Numerology: ಸರ್ಕಾರಿ ಕೆಲಸಕ್ಕಾಗಿ ಅಲೆಯುತ್ತಾ ಇದ್ದೀರಾ? ಹಾಗಿದ್ರೆ ನಿಮ್ಮ ಬರ್ತ್ ಡೇಟ್ನಲ್ಲಿ ಈ ಸಂಖ್ಯೆ ಇದ್ರೆ ಗವರ್ನ್ಮೆಂಟ್ ಜಾಬ್ ಫಿಕ್ಸ್!
Numerology Suggestions: ಜೀವನದಲ್ಲಿ ಎಲ್ಲರಿಗೂ ವಿವಿಧ ರೀತಿಯ ಕನಸುಗಳಿರುತ್ತದೆ. ಎಂಜಿನಿಯರ್ ಆಗಬೇಕು, ಸರ್ಕಾರಿ ಕೆಲಸ ಬೇಕು ಎಂದೆಲ್ಲಾ. ಅದಕ್ಕಾಗಿಯೇ ಹಲವಾರು ವರ್ಷಗಳ ಕಾಲ ಕಷ್ಟಪಟ್ಟು ಓದುತ್ತಾರೆ. ಅದರಲ್ಲೂ ಸರ್ಕಾರಿ ಕೆಲಸ ಬೇಕು ಎಂದರೆ ಪರದಾಡಬೇಕಾಗುತ್ತದೆ. ನಿಮಗೂ ಸರ್ಕಾರಿ ಕೆಲಸ ಬೇಕು ಎಂದರೆ ನಿಮ್ಮ ಜನ್ಮ ದಿನಾಂಕದಲ್ಲಿ ಯಾವ ಸಂಖ್ಯೆ ಇರಬೇಕು ಎಂಬುದು ಇಲ್ಲಿದೆ.
ನೀವು ಸರ್ಕಾರಿ ಸಂಸ್ಥೆಯಲ್ಲಿ ಕೆಲಸ ಮಾಡುವ ಗುರಿಯನ್ನು ಹೊಂದಿದ್ದರೆ, ನಿಮ್ಮ ಜನ್ಮದಿನಾಂಕದಲ್ಲಿ 4,6 ಮತ್ತು 9 ಸಂಖ್ಯೆಗಳನ್ನು ನೀವು ನೇರವಾಗಿ ಪರೋಕ್ಷವಾಗಿ ಹೊಂದಿರಬೇಕು ಎನ್ನಲಾಗುತ್ತದೆ.
2/ 9
ಸರ್ಕಾರದ ಉನ್ನತ ಹುದ್ದೆಯನ್ನು ಪಡೆಯಲು, ನೀವು ಹೆಚ್ಚು ಗಮನಹರಿಸಬೇಕು. ಕಠಿಣ ಪರಿಶ್ರಮ ಶಿಸ್ತು ಮತ್ತು ಸ್ಪರ್ಧಾತ್ಮಕ ಪರೀಕ್ಷೆ ಹೀಗೆ ಸವಾಲುಗಳನ್ನು ಎದುರಿಸಿ ಮುಮದುವರೆಯಬೇಕು.
3/ 9
ಸಂಖ್ಯೆ 4 ಈ ಎಲ್ಲಾ ಗುಣಗಳನ್ನು ಒದಗಿಸುತ್ತದೆ. ಇದು ಯೋಜನೆಗೆ ಸಹಾಯ ಮಾಡುವ ಸಂಖ್ಯೆಯೂ ಆಗಿದೆ, ಸರಿಯಾದ ಯೋಜನೆ ಮಾಡಲು ಇದು ಬಹಳ ಸಹಾಯ ಮಾಡುತ್ತದೆ.
4/ 9
ಈ ಸಂಖ್ಯೆ ಇಲ್ಲದೇ ನೀವು ಯಶಸ್ಸನ್ನು ಸಾಧಿಸಲು ಸಾಧ್ಯವಿಲ್ಲ. ಸಂಖ್ಯೆ 4 ವ್ಯಕ್ತಿಯ ಕೆಲಸದಲ್ಲಿ ಕ್ರಮ, ಶಿಸ್ತು ಮತ್ತು ನಿರ್ವಹಣಾ ಕೌಶಲ್ಯಗಳನ್ನು ಹೆಚ್ಚಿಸುತ್ತದೆ. ಸಂಖ್ಯೆ 4 ಉನ್ನತ ಸ್ಥಾನಗಳನ್ನು ಪಡೆಯಲು ಸಹ ಕಾರಣವಾಗಿದೆ.
5/ 9
ಈ ಸಂಖ್ಯೆಯನ್ನು ಹೊಂದಿರುವ ಜನರು ಇತರರಿಂದ ಕೆಲಸವನ್ನು ಹೇಗೆ ಮಾಡಿಸಬೇಕು ಎಂಬುದನ್ನ ಚೆನ್ನಾಗಿ ತಿಳಿದುಕೊಂಡಿದ್ದಾರೆ. ಆದ್ದರಿಂದ ಅವರನ್ನು ಉತ್ತಮ ತಂತ್ರಜ್ಞ ಎನ್ನಲಾಗುತ್ತದೆ.
6/ 9
ಇದು ನಿಮ್ಮನ್ನು ಮಹತ್ವಾಕಾಂಕ್ಷೆ ಮತ್ತು ಪ್ರಾಯೋಗಿಕವಾಗಿ ಯೋಚನೆ ಮಾಡುವಂತೆ ಮಾಡುತ್ತದೆ. ಸಂಪೂರ್ಣ ಕಠಿಣ ಪರಿಶ್ರಮದಿಂದ ತನ್ನ ಗುರಿಯನ್ನು ಸಾಧಿಸುವುದು ಹೇಗೆ ಎಂದು ಕಲಿಸುತ್ತದೆ.
7/ 9
ಸಂಖ್ಯೆ 6 ಗುರಿಯನ್ನು ತಲುಪಲು ಅಗತ್ಯವಿರುವ ಜವಾಬ್ದಾರಿ ಮತ್ತು ಬುದ್ದಿಯನ್ನು ನೀಡುತ್ತದೆ. ಇದು ಅಪಾರ ಅವಕಾಶವನ್ನು ತರುತ್ತದೆ ಮತ್ತು ಅವುಗಳನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ಸಹ ಕಲಿಸುತ್ತದೆ. ನಿಮ್ಮ ಸಾಮರ್ಥ್ಯಗಳನ್ನು ಸಾಬೀತುಪಡಿಸಲು ಇದು ಬಾಗಿಲುಗಳನ್ನು ತೆರೆಯುತ್ತದೆ.
8/ 9
ಸಂಖ್ಯೆ 9 ನಿಮಗೆ ಸಮಾಜದಲ್ಲಿ ಖ್ಯಾತಿಯನ್ನು ನೀಡುತ್ತದೆ, ಇದು ವ್ಯಕ್ತಿಯನ್ನು ತುಂಬಾ ಬಲಶಾಲಿಯನ್ನಾಗಿ ಮಾಡುತ್ತದೆ, ಇದು ವ್ಯಕ್ತಿಯ ಬುದ್ಧಿವಂತಿಕೆಯನ್ನು ಸರಿಯಾದ ದಿಕ್ಕಿನಲ್ಲಿ ಪ್ರೇರೇಪಿಸುತ್ತದೆ. ಈ ಸಂಖ್ಯೆ ಯಶಸ್ಸನ್ನು ಸಾಧಿಸುವಲ್ಲಿ ಅಗತ್ಯವಿದೆ.
9/ 9
ಅದೃಷ್ಟದ ಬಣ್ಣಗಳು ಬಿಳಿ ಮತ್ತು ಕಪ್ಪು, ಶನಿವಾರ ಮತ್ತು ಮಂಗಳವಾರ ಅದೃಷ್ಟದ ದಿನ, ಅದೃಷ್ಟ ಸಂಖ್ಯೆ 9, ಭಿಕ್ಷುಕರಿಗೆ ಪಾದರಕ್ಷೆಗಳನ್ನು ದಾನ ಮಾಡಿ, ನಿಮ್ಮ ಆಫೀಸ್ ಟೇಬಲ್ ಮೇಲೆ ಹರಳೆಣ್ಣೆಯನ್ನು ಇಟ್ಟುಕೊಳ್ಳಿ.