ಈ ವರ್ಷ ಶ್ರೀ ರಾಮ ನವಮಿ ಹಬ್ಬವನ್ನು ಮಾರ್ಚ್ 30 ರಂದು ಆಚರಿಸಲಾಗುತ್ತದೆ. ರಾಮ ನವಮಿ ಪೂಜೆ ಅತ್ಯುತ್ತಮ ಪೂಜಾ ಕ್ಷಣವಾಗಿದೆ. ರಾಮ ನವಮಿಯು ಮಾರ್ಚ್ 29, 2023 ರಂದು ರಾತ್ರಿ 09:07 ಗಂಟೆಗೆ ಪ್ರಾರಂಭವಾಗುತ್ತದೆ ಮತ್ತು ಮಾರ್ಚ್ 30, 2023 ರಂದು ರಾತ್ರಿ 11:30 ಕ್ಕೆ ಕೊನೆಗೊಳ್ಳುತ್ತದೆ. ಶ್ರೀರಾಮ ನವಮಿ ಪೂಜೆಗಳನ್ನು ಮಾಡಲು ಮಧ್ಯಾಹ್ನದ ಸಮಯ ಅತ್ಯಂತ ಮಂಗಳಕರ ಸಮಯ ಎಂದು ಪುರೋಹಿತರು ಹೇಳುತ್ತಾರೆ.
ಶ್ರೀರಾಮ ನವಮಿಯ ಸಂದರ್ಭದಲ್ಲಿ, ದೇಶದಾದ್ಯಂತ ರಾಮಮಂದಿರಗಳಲ್ಲಿ ಭಗವಾನ್ ರಾಮನನ್ನು ಪೂಜಿಸಲಾಗುತ್ತದೆ ಮತ್ತು ರಾಮ ಜನ್ಮೋತ್ಸವವನ್ನು ಆಚರಿಸಲಾಗುತ್ತದೆ. ರಾಮ ನವಮಿಯ ಸಂದರ್ಭದಲ್ಲಿ, ನೀವು ಕೆಲವು ಸರಳ ಕೆಲಸಗಳನ್ನು ಮಾಡುವುದರೊಂದಿಗೆ ನಿಮ್ಮ ಜೀವನವನ್ನು ಸಂತೋಷದಿಂದ ಕಳೆಯಬಹುದು. ಹಾಗಿದ್ರೆ ಶ್ರೀರಾಮ ನವಮಿಯಂದು ಮಾಡಬಹುದಾದ ಆ ಕೆಲಸಗಳು ಏನೆಲ್ಲಾ ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ.
ಅಲ್ಲದೆ ಶ್ರೀಗಂಧ ಮತ್ತು ಬೊಟ್ಟನ್ನು ಇಟ್ಟು ರಾಮನ ಚಿತ್ರಕ್ಕೆ ಪುಷ್ಪಗಳನ್ನು ಅರ್ಪಿಸಬೇಕು. ರಾಮರಕ್ಷಾಸ್ತೋತ್ರ ಓದಬೇಕು. ರಾಮನವಮಿ ದಿನದಂದು ಕಲ್ಯಾಣ ಮಂತ್ರಗಳನ್ನು ಕೇಳಬೇಕು. ಈ ದಿನ ಶ್ರೀರಾಮನಿಗೆ ನೈವೇದ್ಯ ಮಾಡಬೇಕು ಮತ್ತು ಮನೆಯಲ್ಲಿ ಎಲ್ಲರೂ ಅದನ್ನ ಕುಡಿಯಬೇಕು. ಜೊತೆಗೆ ರಾಮ ನಾಮವನ್ನು ಜಪಿಸಬೇಕು. ರಾಮನಿಗೆ ರಾಮ ನವಮಿಯ ದಿನದಂದು ತುಳಸಿದಳ, ಸೀತೆ ಮತ್ತು ಹನುಮಂತನನ್ನು ವೀಳ್ಯದೆಲೆಯಿಂದ ಪೂಜಿಸಬೇಕು.
ರಾಮನವಮಿಯಂದು ಹನುಮಾನ್ ಚಾಲೀಸಾ ಪಠಣ ಮತ್ತು ಬಡವರಿಗೆ ದಾನ ಮಾಡುವುದು ಒಳ್ಳೆಯದು. ಶ್ರೀರಾಮನು ಮಧ್ಯಾಹ್ನದ ಸಮಯದಲ್ಲಿ ಜನಿಸಿದರು. ಹಾಗಾಗಿ ಆ ಸಮಯದಲ್ಲಿ ಶ್ರೀರಾಮನವಮಿ ಪೂಜೆಯನ್ನು ಮಾಡುವುದು ಅತ್ಯಂತ ಲಾಭದಾಯಕವೆಂದು ಪರಿಗಣಿಸಲಾಗಿದೆ. ಈ ಮಂಗಳಕರ ದಿನದಂದು ವಿಶೇಷ ಪೂಜೆಗಳನ್ನು ಸಹ ಮಾಡಬಹುದು.. (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)