Vastu Tips: ನಿಮ್ಮ ರಾಶಿಯ ಅನುಗುಣವಾಗಿ ಮನೆಯ ಅಲಂಕಾರ ಹೀಗೆ ಮಾಡಿ
Home Decoration According To Zodiac Sign: ಮನೆಯನ್ನು ಅಲಂಕಾರ ಮಾಡುವುದು ಎಲ್ಲರಿಗೂ ಇಷ್ಟ. ಸುಂದರವಾಗಿ ಅಲಂಕಾರ ಮಾಡುವುದು ನೋಡಲು ಮಾತ್ರವಲ್ಲದೇ ಎಲ್ಲಾ ರೀತಿಯಿಂದಲೂ ಉತ್ತಮ. ಆದರೆ ನಿಮ್ಮ ಮನೆಯನ್ನು ರಾಶಿಗೆ ಅನುಸಾರವಾಗಿ ಅಲಂಕಾರ ಮಾಡಿದರೆ ಬಹಳ ಉತ್ತಮ ಎನ್ನುತ್ತಾರೆ ವಾಸ್ತು ತಜ್ಞರು. ಯಾವ ರಾಶಿಯವರು ಹೇಗೆ ಅಲಂಕಾರ ಮಾಡಬೇಕು ಎಂಬುದು ಇಲ್ಲಿದೆ.
ಮೇಷ ರಾಶಿ ಮೇಷ ರಾಶಿಯವರ ವ್ಯಕ್ತಿತ್ವ ಎಲ್ಲವೂ ಭರ್ಜರಿಯಾಗಿ ಇರಬೇಕು ಎನ್ನುವುದು. ಅವರಿಗೆ ಮನೆಯಲ್ಲಿ ಸಹ ಎಲ್ಲವೂ ಜಗಮಗಿಸಬೇಕು ಎನ್ನುವ ಆಸೆ ಇರುತ್ತದೆ. ಹಾಗಾಗಿ ಮನೆಯಲ್ಲಿ ಹಲವು ರೀತಿಯ ದೀಪಗಳನ್ನು ಹಾಕಿ ಅಲಂಕಾರ ಮಾಡುವುದು ಮೇಷ ರಾಶಿಯವರಿಗೆ ಒಳ್ಳೆಯದು.
2/ 12
ವೃಷಭ ಐಷಾರಾಮಿ ವಸ್ತುಗಳು ಎಂದರೆ ವೃಷಭ ರಾಶಿಯವರಿಗೆ ಬಹಳ ಇಷ್ಟ, ಹಾಗಾಗಿ ಬೆಲೆಬಾಳುವ ಸೋಫಾಗಳು, ಆ್ಯಂಟಿಕ್ ಪೀಸ್ ಹೀಗೆ ದುಬಾರಿ ವಸ್ತುಗಳನ್ನು ಬಳಸಿ ಅಲಂಕಾರ ಮಾಡುವುದು ನಿಜಕ್ಕೂ ಉತ್ತಮ.
3/ 12
ಮಿಥುನ ಮಿಥುನರಾಶಿಯವರು ಒಂದೇ ರೀತಿಯ ಡೆಕೊರೇಷನ್ ಮಾಡುವ ಅಗತ್ಯವಿಲ್ಲ. ಆಗಾಗ ಮನೆಯ ಅಲಂಕಾರದಲ್ಲಿ ಕೆಲ ಬದಲಾವಣೆ ಮಾಡುವುದು ಮನೆಯಲ್ಲಿ ನೆಮ್ಮದಿ ಹಾಗೂ ಸಂಪತ್ತು ಹೆಚ್ಚಾಗಲು ಕಾರಣವಾಗುತ್ತದೆ
4/ 12
ಕಟಕ ಕಟಕ ರಾಶಿಯವರಿಗೆ ಕುಟುಂಬ ಎಂದರೆ ಬಹಳ ಇಷ್ಟ. ಹಾಗಾಗಿ ಈ ರಾಶಿಯವರ ಕುಟುಂಬದಲ್ಲಿ ತೊಂದರೆ ಆಗಬಾರದು ಎಂದರೆ ಬೆಳ್ಳಿ, ನೀಲಿ ಮತ್ತು ಬಿಳಿಯಂತಹ ಬಣ್ಣಗಳನ್ನು ಬಳಸಿ ಅಲಂಕಾರ ಮಾಡಿ.
5/ 12
ಸಿಂಹ ರಾಜನಂತೆ ಬದುಕಲು ಇಷ್ಟಪಡುವ ರಾಶಿ ಇದು. ಈ ರಾಶಿಯವರು ಮನೆಯಲ್ಲಿ ಇತಿಹಾಸಕ್ಕೆ ಸಂಬಂಧಪಟ್ಟ ಫೋಟೋಗಳನ್ನು ಇಟ್ಟುಕೊಳ್ಳುವುದು ಬಹಳ ಒಳ್ಳೆಯದು. ಈ ರೀತಿಯ ಫೋಟೋಗಳು ಮನೆಯಲ್ಲಿ ಇದ್ದರೆ ನೆಮ್ಮದಿ, ಸಂಪತ್ತು ಹೆಚ್ಚಾಗುತ್ತದೆ.
6/ 12
ಕನ್ಯಾರಾಶಿ ಕನ್ಯಾ ರಾಶಿಯವರು ಮನೆಯಲ್ಲಿ ಹೂವುಗಳು, ಹೆಣ್ಣು ಮಕ್ಕಳಿರುವ ಫೋಟೋಗಳನ್ನು ಹಾಕಿ ಅಲಂಕಾರ ಮಾಡಬಹುದು. ಯಾವ ವಸ್ತುಗಳು ಹೆಣ್ಣು ಮಕ್ಕಳಿಗೆ ಬಹಳ ಇಷ್ಟವೋ ಆ ವಸ್ತುಗಳನ್ನು ಬಳಸುವುದು ಉತ್ತಮ.
7/ 12
ತುಲಾ ಈ ರಾಶಿಗೆ ಪ್ರಕೃತಿ ಎಂದರೆ ಬಹಳ ಇಷ್ಟ. ಹಾಗಾಗಿ ಅಪರೂಪದ ಮತ್ತು ಸುಂದರವಾದ ಸ್ಥಳಗಳ ಫೋಟೋಗಳನ್ನು ಮನೆಯಲ್ಲಿ ಹಾಕಬೇಕು. ಇದು ಮನೆಯ ಅಂದವನ್ನು ಹೆಚ್ಚಿಸುವುದು ಮಾತ್ರವಲ್ಲದೇ ನಿಮ್ಮ ಬದುಕಿನಲ್ಲಿ ಸಹ ಮಹತ್ತರವಾದ ಬದಲಾವಣೆ ಉಂಟು ಮಾಡುತ್ತದೆ.
8/ 12
ವೃಶ್ಚಿಕ ನೀವು ವೃಶ್ಚಿಕ ರಾಶಿಯವರಾಗಿದ್ದರೆ ಬಿಳಿ ಬಣ್ಣ ನಿಮಗೆ ಸೂಟ್ ಆಗುತ್ತದೆ. ಕೆಂಪು, ಕಪ್ಪು ಬಣ್ಣಗಳು ನಿಮಗೆ ತೊಂದರೆ ಉಂಟು ಮಾಡುತ್ತದೆ. ಹಾಗಾಗಿ ಮನೆಯಲ್ಲಿ ಶಾಂತಿ ನೆಲೆಸಿರಬೇಕು ಎಂದರೆ ಬಿಳಿ ಬಣ್ಣ ಅಥವಾ ಯಾವುದೇ ಲೈಟ್ ಬಣ್ಣವನ್ನು ಆಯ್ಕೆ ಮಾಡಿ.
9/ 12
ಧನು ರಾಶಿ ಧನು ರಾಶಿಯವರು ಸಹ ನಿಸರ್ಗ ಪ್ರೇಮಿಗಳು. ಮನೆಯ ಒಳಾಂಗಣದಲ್ಲಿ ಗಿಡಗಳು, ಸುಂದರ ಪ್ರಕೃತಿಯ ಫೋಟೋಗಳು, ಹೂವುಗಳನ್ನು ಬಳಸಿ ಅಲಂಕಾರ ಮಾಡಿದರೆ ಬಹಳ ಒಳ್ಳೆಯದು.
10/ 12
ಮಕರ ನೀವು ಮಕರ ರಾಶಿಯವರಾಗಿದ್ದರೆ, ನಿಮ್ಮ ಮನೆಯನ್ನು ಪುರಾತನ ವಸ್ತುಗಳು, ಮರದ ಪೀಠೋಪಕರಣಗಳು ಮತ್ತು ಗಡಿಯಾರಗಳಿಂದ ಅಲಂಕಾರ ಮಾಡಿ. ಹಿಂದಿನ ಕಾಲದ ಶೈಲಿಯ ವಸ್ತುಗಳು ತುಂಬಾ ಒಳ್ಳೆಯದು.
11/ 12
ಕುಂಭ ಆಧುನಿಕ ವಸ್ತುಗಳ ಮೇಲೆ ಈ ಕುಂಭರಾಶಿಯವರಿಗೆ ಪ್ರೀತಿ ಹೆಚ್ಚು. ಹಾಗಾಗಿ, ಆಧುನಿಕ ವಸ್ತುಗಳನ್ನು ಬಳಸಿ ಮನೆ ಅಲಂಕಾರ ಮಾಡಬಹುದು. ಆದರೆ ಸಿಕ್ಕ ಸಿಕ್ಕ ವಸ್ತುಗಳನ್ನು ಖರೀದಿಸಿ ತಂದು ಇಡಬೇಡಿ. ಯಾವುದು ಅಗತ್ಯವಿದೆಯೋ ಅದನ್ನು ಮಾತ್ರ ತಂದು ಅಲಂಕಾರ ಮಾಡಿ.
12/ 12
ಮೀನ ಮೀನ ರಾಶಿಯವರಿಗೆ ಜಪಾನೀಸ್ ಶೈಲಿಯಲ್ಲಿ ಮನೆಯ ಅಲಂಕಾರ ಮಾಡುವುದು ಉತ್ತಮ ಎನ್ನಲಾಗುತ್ತದೆ. ಸಂಗೀತ ಮತ್ತು ಧ್ಯಾನಕ್ಕೆ ಸಂಬಂಧಪಟ್ಟ ವಸ್ತುಗಳು ಇದ್ದರೆ ಜೀವನದಲ್ಲಿ ಬೆಳವಣಿಗೆಯಾಗುತ್ತದೆ.