Vastu Dosha: ಸಂಜೆ ಹೊತ್ತು ಈ ಕೆಲಸ ಮಾಡಿದ್ರೆ ವಾಸ್ತು ದೋಷ ಪರಿಹಾರವಾಗುತ್ತೆ
Vastu Tips: ಜೀವನದಲ್ಲಿ ನಾವು ಕಷ್ಟಪಟ್ಟು ಮಾಡಿದ ಕೆಲಸಗಳು ಫಲ ಕೊಡದಿದ್ದಾಗ ನಮ್ಮ ಹಣೆ ಬರಹವನ್ನು ಹಳಿಯುವುದು ಸಹಜ. ಆದರೆ ಕೆಲವೊಮ್ಮೆ ವಾಸ್ತು ದೋಷದ ಕಾರಣದಿಂದ ಸಮಸ್ಯೆಗಳು ಉಂಟಾಗುತ್ತದೆ. ಹಾಗಾಗಿ ಕೆಲ ಸಿಂಪಲ್ ಟಿಪ್ಸ್ ಫಾಲೋ ಮಾಡಿ, ವಾಸ್ತು ದೋಷ ನಿವಾರಣೆ ಮಾಡಿಕೊಳ್ಳಿ.
ಸ್ವಸ್ತಿಕ್: ನೀವು ಸಂಜೆ ಹೊತ್ತು ಮನೆಯ ಬಾಗಿಲ ಹೊರಗೆ ಅರಿಶಿನ ಹಾಗೂ ಕುಂಕುಮದಲ್ಲಿ ಸ್ವಸ್ತಿಕ್ ಬರೆಯುವುದರಿಂದ ವಾಸ್ತು ದೋಷ ನಿವಾರಣೆಯಾಗುತ್ತದೆ ಎನ್ನಲಾಗುತ್ತದೆ. ವಾರಕ್ಕೆ 2 ಬಾರಿಯಾದರೂ ಈ ರೀತಿ ಬರೆದು ನೋಡಿ.
2/ 8
ಗಣೇಶ ಮೂರ್ತಿ: ಸಾಧ್ಯವಾದರೆ ಮನೆಯ ಹೊರಭಾಗದಲ್ಲಿ ಪುಟ್ಟ ಗಣೇಶನ ಮೂರ್ತಿಯನ್ನು ಇಡಿ. ಇದರಿಂದ ನೆಗೆಟಿವ್ ಎನರ್ಜಿಗಳು ನಿಮ್ಮ ಮನೆಯನ್ನು ಪ್ರವೇಶಿಸುವುದಿಲ್ಲ ಹಾಗೂ ಯಾವುದೇ ಕೆಲಸಗಳಿಗೂ ವಿಘ್ನ ಬರುವುದಿಲ್ಲ.
3/ 8
ತುಪ್ಪದ ದೀಪ: ದೀಪಾವಳಿ ಹಬ್ಬದ ಸಮಯದಲ್ಲಿ ಸಾಮಾನ್ಯವಾಗಿ ಸಂಜೆ ಮನೆಯ ಹೊರಗೆ ದೀಪ ಹಚ್ಚಲಾಗುತ್ತದೆ. ಆದರೆ ಪ್ರತಿದಿನ ಸಂಜೆ ನೀವು ಮನೆಯ ಬಾಗಿಲ ಬಳಿ ತುಪ್ಪದ ದೀಪ ಹಚ್ಚುವುದರಿಂದ ಮನೆಯಲ್ಲಿ ಲಕ್ಷ್ಮೀ ನೆಲೆಸಿರುತ್ತಾಳೆ ಎನ್ನಲಾಗುತ್ತದೆ.
4/ 8
ಸ್ಫಟಿಕದ ಆಮೆ: ನಾವು ಮನೆಗೆ ಕೆಲವೊಂದು ವಸ್ತುಗಳನ್ನು ತರುವಾಗ ನಾವು ಸಮಯ ಹಾಗೂ ದಿನ ನೋಡುತ್ತೇವೆ. ಅದರಲ್ಲೂ ಮುಖ್ಯವಾಗಿ ವಾಸ್ತು ಸಂಬಂಧಿಸಿದ ವಸ್ತು ತರುವಾಗ. ನೀವು ಮನೆಗೆ ಸ್ಫಟಿಕದ ಆಮೆಯನ್ನು ಸಂಜೆ ಹೊತ್ತು ತಂದರೆ ಮನೆಯಲ್ಲಿ ಶಾಂತಿ ನೆಲೆಸಲಿದೆ ಎನ್ನುವ ನಂಬಿಕೆ ಇದೆ.
5/ 8
ಉಪ್ಪಿನ ಪರಿಹಾರ: ಸ್ವಲ್ಪ ಉಪ್ಪನ್ನು ತೆಗೆದುಕೊಂಡು ನೀರಿನಲ್ಲಿ ಮಿಶ್ರಣ ಮಾಡಿ. ಆ ನೀರನ್ನು ನಿಮ್ಮ ಮನೆಯ ಪ್ರತಿ ಭಾಗಕ್ಕೂ ಚುಮುಕಿಸಿ. ಈ ರೀತಿ ಮಾಡುವುದರಿಂದ ದುಷ್ಟ ಶಕ್ತಿಗಳ ನಿವಾರಣೆಯಾಗುತ್ತದೆ ಹಾಗೂ ವಾಸ್ತು ದೋಷ ಸಹ ಪರಿಹಾರವಾಗುತ್ತದೆ.
6/ 8
ಪಿರಮಿಡ್: ನೀವು ಸಾಮಾನ್ಯವಾಗಿ ಎಲ್ಲಾ ಮನೆಗಳಲ್ಲಿ ಈ ಪಿರಡಮಿಡ್ ನೋಡಿರುತ್ತೀರಿ. ಇತ್ತೀಚಿನ ದಿನಗಳಲ್ಲಿ ಇದನ್ನು ಇಇಟ್ಟುಕೊಳ್ಳುವವರ ಸಂಖ್ಯೆ ಜಾಸ್ತಿ ಇದೆ. ಈ ಪಿರಮಿಡ್ ಅನ್ನು ಮನೆಯಲ್ಲಿ ಇಡುವುದರಿಂದ ವಾಸ್ತು ದೋಷಗಳು ನಿವಾರಣೆಯಾಗುತ್ತದೆ.
7/ 8
ಬುದ್ಧನ ಮೂರ್ತಿ: ವಾಸ್ತು ದೋಷ ಹಾಗೂ ಬುದ್ಧನ ಮೂರ್ತಿಗೂ ಇರುವ ಸಂಬಂಧವನ್ನು ನಾವು ಹೆಚ್ಚಾಗಿ ಹೇಳಬೇಕಿಲ್ಲ. ಮನೆಯಲ್ಲಿ ಪ್ರಶಾಂತವಾಗಿ ಕುಳಿತು ಧ್ಯಾನ ಮಾಡುತ್ತಿರುವ ಬುದ್ಧನ ಮೂರ್ತಿ ಇದ್ದರೆ ಸುಖ -ಶಾಂತಿ ಹಾಗೂ ನೆಮ್ಮದಿ ನೆಲೆಸಿರುತ್ತದೆ.
8/ 8
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)