Shani Dev: ಶನಿವಾರ ಮಿಸ್ ಮಾಡದೇ ಈ ಕೆಲಸ ಮಾಡಿದ್ರೆ ನಿಮ್ಮ ಕಷ್ಟಗಳಿಗೆ ಪರಿಹಾರ ಸಿಗುತ್ತೆ
Saturday Rituals: ಶನಿವಾರ ಶನಿದೇವನಿಗೆ ಹಾಗೂ ಆಂಜನೇಯನಿಗೆ ಮೀಸಲಾದ ವಾರ ಎನ್ನಬಹುದು. ಈ ದಿನ ಭಕ್ತರು ವಿವಿಧ ರೀತಿಯಲ್ಲಿ ದೇವರ ಕೃಪೆಗೆ ಪಾತ್ರರಾಗಲು ಪ್ರಯತ್ನ ಮಾಡುತ್ತಾರೆ. ವೈದಿಕ ಪರಂಪರೆಯ ಪ್ರಕಾರ ಶನಿವಾರ ನಿರ್ದಿಷ್ಟವಾಗಿ ಕೆಲ ಕೆಲಸಗಳನ್ನು ಮಾಡುವುದರಿಂದ ಒಳ್ಳೆಯದಾಗುತ್ತದೆ ಎನ್ನಲಾಗುತ್ತದೆ. ಹಾಗಾದ್ರೆ ಶನಿವಾರ ಏನು ಮಾಡಬೇಕು ಎಂಬುದು ಇಲ್ಲಿದೆ.
ಶನಿ ದೇವನನ್ನ ಕರ್ಮದ ಅಧಿಪತಿ ಎಂದು ಕರೆಯಲಾಗುತ್ತದೆ. ಮಾಡಿದ ಕೆಲಸಗಳಿಗೆ ಅನುಸಾರವಾಗಿ ನಮಗೆ ಒಳ್ಳೆಯ ಹಾಗೂ ಕೆಟ್ಟ ಫಲಗಳನ್ನು ಕೊಡುತ್ತಾನೆ ಎನ್ನುವ ನಂಬಿಕೆ ಇದೆ. ಜ್ಯೋತಿಷ್ಯದಲ್ಲಿ ಶನಿಯ ದೃಷ್ಟಿಗೆ ಬಹಳ ಮಹತ್ವ ಇದೆ.
2/ 8
ನೀಲಿ ಬಟ್ಟೆ: ಶನಿವಾರದಂದು ನೀವು ಮನೆಯಿಂದ ಕೆಲಸಕ್ಕೆ ಅಥವಾ ಬೇರೆ ಯಾವುದೇ ಕಾರಣದಿಂದ ಹೊರ ಹೋಗುವಾಗ ನೀಲಿ ಬಣ್ಣದ ಬಟ್ಟೆಯನ್ನು ಧರಿಸುವುದು ನಿಮ್ಮ ಕಷ್ಟಗಳನ್ನು ಪರಿಹಾರ ಮಾಡಲು ಸಹಾಯ ಮಾಡುತ್ತದೆ. ನಿಮ್ಮ ಬಳಿ ಧರಿಸಲು ನೀಲಿ ಬಣ್ಣದ ಬಟ್ಟೆ ಇಲ್ಲದಿದ್ದರೆ ಆ ಬಣ್ಣದ ಟವೆಲ್ ಅಥವಾ ಕರ್ಚೀಫ್ ಜೊತೆಯಲ್ಲಿ ಇಟ್ಟುಕೊಂಡಿರಿ.
3/ 8
ಕಪ್ಪು ಬಟ್ಟೆ: ಶನಿವಾರ ನೀಲಿ ಬಣ್ಣದ ಬಟ್ಟೆಯ ರೀತಿಯೇ ಕಪ್ಪು ಬಣ್ನದ ಬಟ್ಟೆ ಸಹ ಬಹಳ ಶ್ರೇಷ್ಠ ಎಂದು ಹೇಳಲಾಗುತ್ತದೆ. ಹಾಗಾಗಿ ನಿಮ್ಮ ಜೊತೆ ಕಪ್ಪು ಬಟ್ಟೆ ಇರಬೇಕು. ನೀವು ಹೊರಗೆ ಹೋಗುವಾಗ ಕಪ್ಪು ಬಟ್ಟೆಯನ್ನು ಧರಿಸುವುದರಿಂದ ಶನಿ ದೇವರ ಕೃಪೆಗೆ ಪಾತ್ರರಾಗುತ್ತೀರಿ.
4/ 8
ಉದ್ದಿನ ಬೇಳೆ: ಶನಿವಾರ ವಿವಿಧ ವಸ್ತುಗಳನ್ನು ದಾನ ಮಾಡುವುದರಿಂದ ಬಹಳ ಒಳ್ಳೆಯದಾಗುತ್ತದೆ. ಅದರಲ್ಲಿ ಈ ಉದ್ದಿನ ಬೇಳೆ ಸಹ ಒಂದು. ಯಾರಾದರೂ ಬಡವರಿಗೆ ಅಥವಾ ದೇವಸ್ಥಾನಕ್ಕೆ ಉದ್ದಿನ ಬೇಳೆ ದಾನ ಮಾಡಿ. ಹಾಗೆಯೇ ಮನೆಯಿಂದ ಹೊರಗೆ ಹೋಗುವಾಗ ಸ್ವಲ್ಪ ಉದ್ದಿನ ಬೇಳೆ ನಿಮ್ಮ ಜೊತೆ ಇಟ್ಟುಕೊಂಡಿರಿ.
5/ 8
ಕಪ್ಪು ಎಳ್ಳು: ಶನಿವಾರ ಕಪ್ಪು ಎಳನ್ನು ದಾನ ಮಾಡುವುದರಿಂದ ನಿಮ್ಮ ಕಷ್ಟಗಳೆಲ್ಲಾ ಪರಿಹಾರವಾಗುತ್ತದೆ ಎನ್ನಲಾಗುತ್ತದೆ. ಅಲ್ಲದೇ ಈ ಕಪ್ಪು ಎಳನ್ನು ಕಪ್ಪು ಬಟ್ಟೆಯಲ್ಲಿ ಸುತ್ತಿ, ಅದರಿಂದ ಶನಿದೇವರಿಗೆ ದೀಪ ಹಚ್ಚುವುದು ಬಹಳ ಒಳ್ಳೆಯದು.
6/ 8
ಎಳ್ಳೆಣ್ಣೆ: ಶನಿವಾರ ಕಪ್ಪು ಎಳ್ಳು ಹಾಗೂ ಉದ್ದಿನ ಬೇಳೆಯಂತೆ ಎಳ್ಳೆಣ್ಣೆಯನ್ನು ದಾನ ಮಾಡುವುದರಿಂದ ಮಾನಸಿಕ ನೆಮ್ಮದಿ ಸೇರಿದಂತೆ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಹಾಗಾಗಿ ಪ್ರತಿ ಶನಿವಾರ ಎಳ್ಲೆಣ್ಣೆ ದಾನ ಮಾಡಿ.
7/ 8
ಶನಿವಾರ ಈ ಎಲ್ಲಾ ಕೆಲಸಗಳನ್ನು ಮಾಡುವುದರ ಜೊತೆಗೆ ಆ ದಿನ ಕಾಗೆಗೆ ಯಾವುದೇ ರೀತಿಯ ತೊಂದರೆಯನ್ನು ಮಾಡಬಾರದು. ಶನಿಯ ವಾಹನ ಕಾಗೆ, ಹಾಗಾಗಿ ನೀವು ಕಾಗೆಗೆ ಯಾವುದೇ ರಿತಿಯಲ್ಲಿ ತೊಂದರೆ ಮಾಡಿದರೆ ಶನಿ ದೇವರಿಗೆ ಕೋಪ ಬರುತ್ತದೆ ಎನ್ನಲಾಗುತ್ತದೆ.
8/ 8
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)