Lord Shiva: ಈ ದೇವಸ್ಥಾನದಲ್ಲಿ ಶಿವನಿಗೆ ಅರ್ಪಿಸೋದು ಹೂವಲ್ಲ, ಜೀವಂತ ಏಡಿ- ವಿಚಿತ್ರ ದೇವಸ್ಥಾನದ ಸ್ಟೋರಿ ಇಲ್ಲಿದೆ
Lord Shiva: ಸಾಮಾನ್ಯವಾಗಿ ನಾವು ಪ್ರತಿ ಶಿವಪೂಜೆ ಮಾಡುವಾಗ ಹಾಲು, ಹಣ್ಣುಗಳು, ಹೂವುಗಳು, ತೆಂಗಿನಕಾಯಿಗಳು, ಸಿಹಿತಿಂಡಿಗಳು ಇತ್ಯಾದಿಗಳನ್ನು ಅರ್ಪಿಸುತ್ತೇವೆ. ಆದರೆ ಇಲ್ಲೊಂದು ದೇವಸ್ಥಾನದಲ್ಲಿ ಜೀವಂತ ಏಡಿಗಳನ್ನು ಭಗವಂತನಿಗೆ ಅರ್ಪಿಸಲಾಗುತ್ತದೆ. ಈ ವಿಶೇಷ ದೇವಸ್ಥಾನದ ಬಗ್ಗೆ ಮಾಹಿತಿ ಇಲ್ಲಿದೆ.
ರಾಮನಾಥ್ ಶಿವ ಕೇಲಾ ಗುಜರಾತ್ನ ಸೂರತ್ನಲ್ಲಿರುವ ಪ್ರಸಿದ್ಧ ಶಿವ ದೇವಾಲಯಗಳಲ್ಲಿ ಒಂದಾಗಿದ್ದು, ಇಲ್ಲಿ ಪ್ರತಿ ವರ್ಷ ಜೀವಂತ ಏಡಿಗಳನ್ನು ಶಿವನಿಗೆ ಅರ್ಪಿಸಲಾಗುತ್ತದೆ. ಹೌದು, ಪ್ರತಿ ವರ್ಷ ಜನವರಿಯಲ್ಲಿ ಮಕರ ಸಂಕ್ರಾಂತಿ ದಿನದಿಂದ ಜೀವಂತ ಏಡಿ ಪೂಜೆ ನಡೆಯುತ್ತದೆ.
2/ 7
ಈ ದೇವಾಲಯವನ್ನು ರಾಮಾಯಣದಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾಗುತ್ತದೆ. ಭಗವಾನ್ ರಾಮನು ಸ್ವತಃ ಈ ದೇವಾಲಯವನ್ನು ನಿರ್ಮಿಸಿದನು ಎನ್ನುವಕಥೆ ಸಹ ಇದೆ. ದೇವಸ್ಥಾನದ ಅರ್ಚಕ ಮನೋಜಗಿರಿ ಗೋಸ್ವಾಮಿ ಅವರ ಪ್ರಕಾರ, ಏಕಾದಶಿ ದಿನದಂದು ಈ ದೇವಸ್ಥಾನದಲ್ಲಿ ಏಡಿಗೆ ಪೂಜೆ ಸಲ್ಲಿಸಿದ ಎಲ್ಲರಿಗೂ ಪುಣ್ಯ ಫಲ ದೊರೆಯುತ್ತದೆ.
3/ 7
ಈ ರೀತಿ ಜೀವಂತ ಏಡಿಯನ್ನು ಅರ್ಪಣೆ ಮಾಡುವುದರಿಂದ ವಿವಿಧ ರೋಗಗಳು ಗುಣವಾಗುತ್ತವೆ ಎಂಬುದು ಭಕ್ತರ ನಂಬಿಕೆ. ಇದು ವಿಶೇಷವಾಗಿ ಕಿವಿಗೆ ಸಂಬಂಧಿಸಿದ ಕಾಯಿಲೆಗಳಾದ ಕಿವುಡುತನ, ಕಿವಿ ನೋವು ಇತ್ಯಾದಿಗಳನ್ನು ಗುಣಪಡಿಸುತ್ತದೆ ಎಂದು ಹೇಳಲಾಗುತ್ತದೆ.
4/ 7
ದೇವರ ಆಶೀರ್ವಾದ ಪಡೆಯಲು ಭಕ್ತರು ಬೆಳಗ್ಗೆಯಿಂದಲೇ ಜೀವಂತ ಏಡಿಗಳೊಂದಿಗೆ ದೇವಾಲಯಕ್ಕೆ ಹೋಗಿ ಪೂಜೆ ಸಲ್ಲಿಸುತ್ತಾರೆ. ಈ ಸಮಯದಲ್ಲಿ ಅದರ ಸುತ್ತಮುತ್ತಲಿನ ಹಳ್ಳಿಗಳಿಂದ ಜನರು ಈ ದೇವಾಲಯಕ್ಕೆ ಜೀವಂತ ಏಡಿಗಳನ್ನು ಅರ್ಪಿಸಲು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ.
5/ 7
ಹಲವು ವರ್ಷಗಳಿಂದ ಈ ಸಂಪ್ರದಾಯ ನಡೆದುಕೊಂಡು ಬಂದಿದ್ದರೂ ಕಿವಿನೋವು ಕಾಣಿಸಿಕೊಂಡರೆ ಈ ನೋವಿನಿಂದ ಮುಕ್ತಿ ಸಿಗುವಂತೆ ಶಿವನನ್ನು ಪ್ರಾರ್ಥಿಸುತ್ತಾರೆ. ಕಿವಿನೋವು ಶಮನವಾದ ತಕ್ಷಣ ಜೀವಂತ ಏಡಿಯನ್ನು ಭಗವಂತನಿಗೆ ಅರ್ಪಿಸುತ್ತಾರೆ.
6/ 7
ದೇವಸ್ಥಾನದಲ್ಲಿ ಯಾರು ಏಡಿಯನ್ನು ಅರ್ಪಿಸುತ್ತಾರೋ ಅವರ ಎಲ್ಲಾ ಆರೋಗ್ಯ ಸಮಸ್ಯೆಗಳು ಪರಿಹಾರವಾಗುವುದು ಮಾತ್ರವಲ್ಲದೇ ಇತರ ಕಷ್ಟಗಳು ಸಹ ನಿವಾರಣೆಯಾಗುತ್ತದೆ ಎನ್ನುವ ನಂಬಿಕೆ ಇದೆ. ಈ ಜೀವಂತ ಏಡಿಗಳನ್ನು ದೇವಸ್ಥಾನದ ಟ್ರಸ್ಟ್ ಸುರಕ್ಷಿತವಾಗಿ ತಾಪಿ ನದಿಗೆ ಬಿಡುತ್ತದೆ..
7/ 7
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)