಟ್ಟ ಕನಸುಗಳು ಬೀಳ್ತಿವೆಯಾ? ಹಾಗಾದ್ರೆ ಹೀಗೆ ಮಾಡಿ

    1.ದೇವರ ನಾಮ ಜಪ
    ಮಲಗುವಾಗ ದೇವರ ನಾಮ ಜಪ ಮಾಡಿ ಅಥವಾ ನಿಮಗೆ ಯಾವುದಾದ್ರೂ ಶ್ಲೋಕಗಳು ಗೊತ್ತಿದ್ರೆ ಹೇಳಿ ಮಲಗಿ. ಹೀಗೆ ಮಾಡೋದರಿಂದ ಮನಸ್ಸು ಶಾಂತವಾಗುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 48

    Swapna Shastra: ರಾತ್ರಿ ಕೆಟ್ಟ ಕನಸುಗಳು ಬೀಳ್ತಿವೆಯಾ? ಹಾಗಾದ್ರೆ ಹೀಗೆ ಮಾಡಿ

    2.ಮಲುಗುವಾಗ ಪಕ್ಕದಲ್ಲಿರಲಿ ನೀರು
    ರಾತ್ರಿ ಮಲಗುವಾಗ ಪಕ್ಕ ಲೋಟದಲ್ಲಿ ನೀರು ತುಂಬಿಸಿಕೊಳ್ಳಿ. ಲೋಟ ಅಥವಾ ಗ್ಲಾಸ್​ನಲ್ಲಿ ನೀರು ತುಂಬಿರಬೇಕು. ಪಾತ್ರೆಯಲ್ಲಿ ನೀರು ತುಂಬಿರುವ ಕಾರಣ ಋಣಾತ್ಮಕ ಶಕ್ತಿಗಳು ನಿಮ್ಮತ್ತ ಸುಳಿಯಲ್ಲ. (ಸಾಂದರ್ಭಿಕ ಚಿತ್ರ)

    MORE
    GALLERIES

  • 58

    Swapna Shastra: ರಾತ್ರಿ ಕೆಟ್ಟ ಕನಸುಗಳು ಬೀಳ್ತಿವೆಯಾ? ಹಾಗಾದ್ರೆ ಹೀಗೆ ಮಾಡಿ

    3.ದಿನದ ಒಳ್ಳೆಯ ಕ್ಷಣಗಳನ್ನ ನೆನಪು ಮಾಡ್ಕೊಳ್ಳಿ
    ಇಡೀ ದಿನ ನಿಮ್ಮ ಜೀವನದಲ್ಲಿ ನಡೆದ ಒಳ್ಳೆಯ ಕ್ಷಣಗಳನ್ನು ನೆನಪು ಮಾಡಿಕೊಳ್ಳಿ. ಇದರಿಂದ ನಿಮ್ಮ ಮನಸ್ಸು ಹಗುರವಾಗುತ್ತದೆ. ಇದರಿಂದ ನಿಮ್ಮ ದೇಹ ನಿರಾಳವಾಗಿ ನಿದ್ದೆ ಮಾಡಬಹುದು. (ಸಾಂದರ್ಭಿಕ ಚಿತ್ರ)

    MORE
    GALLERIES

  • 68

    Swapna Shastra: ರಾತ್ರಿ ಕೆಟ್ಟ ಕನಸುಗಳು ಬೀಳ್ತಿವೆಯಾ? ಹಾಗಾದ್ರೆ ಹೀಗೆ ಮಾಡಿ

    4.ಕುಟುಂಬದ ಜೊತೆ ಒಳ್ಳೆಯ ಸಮಯ
    ದಿನವಿಡೀ ದುಡಿದು ದೇಹ ಹೈರಾಣು ಆಗಿರುತ್ತದೆ. ಕೆಲಸದ ಒತ್ತಡದಿಂದ ಆಯಾಸ ಆಗಿರುತ್ತದೆ. ಹಾಗಾಗಿ ಮಲುಗುವ ಮುನ್ನ ಕುಟುಂಬದ ಜೊತೆ ಒಳ್ಳೆಯ ಸಮಯ ಕಳೆಯಿರಿ. ಮನೆಯಲ್ಲಿ ಮಕ್ಕಳು, ಸಾಕು ಪ್ರಾಣಿಗಳಿದ್ರೆ ಅವುಗಳ ಜೊತೆ ಸಮಯ ಕಳೆದ್ರೆ ನಿಮ್ಮ ಸುಸ್ತು ಮಾಯವಾಗುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 78

    Swapna Shastra: ರಾತ್ರಿ ಕೆಟ್ಟ ಕನಸುಗಳು ಬೀಳ್ತಿವೆಯಾ? ಹಾಗಾದ್ರೆ ಹೀಗೆ ಮಾಡಿ

    5.ಮನೆ ಸ್ವಚ್ಛವಾಗಿರಲಿ
    ಮಲಗುವ ಕೋಣೆ ಸ್ವಚ್ಛವಾಗಿರಲಿ. ಕೋಣೆ ಗಲೀಜು ಆಗಿದ್ರೆ ಅಲ್ಲಿ ಋಣಾತ್ಮಕ ಶಕ್ತಿಗಳ ಸಂಚಾರ ಇರುತ್ತೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಋಣಾತ್ಮಕ ಶಕ್ತಿಗಳ ಸಂಚಾರವಿದ್ರೆ ಕೆಟ್ಟ ಕನಸುಗಳು ಬೀಳುತ್ತವೆ ಎಂದು ಹೇಳುತ್ತೆ ಸ್ವಪ್ನ ಶಾಸ್ತ್ರ. (ಸಾಂದರ್ಭಿಕ ಚಿತ್ರ)

    MORE
    GALLERIES

  • 88

    Swapna Shastra: ರಾತ್ರಿ ಕೆಟ್ಟ ಕನಸುಗಳು ಬೀಳ್ತಿವೆಯಾ? ಹಾಗಾದ್ರೆ ಹೀಗೆ ಮಾಡಿ

    (Disclaimer:ಮೇಲಿನ ಲೇಖನದ ವರದಿಯೂ ಧಾರ್ಮಿಕ ನಂಬಿಕೆಗಳು ನಡೆದ ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ-(ಸಾಂದರ್ಭಿಕ ಚಿತ್ರ))

    MORE
    GALLERIES