Horoscope Today March 21: ಕುಟುಂಬದ ಜಗಳ ಬೀದಿಗೆ ಬರಬಹುದು, ಸುಮ್ಮನೆ ಜಗಳ ಮಾಡಬೇಡಿ
Horoscope Today March 21: ಇಂದು ಶುಭಕೃತ್ ನಾಮ ಸಂವತ್ಸರ ಉತ್ತರಾಯಣ ಶಿಶಿರ ಋತು ಮೀನ ಪಾಗಿನ ಮಾಸ ಕೃಷ್ಣ ಪಕ್ಷ ಚತುರ್ದಶಿ ಪೂರ್ವಭಾದ್ರ ನಕ್ಷತ್ರ ಶುಭಯೋಗ ಚತುಶ್ಪಾದ ಕರಣ ಮಂಗಳವಾರ ಆಗಿದೆ. ಈ ದಿನ ರಾಹುಕಾಲ -3.36 am to 05.07 pm, ಗುಳಿಕಕಾಲ -12.34 pm to 02.05 pm, ಯಮಗಂಡಕಾಲ -09.32 am to 11.03 am, ಸೂರ್ಯೋದಯ -06.31 am, ಸೂರ್ಯಾಸ್ತ -6.38pm, ಚಂದ್ರೋದಯ ಇಂದು ಇಲ್ಲ, ಚಂದ್ರಾಸ್ತ - 6.26pm ಆಗಿರಲಿದೆ. ಸುಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.
ಮೇಷ ರಾಶಿ - ಕೆಲಸದ ಸ್ಥಳದಲ್ಲಿ ತೊಂದರೆಯನ್ನು ಎದುರಿಸಬೇಕಾಗುತ್ತದೆ. ಕುಟುಂಬದಲ್ಲಿ ಕಲಹದ ವಾತಾವರಣ ಇರುತ್ತದೆ. ಠೇವಣಿ ಮಾಡಿದ ಬಂಡವಾಳವನ್ನು ಅನಗತ್ಯ ಕೆಲಸದಲ್ಲಿ ಖರ್ಚು ಮಾಡುವಿರಿ
2/ 12
ವೃಷಭ ರಾಶಿ - ಧಾರ್ಮಿಕ ಕಾರ್ಯಗಳಿಗೆ ಸಂಬಂಧಿಸಿದಂತೆ ನಿಮ್ಮ ಮನಸ್ಸಿನಲ್ಲಿ ಅಪನಂಬಿಕೆ ಉಂಟಾಗಬಹುದು. ನರಗಳಲ್ಲಿ ಹಿಗ್ಗುವಿಕೆ ಮತ್ತು ನೋವಿನ ಸಮಸ್ಯೆಗಳು ಇರಬಹುದು
3/ 12
ಮಿಥುನ ರಾಶಿ - ನಿಮ್ಮ ಜೀವನಶೈಲಿ ಸುಧಾರಿಸುತ್ತದೆ ನಿಮ್ಮ ದಿನಚರಿಯನ್ನು ಸುಧಾರಿಸಬಹುದು. ಎಲ್ಲ ಕೆಲಸಗಳಲ್ಲಿ ಯಶಸ್ಸನ್ನು ಪಡೆಯುವ ಮೂಲಕ ನೀವು ಉತ್ಸುಕರಾಗಿರುತ್ತೀರಿ
4/ 12
ಕಟಕ ರಾಶಿ - ನೀವು ಧೀರ್ಘ ಕಾಲದವರೆಗೆ ಯೋಜಿಸುತ್ತಿದ್ದ ಕೆಲಸವನ್ನು ಪ್ರಾರಂಭಿಸಬಹುದು. ಸ್ಥಗಿತಗೊಂಡ ಕಾಮಗಾರಿಯನ್ನು ಚುರುಕುಗೊಳಿಸುವುದರಿಂದ ನಿಮಗೆ ಲಾಭವಾಗಲಿದೆ
5/ 12
ಸಿಂಹ ರಾಶಿ - ವೈಯಕ್ತಿಕ ಜೀವನಕ್ಕೆ ನೀವು ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತೀರಿ. ದಾಂಪತ್ಯ ಜೀವನದಲ್ಲಿ ಪ್ರೀತಿ ಹೆಚ್ಚಾಗುತ್ತದೆ. ವ್ಯಾಪಾರ ಒಪ್ಪಂದಗಳಿಗೆ ದಿನವು ತುಂಬಾ ಒಳ್ಳೆಯದು
6/ 12
ಕನ್ಯಾ ರಾಶಿ - ನೀವು ಹೊಸ ಕೆಲಸವನ್ನು ಪ್ರಾರಂಭಿಸಲು ಬಯಸಿದರೆ ನಿಮ್ಮ ಯೋಜನೆಗಳನ್ನು ನೀವು ಬದಲಾಯಿಸಬೇಕು. ಹಣಕಾಸಿನ ಸಮಸ್ಯೆಯನ್ನು ಹಂಚಿಕೊಳ್ಳಬೇಡಿ
7/ 12
ತುಲಾ ರಾಶಿ - ಷೇರು ಮಾರುಕಟ್ಟೆಯಲ್ಲಿ ಹಿಂದಿನ ಹೂಡಿಕೆಯು ಇಂದು ನಿಮಗೆ ದೊಡ್ಡ ಲಾಭವನ್ನು ನೀಡುತ್ತದೆ. ಸಂದರ್ಭವನ್ನು ಬುದ್ದಿವಂತಿಕೆಯಿಂದ ನಿಭಾಯಿಸಿ
8/ 12
ವೃಶ್ಚಿಕ ರಾಶಿ - ಸ್ನೇಹಿತರ ಸಹಾಯದಿಂದ ನೀವು ಯೋಜನೆಗಳನ್ನು ಲಾಭವನ್ನು ಪಡೆಯುತ್ತೀರಿ. ನೀವು ವಿದೇಶಿ ಕಂಪನಿಗಳಿಂದ ಉದ್ಯೋಗದ ಕೊಡುಗೆಯನ್ನು ಪಡೆಯಬಹುದು
9/ 12
ಧನು ರಾಶಿ - ನೀವು ಕೆಲಸದಲ್ಲಿ ಪ್ರಮುಖ ಸ್ಥಾನವನ್ನು ಪಡೆಯಬಹುದು. ಸಹೋದ್ಯೋಗಿಗಳು ನಿಮ್ಮನ್ನು ಟೀಕಿಸಬಹುದು
10/ 12
ಮಕರ ರಾಶಿ - ವ್ಯಾಪಾರದಲ್ಲಿ ನಿರೀಕ್ಷಿತ ಲಾಭ ಪಡೆಯುವ ಸಾಧ್ಯತೆ ಕಡಿಮೆ. ದೈಹಿಕ ನೋವು ಬರಬಹುದು, ಶತ್ರುಗಳು ನಿಮ್ಮ ಕೆಲಸವನ್ನು ಹಾಳು ಮಾಡಲು ಯತ್ನಿಸುತ್ತಾರೆ
11/ 12
ಕುಂಭ ರಾಶಿ - ಕುಟುಂಬದಲ್ಲಿ ಸಾಮರಸ್ಯದ ವಾತಾವರಣ ಇರುತ್ತದೆ. ಸ್ನೇಹಿತರಿಂದ ನೀವು ಹಣಕಾಸಿನ ಲಾಭವನ್ನು ಪಡೆಯುತ್ತೀರಿ. ವ್ಯಾಪಾರದಲ್ಲಿ ಹೊಸ ಸಂಪರ್ಕ ಬೆಳೆಯಬಹುದು
12/ 12
ಮೀನ ರಾಶಿ - ಸಾಲ ಕೊಟ್ಟ ಹಣವನ್ನು ಮರಳಿ ಪಡೆಯಬಹುದು. ಹಳೆಯ ಚಿಂತೆ ದೂರವಾಗುತ್ತದೆ. ಮಕ್ಕಳು ಮತ್ತು ಮನೆಯವರೊಂದಿಗೆ ಸಮಯ ಕಳೆಯುವಿರಿ
First published:
112