DK Shivakumar: ಡಿಕೆಶಿ ಗೆಲುವಿಗೆ ಕಾರಣವಾಯ್ತಾ ಆ ಒಂದು ರಹಸ್ಯ? ರಾಜಗುರುಗಳು ಹೆಂಡತಿ ವಿಚಾರ ಪ್ರಸ್ತಾಪಿಸಿದ್ದೇಕೆ?

D.K. Shivakumar Luck: ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶ ನಿನ್ನೆ ಹೊರ ಬಿದ್ದಿದ್ದು, ಕಾಂಗ್ರೆಸ್​ ಪಕ್ಷ ಭರ್ಜರಿ ಬಹುಮತ ಪಡೆದು ಸರ್ಕಾರ ರಚಿಸುತ್ತಿದೆ. ಈ ಮಧ್ಯೆ ಪಕ್ಷದ ಗೆಲುವಿನ ಮುಖ್ಯ ರೂವಾರಿ ಡಿಕೆಶಿ ಕುಮಾರ್ ಅವರ ಅದೃಷ್ಟದ ಬಗ್ಗೆ ಕೆಲ ಮಾತಿಗಳು ಕೇಳಿ ಬರುತ್ತಿದ್ದು, ಹೆಂಡತಿ ಅದೃಷ್ಟದಿಂದ ಡಿಕೆಶಿ ಗೆದ್ದು ಬೀಗಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಕೆಲ ಮಾಹಿತಿ ಇಲ್ಲಿದೆ.

First published:

  • 18

    DK Shivakumar: ಡಿಕೆಶಿ ಗೆಲುವಿಗೆ ಕಾರಣವಾಯ್ತಾ ಆ ಒಂದು ರಹಸ್ಯ? ರಾಜಗುರುಗಳು ಹೆಂಡತಿ ವಿಚಾರ ಪ್ರಸ್ತಾಪಿಸಿದ್ದೇಕೆ?

    ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹುಮ್ಮಸ್ಸಿನಲ್ಲಿ ನಡೆಸಿದ್ದ ಎಲ್ಲಾ ಪ್ರಚಾರ ಕಾರ್ಯಗಳು ಕೈ ಹಿಡಿದಿದ್ದು, ರಾಜ್ಯದಲ್ಲಿ ಕಾಂಗ್ರೆಸ್​ ಸುನಾಮಿ ಎದ್ದಿದೆ ಎನ್ನಬಹುದು. 135 ಸ್ಥಾನಗಳನ್ನು ಗೆಲ್ಲುವ ಮೂಲಕ ಸಂಪೂರ್ಣ ಬಹುಮತದ ಸರ್ಕಾರ ರಚಿಸಲಿದೆ.

    MORE
    GALLERIES

  • 28

    DK Shivakumar: ಡಿಕೆಶಿ ಗೆಲುವಿಗೆ ಕಾರಣವಾಯ್ತಾ ಆ ಒಂದು ರಹಸ್ಯ? ರಾಜಗುರುಗಳು ಹೆಂಡತಿ ವಿಚಾರ ಪ್ರಸ್ತಾಪಿಸಿದ್ದೇಕೆ?

    ಈ ಅಭೂತಪೂರ್ವ ಗೆಲುವಿನ ಹಿಂದೆ ಡಿ ಕೆ ಶಿವಕುಮಾರ್ ಅವರ ಪರಿಶ್ರಮ ಬಹಳಷ್ಟಿದ್ದು, ಹಗಲು-ರಾತ್ರಿ ಎನ್ನದೇ ಪಕ್ಷಕ್ಕಾಗಿ ದುಡಿದ್ದು, ಅದರ ಪ್ರತಿಫಲ ನಿನ್ನೆಯ ಫಲಿತಾಂಶ ಎನ್ನಬಹುದು. ಈಗ ಸದ್ಯ ಸುದ್ದಿಯಲ್ಲಿ ಇರುವ ವಿಚಾರ ಎಂದರೆ ಹೆಂಡತಿಯ ಅದೃಷ್ಟದಿಂದ ಡಿಕೆಶಿ ಈ ಮಟ್ಟಿಗೆ ಗೆಲ್ಲಲು ಸಾಧ್ಯವಾಗಿದ್ದು ಎಂಬುದು.

    MORE
    GALLERIES

  • 38

    DK Shivakumar: ಡಿಕೆಶಿ ಗೆಲುವಿಗೆ ಕಾರಣವಾಯ್ತಾ ಆ ಒಂದು ರಹಸ್ಯ? ರಾಜಗುರುಗಳು ಹೆಂಡತಿ ವಿಚಾರ ಪ್ರಸ್ತಾಪಿಸಿದ್ದೇಕೆ?

    ಏಕೆಂದರೆ ಕಳೆದ ಕೆಲ ದಿನಗಳ ಹಿಂದೆ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಇದ್ದ ಡಿಕೆಶಿ ಅವರ ಹೆಲಿಕಾಪ್ಟರ್​ಗೆ ಪಕ್ಷಿಯೊಂದು ಡಿಕ್ಕಿ ಹೊಡೆದ ಪರಿಣಾಮ ಅದೃಷ್ಟವಶಾತ್ ಬಚಾವ್ ಆಗಿದ್ದರು. ಆ ಸಮಯದಲ್ಲಿ ಡಿಕೆಶಿ ಅವರ ರಾಜಗುರುಗಳಾದ ದ್ವಾರಕನಾಥ್ ಅವರು ಹೇಳಿದ್ದ ಕೆಲ ಮಾತುಗಳು ಇದೀಗ ಮತ್ತೆ ಮುನ್ನಲೆಗೆ ಬಂದಿದೆ.

    MORE
    GALLERIES

  • 48

    DK Shivakumar: ಡಿಕೆಶಿ ಗೆಲುವಿಗೆ ಕಾರಣವಾಯ್ತಾ ಆ ಒಂದು ರಹಸ್ಯ? ರಾಜಗುರುಗಳು ಹೆಂಡತಿ ವಿಚಾರ ಪ್ರಸ್ತಾಪಿಸಿದ್ದೇಕೆ?

    ಏಕೆಂದರೆ ಈ ಅಪಘಾತವಾದ ಸಂದರ್ಭದಲ್ಲಿ ಖಾಸಗಿ ಪತ್ರಿಕೆ ವಿಜಯ ಕರ್ನಾಟಕದ ಜೊತೆಗೆ ಮಾತನಾಡಿದ್ದ ರಾಜಗುರು ದ್ವಾರಕನಾಥ ಅವರು ಡಿಕೆಶಿ ಅವರಿಗೆ ಶನಿ ಬಲ ಹಾಗೂ ಗುರು ಬಲ ಯಾವುದೂ ಇಲ್ಲ ಎಂದಿದ್ದರು. ಅಲ್ಲದೇ, ಅದರ ಜೊತೆಗೆ ಅವರ ಹೆಂಡತಿಯ ಅದೃಷ್ಟ ಬಹಳ ಚೆನ್ನಾಗಿದ ಎಂದೂ ಸಹ ಹೇಳಿದ್ದಾರೆ.

    MORE
    GALLERIES

  • 58

    DK Shivakumar: ಡಿಕೆಶಿ ಗೆಲುವಿಗೆ ಕಾರಣವಾಯ್ತಾ ಆ ಒಂದು ರಹಸ್ಯ? ರಾಜಗುರುಗಳು ಹೆಂಡತಿ ವಿಚಾರ ಪ್ರಸ್ತಾಪಿಸಿದ್ದೇಕೆ?

    ರಾಜಗುರುಗಳ ಪ್ರಕಾರ ಡಿಕೆಶಿಯವರ ಹೆಂಡತಿಯ ಗ್ರಹಗತಿ ಬಹಳ ಚೆನ್ನಾಗಿದೆ. ಈ ಕಾರಣದಿಂದಲೇ ಶಿವಕುಮಾರ್ ಅವರಿಗೆ ಯಾವುದೇ ಅಪಾಯವಾಗಿಲ್ಲ ಎಂದಿದ್ದರೂ. ಹಾಗೆಯೇ, ಈ ಡಿಕೆಶಿ ಅವರ ಈ ಗೆಲುವಿಗೆ ಸಹ ಅವರ ಹೆಂಡತಿಯ ಅದೃಷ್ಟವೇ ಕಾರಣ ಎನ್ನಲಾಗುತ್ತಿದೆ.

    MORE
    GALLERIES

  • 68

    DK Shivakumar: ಡಿಕೆಶಿ ಗೆಲುವಿಗೆ ಕಾರಣವಾಯ್ತಾ ಆ ಒಂದು ರಹಸ್ಯ? ರಾಜಗುರುಗಳು ಹೆಂಡತಿ ವಿಚಾರ ಪ್ರಸ್ತಾಪಿಸಿದ್ದೇಕೆ?

    ಡಿಕೆಶಿ ಅವರ ಹೆಂಡತಿಯ ಅದೃಷ್ಟ ಅವರನ್ನು ಅಪಾಯದಿಂದ ಕಾಪಾಡಿದ್ದು ಮಾತ್ರವಲ್ಲದೇ, ಮತ್ತೆ ಗೆದ್ದು ಬೀಗಲು ಕಾರಣ ಎನ್ನುವ ಮಾತು ಕೇಳಿ ಬಂದಿದೆ. ಅವರ ಹೆಂಡತಿಗೆ ಗುರು ಬಲ ಹಾಗೂ ಶನಿ ಬಲ ಬಹಳ ಚೆನ್ನಾಗಿದ್ದು, ಇದರಿಂದ ಡಿಕೆಶಿ ಅವರಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ ಎನ್ನಲಾಗುತ್ತಿದೆ.

    MORE
    GALLERIES

  • 78

    DK Shivakumar: ಡಿಕೆಶಿ ಗೆಲುವಿಗೆ ಕಾರಣವಾಯ್ತಾ ಆ ಒಂದು ರಹಸ್ಯ? ರಾಜಗುರುಗಳು ಹೆಂಡತಿ ವಿಚಾರ ಪ್ರಸ್ತಾಪಿಸಿದ್ದೇಕೆ?

    ಗುರು ಬಲ ಎಂದರೇನು? ಯಾವುದೇ ಜಾತಕದಲ್ಲಿ ಗುರುವಿನ ಉಪಸ್ಥಿತಿಯು ಬಹಳ ಮುಖ್ಯವಾಗಿದೆ. ಆಗ ಮಾತ್ರ ಕುಲದ ದೈವಾನುಗ್ರಹ, ಪೂರ್ವಜರ ಆಶೀರ್ವಾದ ಸಿಗುತ್ತದೆ ಹಾಗೂ ಭವಿಷ್ಯ ಉಜ್ವಲವಾಗುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿ ಈ ಗುರು ಬಲ ಬಹಳ ಮುಖ್ಯ ಎನ್ನಲಾಗುತ್ತದೆ.

    MORE
    GALLERIES

  • 88

    DK Shivakumar: ಡಿಕೆಶಿ ಗೆಲುವಿಗೆ ಕಾರಣವಾಯ್ತಾ ಆ ಒಂದು ರಹಸ್ಯ? ರಾಜಗುರುಗಳು ಹೆಂಡತಿ ವಿಚಾರ ಪ್ರಸ್ತಾಪಿಸಿದ್ದೇಕೆ?

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES