Laxmi: ಲಕ್ಷ್ಮಿದೇವಿ ಒಲಿಸಿಕೊಳ್ಳಲು ಶುಕ್ರವಾರ ತಪ್ಪದೇ ಈ ಕಾರ್ಯ ಮಾಡಿ
ಶುಭ ಶುಕ್ರವಾರ ಮಹಾಲಕ್ಷ್ಮಿಗೆ ಮೀಸಲಾಗಿದ್ದು, ಈ ದಿನ ಲಕ್ಷ್ಮಿಯನ್ನು ಪೂಜಿಸಿದರೆ ಮನೆಯಲ್ಲಿ ಸುಖ ಶಾಂತಿ ವೃದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ. ಇನ್ನು ಚಂಚಲೆಯಾದ ಲಕ್ಷ್ಮಿ ಒಲಿಸಿಕೊಳ್ಳುವುದು ಸುಲಭದ ಮಾತಲ್ಲ. ಇದೇ ಕಾರಣಕ್ಕೆ ಆಕೆಗೆ ವಿಶೇಷ ಪೂಜೆ ಪುನಸ್ಕಾರಗಳನ್ನು ಮಾಡಲಾಗುತ್ತದೆ.
ಎಲ್ಲಿ ಶುಚಿತ್ವ ಇರುತ್ತದೆ ಅಲ್ಲಿ ಲಕ್ಷ್ಮಿ ನೆಲೆಸುತ್ತಾಳೆ. ಆಕೆಗೆ ಪೂಜೆ ವೇಳೆ ಯಾವುದೇ ಲೋಪ ದೋಷ ಬಾರದಂತೆ ನೋಡಿಕೊಳ್ಳುವುದು ಅವಶ್ಯವಾಗಿದೆ.
2/ 8
ಲಕ್ಷ್ಮಿ ಒಲಿಸಿಕೊಳ್ಳಲು ಶುಕ್ರವಾರದಂದು ತಪ್ಪದೇ ಲಕ್ಷ್ಮಿ ಪೂಜೆ ಮಾಡಬೇಕು. ಅದರಲ್ಲೂ ಶುಕ್ರವಾರ ಕನಕಧಾರ ಸ್ತೋತ್ರವನ್ನು ಪಠಿಸುವುದರಿಂದ ಎಲ್ಲ ಸಂಕಷ್ಟಗಳು ದೂರ ಆಗುತ್ತದೆ ಎಂಬ ನಂಬಿಕೆ ಇದೆ.
3/ 8
ಯಾರ ಮನೆಯಲ್ಲಿ ನಿತ್ಯವೂ ಲಕ್ಷ್ಮೀದೇವಿಯ ಈ ಒಂದು ಕನಕಧಾರ ಸ್ತೋತ್ರ ವನ್ನು ಕೇಳುತ್ತಿರುತ್ತಾರೆ ಅವರ ಮನೆಯಲ್ಲಿ ಮಹಾಲಕ್ಷ್ಮಿದೇವಿ ಸದಾಕಾಲ ನೆಲೆಸುತ್ತಾಳೆ ಎಂಬ ಬಂಬಿಕೆ ಇದೆ,
4/ 8
ಕನಕಧಾರ ಸ್ತೋತ್ರವನ್ನು ನಿಯಮಬದ್ಧವಾಗಿ ಪಠಿಸಿದರೆ ಮಾತ್ರ ಇದರ ಪೂರ್ಣ ಫಲ ದೊರೆಯುತ್ತದೆ. ಇದಕ್ಕಾಗಿ ಕೆಲವು ನಿಯಮಗಳನ್ನು ಪಾಲಿಸಬೇಕು
5/ 8
ಕನಕಧಾರ ಸ್ತೋತ್ರ ಪಠಣದ ಜೊತೆಗೆ ಇದನ್ನು ಕೇಳುವುದರಿಂದಲೂ ಕೂಡ ಅನೇಕ ಲಾಭಗಳಿವೆ. ಇದರಿಂದ ಮನೆಯಲ್ಲಿ ಸಕರಾತ್ಮಕ ವಾತಾವರಣ ನಿರ್ಮಾಣವಾಗುತ್ತದೆ.
6/ 8
ಇನ್ನು ಈ ಕನಕಧಾರ ಸ್ತೋತ್ರ ಪಠಣೆಯನ್ನು ಪ್ರತಿ ಶುಕ್ರವಾರ ಮಾತ್ರ ಮಾಡಬೇಕು ಎಂಬ ನಿಯಮವಿಲ್ಲ. ಪ್ರತಿನಿತ್ಯವೂ ಈ ಸ್ತೋತ್ರ ಪಠಣ ಮಾಡುವುದರಿಂದ ಕೂಡ ಒಳಿತಾಗಲಿದೆ.
7/ 8
ಇನ್ನು ಲಕ್ಷ್ಮಿ ಪೂಜೆ ಮಾಡುವಾಗ ಉತ್ತರ ದಿಕ್ಕಿಗೆ ಮುಖ ಮಾಡಿ ಕುಳಿತು ಕೊಳ್ಳಬೇಕು. ಮಂತ್ರಗಳನ್ನು ಸ್ಪಷ್ಟವಾಗಿ ಉಚ್ಛರಿಸಬೇಕು ಇದರಿಂದ ಮನೆಯಲ್ಲಿ ಅಷ್ಟೈವರ್ಯ ನೆಲೆಸುತ್ತದೆ ಎಂಬ ನಂಬಿಕೆ ಇದೆ.
8/ 8
ಈ ಕನಕಧಾರ ಸ್ತೋತ್ರವನ್ನು ಶಂಕರರು ತಮ್ಮ ಎಂಟನೇ ವಯಸ್ಸಿನಲ್ಲಿ ರಚಿಸಿದ್ದರು. ಅವರ ಸ್ತೋತ್ರಕ್ಕೆ ಮೆಚ್ಚಿ ಲಕ್ಷ್ಮಿ ಒಲಿದಳು ಎಂಬ ನಂಬಿಕೆ ಇದೆ