ಸಂಖ್ಯೆ 1: ಕೆಲಸಕ್ಕಾಗಿ ಪಾಲುದಾರಿಕೆಯನ್ನು ಹುಡುಕುತ್ತಿದ್ರೆ ಇದು ಸೂಕ್ತವಾದ ಸಮಯ ಎನ್ನಬಹುದು. ಇಂದು ಹೊಸ ಮಾರ್ಗಸೂಚಿಗಳು ಅಥವಾ ಮಾರ್ಗದರ್ಶಕರನ್ನು ಭೇಟಿಯಾಗುವ ಸಾಧ್ಯತೆಗಳಿವೆ. ಸಂದರ್ಶನಗಳಿಗೆ ಹಾಜರಾಗಲು, ಶಾಪಿಂಗ್ ಮಾಡಲು, ಕುಟುಂಬಕ್ಕೆ ಸಮಯ ಮೀಸಲಿಡಲು ಈ ದಿನವನ್ನು ಬಳಸುವುದು ಉತ್ತಮ. ಬಣ್ಣಗಳು: ಕ್ರೀಮ್, ಅದೃಷ್ಟದ ದಿನ: ಭಾನುವಾರ, ಅದೃಷ್ಟ ಸಂಖ್ಯೆ: 1 ಮತ್ತು 2, ಇಂದು ದೇವಾಲಯಕ್ಕೆ ಸಾಸಿವೆ ಎಣ್ಣೆಯನ್ನು ದಾನ ಮಾಡಿ
ಸಂಖ್ಯೆ 2: ನಿಮ್ಮ ಪ್ರೀತಿಯನ್ನು ಹೇಳಿಕೊಳ್ಳಲು ಇಂದು ಒಳ್ಳೆಯ ದಿನ. ಪ್ರಯಾಣ ಯೋಜನೆ ಮತ್ತು ಶಾಪಿಂಗ್ ಮಾಡಲು ಒಂದು ಸುಂದರ ದಿನ. ಪ್ರೀತಿಪಾತ್ರರ ಜೊತೆ ಭಾವನಾತ್ಮಕ ಸಮಯವನ್ನು ಕಳೆಯಲು ಇದು ಉತ್ತಮ ದಿನವಾಗಿದೆ. ಇಂದು ಆಕಾಶ ನೀಲಿಯನ್ನು ಧರಿಸುವುದು ವಿಶೇಷವಾಗಿ ಸಂದರ್ಶನ, ಆಡಿಷನ್ ಗೆ ಸಹಾಯ ಮಾಡುತ್ತದೆ. ಬಣ್ಣಗಳು: ಪೀಚ್ ,ಸೋಮವಾರ ಅದೃಷ್ಟದ ದಿನ , ಅದೃಷ್ಟ ಸಂಖ್ಯೆ 2 , ಇಂದು ಭಿಕ್ಷುಕರಿಗೆ ಅಥವಾ ದನಗಳಿಗೆ ಬಿಳಿ ಆಹಾರವನ್ನು ನೀಡಿ.
ಸಂಖ್ಯೆ 5: ಭಾವನೆಗಳು ನಿಮ್ಮ ನಿರ್ಧಾರಗಳ ಮೇಲೆ ಪ್ರಭಾವ ಬೀರಲು ಬಿಡಬೇಡಿ. ಹೂಡಿಕೆ ಯೋಜನೆಗಳು ಒಂದು ದಿನಕ್ಕೆ ಲಾಭ ನೀಡಬಹುದು. ಊಟದ ಮೊದಲು ಸಂದರ್ಶನಗಳಿಗೆ ಹೋಗಿ. ಆಸ್ತಿ ಸಂಬಂಧಿತ ನಿರ್ಧಾರಗಳನ್ನು ತೆಗೆದುಕೊಂಡು ಹೋಗಲು ಇಂದು ಸೂಕ್ತವಾದ ದಿನ. ಇಂದು ಹಳೆಯ ಸ್ನೇಹಿತನನ್ನು ಭೇಟಿಯಾಗುವ ದಿನ. ಬಣ್ಣ: ಹಸಿರು, ಅದೃಷ್ಟದ ದಿನ ಬುಧವಾರ , ಅದೃಷ್ಟ ಸಂಖ್ಯೆ 5, ಹಸಿರು ಹಣ್ಣುಗಳನ್ನು ಅನಾಥರಿಗೆ ದಾನ ಮಾಡಿ.
ಸಂಖ್ಯೆ 7: ವಿಶೇಷವಾಗಿ ಹಣಕಾಸಿನ ವಿಚಾರಗಳು ಮತ್ತು ಜಮೀನು ವಿಷಯಗಳಲ್ಲಿ ಹಿರಿಯರ ಸಲಹೆಯನ್ನು ಅನುಸರಿಸಬೇಕು. ಬೆಳಗ್ಗೆ ಗುರು ಮಂತ್ರವನ್ನು ಪಠಿಸಲು ಪ್ರಯತ್ನಿಸಿ. ಮದುವೆಯ ಪ್ರಸ್ತಾಪಗಳನ್ನು ಪರಿಗಣಿಸುವುದು ಒಳ್ಳೆಯದು. ಭಗವಾನ್ ಶಿವ ದೇವಾಲಯಕ್ಕೆ ಭೇಟಿ ನೀಡಿ ಅಭಿಷೇಕ ಒಳ್ಳೆಯದಾಗುತ್ತದೆ. ಬಣ್ಣಗಳು: ಸಮುದ್ರ ಹಸಿರು, ಅದೃಷ್ಟದ ದಿನ ಸೋಮವಾರ , ಅದೃಷ್ಟ ಸಂಖ್ಯೆ 7, ಹಳದಿ ಅಕ್ಕಿಯನ್ನು ಬಡವರಿಗೆ ದಾನ ಮಾಡಿ.
ಸಂಖ್ಯೆ 8: ವ್ಯಾಪಾರ ಸಂಬಂಧಗಳನ್ನು ಅಭಿವೃದ್ಧಿಪಡಿಸಲು ಮತ್ತು ಸಂಗಾತಿಯನ್ನು ಮೆಚ್ಚಿಸಲು ಇಂದು ಒಳ್ಳೆಯ ದಿನ. ವಿಜ್ಞಾನಿಗಳು, ಸರ್ಕಾರಿ ಅಧಿಕಾರಿಗಳು, ಲೋಹದ ತಯಾರಕರು ಮತ್ತು ಸಾಫ್ಟ್ವೇರ್ ಎಂಜಿನಿಯರ್ಗಳು ಹೊಸ ಹೂಡಿಕೆಗಳನ್ನು ಮಾಡುವುದು ಬೇಡ. ಹಣದ ವಹಿವಾಟಿನ ನಡುವೆ ನೀವು ದಿನವಿಡೀ ಕಾರ್ಯನಿರತರಾಗಿರುತ್ತೀರಿ. ವೃದ್ಧಾಶ್ರಮದಲ್ಲಿ ದಾನ ಮಾಡುವುದು ಉತ್ತಮ. ಬಣ್ಣ: ಸಮುದ್ರ ನೀಲಿ, ಅದೃಷ್ಟದ ದಿನ ಶನಿವಾರ, ಅದೃಷ್ಟ ಸಂಖ್ಯೆ: 6, ಅಗತ್ಯವಿರುವವರಿಗೆ ಪಾದರಕ್ಷೆಗಳನ್ನು ದಾನ ಮಾಡಿ.
ಸಂಖ್ಯೆ 9: ಇಂದು ಜಾಗರೂಕರಾಗಿರಿ, ಕೆಲಸ ಮಾಡುವಾಗ ನಿಮ್ಮ ಅಹಂ ಬದಿಗಿಡಲು ಮರೆಯದಿರಿ. ಹೊಸ ಉದ್ಯೋಗವನ್ನು ಆಯ್ಕೆ ಮಾಡುವವರಿಗೆ, ಭೂಮಿಯನ್ನು ಖರೀದಿಸಲು ಮತ್ತು ಉನ್ನತ ವ್ಯಾಸಂಗಕ್ಕೆ ಹೋಗುವವರಿಗೆ ಒಂದು ಒಳ್ಳೆಯ ದಿನ. ರಾಜಕೀಯ, ಮಾಧ್ಯಮ, ನಟನೆ, ಕ್ರೀಡೆ, ಹಣಕಾಸು ಅಥವಾ ಶಿಕ್ಷಣ ಉದ್ಯಮದಲ್ಲಿ ಜನರು ಬೃಹತ್ ಬೆಳವಣಿಗೆಯನ್ನು ಕಾಣುತ್ತಾರೆ. ಬಣ್ಣ: ಕಿತ್ತಳೆ, ಅದೃಷ್ಟದ ದಿನ: ಮಂಗಳವಾರ, ಅದೃಷ್ಟ ಸಂಖ್ಯೆ: 9, ದೇವಸ್ಥಾನಕ್ಕೆ ಕುಂಕುಮವನ್ನು ದಾನ ಮಾಡಿ