ಚಳಿಗಾಲದಲ್ಲಿ ತುಳಸಿ ಗಿಡಗಳಿಗೆ ತಣ್ಣೀರು ಬಳಸಬಾರದು. ಯಾವಾಗಲೂ ಉಗುರುಬೆಚ್ಚನೆಯ ನೀರು ಬಳಕೆ ಮಾಡೋದರಿಂದ ಸಸ್ಯದಲ್ಲಿನ ತೇವಾಂಶ ಉಳಿದು, ಗಿಡ ಬಾಡುವುದಿಲ್ಲ. (ಸಾಂದರ್ಭಿಕ ಚಿತ್ರ)
2/ 7
ಚಳಿಗಾಲದಲ್ಲಿ ತುಳಸಿ ಗಿಡ ಒಣಗಲು ಪ್ರಾರಂಭವಾಗುತ್ತದೆ. ಆದ್ದರಿಂದ ಒಣಗಿದ ಎಲೆಗಳನ್ನು ತೆಗೆಯಿರಿ. ತುಳಸಿ ಗಿಡ ಒಣಗಿದ್ರೆ ಮನೆಯಲ್ಲಿರುವ ಸದಸ್ಯರು ಮಾನಸಿಕ ಕಾಯಿಲೆಗಳಿಗೆ ತುತ್ತಾಗುತ್ತಾರೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. (ಸಾಂದರ್ಭಿಕ ಚಿತ್ರ)
3/ 7
ಚಳಿಗಾಲದ ಉದ್ದಕ್ಕೂ ತುಳಸಿಯನ್ನು ಹಸಿರಾಗಿಡಲು, ಅದನ್ನು ಬೇರಿನ ಸುತ್ತಲೂ ಮಣ್ಣನ್ನು ಸಡಿಲುಗೊಳಿಸಿ. ವಾರಕ್ಕೆ ಎರಡು ಬಾರಿ ಹೀಗೆ ಮಾಡಿದ್ರೆ ತುಳಸಿ ಹಸಿರು ಆಗಿರುತ್ತದೆ. (ಸಾಂದರ್ಭಿಕ ಚಿತ್ರ)
4/ 7
ತುಳಸಿ ಗಿಡದ ಎಲೆಗಳ ಮೇಲೆ ಸಂಗ್ರಹವಾಗಿರುವ ಧೂಳನ್ನು ಸ್ವಚ್ಛಗೊಳಿಸಿರಿ. ಇದರಿಂದ ಸಸ್ಯ ಸುರಕ್ಷಿತವಾಗಿರುತ್ತದೆ. (ಸಾಂದರ್ಭಿಕ ಚಿತ್ರ)
5/ 7
ನಿಮ್ಮ ಪರಿಸರದಲ್ಲಿ ಹಿಮ ಬೀಳುತ್ತಿದ್ರೆ ತುಳಸಿಯನ್ನು ರಕ್ಷಣೆ ಮಾಡಬೇಕು. ಹಿಮ ಬೀಳುತ್ತಿದ್ರೆ ತುಳಸಿ ಗಿಡವನ್ನು ಬಟ್ಟೆಯಿಂದ ಮುಚ್ಚಬಹುದು. ಚಳಿಗಾಲದಲ್ಲಿ ಬೀಳುವ ಇಬ್ಬನಿ ಹನಿಗಳಿಂದಲೂ ತುಳಸಿ ಬಾಡುತ್ತದೆ. (ಸಾಂದರ್ಭಿಕ ಚಿತ್ರ)
6/ 7
ಚಳಿಗಾಲದಲ್ಲಿ ತುಳಸಿ ಗಿಡವನ್ನು ನೆಡುವಾಗ ಮರಳು ಮತ್ತು ಮಣ್ಣು ಎರಡನ್ನೂ ಸಮಪ್ರಮಾಣದಲ್ಲಿ ಇಡಿ. ಇಲ್ಲವಾದಲ್ಲಿ ತುಳಸಿ ಗಿಡ ಒಣಗಬಹುದು. (ಸಾಂದರ್ಭಿಕ ಚಿತ್ರ)
7/ 7
ತುಳಸಿ ಗಿಡವು ನಿಮ್ಮ ಮನೆಯಲ್ಲಿ ಸರಿಯಾದ ದಿಕ್ಕಿನಲ್ಲಿ ಇಲ್ಲದಿದ್ದರೆ, ಆರ್ಥಿಕ ಸಮಸ್ಯೆಗಳನ್ನು ಎದುರಿಸಬಹುದು. (Disclaimer:ಮೇಲಿನ ಲೇಖನದ ವರದಿಯೂ ಧಾರ್ಮಿಕ ನಂಬಿಕೆಗಳು ನಡೆದ ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)