Horoscope Today January 21: ಬೇರೆಯವರ ತಪ್ಪು ಕಂಡುಹಿಡಿಯೋದು ನಿಲ್ಲಿಸಿ, ನಿಮ್ಮ ಕೆಲಸದ ಬಗ್ಗೆ ಗಮನ ಇರಲಿ
Horoscope Today january 21 2023: ಇಂದು ಶುಭಕೃತ್ ನಾಮ ಸಂವತ್ಸರ ಉತ್ತರಾಯಣ ಹೇಮಂತ ಋತು ಸೌರ ಮಾಸಾ ಮಕರ ಚಂದ್ರ ಮಾಸ ಪುಷ್ಯ ಕೃಷ್ಣ ಪಕ್ಷ ಅಮಾವಾಸ್ಯೆ ತಿಥಿ ಪೂರ್ವಾಷಾಢ ನಕ್ಷತ್ರ ಹರ್ಷಣ ಯೋಗ ಚತುಷ್ಪದ ಕರಣ ಶನಿವಾರ ಆಗಿದೆ. ಹಾಗೆಯೇ ಈ ದಿನ ರಾಹುಕಾಲ 9.46am ನಿಂದ11.12am ವರೆಗೆ , ಗುಳಿಕಕಾಲ 6.54am ನಿಂದ 8.20am ವರೆಗೆ, ಯಮಗಂಡ ಕಾಲ 2.04pm ನಿಂದ 3.30pm ವರೆಗೆ, ಸೂರ್ಯೋದಯ 6.54am, ಸೂರ್ಯಾಸ್ತ 6.22pm, ಚಂದ್ರೋದ ಉದಯ ಇಲ್ಲ ಚಂದ್ರಾಸ್ತ 5.55pm ಆಗಿರುತ್ತದೆ. ಸುಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.
ಮೇಷ ರಾಶಿ: ಮಧುಮೇಹಿಗಳಿಗೆ ತಕ್ಷಣ ಸಕ್ಕರೆಯು ಕಡಿಮೆ ಆಗಬಹುದು. ಸ್ನೇಹಿತರು ಕೊಡುವ ಸಲಹೆಯನ್ನು ಇಂದು ನೀವು ಗಂಭೀರವಾಗಿ ತೆಗೆದುಕೊಳ್ಳಿ. ಧಾರ್ಮಿಕ ಚಟುವಟಿಕೆಯಲ್ಲಿ ಆಸಕ್ತಿಯನ್ನು ಹೊಂದಿದವರಾಗಿರುತ್ತೀರಿ
2/ 12
ವೃಷಭ ರಾಶಿ: ನೀವು ಇಂದು ಆತ್ಮವಿಶ್ವಾಸದಿಂದ ತುಂಬಿರುತ್ತೀರಿ. ಕುಟುಂಬದವರೊಂದಿಗೆ ಗಂಭೀರ ವಿಷಯದ ಬಗ್ಗೆ ಚರ್ಚಿಸಬೇಕು
3/ 12
ಮಿಥುನ ರಾಶಿ: ವಿವಾಹೇತರ ಸಂಬಂಧಗಳಿಂದ ದೂರವಿರಿ. ತಪ್ಪು ಸ್ವಭಾವದ ಜನರೊಂದಿಗೆ ಸಹವಾಸ ಮಾಡಬೇಡಿ, ವ್ಯವಹಾರದಲ್ಲಿ ಬದಲಾವಣೆಯನ್ನು ತನ್ನಿ
4/ 12
ಕರ್ಕಾಟಕ ರಾಶಿ: ದಾಂಪತ್ಯ ಜೀವನದಲ್ಲಿ ಉತ್ತಮ ಸಾಮರಸ್ಯ ಇರುತ್ತದೆ. ವ್ಯವಹಾರದಲ್ಲಿ ಕೆಲವು ಬದಲಾವಣೆಯನ್ನು ತರಬಹುದು
5/ 12
ಸಿಂಹ ರಾಶಿ: ಶುಭ ಸಮಾರಂಭಕ್ಕಾಗಿ ಶಾಪಿಂಗ್ ಹೋಗುವ ಸಾಧ್ಯತೆ ಇದೆ. ಶತ್ರುಗಳ ಬಗ್ಗೆ ಎಚ್ಚರದಿಂದಿರಬೇಕು, ಕುಟುಂಬದಲ್ಲಿ ಕಲಹಗಳು ಉಂಟಾಗಬಹುದು
6/ 12
ಕನ್ಯಾ ರಾಶಿ: ಪ್ರೇಮ ಸಂಬಂಧಗಳಿಗೆ ಕುಟುಂಬದ ಒಪ್ಪಿಗೆ ಸಿಗುವ ಕಾಲ ಇದು. ನೀವು ಇತರರ ತಪ್ಪು ಕಂಡು ಹಿಡಿಯುವುದನ್ನು ತಪ್ಪಿಸಬೇಕು
7/ 12
ತುಲಾ ರಾಶಿ: ಈ ಸಮಯದಲ್ಲಿ ನೀವು ಪ್ರಯಾಣವನ್ನು ತಪ್ಪಿಸಿದರೆ ಅನುಕೂಲ ಆಗುವುದು. ಮಾಡುವ ಕೆಲಸದಲ್ಲಿ ಅಡಚಣೆ ಉಂಟಾಗಬಹುದು
8/ 12
ವೃಶ್ಚಿಕ ರಾಶಿ: ನೀವು ಕುಟುಂಬದ ಕಡೆಗೆ ಸಮರ್ಪಣಾ ಭಾವವನ್ನು ಹೊಂದಿದವರಾಗಿರುತ್ತೀರಿ. ಹೊಸ ವಾಹನ ಮತ್ತು ಬೆಲೆಬಾಳುವ ವಸ್ತುಗಳನ್ನು ಖರೀದಿಸುವ ಯೋಚನೆಯನ್ನು ಮಾಡಬಹುದು
9/ 12
ಧನು ರಾಶಿ: ನಿಮ್ಮ ಸಾಮಾಜಿಕ ವಲಯವು ಹೆಚ್ಚಾಗುತ್ತದೆ. ನಿಮ್ಮ ಸೌಲಭ್ಯಗಳಿಗಾಗಿ ಸಾಕಷ್ಟು ಹಣವನ್ನು ಖರ್ಚು ಮಾಡುವಿರಿ
10/ 12
ಮಕರ ರಾಶಿ: ಇಂದು ನಿಮಗೆ ಕೆಲಸದ ಒತ್ತಡದಿಂದ ತಲೆನೋವು ಬರುವ ಸಾಧ್ಯತೆ ಇದೆ. ವೃತ್ತಿ ಜೀವನದ ಬಗ್ಗೆ ಅಸಡ್ಡೆ ತೋರಬಾರದು
11/ 12
ಕುಂಭ ರಾಶಿ: ಖಾಸಗಿ ಉದ್ಯೋಗ ಮಾಡುವವರಿಗೆ ದಿನ ಒಳ್ಳೆಯದಲ್ಲ. ಯುವಕರು ತಮ್ಮ ವೃತ್ತಿ ಜೀವನದ ಬಗ್ಗೆ ಅಸಡ್ಡೆಯನ್ನು ತೋರಬಾರದು.
12/ 12
ಮೀನ ರಾಶಿ: ನೀವು ವ್ಯಾಪಾರದಿಂದ ಲಾಭವನ್ನು ಗಳಿಸುವ ಸಾಧ್ಯತೆ ಇದೆ. ಪತಿಪತ್ನಿಯರ ಸಂಬಂಧ ಸೌಹಾರ್ದಯುತವಾಗಿರುತ್ತದೆ. ಹೋಟೆಲ್ ಉದ್ಯಮಿಗಳಿಗೆ ದಿನ ತುಂಬಾ ಒಳ್ಳೆಯದು