ಸಂಖ್ಯೆ 1: ಇಂದಿನ ದಿನವನ್ನು ಬಾಳೆ ಮರವನ್ನು ಪೂಜಿಸುವ ಮೂಲಕ ಆರಂಭಿಸಿದರೆ ಉತ್ತಮ. ದಂಪತಿಗಳು ಇಂದು ಸುಂದರ ಕ್ಷಣವನ್ನು ಆನಂದಿಸಬಹುದು. ಶಿಕ್ಷಣತಜ್ಞರು, ಬರಹಗಾರರು, ಚಲನಚಿತ್ರ ನಿರ್ದೇಶಕರು, ಕಲಾವಿದರು, ನೃತ್ಯಗಾರರು, ಸೌರಶಕ್ತಿ ವಿತರಕರು, ಸಂಗೀತಗಾರರು, ಸರ್ಕಾರಿ ಅಧಿಕಾರಿಗಳು, ವೈದ್ಯರು, ಜ್ಯುವೆಲ್ಲರ್ಸ್ ಮತ್ತು ಗ್ಲಾಮರ್ ಉದ್ಯಮದಲ್ಲಿ ಇರುವವರಿಗೆ ಉತ್ತಮ ಲಾಭ ಇದೆ. ಬಣ್ಣಗಳು ಕಿತ್ತಳೆ ಮತ್ತು ಕಂದು, ಭಾನುವಾರ ಮತ್ತು ಮಂಗಳವಾರ ಅದೃಷ್ಟದ ದಿನ, ಅದೃಷ್ಟ ಸಂಖ್ಯೆ 9 ಮತ್ತು 1, ದೇವಸ್ಥಾನಕ್ಕೆ ಹಳದಿ ಸಾಸಿವೆಯನ್ನು ದಾನ ಮಾಡಿ.
ಸಂಖ್ಯೆ 2: ಸಮಸ್ಯೆಗಳು ಕೊನೆಗೊಳ್ಳುವ ಸೂಚನೆ ಇದೆ. ನೀವು ಇತರರಿಗೆ ಸುಲಭವಾಗಿ ಸಿಗುವುದರಿಂದ ಆಗಾಗ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ವ್ಯವಹಾರದ ಮಾರ್ಕೆಟಿಂಗ್ ವಿಚಾರವಾಗಿ ಖರ್ಚು ಮಾಡುವುದು, ಕುಟುಂಬದ ಸಮಾರಂಭಗಳಿಗೆ ಹಾಜರಾಗುವುದು ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಬಣ್ಣಗಳು ಪಿಂಕ್, ಸೋಮವಾರ ಅದೃಷ್ಟದ ದಿನ, ಅದೃಷ್ಟ ಸಂಖ್ಯೆ 2, ಇಂದು ಮನೆ ಸಹಾಯಕರಿಗೆ ಗುಲಾಬಿ ಬಟ್ಟೆಗಳನ್ನು ನೀಡಿ
ಸಂಖ್ಯೆ 3: ವೃತ್ತಿಜೀವನದಲ್ಲಿ ಎಲ್ಲಾ ಅವಕಾಶಗಳ ಬಾಗಿಲು ತೆಗೆಯುವ ಸಾಧ್ಯತೆ ಇದೆ. ಇಂದು ಹೊಸ ಆಫರ್ ನಿಮಗೆ ಸಿಗಲಿದೆ. ಅದರಿಂದ ಹಣ ಗಳಿಸುವ ಸಮಯ. ನಿಮ್ಮ ಯೋಜನೆಗಳು ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆದಾರರಿಗೆ ಲಾಭ ನೀಡಲಿದೆ. ವಿಶೇಷವಾಗಿ ಗಾಯಕರು, ತರಬೇತುದಾರರು, ಶಿಕ್ಷಣ ತಜ್ಞರು, ರಾಜಕಾರಣಿಗಳು ಮತ್ತು ವಕೀಲರಿಗೆ ಇಂದು ಉತ್ತಮ ದಿನ. ಬಣ್ಣಗಳು ಕೆಂಪು, ಗುರುವಾರ ಅದೃಷ್ಟದ ದಿನ, ಅದೃಷ್ಟ ಸಂಖ್ಯೆ 3 ಮತ್ತು 9, ದೇವಸ್ಥಾನಕ್ಕೆ ಚಂದನವನ್ನು ದಾನ ಮಾಡಿ
ಸಂಖ್ಯೆ 4: ಕಠಿಣ ಪರಿಶ್ರಮವನ್ನು ಕಡಿಮೆ ಮಾಡಲು ಶಿವನ ಆರಾಧನೆ ಮಾಡಿ. ಪ್ರೇಮ ಜೀವನದಲ್ಲಿ ಮುಂದುವರೆಯಲು ಇದು ಅನುಕೂಲಕರ ದಿನ. ವ್ಯಾಪಾರ ವ್ಯವಹಾರಗಳು ಅಥವಾ ಸರ್ಕಾರಿ ಕೆಲಸಗಳು ಸ್ವಲ್ಪ ನಿಧಾನವಾಗಲಿದೆ. ಹಣಕಾಸು ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಐಟಿ ಉದ್ಯೋಗಿಗಳು, ರಂಗಭೂಮಿ ಕಲಾವಿದರು ಅಥವಾ ನಟರು, ಟಿವಿ ನಿರೂಪಕರು ಮತ್ತು ನೃತ್ಯಗಾರರಿಗೆ ಇಂದು ಒಳ್ಳೆಯ ದಿನ. ಬಣ್ಣಗಳು: ನೇರಳೆ ಮತ್ತು ಬೂದು, ಮಂಗಳವಾರ ಅದೃಷ್ಟದ ದಿನ, ಅದೃಷ್ಟ ಸಂಖ್ಯೆ 6, ಮಕ್ಕಳಿಗೆ ಬಟ್ಟೆಗಳನ್ನು ದಾನ ಮಾಡಿ
ಸಂಖ್ಯೆ 5: ಷೇರು, ಆಸ್ತಿ, ರಫ್ತು ಆಮದು, ಟ್ರಾವೆಲ್ ಏಜೆನ್ಸಿ ಅಥವಾ ಶಿಕ್ಷಣ ಕ್ಷೇತ್ರದಲ್ಲಿ ವ್ಯವಹಾರ ಮಾಡುತ್ತಿದ್ದರೆ ಒಂದು ಹೆಜ್ಜೆ ಮುಂದಿಡಿ. ಇಂದು ಅಲ್ಪಾವಧಿ ಲಾಭ ನೀಡುವ ಕೆಲ ಯೋಜನೆಗೆ ಒಪ್ಪಿಗೆ ಕೊಡಬಹುದು. ಅನಿರೀಕ್ಷಿತ ಅದೃಷ್ಟ ನಿಮ್ಮ ಕೈ ಹಿಡಿಯಲಿದೆ. ಬಣ್ಣ: ಟೀಲ್, ಬುಧವಾರ ಅದೃಷ್ಟದ ದಿನ, ಅದೃಷ್ಟ ಸಂಖ್ಯೆ 5, ಪ್ರಾಣಿಗಳಿಗೆ ಹಸಿರು ಎಲೆಗಳನ್ನು ದಾನ ಮಾಡಿ
ಸಂಖ್ಯೆ 6: ಪ್ರೀತಿಪಾತ್ರರೊಡನೆ ಭಾವನೆಗಳನ್ನು ವಿನಿಮಯ ಮಾಡಿಕೊಳ್ಳುವ ದಿನವಿದು. ಸಂದರ್ಶನಗಳು, ಶಾಪಿಂಗ್, ಪ್ರವಾಸ, ಪ್ರಯಾಣ ನಿಮ್ಮ ಮನಸ್ಸಿಗೆ ಸಂತೋಷ ನೀಡುತ್ತದೆ. ಕ್ಲೈಂಟ್‌ಗಳ ಸಮಸ್ಯೆಗಳನ್ನು ಪರಿಹರಿಸುವ ಸಮಯ. ಗೃಹಿಣಿಯರು, ಕ್ರೀಡಾಪಟುಗಳು, ಆಸ್ತಿ ವಿತರಕರು, ಚರ್ಮರೋಗ ತಜ್ಞರು ಗಾಯಕರು, ವಿನ್ಯಾಸಕರು, ಈವೆಂಟ್ ಮ್ಯಾನೇಜ್ಮೆಂಟ್, ದಲ್ಲಾಳಿಗಳು, ಬಾಣಸಿಗರು, ವಿದ್ಯಾರ್ಥಿಗಳಿಗೆ ಶುಭ ದಿನ. ಬಣ್ಣಗಳು ವೈಲೆಟ್, ಶುಕ್ರವಾರ ಅದೃಷ್ಟದ ದಿನ, ಅದೃಷ್ಟ ಸಂಖ್ಯೆ 6, ದೇವಸ್ಥಾನಕ್ಕೆ ಬೆಳ್ಳಿ ನಾಣ್ಯವನ್ನು ದಾನ ಮಾಡಿ
ಸಂಖ್ಯೆ 7: ಸ್ನಾನ ಮಾಡುವ ಮೊದಲು ನೀರಿನಲ್ಲಿ ಉಪ್ಪು ಸೇರಿಸಿದರೆ ಈ ದಿನ ಕೆಲಸಗಳು ಸರಾಗವಾಗಿ ಆಗುತ್ತದೆ. ನೀವು ಇಂದು ಪ್ರಯಾಣಿಸಲು ಅಥವಾ ಪಾರ್ಟಿಗೆ ಹೋಗಲು ಉತ್ತಮವಾದ ದಿನ ಎನ್ನಬಹುದು. ನಿಮ್ಮ ಬುದ್ಧಿವಂತಿಕೆಯು ಎಲ್ಲಾ ಕೆಲಸಗಳಲ್ಲಿ ಲಾಭ ನೀಡಲಿದೆ. ತಾಯಿ ಮತ್ತು ಇತರ ಹಿರಿಯರ ಸಲಹೆಗಳನ್ನು ಎಚ್ಚರಿಕೆಯಿಂದ ಆಲಿಸಿ. ಬಣ್ಣಗಳು: ಕಿತ್ತಳೆ, ಸೋಮವಾರ ಅದೃಷ್ಟದ ದಿನ, ಅದೃಷ್ಟ ಸಂಖ್ಯೆ 7 ಮತ್ತು 9, ಹಳದಿ ಅಕ್ಕಿಯನ್ನು ಬಡವರಿಗೆ ದಾನ ಮಾಡಿ.
ಸಂಖ್ಯೆ 9: ಇದು ಸಂಗೀತಗಾರರು ಅಥವಾ ಕಲಾವಿದರಿಗೆ ಮೀಸಲಾದ ದಿನವಾಗಿದೆ. ವಕೀಲರು, ಶಿಕ್ಷಣ ತಜ್ಞರು, ವೈದ್ಯರು, ಬರಹಗಾರರು, ರಫ್ತು ಆಮದು, ಐಟಿ ವೃತ್ತಿಪರರು, ಗ್ಲಾಮರ್, ಜ್ಯೋತಿಷ್ಯ ಕ್ಷೇತ್ರದಲ್ಲಿ ಇದ್ದರೆ ಲಾಭ ಖಂಡಿತ. ಪ್ರೀತಿಯಲ್ಲಿರುವವರಿಗೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಅದ್ಭುತವಾದ ದಿನ. ಬಣ್ಣ: ಕೆಂಪು ಅದೃಷ್ಟದ ದಿನ: ಮಂಗಳವಾರ, ಅದೃಷ್ಟ ಸಂಖ್ಯೆ: 9, ಮನೆ ಸಹಾಯಕರಿಗೆ ಕುಂಕುಮವನ್ನು ದಾನ ಮಾಡಿ