Ratha Sapthami 2023: ರಥಸಪ್ತಮಿ ದಿನ ಈ 4 ಕೆಲಸ ಮಾಡಿದ್ರೆ ಸಂಪತ್ತು ಹೆಚ್ಚಾಗುತ್ತೆ
Ratha Saptami 2023: ಮಾಘ ಮಾಸದ ಶುಕ್ಲ ಪಕ್ಷದ ಸಪ್ತಮಿಯನ್ನು ರಥಸಪ್ತಮಿ ಎಂದು ಆಚರಿಸಲಾಗುತ್ತದೆ. ಈ ಹಬ್ಬದ ದಿನ ಕೆಲ ವಿಶೇಷ ಕಾರ್ಯಗಳನ್ನು ಮಾಡುವುದರಿಂದ ಜೀವನದಲ್ಲಿ ನೆಮ್ಮದಿ ಹಾಗೂ ಸಂಪತ್ತು ಹೆಚ್ಚಾಗುತ್ತದೆ ಎನ್ನಲಾಗುತ್ತದೆ. ರಥಸಪ್ತಮಿಯ ದಿನ ತಪ್ಪದೇ ಯಾವ ಕೆಲಸ ಮಾಡಬೇಕು ಎಂಬುದು ಇಲ್ಲಿದೆ.
ರಥಸಪ್ತಮಿ ಹಬ್ಬದ ದಿನ ಬೆಳಗ್ಗೆ ಬೇಗ ಎದ್ದು ಕೆಲ ಕೆಲಸಗಳನ್ನು ಮಾಡುವುದು ನಮ್ಮ ಜೀವನದ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಈ ದಿನ ಸ್ನಾನ ಮತ್ತು ದಾನ ಮಾಡುವುದರಿಂದ ಸಂಪತ್ತು, ಸಂತಾನ, ಉತ್ತಮ ಆರೋಗ್ಯ ಇತ್ಯಾದಿಗಳು ದೊರೆಯುತ್ತವೆ ಎನ್ನುವ ನಂಬಿಕೆ ಇದೆ.
2/ 7
ಧಾರ್ಮಿಕ ನಂಬಿಕೆಗಳ ಪ್ರಕಾರ, ರಥಸಪ್ತಮಿಯಂದು ಸೂರ್ಯ 7 ಕುದುರೆಯ ರಥವನ್ನು ಏರಿ ಬಂದು ಭಕ್ತರಿಗೆ ಆಶೀರ್ವಾದ ಮಾಡುತ್ತಾನೆ ಎನ್ನಲಾಗುತ್ತದೆ. ಹಾಗಾಗಿ ಈ ದಿನ ಸೂರ್ಯನ ಪೂಜೆ ಮಾಡುವುದು ಬಹಳ ಮುಖ್ಯ.
3/ 7
ರಥಸಪ್ತಮಿಯಂದು ಸ್ನಾನ ಮಾಡಿ ಸೂರ್ಯನನ್ನು ಪೂಜೆ ಮಾಡಬೇಕು. ಈ ದಿನ ನೀರಿಗೆ ಕೆಂಪು ಚಂದನ, ಬೆಲ್ಲ ಮತ್ತು ಕೆಂಪು ಹೂವುಗಳನ್ನು ಸೇರಿಸಿ ಸೂರ್ಯನಿಗೆ ಅರ್ಘ್ಯ ಅರ್ಪಿಸಬೇಕು. ನಂತರ ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸಬೇಕು. ಇದು ನಿಮಗೆ ಕೆಲಸದಲ್ಲಿ ಯಶಸ್ಸನ್ನು ನೀಡುತ್ತದೆ.
4/ 7
ರಥಸಪ್ತಮಿಯಂದು, ಸ್ನಾನ ಮತ್ತು ಪೂಜೆಯನ್ನು ಮಾಡಿದ ನಂತರ, ಬಡವರಿಗೆ ಬೇಳೆ, ಬೆಲ್ಲ, ತಾಮ್ರ, ಗೋಧಿ ಹಾಗೂ ಕೆಂಪು ಅಥವಾ ಕಿತ್ತಳೆ ಬಣ್ಣದ ಬಟ್ಟೆಯನ್ನು ದಾನ ಮಾಡಬೇಕು. ಇವು ಸೂರ್ಯ ಗ್ರಹಕ್ಕೆ ಸಂಬಂಧಿಸಿದ ವಸ್ತುಗಳಾಗಿರುವುದರಿಂದ, ಜಾತಕದಲ್ಲಿ ಸೂರ್ಯನಿಂದ ಯಾವುದೇ ಸಮಸ್ಯೆ ಬರದಂತೆ ನೋಡಿಕೊಳ್ಳುತ್ತದೆ.
5/ 7
ರಥಸಪ್ತಮಿಯಂದು ನೀರಿನಲ್ಲಿ ಕೆಂಪು ಚಂದನ, ಗಂಗಾಜಲ, ಕುಂಕುಮ ಅಥವಾ ಕೆಂಪು ಹೂವುಗಳನ್ನು ಹಾಕಿ ಸ್ನಾನ ಮಾಡಿದರೆ ಒಳ್ಳೆಯದು ಎನ್ನಲಾಗುತ್ತದೆ. ಇದರಿಂದ ನಿಮ್ಮ ಸಂತೋಷ, ಸಂಪತ್ತು ಮತ್ತು ಧಾನ್ಯಗಳು ಹೆಚ್ಚಾಗುತ್ತದೆ.
6/ 7
ರಥಸಪ್ತಮಿಯಂದು ಸೂರ್ಯನನ್ನು ಪೂಜಿಸುವಾಗ, ಗಾಯತ್ರಿ ಮಂತ್ರವನ್ನು ಪಠಿಸಿದರೆ ಬಯಸಿದ ಫಲಿತಾಂಶಗಳನ್ನು ನೀಡುತ್ತದೆ. ಓಂ ಆದಿತ್ಯಾಯ ವಿದ್ಮಹೇ ಪ್ರಭಾಕರಾಯ ಧೀಮಹಿ ತನ್ನ: ಸೂರ್ಯ ಪ್ರಚೋದಯಾತ್ ಹಾಗೂ ಹ್ರೀಂ ಹ್ರೀಂ ಸೂರ್ಯಾಯ, ಸಹಸ್ರಕಿರಣಾಯ ಸ್ವಾಹಾ:. ಈ ಶ್ಲೋಕಗಳನ್ನು ಹೇಳಿ.
7/ 7
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)
First published:
17