Astrology: ನಿಮ್ಮ ರಾಶಿ ಪ್ರಕಾರ ಈ ಕೆಲಸ ಮಾಡಿದ್ರೆ ಸಮಸ್ಯೆಗಳೆಲ್ಲಾ ದೂರವಾಗುತ್ತೆ
Astrological Remedies: ಜೀವನದಲ್ಲಿ ಎಲ್ಲರಿಗೂ ಹಲವಾರು ಕಷ್ಟಗಳಿರುತ್ತದೆ. ಅದರಿಂದ ಹೊರ ಬರಲು ಪರದಾಡುತ್ತೇವೆ. ಆದರೆ ನಮ್ಮ ರಾಶಿಯ ಪ್ರಕಾರ ನಾವು ಕೆಲ ಕೆಲಸಗಳನ್ನು ಮಾಡುವುದು ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಯಾವ ರಾಶಿಯವರು ಏನು ಮಾಡಬೇಕು ಎಂಬುದು ಇಲ್ಲಿದೆ.
ಮೇಷ ರಾಶಿ: ಈ ರಾಶಿಯವರು ಮಿಸ್ ಮಾಡದೇ ಪ್ರತಿ ಶುಕ್ರವಾರ ಮತ್ತು ಶನಿವಾರದಂದು ಮೀನು, ಪಕ್ಷಿಗಳು, ಇರುವೆಗಳು ಅಥವಾ ಕೀಟಗಳಿಗೆ ಆಹಾರವನ್ನು ಕೊಟ್ಟರೆ ಸಮಸ್ಯೆಗಳು ಮಾಯವಾಗುತ್ತದೆ.
2/ 12
ವೃಷಭ ರಾಶಿ: ವೃಷಭ ರಾಶಿಯವರು ಗುರುಗಳ ಬಗ್ಗೆ ಎಂದಿಗೂ ಮನಸ್ಸಿನಲ್ಲಿ ಬೈದುಕೊಳ್ಳಬಾರದು. ಅಲ್ಲದೇ, ಮಂಗಳವಾರ ಮತ್ತು ಗುರುವಾರದಂದು ಅನಾಥಾಶ್ರಮಗಳಿಗೆ ಹಾಗೂ ನಿರಾಶ್ರಿತರಿಗೆ ಆಹಾರವನ್ನು ಕೊಡುವುದು ಒಳ್ಳೆಯದು.
3/ 12
ಮಿಥುನ ರಾಶಿ: ಪ್ರತಿ ಗುರುವಾರ ಪಕ್ಷಿಗಳಿಗೆ ಆಹಾರವನ್ನು ನೀಡುವುದು ಮಿಥುನ ರಾಶಿಯವರಿಗೆ ಆರ್ಥಿಕ ಸಮಸ್ಯೆ ಬರದಂತೆ ತಡೆಯುತ್ತದೆ. ಇದರಿಂದ ಮನೆಯಲ್ಲಿ ಸಹ ನೆಮ್ಮದಿ ಹಾಗೂ ಸಂಪತ್ತು ಸಮೃದ್ಧಿಯಾಗುತ್ತದೆ.
4/ 12
ಕರ್ಕಾಟಕ ರಾಶಿ: ಶುಕ್ರವಾರದಂದು ಅಂಗವಿಕಲರು ಮತ್ತು ನಿರಾಶ್ರಿತರಿಗೆ ಆಹಾರ ಮತ್ತು ಬಟ್ಟೆಗಳನ್ನು ದಾನ ಮಾಡಿದರೆ ಬಹಳ ಒಳ್ಳೆಯದಾಗುತ್ತದೆ. ಅಲ್ಲದೇ ಇದು ಮಾನಸಿಕ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
5/ 12
ಸಿಂಹ ರಾಶಿ: ಸಿಂಹ ರಾಶಿಯವರು ರಾಜನ ರೀತಿ, ಹಾಗಾಗಿ ಪ್ರತಿ ಶುಕ್ರವಾರ ಮತ್ತು ಶನಿವಾರ ಮೀನು, ಪಕ್ಷಿಗಳು, ಇರುವೆಗಳು ಮತ್ತು ಕೀಟಗಳಿಗೆ ಆಹಾರವನ್ನು ನೀಡುವ ಮೂಲಕ ಜೀವನದ ಸಂಕಷ್ಟವನ್ನು ದೂರ ಮಾಡಿ.
6/ 12
ಕನ್ಯಾ ರಾಶಿ:ಕನ್ಯಾ ರಾಶಿಯವರು ಹಾಸಿಗೆ ಇದ್ದಷ್ಟು ಕಾಲು ಚಾಚುವ ಅಭ್ಯಾಸ ಮಾಡಿಕೊಳ್ಳುವುದು ಜೀವನದಲ್ಲಿ ಬೆಳೆವಣಿಗೆಯಾಗಲು ಸಹಾಯ ಮಾಡುತ್ತದೆ. ಅಲ್ಲದೇ, ಅನಾಥರಿಗೆ ಯಾವುದೇ ರೀತಿಯಲ್ಲಿ ಸಹಾಯ ಮಾಡಬಹುದು.
7/ 12
ತುಲಾ ರಾಶಿ:ತುಲಾ ರಾಶಿಯವರು ಪ್ರತಿಮಂಗಳವಾರಅಥವಾಗುರುವಾರ ಬಡವರಿಗೆ ಸಹಾಯ ಮಾಡುವುದು ಒಳ್ಳೆಯದು. ಹಾಗೆಯೇ ಕೆಲವೊಂದು ನಿಯಮಗಳನ್ನು ಪಾಲಿಸುವುದು ಜೀವನದಲ್ಲಿ ಯಶಸ್ಸು ಸಿಗಲು ಸಹಾಯ ಮಾಡುತ್ತದೆ.
8/ 12
ವೃಶ್ಚಿಕ ರಾಶಿ: ಈ ರಾಶಿಯವರು ಆಧ್ಯಾತ್ಮಿಕದ ಕಡೆ ಹೆಚ್ಚು ಗಮನ ಕೊಡುವುದು ಒಳ್ಳೆಯದು. ಶುಕ್ರವಾರ ಅಥವಾ ಶನಿವಾರದಂದು ಆರೋಗ್ಯ ಸಮಸ್ಯೆ ಹೊಂದಿರುವವರಿಗೆ ಏನಾದರೂ ಸಹಾಯ ಮಾಡುವುದು ಸೂಕ್ತ.
9/ 12
ಧನು ರಾಶಿ: ಶುಕ್ರವಾರ ಮತ್ತು ಶನಿವಾರ ಚಿಕ್ಕ ಮಕ್ಕಳಿಗೆ ಸಿಹಿತಿಂಡಿಗಳು, ಚಾಕೊಲೇಟ್ ಅಥವಾ ಬೇರೆ ಯಾವುದೇ ಸಿಹಿ ಪದಾರ್ಥಗಳನ್ನು ಕೊಡಿ. ಹಾಗೆಯೇ ನಿಮ್ಮ ಅಹಂಕಾರವನ್ನು ಕಡಿಮೆ ಮಾಡಿಕೊಳ್ಳುವುದು ಉತ್ತಮ.
10/ 12
ಮಕರ ರಾಶಿ: ಗುರುವಾರದಂದು ಧಾರ್ಮಿಕ ಕಲಸಗಳನ್ನು ಮಾಡುವುದು ನೀವು ಕಂಡ ಕನಸು ನನಸು ಮಾಡಲು ಸಹಾಯ ಮಾಡುತ್ತದೆ. ದೇವರ ಧ್ಯಾನ ಮತ್ತು ದೇವಸ್ಥಾನದ ಮುಂದೆ ದಾನ ಮಾಡುವುದನ್ನು ಮರೆಯಬೇಡಿ
11/ 12
ಕುಂಭ ರಾಶಿ: ಕುಂಭರಾಶಿಯವರಿಗೆ ಹಿರಿಯರ ಆಶೀರ್ವಾದ ಅಗತ್ಯವಿದೆ. ಹಾಗಾಗಿ ಅವರನ್ನು ಎಂದಿಗೂ ಅಗೌರದಿಂದ ಕಾಣಬೇಡಿ. ವೃದ್ಧಾಶ್ರಮಗಳಿಗೆ ಹೋಗಿ ಸೇವೆ ಮಾಡುವ ಅಭ್ಯಾಸ ಮಾಡಿಕೊಳ್ಳಿ.
12/ 12
ಮೀನಾ ರಾಶಿ: ಶುಕ್ರವಾರ ಮತ್ತು ಶನಿವಾರದಂದು ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳನ್ನು ಮಾಡುವುದು ಮೀನಾ ರಾಶಿಯವರಿಗೆ ಒಳ್ಳೆಯದನ್ನು ಮಾಡುತ್ತದೆ.