ಸಂಖ್ಯೆ 1: ನಿಮ್ಮ ಅಂತಃಪ್ರಜ್ಞೆಯು ಇಂದು ನಿಮಗೆ ಅನುಭವಕ್ಕಿಂತ ಹೆಚ್ಚಾಗಿ ಮಾರ್ಗದರ್ಶನ ನೀಡುತ್ತದೆ. ಹೆಚ್ಚಿನ ಸಮಸ್ಯೆಗಳು ಬಹುತೇಕ ಅಂತ್ಯದತ್ತ ಸಾಗುತ್ತಿವೆ. ಜೀವನದಲ್ಲಿ ಹೊಸದೊಂದು ಅಧ್ಯಾಯ ಶೀಘ್ರದಲ್ಲೇ ಪ್ರಾರಂಭವಾಗುತ್ತದೆ, ಅದು ಹೊಸ ಸ್ಥಳ, ಸ್ಥಾನ, ಸ್ನೇಹಿತ ಅಥವಾ ವ್ಯಾಪಾರದಲ್ಲಿ ಹೊಸ ಹೂಡಿಕೆ, ಹೊಸ ಕೆಲಸ, ಹೊಸ ಮನೆ ಆಗಿರಬಹುದು. ವೈದ್ಯಕೀಯ ವೃತ್ತಿಗಾರರು ಇಂದು ವಿಶೇಷ ಹೊಸ ಕೊಡುಗೆಯನ್ನು ಪಡೆಯಲಿದ್ದಾರೆ. ಮುಖ್ಯ ಬಣ್ಣ: ನೀಲಿ ಮತ್ತು ಹಳದಿ, ಅದೃಷ್ಟದ ದಿನ: ಶುಕ್ರವಾರ, ಅದೃಷ್ಟ ಸಂಖ್ಯೆ: 6, ದೇಣಿಗೆ: ಆಶ್ರಮದಲ್ಲಿ ಆಹಾರವನ್ನು ನೀಡಿ.
ಸಂಖ್ಯೆ 2: ನಿಮ್ಮ ಸ್ವಭಾವವು ಅನೇಕ ಸಮಸ್ಯೆಗಳನ್ನು ಪರಿಹರಿಸಲು ಕಾರಣವಾಗುತ್ತದೆ. ಆದರೆ ನೀವು ಯಾವಾಗಲಾದರೂ "ಇಲ್ಲ" ಎಂದು ಹೇಳಲು ಕಲಿಯಬೇಕು. ಯಾಕೆಂದರೆ ಜನರು ನಿಮ್ಮ ಮುಗ್ಧತೆಯನ್ನು ದುರುಪಯೋಗಪಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ವೈದ್ಯರು, ಇಂಜಿನಿಯರ್ಗಳು, ದಲ್ಲಾಳಿಗಳು, ಟ್ರಾವೆಲ್ ಏಜೆನ್ಸಿಗಳು, ಸ್ಟಾಕ್ ಮಾರುಕಟ್ಟೆ ಮತ್ತು ಪಾಲುದಾರಿಕೆ ಸಂಸ್ಥೆಗಳಿಗೆ ಲಾಭವಿದೆ. ಮುಖ್ಯ ಬಣ್ಣ: ನೀಲಿ, ಅದೃಷ್ಟದ ದಿನ: ಸೋಮವಾರ, ಅದೃಷ್ಟ ಸಂಖ್ಯೆ: 2, ದೇಣಿಗೆ: ಜಾನುವಾರುಗಳಿಗೆ ನೀರನ್ನು ದಾನ ಮಾಡಿ.
ಸಂಖ್ಯೆ 3: ಹಣವನ್ನು ನಿಭಾಯಿಸುವಾಗ ನೀವು ಜಾಗರೂಕರಾಗಿರಬೇಕು. ಸೃಜನಾತ್ಮಕ ಜನರು ಮತ್ತು ಸಾರ್ವಜನಿಕ ವ್ಯಕ್ತಿಗಳು ಖ್ಯಾತಿಯನ್ನು ಗಳಿಸುತ್ತಾರೆ. ಕ್ರೀಡಾ ತರಬೇತುದಾರರು ಗೆಲುವು ಮತ್ತು ಹಣದ ಬಹುಮಾನವನ್ನು ಪಡೆಯುವ ಸಾಧ್ಯತೆ ಇದೆ. ನಿರ್ಮಾಣ ಕ್ಷೇತ್ರ ಮತ್ತು ಕೃಷಿಯಲ್ಲಿ ಹೂಡಿಕೆಗೆ ಉತ್ತಮ ಸಮಯ. ಬೆಳಿಗ್ಗೆ ಚಂದನವನ್ನು ಹಣೆಗೆ ಹಚ್ಚಿಕೊಳ್ಳಿ. ಮುಖ್ಯ ಬಣ್ಣ: ಕಿತ್ತಳೆ ಮತ್ತು ನೀಲಿ, ಅದೃಷ್ಟದ ದಿನ: ಗುರುವಾರ, ಅದೃಷ್ಟ ಸಂಖ್ಯೆ: 3 ಮತ್ತು 9, ದೇಣಿಗೆ: ಸೂರ್ಯಕಾಂತಿ ಎಣ್ಣೆಯನ್ನು ಬಡವರಿಗೆ ದಾನ ಮಾಡಿ.
ಸಂಖ್ಯೆ 4: ನಿಮ್ಮನ್ನು ಮತ್ತು ಸುತ್ತಮುತ್ತಲಿನ ಪರಿಸರವನ್ನು ಅಚ್ಚುಕಟ್ಟಾಗಿ ಮತ್ತು ಸ್ವಚ್ಛವಾಗಿಡಲು ಗಮನಹರಿಸಿ. ಉನ್ನತ ಸ್ಥಾನದಲ್ಲಿರುವ ಜನರು ಇನ್ನಷ್ಟು ಎತ್ತರಕ್ಕೆ ಬೆಳೆಯುತ್ತಾರೆ. ನಿಮ್ಮ ಹಣದ ವಿಷಯಗಳಲ್ಲಿ ಯಾರೊಂದಿಗೂ ಯೋಜನೆಗಳನ್ನು ಹಂಚಿಕೊಳ್ಳಬೇಡಿ. ವಿದ್ಯಾರ್ಥಿಗಳು ಆಸಕ್ತಿ ಇದ್ದರೆ ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಬೇಕು, ಅದು ಅನುಕೂಲಕರವಾಗಿರುತ್ತದೆ. ನೀವು ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಮಯ ಕಳೆಯಲು ಪ್ಲಾನ್ ಮಾಡಿಕೊಳ್ಳಿ. ಮುಖ್ಯ ಬಣ್ಣ: ನೀಲಿ, ಅದೃಷ್ಟದ ದಿನ: ಮಂಗಳವಾರ, ಅದೃಷ್ಟ ಸಂಖ್ಯೆ: 9, ದೇಣಿಗೆ: ಭಿಕ್ಷುಕರಿಗೆ ಪಾದರಕ್ಷೆಗಳನ್ನು ದಾನ ಮಾಡಿ.
ಸಂಖ್ಯೆ 5: ಹಿಂದಿನ ಸಮಸ್ಯೆಗಳನ್ನು ಮರೆತು ಹೊಸ ಸಂಬಂಧಗಳಲ್ಲಿ ಮುಂದುವರಿಯಿರಿ. ನಿಮ್ಮ ಭಾವನೆಗಳನ್ನು ಸಂಗಾತಿ ಮುಂದೆ ಪ್ರಸ್ತಾಪಿಸಲು ಸೂಕ್ತ ದಿನ. ಯಂತ್ರೋಪಕರಣಗಳನ್ನು ಖರೀದಿಸಲು, ಆಸ್ತಿಯನ್ನು ಮಾರಾಟ ಮಾಡಲು, ಅಧಿಕೃತ ದಾಖಲೆಗಳಿಗೆ ಸಹಿ ಮಾಡಲು ಮತ್ತು ಪ್ರವಾಸಕ್ಕೆ ಹೋಗಲು ಉತ್ತಮ ದಿನ. ಸುದ್ದಿ ನಿರೂಪಕರು, ನಟರು, ಕರಕುಶಲ ಕಲಾವಿದರು, ಇಂಜಿನಿಯರ್ಗಳಿಗೆ ಶುಭವಿದೆ. ಮುಖ್ಯ ಬಣ್ಣ: ಟೀಲ್, ಅದೃಷ್ಟದ ದಿನ: ಬುಧವಾರ, ಅದೃಷ್ಟ ಸಂಖ್ಯೆ: 5, ದೇಣಿಗೆ: ಅನಾಥಾಶ್ರಮದಲ್ಲಿರುವ ಮಕ್ಕಳಿಗೆ ಹಸಿರು ಹಣ್ಣುಗಳನ್ನು ನೀಡಿ.
ಸಂಖ್ಯೆ 6: ನೀವು ಅಲಂಕಾರ, ಆಹಾರ, ಮಾರುಕಟ್ಟೆ, ವ್ಯಾಪಾರ, ವಿತರಣೆ, ಮಾರಾಟ, ರಕ್ಷಣೆ, ಏರ್ಲೈನ್ಸ್, ಆಭರಣಗಳು, ಸೌಂದರ್ಯವರ್ಧಕಗಳು ಮತ್ತು ಗೃಹಾಲಂಕಾರ ಕ್ಷೇತ್ರಕ್ಕೆ ಸೇರಿದವರಾಗಿದ್ದರೆ ಅದೃಷ್ಟವು ಹುಡುಕಿಕೊಂಡು ಬರಲಿದೆ. ಇಂದು ನಿಮ್ಮ ಕನಸುಗಳನ್ನು ಈಡೇರಿಸಿಕೊಳ್ಳಲು ಸಿದ್ಧರಾಗಿರಿ. ಈ ದಿನ ನೀವು ಎಲ್ಲಾ ರೀತಿಯ ಪ್ರಯೋಜನಗಳನ್ನು ಅನುಭವಿಸುವಿರಿ. ಕುಟುಂಬದ ಪ್ರೀತಿ ಮತ್ತು ಬೆಂಬಲವು ಸಮೃದ್ಧಿಯನ್ನು ತರುತ್ತದೆ. ದಿನವು ಐಷಾರಾಮಿಯಾಗಿ ಕಳೆಯುತ್ತದೆ. ಮುಖ್ಯ ಬಣ್ಣ: ಆಕಾಶ ನೀಲಿ, ಅದೃಷ್ಟದ ದಿನ: ಶುಕ್ರವಾರ, ಅದೃಷ್ಟ ಸಂಖ್ಯೆ: 6 ಮತ್ತು 9, ದೇಣಿಗೆ: ಬಿಳಿ ಧಾನ್ಯಗಳನ್ನು ಬಡವರಿಗೆ ದಾನ ಮಾಡಿ.
ಸಂಖ್ಯೆ 7: ನಿಮ್ಮ ಪ್ರಾಯೋಗಿಕ ಚಿಂತನೆಯಿಂದ ಮತ್ತು ಸರಿಯಾದ ಸಮಯದಲ್ಲಿ ಏನು ಮಾಡಬೇಕೆಂದು ತಿಳಿಯುವ ಮೂಲಕ ವಿಜಯವನ್ನು ಪಡೆಯುತ್ತೀರಿ. ಶೀಘ್ರದಲ್ಲೇ ಸಂಬಂಧಗಳು, ಕಾರ್ಯಕ್ಷಮತೆ ಮತ್ತು ವಿತ್ತೀಯ ಬೆಳವಣಿಗೆಯನ್ನು ಆನಂದಿಸುವ ಸಮಯ ಬರುತ್ತದೆ. ಇಂದು ವ್ಯವಹಾರದಲ್ಲಿ ಸಂಬಂಧಿಕರು ಮತ್ತು ಸ್ನೇಹಿತರ ಬಗ್ಗೆ ಎಚ್ಚರದಿಂದಿರಿ. ದೇವರ ಆಶೀರ್ವಾದ ಪಡೆಯಲು ಶಿವ ಮತ್ತು ಶನಿ ದೇವರ ಆಚರಣೆಗಳನ್ನು ಮಾಡಬೇಕು. ಮುಖ್ಯ ಬಣ್ಣ: ಹಳದಿ, ಅದೃಷ್ಟದ ದಿನ: ಸೋಮವಾರ, ಅದೃಷ್ಟ ಸಂಖ್ಯೆ: 7, ದೇಣಿಗೆ: ಅನಾಥಾಶ್ರಮಗಳಿಗೆ ಬಟ್ಟೆಗಳನ್ನು ದಾನ ಮಾಡಿ.
ಸಂಖ್ಯೆ 8: ನೀವು ನಿಮ್ಮ ಸಾಮರ್ಥ್ಯಕ್ಕಿಂತ ಹೆಚ್ಚಿನ ಜವಾಬ್ದಾರಿ ಹೊತ್ತು ಸಾಗುತ್ತಿದ್ದೀರಿ. ಆದ್ದರಿಂದ ಓವರ್ಲೋಡ್ ಆಗಿರುತ್ತದೆ. ನಿಮ್ಮ ರಿಲ್ಯಾಕ್ಸ್ಗಾಗಿ ದಯವಿಟ್ಟು ಗ್ರೀನ್ ಗಾರ್ಡನ್ ಸುತ್ತಲೂ ಸ್ವಲ್ಪ ಸಮಯ ಕಳೆಯಿರಿ. ಇಂದು ಎಷ್ಟು ಸಾಧ್ಯವೋ ಅಷ್ಟು ಸಾರ್ವಜನಿಕ ಕಾರ್ಯಕ್ರಮಗಳಿಗೆ ಹಾಜರಾಗಿ. ಮುಖ್ಯ ಬಣ್ಣ: ನೇರಳೆ, ಅದೃಷ್ಟದ ದಿನ: ಶುಕ್ರವಾರ, ಅದೃಷ್ಟ ಸಂಖ್ಯೆ: 6, ದೇಣಿಗೆ: ಬಡವರಿಗೆ ಛತ್ರಿ ದಾನ ಮಾಡಿ.
ಸಂಖ್ಯೆ 9: ಮನೆಕೆಲಸದಲ್ಲಿ ಹೆಚ್ಚು ಖರ್ಚು ಮಾಡುವುದು, ಮನೆಯ ಜವಾಬ್ದಾರಿಗಳನ್ನು ಪೂರೈಸುವುದು, ಪಾರ್ಟಿಯನ್ನು ಆಯೋಜಿಸುವುದು, ಸಾಮಾಜಿಕ ಕೆಲಸ ಮಾಡುವುದು, ಷೇರುಗಳಲ್ಲಿ ವ್ಯಾಪಾರ ಮಾಡುವುದು., ಚರ್ಮರೋಗ ತಜ್ಞರು, ಲೆಕ್ಕಪರಿಶೋಧಕರು, ವಿಜ್ಞಾನಿಗಳು ಶಸ್ತ್ರಚಿಕಿತ್ಸಕರು, ರಾಜಕಾರಣಿಗಳು ಮತ್ತು ಕ್ರೀಡಾ ಪಟುಗಳು ಪ್ರತಿಫಲ ಮತ್ತು ಸಾಮಾಜಿಕ ಮನ್ನಣೆ ಪಡೆಯುತ್ತಾರೆ. ಈ ದಿನವು ವಿನೋದ, ಶಕ್ತಿ ಮತ್ತು ಉತ್ಸಾಹದಿಂದ ತುಂಬಿರುತ್ತದೆ. ನಿಮ್ಮ ಉದ್ದೇಶದ ಕಡೆಗೆ ಒಂದು ಹೆಜ್ಜೆ ಇಡುವಿರಿ. ಮುಖ್ಯ ಬಣ್ಣ: ಕೆಂಪು ಮತ್ತು ನೀಲಿ, ಅದೃಷ್ಟದ ದಿನ: ಮಂಗಳವಾರ, ಅದೃಷ್ಟ ಸಂಖ್ಯೆ: 9, ದೇಣಿಗೆ: ಮಹಿಳಾ ಗೃಹ ಸಹಾಯಕರಿಗೆ ಕೆಂಪು ಕರವಸ್ತ್ರವನ್ನು ನೀಡಿ.