Shani Amavasya: ಶನಿ ಅಮಾವಾಸ್ಯೆಯಂದು ದೋಷ ಪರಿಹಾರಕ್ಕೆ ಈ ಸರಳ ಉಪಾಯ ಅನುಸರಿಸಿ ಸಾಕು
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿ ಅಮಾವಾಸ್ಯೆಯ ದಿನ ಉಪ್ಪು ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡಲಿದೆ. ಇದರಿಂದ ಮನೆಯಲ್ಲಿ ಧನಾತ್ಮಕ ವಾತಾವರಣ ನಿರ್ಮಾಣವಾಗಲಿದೆ. ಹಾಗಾದ್ರೆ ಈ ದಿನ ಏನು ಮಾಡಬೇಕು ಎಂಬ ಸಲಹೆ ಇಲ್ಲಿದೆ.
ವೈಶಾಖ ಮಾಸದ ಏಪ್ರಿಲ್ 30 ರಂದು ಈ ಬಾರಿ ಶನಿ ಅಮಾವಾಸ್ಯೆ ಬಂದಿದೆ. ಈ ದಿನ ಶನಿ ದೇವರನ್ನು ಪೂಜಿಸುವುದರಿಂದ ಅನೇಕ ದೋಷಗಳಿಂದ ಮುಕ್ತಿ ಹೊಂದಬಹುದು.
2/ 7
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಉಪ್ಪನ್ನು ಚಂದ್ರ, ಶುಕ್ರ ಮತ್ತು ರಾಹುವಿನ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದನ್ನು ಬಳಸುವುದರಿಂದ ಮನೆಯ ನಕಾರಾತ್ಮಕ ಶಕ್ತಿಯೂ ಕೊನೆಗೊಳ್ಳುತ್ತದೆ.
3/ 7
ಅಮಾವಾಸ್ಯೆಯ ದಿನ ನೀರಿಗೆ ಸ್ವಲ್ಪ ಉಪ್ಪು ಹಾಕಿ ಮನೆಯನ್ನು ಸ್ವಚ್ಛಗೊಳಿಸಬೇಕು. ಇದರಿಂದ ಮನೆಯ ಋಣಾತ್ಮಕ ಶಕ್ತಿ ದೂರವಾಗುತ್ತದೆ. ಇದರಿಂದಾಗಿ ಮನೆಯಲ್ಲಿ ಲಕ್ಷ್ಮಿ ಆಶೀರ್ವಾದ ಇರಲಿದೆ. ಗುರುವಾರ ಹೊರತುಪಡಿಸಿ ಪ್ರತಿದಿನ ಈ ಪರಿಹಾರ ಅನುಸರಿಸಬಹುದು.
4/ 7
ಶನಿಶ್ಚರಿ ಅಮಾವಾಸ್ಯೆಯ ದಿನದಂದು ಗಾಜಿನ ಲೋಟದಲ್ಲಿ ಸ್ವಲ್ಪ ಉಪ್ಪು ಮತ್ತು ನೀರನ್ನು ಹಾಕಿ ನೈಋತ್ಯ ದಿಕ್ಕಿನಲ್ಲಿ ಇಡಬೇಕು. ಅದರ ಬಳಿ ಕೆಂಪು ಬಣ್ಣದ ಬಲ್ಬ್ ಇಡಬೇಕು. ನೀರು ಖಾಲಿಯಾದ ತಕ್ಷಣ ಅದನ್ನು ಮತ್ತೆ ತುಂಬಿಸಬೇಕು. ಈ ಪರಿಹಾರವನ್ನು ಮಾಡುವುದರಿಂದ ವ್ಯಕ್ತಿಯ ಮನೆಯಲ್ಲಿ ಹಣದ ಕೊರತೆ ಉಂಟಾಗುವುದಿಲ್ಲ ಎಂದು ನಂಬಲಾಗಿದೆ.
5/ 7
ಶನಿ ಅಮಾವಾಸ್ಯೆಯ ದಿನದಂದು ಪೂರ್ವಜರಿಗೆ ನೀರನ್ನು ಅರ್ಪಿಸುವುದರ ಜೊತೆಗೆ, ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ದಾನ ಮಾಡಬೇಕು
6/ 7
ಅಮಾವಾಸ್ಯೆಯಂದು ಅರಳಿ ಮರವನ್ನು ಪೂಜಿಸುವ ನಿಯಮ ಇದೆ. ಇದಕ್ಕೆ ನೀರನ್ನು ಅರ್ಪಿಸುವುದರ ಜೊತೆಗೆ 'ಓಂ ನಮೋ ಭಗವತೇ ವಾಸುದೇವಾಯ' ಎಂಬ ಮಂತ್ರವನ್ನು ಪಠಿಸುತ್ತಾ ಏಳು ಸುತ್ತುಗಳನ್ನು ಹಾಕಬೇಕು
7/ 7
ಶನಿ ಅಮಾವಾಸ್ಯೆಯ ಸಂದರ್ಭದಲ್ಲಿ ಶನಿ ದೇವರಿಗೆ ಸಾಸಿವೆ ಎಣ್ಣೆ ಮತ್ತು ಕಪ್ಪು ಎಳ್ಳನ್ನು ಅರ್ಪಿಸಿ. ಇದು ಜಾತಕದಿಂದ ದೋಷವನ್ನು ತೊಡೆದುಹಾಕುತ್ತದೆ.