ತಾಜ್ ಮಹಲ್ ಶೋಪೀಸ್ ಅಥವಾ ಅದರ ಚಿತ್ರವನ್ನು ಸಹ ಇರಿಸಬಾರದು. ತಾಜ್ ಮಹಲ್ ಸಮಾಧಿಯಾಗಿರುವುದರಿಂದ ಇದು ಸಾವು ಮತ್ತು ನಿಷ್ಕ್ರಿಯತೆಯ ಸಂಕೇತವಾಗಿದೆ. ಆದಾಗ್ಯೂ, ಜನರು ಇದನ್ನು ಪ್ರೀತಿಯ ಸಂಕೇತವೆಂದು ಗುರುತಿಸುತ್ತಾರೆ. ಆದರೆ ವಾಸ್ತವದಲ್ಲಿ ಇದು ಷಹಜಹಾನ್ ಅವರ ಪತ್ನಿ ಮುಮ್ತಾಜ್ ಬೇಗಂ ಅವರ ಸಮಾಧಿಯಾಗಿದೆ. ಇದೇ ಕಾರಣಕ್ಕೆ ತಮ್ಮ ಮನೆಯಲ್ಲಿ ತಾಜಮಹಲ್ನ ಯಾವುದೇ ಶೋಪೀಸ್ ಅಥವಾ ಚಿತ್ರವನ್ನು ಇಡಬಾರದು. ಅಂತಹ ವಿಷಯಗಳು ನಮ್ಮ ಜೀವನದ ಮೇಲೆ ತೀವ್ರವಾಗಿ ಮತ್ತು ಆಳವಾಗಿ ಪರಿಣಾಮ ಬೀರುತ್ತವೆ ಎಂದು ನಂಬಲಾಗಿದೆ.
ಹಂದಿಗಳು, ಹಾವುಗಳು, ಕತ್ತೆಗಳು, ಹದ್ದುಗಳು, ಗೂಬೆಗಳು, ಬಾವಲಿಗಳು, ರಣಹದ್ದುಗಳು, ಪಾರಿವಾಳಗಳು ಮತ್ತು ಕಾಗೆಗಳಂತಹ ಪ್ರಾಣಿಗಳು ಮತ್ತು ಪಕ್ಷಿಗಳ ಚಿತ್ರಗಳು, ವರ್ಣಚಿತ್ರಗಳು ಮತ್ತು ಶಿಲ್ಪಗಳನ್ನು ಹಾಕಬಾರದು. ವಾಸ್ತು ಪ್ರಕಾರ, ದಂಪತಿಗಳ ಮಲಗುವ ಕೋಣೆಯಲ್ಲಿ ಒಂದೇ ಒಂದು ಪಕ್ಷಿ ಅಥವಾ ಪ್ರಾಣಿಯನ್ನು ಪ್ರದರ್ಶಿಸಬಾರದು. ನಿಸರ್ಗದ ವನ್ಯತೆಯನ್ನು ಬಿಂಬಿಸುವ ಯಾವುದೇ ವನ್ಯಪ್ರಾಣಿಗಳ ಚಿತ್ರ ಅಥವಾ ಶೋ ಪೀಸ್ ಅನ್ನು ಮನೆಯಲ್ಲಿ ಇಡಬಾರದು. ಇದು ಮನೆಯ ನಿವಾಸಿಗಳ ನಡವಳಿಕೆಯಲ್ಲಿ ಹಿಂಸಾತ್ಮಕ ಮನೋಭಾವವನ್ನು ತರುತ್ತದೆ. (ಮೇಲಿನ ಲೇಖನದ ವರದಿಯೂ ಧಾರ್ಮಿಕ ನಂಬಿಕೆಗಳು ನಡೆದ ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)