Numerology: ಹಣಕಾಸಿನ ವ್ಯವಹಾರ ಇಂದು ಬೇಡವೇ ಬೇಡ, ಹೊಸ ಅವಕಾಶ ಸಿಗಲಿದೆ
ಇಲ್ಲಿ 1 ರಿಂದ 9 ರ ವರೆಗಿನ ಅಂಕೆಗಳ ಫಲಾಫಲಗಳನ್ನು ನೀಡಲಾಗಿದೆ. ನಿಮ್ಮ ಜನ್ಮದಿನಾಂಕವನ್ನು ಗಮನಿಸಿ, ಜನ್ಮದಿನಾಂಕದ ಎರಡೂ ಅಂಕೆಗಳನ್ನು ಕೂಡಿಸಿ, ಆಗ ಸಿಗುವ ಅಂಕೆಯೇ ನಿಮ್ಮನ್ನು ಪ್ರತಿನಿಧಿಸುತ್ತದೆ. ಆ ಅಂಕೆಯ ಮೂಲಕ ನಿಮ್ಮ ಡಿಸೆಂಬರ್ 25ನೇ ತಾರೀಖಿನ ಭವಿಷ್ಯವನ್ನು ಪರಾಂಬರಿಸಿ.
ಸಂಖ್ಯಾ 1: ಈ ದಿನ ಹಣಕಾಸಿನ ವ್ಯವಹಾರ ಮಾಡುವುದು ನಿಮಗೆ ಸಮಸ್ಯೆಯನ್ನು ಉಂಟು ಮಾಡಬಹುದು. ಟೀಚರ್ ಹಾಗೂ ಡಾಕ್ಟರ್ಗಳಿಗೆ ಇಂದು ಒಳ್ಳೆಯದಿನ, ಹೊಸ ವ್ಯಕ್ತಿಯನ್ನು ಭೇಟಿಯಾಗುತ್ತೀರಿ. ಅದೃಷ್ಟದ ಬಣ್ಣ: ಬಿಳಿ, ಅದೃಷ್ಟದ ವಾರ: ಭಾನುವಾರ, ಅದೃಷ್ಟದ ಸಂಖ್ಯೆ: 3, ಬಡವರಿಗೆ ಗೋಧಿ ದಾನ ಮಾಡಿ
2/ 9
ಸಂಖ್ಯೆ 2: ಉತ್ತರ ದಿಕ್ಕಿನಲ್ಲಿ ನೀರಿನ ಬೌಲ್ ಇಡವುದು ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಸಂಬಂಧದಲ್ಲಿ ಇಂದು ಸಣ್ಣ ಸಮಸ್ಯೆ ಬಂದರೂ ಸಹ ಕೆಲವೇ ನಿಮಿಷದಲ್ಲಿ ಮಾಯವಾಗುತ್ತದೆ. ಒಂಥರ ರೊಮ್ಯಾಂಟಿಕ್ ಡೇ ಎನ್ನಬಹುದು. ಅದೃಷ್ಟದ ಬಣ್ಣ: ಆಕಾಶ ನೀಲಿ, ಅದೃಷ್ಟದ ಸಂಖ್ಯೆ 2 ಮತ್ತು 6, ಅದೃಷ್ಟದ ವಾರ: ಭಾನುವಾರ, ಬಡವರಿಗೆ ಸಕ್ಕರೆ ದಾನ ಮಾಡಿ.
3/ 9
ಸಂಖ್ಯೆ 3: ರಾಜಕಾರಣಿಗೆ ಇಂದು ಒಳ್ಳೆಯ ದಿನ ಎನ್ನಬಹುದು. ರಂಗಭೂಮಿ ಕಲಾವಿದರು ಹೊಸ ಯೋಜನೆ ಆರಂಭಿಸಲು ಇಂದು ಉತ್ತಮವಾದ ದಿನ. ಸ್ನೇಹಿತರೊಂದಿಗೆ ಹಣಕಾಸಿನ ವಿಚಾರ ಹಂಚಿಕೊಳ್ಳಿ. ಬಣ್ಣ: ಕಿತ್ತಳೆ, ಅದೃಷ್ಟದ ದಿನ ಗುರುವಾರ , ಅದೃಷ್ಟ ಸಂಖ್ಯೆ 3 ಮತ್ತು 1, ಅಕ್ಕಿಯನ್ನು ಅಗತ್ಯವಿರುವವರಿಗೆ ದಾನ ಮಾಡಿ
4/ 9
ಸಂಖ್ಯೆ 4: ಹಳೆಯ ಪ್ರಾಜೆಕ್ಟ್ಗಳಿಂದ ಹಣವನ್ನು ನೀವು ಪಡೆಯುವ ಸಾಧ್ಯತೆ ಇದೆ. ಎಲ್ಲಾ ಪ್ರಮುಖ ನಿರ್ಧಾರಗಳು ಇಂದು ನಿಮಗೆ ಫಲ ನೀಡಲಿದೆ. ಕ್ರೀಡಾಪಟುಗಳಿಗೆ ಇಂದು ಉತ್ತಮವಾದ ದಿನವಾಗಿದೆ. ಬಣ್ಣ: ನೀಲಿ, ಅದೃಷ್ಟದ ದಿನ ಮಂಗಳವಾರ, ಅದೃಷ್ಟ ಸಂಖ್ಯೆ 9 ಜಾನುವಾರುಗಳಿಗೆ ಅಥವಾ ಬಡವರಿಗೆ ಉಪ್ಪು ಮತ್ತು ಆಹಾರವನ್ನು ದಾನ ಮಾಡಿ
5/ 9
ಸಂಖ್ಯೆ 5: ಇಂದು ಆಫೀಸ್ನಲ್ಲಿ ನಿಮ್ಮ ಬೇಡಿಕೆಗಳು ಪೂರ್ಣವಾಗುತ್ತದೆ. ಎಲ್ಲರಿಂದಲೂ ಪ್ರಶಂಸೆ ಪಡೆಯುವ ಸಾಧ್ಯತೆ ಇದೆ. ಇಂದು ಅದೃಷ್ಟ ನಿಮ್ಮ ಕಡೆ ಇದೆ. ಪ್ರಪೋಸ್ ಮಾಡಲು ಒಂದು ಒಳ್ಳೆಯ ದಿನ. ಬಣ್ಣ: ಸಮುದ್ರ ಹಸಿರು, ಅದೃಷ್ಟದ ದಿನ ಬುಧವಾರ , ಅದೃಷ್ಟ ಸಂಖ್ಯೆ 5. ಬಡವರಿಗೆ ಮೊಸರು ದಾನ ಮಾಡಿ
6/ 9
ಸಂಖ್ಯೆ 6: ನಿಮ್ಮ ಸಂಬಂಧದ ಬಗ್ಗೆ ಬೇರೆ ವ್ಯಕ್ತಿಯ ಜೊತೆ ಮಾತನಾಡಬೇಡಿ. ಇದು ನಿಮಗೆ ಸಮಸ್ಯೆ ಉಂಟು ಮಾಡುತ್ತದೆ. ಸುತ್ತಮುತ್ತಲಿನ ಜನರು ಪ್ರಾಮಾಣಿಕತೆಯನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ, ಎಚ್ಚರ. ಬಣ್ಣ: ನೀಲಿ, ಅದೃಷ್ಟದ ದಿನ ಶುಕ್ರವಾರ , ಅದೃಷ್ಟ ಸಂಖ್ಯೆ 6 ಬಡವರಿಗೆ ಮನೆಯ ಉತ್ಪನ್ನಗಳಲ್ಲಿ ದಾನ ಮಾಡಿ
7/ 9
ಸಂಖ್ಯೆ 7: ಇಂದು ನಿಮಗೆ ವಿಶ್ವಾಸ ದ್ರೋಹ ಉಂಟಾಗುವ ಸಾಧ್ಯತೆ ಇದೆ. ಕೆಲವೊಂದು ನಷ್ಟವಾಗಬಹುದು. ಹಿರಿಯರ ಮತ್ತು ಗುರುಗಳ ಆಶೀರ್ವಾದವನ್ನು ಪಡೆದುಕೊಂಡರೆ ಸಮಸ್ಯೆಗಳಿಗೆ ಸ್ವಲ್ಪ ಪರಿಹಾರ ಸಿಗುತ್ತದೆ. ಬಣ್ಣ: ಹಳದಿ ಮತ್ತು ಹಸಿರು, ಅದೃಷ್ಟದ ದಿನ ಸೋಮವಾರ , ಅದೃಷ್ಟ ಸಂಖ್ಯೆ 7, ಸೂರ್ಯಕಾಂತಿ ಎಣ್ಣೆಯನ್ನು ಬಡವರಿಗೆ ದಾನ ಮಾಡಿ.
8/ 9
ಸಂಖ್ಯೆ 8: ಆಸ್ತಿಯಲ್ಲಿ ಹೂಡಿಕೆ ಮಾಡಬೇಡಿ, ನಷ್ಟವಾಗಬಹುದು. ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳುವುದು ಉತ್ತಮ. ಆರೋಗ್ಯದ ಕಾಳಜಿ ವಹಿಸುವುದು ಬಹಳ ಮುಖ್ಯವಾಗುತ್ತದೆ. ಕುಟುಂಬದೊಂದಿಗೆ ಸಮಯ ಕಳೆಯುವುದು ಅಗತ್ಯವಾಗಿದೆ. ಬಣ್ಣ: ಸಮುದ್ರ ನೀಲಿ, ಅದೃಷ್ಟದ ದಿನ ಶುಕ್ರವಾರ , ಅದೃಷ್ಟ ಸಂಖ್ಯೆ 6, ಆಶ್ರಮಗಳಿಗೆ ಬಟ್ಟೆ ಮತ್ತು ಪಾತ್ರೆಗಳನ್ನು ದಾನ ಮಾಡಿ
9/ 9
ಸಂಖ್ಯೆ 9: ನೀವು ಎಷ್ಟು ಯೋಚನೆ ಮಾಡಿ ನಿರ್ಧಾರ ಮಾಡುತ್ತೀರೊ, ಅಷ್ಟೇ ಲಾಭಗಳಿಸುತ್ತೀರಿ. ಅಧಿಕಾರ, ಹಣ, ಮನ್ನಣೆ, ಐಷಾರಾಮಿ ಜೀವನಕ್ಕಾಗಿ ತಪ್ಪು ನಿರ್ಧಾರ ಮಾಡಬೇಡಿ. ಬಣ್ಣ: ಕೆಂಪು, ಅದೃಷ್ಟದ ದಿನ ಮಂಗಳವಾರ , ಅದೃಷ್ಟ ಸಂಖ್ಯೆ 9 ಮತ್ತು 6, ಕೆಂಪು ಬಣ್ಣದ ಧಾನ್ಯಗಳನ್ನು ಬಡವರಿಗೆ ದಾನ ಮಾಡಿ