Horoscope Today January 16: ಇಂದು ಪತಿ, ಪತ್ನಿ ರೊಮ್ಯಾಂಟಿಕ್ ಆಗಿರುತ್ತೀರಿ! ಹೇಗಿದೆ ನೋಡಿ ದ್ವಾದಶ ರಾಶಿಗಳ ಭವಿಷ್ಯ
ಇಂದು ಶುಭ ಕೃತ್ ನಾಮ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಸೌರ ಮಾಸ, ಮಕರ, ಚಾಂದ್ರ ಮಾಸ, ಪುಷ್ಯ, ಕೃಷ್ಣ ಪಕ್ಷ, ನವಮಿ ತಿಥಿ, ಸ್ವಾತಿ ನಕ್ಷತ್ರ, ಧೃತಿ ಯೋಗ, ತೈತಿಲ ಕರಣ, ಸೋಮವಾರ ಆಗಿರುತ್ತದೆ. ಸೂರ್ಯೋದಯ 6.54am, ಸೂರ್ಯಾಸ್ತ 6.20pm, ಚಂದ್ರೋದಯ 2.01am, ಚಂದ್ರಾಸ್ತ 1.03pm, ರಾಹುಕಾಲ 8.19am ಇಂದ 9.45am ವರೆಗೆ, ಗುಳಿಕ ಕಾಲ 2.02ಪಿಎಂ ಇಂದ 3/28ಪಿಎಂವರೆಗೆ, ಯಮಗಂಡ ಕಾಲ 11.11am ಇಂದ 12.37pmವರೆಗೆ ಆಗಿರುತ್ತದೆ. ಸುಧಾಮ ಎಚ್.ಎಸ್. ಇವರು ಈ ಬಾರಿಯ ಸಂಕ್ರಾಂತಿ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.
ಮೇಷ ರಾಶಿ: ನಿಮ್ಮ ಗುರಿಗಳಿಗೆ ಸಂಬಂಧಿಸಿದಂತೆ ನೀವು ಸ್ವಲ್ಪ ಒತ್ತಡದಲ್ಲಿ ಇರುತ್ತೀರಿ. ಸರ್ಕಾರಿ ಕೆಲಸಗಳಿಗೆ ಅಡಚಣೆ ಉಂಟಾಗಬಹುದು.
2/ 12
ವೃಷಭ ರಾಶಿ: ವ್ಯಾಪಾರ ಒಪ್ಪಂದವನ್ನು ಮಾಡುವ ಮೊದಲು ಪೇಪರ್ಸ್ ಬಗ್ಗೆ ಗಮನ ಕೊಡುವುದು ಒಳಿತು. ನೀವು ಜನರಿಗೆ ಸಹಾಯ ಮಾಡಲು ಸಿದ್ದರಾಗಿದ್ದೀರಿ. ಆದರೆ ಇದರಿಂದ ನಿಮಗೆ ತೊಂದರೆ ಆಗಬಹುದು.
3/ 12
ಮಿಥುನ ರಾಶಿ: ಇಂದು ನಿಮಗೆ ಬಹಳ ಒಳ್ಳೆಯ ದಿನವಾಗಿದೆ. ಮನೆಯ ಸೌಕರ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವಿರಿ. ಮಾರ್ಕೆಟಿಂಗ್ ಸಂಬಂಧಿತ ಕೆಲಸಗಳಿಂದ ಲಾಭವಿದೆ.
4/ 12
ಕರ್ಕಾಟಕ ರಾಶಿ: ವ್ಯಾಪಾರದಲ್ಲಿ ಕೆಲವು ತೊಂದರೆಯನ್ನು ಎದುರಿಸಬೇಕಾಗುತ್ತದೆ. ಅತಿಯಾದ ಆಲೋಚನೆಯಿಂದ ಕೆಲಸ ಹಾಳಾಗಬಹುದು.
5/ 12
ಸಿಂಹ ರಾಶಿ: ನಿಮ್ಮ ಅಭಿಪ್ರಾಯವನ್ನು ಬೇರೆಯವರೊಂದಿಗೆ ಹೇಳಿ ಸರಿಯೋ, ತಪ್ಪೋ ನಿರ್ಧರಿಸಿಕೊಳ್ಳಿ. ಹೊಸ ವಾಹನ ಖರೀದಿಸುವವರಿಗೆ ಒಳ್ಳೆಯ ದಿನವಾಗಿದೆ.
6/ 12
ಕನ್ಯಾ ರಾಶಿ: ಪತಿ ಪತ್ನಿಯರ ನಡುವೆ ಮಧುರವಾದ ವಾಗ್ವಾದ ನಡೆಯುವ ಸಾಧ್ಯತೆ. ಇದೆ ವಿದ್ಯಾರ್ಥಿಗಳು ಓದಿನಲ್ಲಿ ಉದಾಸೀನರಾಗಿರಬಹುದು.
7/ 12
ತುಲಾ ರಾಶಿ: ಸಮಾಜದಲ್ಲಿ ನಿಮ್ಮ ಪ್ರತಿಷ್ಠ ಹೆಚ್ಚಾಗುತ್ತದೆ. ನಿಮ್ಮ ಹೆತ್ತವರ ಆಶೀರ್ವಾದವನ್ನು ಪಡೆಯಲು ಮರೆಯದಿರಿ. ಹೊಸ ಆದಾಯದ ಮೂಲವನ್ನು ಕಂಡುಕೊಳ್ಳುವ ಸಾಧ್ಯತೆ ಇದೆ.
8/ 12
ವೃಶ್ಚಿಕ ರಾಶಿ: ಕೆಲಸದ ಸ್ಥಳದಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ನೀವು ಶ್ರಮಿಸಬೇಕಾಗುತ್ತದೆ. ಅಧಿಕಾರಿ ವರ್ಗದಿಂದ ನಿಮಗೆ ಹೆಚ್ಚಿನ ಬೆಂಬಲ ಸಿಗುತ್ತದೆ.
9/ 12
ಧನು ರಾಶಿ: ವ್ಯವಹಾರದಲ್ಲಿ ಪ್ರಭಾವಿ ವ್ಯಕ್ತಿಗಳೊಂದಿಗೆ ನಿಮ್ಮ ಸಂಪರ್ಕ ಬಲಗೊಳ್ಳುತ್ತದೆ. ಬಹುದಿನದಿಂದ ಇದ್ದ ಸಮಸ್ಯೆಗೆ ಪರಿಹಾರ ದೊರೆಯಲಿದೆ.
10/ 12
ಮಕರ ರಾಶಿ: ವೈವಾಹಿಕ ಸಂಬಂಧಗಳಲ್ಲಿ ಉದ್ವಿಗ್ನತೆ ಉಂಟಾಗುವ ಸಾಧ್ಯತೆ ಇದೆ. ಹೊಸ ಮಿತ್ರರೊಂದಿಗೆ ನೀವು ಜಾಗರೂಕತೆಯಿಂದ ಇರಬೇಕು. ಶೇರು ಮಾರುಕಟ್ಟೆಯಲ್ಲಿ ದೊಡ್ಡ ಹೂಡಿಕೆ ಮಾಡುವುದನ್ನು ತಪ್ಪಿಸಬೇಕು.
11/ 12
ಕುಂಭ ರಾಶಿ: ಕೆಲಸದ ಸ್ಥಳದಲ್ಲಿ ನಿಮ್ಮನ್ನು ವಿರೋಧಿಸುವ ಜನರಿಂದ ಟೀಕೆಗಳು ಬರಬಹುದು. ವಕೀಲ ವೃತ್ತಿಗೆ ಸಂಬಂಧಪಟ್ಟವರಿಗೆ ಅನುಕೂಲ ಆಗುವುದು.
12/ 12
ಮೀನ ರಾಶಿ: ಹೊಸ ಕೆಲಸದ ಆರಂಭಕ್ಕೆ ಶುಭದಿನವಾಗಿದೆ. ಪ್ರೇಮಿಯೊಂದಿಗೆ ಜಗಳ ಆಗಬಹುದು. ನಿಮ್ಮ ಕೆಲಸಕ್ಕೆ ಬೇರೆಯವರು ಕ್ರೆಡಿಟ್ ತೆಗೆದುಕೊಳ್ಳಬಹುದು.