Numerology: ನಿಮ್ಮ ಹೆಸರು E, F ನಿಂದ ಸ್ಟಾರ್ಟ್ ಆಗುತ್ತಾ? ಹಾಗಾದ್ರೆ ನಿಮ್ಮ ಲೈಫ್ ಹೀಗೆ ಇರುತ್ತೆ
Numerology Suggestion: ಒಂದೊಂದು ಹೆಸರಿನ ಒಂದೊಂದು ಅಕ್ಷರಕ್ಕೂ ಅರ್ಥಗಳಿರುತ್ತವೆ ಎಂದರೆ ತಪ್ಪಲ್ಲ. ಅದರಲ್ಲೂ ಮೊದಲನೇಯ ಅಕ್ಷರಕ್ಕೆ ಬಹಳ ಮಹತ್ವ ಇರುತ್ತದೆ. ನಿಮ್ಮ ಹೆಸರು E ಮತ್ತು F ಅಕ್ಷರದಿಂದ ಆರಂಭವಾಗುತ್ತಿದ್ದರೆ, ನಿಮ್ಮ ವ್ಯಕ್ತಿತ್ವ ಹೇಗಿರಲಿದೆ ಎಂಬುದು ಇಲ್ಲಿದೆ.
ಆಲ್ಫಾಬೆಟ್ ಇ: ಇ ವರ್ಣಮಾಲೆಯಿಂದ ಪ್ರಾರಂಭವಾಗುವ ಹೆಸರುಗಳನ್ನು ಹೊಂದಿರುವ ಜನರು ಬಹಳ ಮುಕ್ತವಾದ ಸ್ವಭಾವವನ್ನು ಹೊಂದಿರುತ್ತಾರೆ. ಯಾವುದೇ ವಿಚಾರದ ಬಗ್ಗೆ ಎಲ್ಲರ ಸಲಹೆಯನ್ನು ಸ್ವೀಕರಿಸುವ ಬುದ್ದಿ ಇವರಿಗೆ ಇರುತ್ತದೆ.
2/ 8
ಅಲ್ಲದೇ ಇತರರನ್ನು ವಿರೋಧಿಸುವಾಗ ಸಹ ಈ ಹೆಸರಿನವರು ಸತ್ಯವನ್ನು ಬಹಿರಂಗಪಡಿಸಲು ಎಂದಿಗೂ ಹಿಂಜರಿಯುವುದಿಲ್ಲ. ಅವರ ಆಲೋಚನೆಗಳು ಸೃಜನಾತ್ಮಕವಾಗಿರುತ್ತದೆ ಮತ್ತು ಈ ಆಲೋಚನೆಗಳನ್ನು ಅದ್ಭುತ ಕೆಲವಾಗಿ ಪರಿವರ್ತಿಸುವ ಗುಣ ಇವರಿಗಿದೆ ಎನ್ನಬಹುದು.
3/ 8
ಸೃಜನಶೀಲತೆ, ಸಾಮರ್ಥ್ಯ, ಶ್ರದ್ಧೆ ಮತ್ತು ದೈಹಿಕ ಶಕ್ತಿಗಳ ಉತ್ತಮ ಮಿಶ್ರಣದ ಕಾರಣದಿಂದ ಇವರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ.ನಿರಂತರವಾಗಿ ಜ್ಞಾನ ಪಡೆಯುವ ಉತ್ಸಾಹ ಇವರಿಗೆ ಇರುತ್ತದೆ. ಎಷ್ಟೇ ಕಷ್ಟಕರವಾದ ಕೆಲಸ ಇದ್ದರೂ ಸಹ ಕೊನೆಯವರೆಗೂ ಬಿಟ್ಟುಕೊಡುವ ಗುಣ ಇವರಿಗೆ ಇರುವುದಿಲ್ಲ
4/ 8
ಅಲ್ಲದೇ ಬಯಸಿದ ಗುರಿಯನ್ನು ಸಾಧಿಸಲು ತಮ್ಮನ್ನು ತಾವೇ ಹುರಿದುಂಬಿಸಿಕೊಳ್ಳುವ ಗುಣ ಇವರಿಗಿದೆ. ಯಾವುದೇ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವ ಜಾಯಮಾನ ಇವರದ್ದಲ್ಲ. ಪರ್ಫೆಕ್ಟ್ ಜನ ಎಂದರೆ ಇವರೇ ಎಮದು ಉದಾಹರಣೆ ಕೊಡಬಹುದು.
5/ 8
E ವರ್ಣಮಾಲೆಯ ಹೆಸರಿನ ಜನರ ಈ ಗುಣಲಕ್ಷಣಗಳು ಯಶಸ್ಸು ಹೆಚ್ಚಿರುತ್ತದೆ ಎಂಬುದನ್ನ ತೋರಿಸುತ್ತದೆ, ವಿಶೇಷವಾಗಿ ಆಸ್ತಿ ವ್ಯವಹಾರಗಳಿಗೆ ಸಂಬಂಧಿಸಿದ ನಷ್ಟಗಳು ಇವರಿಗೆ ಕಡಿಮೆ ಎನ್ನಬಹುದು. ಪರಿಹಾರ: ಬೆಳಗ್ಗೆ ಹಸಿರು ಹುಲ್ಲಿನ ಬರಿಗಾಲಿನಲ್ಲಿ ನಡೆಯುವ ಅಭ್ಯಾಸ ಮಾಡಿಕೊಳ್ಳಿ.
6/ 8
ಆಲ್ಫಾಬೆಟ್ F: ಈ ವರ್ಣಮಾಲೆಯಿಂದ ಪ್ರಾರಂಭವಾಗುವ ಹೆಸರುಗಳನ್ನು ಹೊಂದಿರುವ ಜನರು ಕುಟುಂಬದ ವಿಚಾರವಾಗಿ ಬಹಳ ಬದ್ಧತೆ ಹೊಂದಿರುತ್ತಾರೆ. ಆದರೆ ಇವರಿಗೆ ಆರೋಗ್ಯದ ಸಮಸ್ಯೆಗಳು ಪದೇ ಪದೇ ಕಾಡುತ್ತದೆ ಎನ್ನಬಹುದು.
7/ 8
ಸ್ವಲ್ಪ ಮಕ್ಕಳ ಮನಸ್ಸಿನ ಗುಣ ಇವರದ್ದಾಗಿದ್ದು, ಒಮ್ಮೊಮ್ಮೆ ಬಾಲಿಶವಾಗಿ ನಡೆದುಕೊಳ್ಳುತ್ತಾರೆ. ಇವರಿಗೆ ಸಮಾಜ ಸೇವೆ ಮಾಡುವ ಮನಸ್ಸು ಇರುತ್ತದೆ. ಉದಾರತೆಗೆ ಇವರೇ ಇನ್ನೊಂದು ಹೆಸರು ಎನ್ನಬಹುದು.
8/ 8
ಅವರ ಮುಗ್ಧತೆಗೆ ಹೆಸರುವಾಸಿಯಾಗುತ್ತಾರೆ,ಇದನ್ನು ಇತರರು ದುರುಪಯೋಗಪಡಿಸಿಕೊಳ್ಳಬಹುದು. ಆದ್ದರಿಂದ ಅವರು ಜಾಗರೂಕರಾಗಿರಬೇಕು. ಇವರು ಇತರರಿಗೆ ಸಹಾಯ ಮಾಡಲು ಯಾವಾಗಲೂ ಸಿದ್ಧವಾಗಿರುತ್ತಾರೆ.