ನಿಮ್ಮ ಜನ್ಮ ದಿನಾಂಕ 1,10,19 ಮತ್ತು 28ರಲ್ಲಿ ಯಾವುದಾದರೂ ಆಗಿದ್ದರೆ, ನಾಳೆ ನಿಮ್ಮ ಅದೃಷ್ಟ ಸಂಖ್ಯೆ 1 ಆಗಿರುತ್ತದೆ. ಲಕ್ಕಿ ನಂಬರ್1 ಅನ್ನು ಹೊಂದಿರುವವರು ಫೆಬ್ರವರಿ 8 ರಂದು ಸಂತೋಷದಿಂದಿ ಇರುತ್ತಾರೆ. ಕೆಲಸದ ಸ್ಥಳದಲ್ಲಿ ವಾತಾವರಣವು ನಿಮಗೆ ಅನುಕೂಲಕರವಾಗಿರುತ್ತದೆ. ಸಹೋದ್ಯೋಗಿಗಳಿಂದ ಬೆಂಬಲ ಸಿಗಲಿದೆ. ಅಧಿಕಾರಿಗಳಿಂದ ಪ್ರಶಂಸೆ ವ್ಯಕ್ತವಾಗಲಿದೆ. ವ್ಯಾಪಾರದಲ್ಲಿ ಲಾಭವಾಗಲಿದೆ.
ನಿಮ್ಮ ಜನ್ಮ ದಿನಾಂಕ 3,12,21 ಅಥವಾ 3 ಆಗಿದ್ದರೆ, ನಿಮ್ಮ ಲಕ್ಕಿ ನಂಬರ್ 3 ಆಗಿರುತ್ತದೆ. ಫೆಬ್ರವರಿ 8 ರಂದು ಲಕ್ಕಿ ನಂಬರ್ 3 ಹೊಂದಿರುವವರು ಪಾಸಿಟಿವ್ ಎನರ್ಜಿ ಹೊಂದಿರುತ್ತಾರೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಅವರ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಿರಲಿದೆ. ವ್ಯಾಪಾರದಲ್ಲಿಯೂ ಏಳಿಗೆ ಕಾಣುವಿರಿ. ಮನೆಗೆ ಅತಿಥಿಗಳ ಆಗಮನ ಸಾಧ್ಯತೆ. ಕುಟುಂಬದಲ್ಲಿ ಸಂತಸದ ವಾತಾವರಣ. ದಾಂಪತ್ಯ ಜೀವನದಲ್ಲಿ ಖುಷಿ. ಉತ್ತಮ ಆರೋಗ್ಯ ಹೊಂದಿರುವಿರಿ.
ನಿಮ್ಮ ಜನ್ಮ ದಿನಾಂಕ 4,13,22 ಅಥವಾ 31 ಆಗಿದ್ದರೆ ನಿಮ್ಮ ಲಕ್ಕಿ ನಂಬರ್ 4 ಆಗಿರುತ್ತದೆ. ಫೆಬ್ರವರಿ 8 ರಂದು ಲಕ್ಕಿ ನಂಬರ್ 4 ಹೊಂದಿರುವವರಿಗೆ ಈ ದಿನ ಮಿಶ್ರಫಲ ಇರಲಿದೆ. ವ್ಯಾಪಾರದಲ್ಲಿ ನಿರತರಾಗಿರುವಿರಿ. ಹೊಸ ಕಾರ್ಯಗಳಿಗೆ ಕೈ ಹಾಕಬೇಡಿ. ವ್ಯಾಪಾರದಲ್ಲಿ ಲಾಭದ ಅವಕಾಶಗಳು ಕಡಿಮೆ. ಆರ್ಥಿಕ ನಷ್ಟ ಉಂಟಾಗಬಹುದು. ಕುಟುಂಬಸ್ಥರ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ. ಮಾನಸಿಕ ಒತ್ತಡ. ಮಕ್ಕಳ ಕಡೆಯಿಂದ ಒಳ್ಳೆಯ ಸುದ್ದಿ ಸಿಗಬಹುದು.
ನಿಮ್ಮ ಜನ್ಮ ದಿನಾಂಕ 5,14,23 ಆಗಿದ್ದರೆ ನಿಮ್ಮ ಲಕ್ಕಿ ನಂಬರ್ 5 ಆಗಿರುತ್ತದೆ. ಫೆಬ್ರವರಿ 8 ರಂದು ಲಕ್ಕಿ ನಂಬರ್ 5 ಹೊಂದಿರುವವರಿಗೆ ಈ ದಿನ ಏರಿಳಿತಗಳಿಂದ ಕೂಡಿರಲಿದೆ. ಉದ್ಯೋಗ ಸ್ಥಳದಲ್ಲಿ ಅನಾನೂಕೂಲತೆ. ಹೊಸ ಕಾರ್ಯಗಳಿಗೆ ವಿಜ್ಱ. ಮಾಡುವ ಕೆಲಸಗಳಲ್ಲಿ ಅಡೆತಡೆ. ವಿವಾದಗಳಿಂದ ದೂರವಿಡಿ. ಆರ್ಥಿಕ ನಷ್ಟ ಸಾಧ್ಯತೆ. ಅಪಾಯಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಆರ್ಥಿಕ ನಷ್ಟ ಸಾಧ್ಯತೆ. ಕೌಟುಂಬಿಕ ಸಮಸ್ಯೆಗಳು ಕಾಡಬಹುದು.
ನಿಮ್ಮ ಜನ್ಮ ದಿನಾಂಕ 6, 15 ಮತ್ತು 24 ಆಗಿದ್ದರೆ ನಿಮ್ಮ ಲಕ್ಕಿ ನಂಬರ್ 6 ಆಗಿರುತ್ತದೆ. ಲಕ್ಕಿ ನಂಬರ್ 6 ಹೊಂದಿರುವ ಜನರಿಗೆ ಈ ದಿನ ಏರಿಳಿತಗಳಿಂದ ಕೂಡಿರಲಿದೆ. ಉದ್ಯೋಗ ಸ್ಥಳದಲ್ಲಿ ಅನುಕೂಲತೆ. ಹೊಸ ಕಾರ್ಯಕೈಗೊಳ್ಳಬೇಡಿ. ಯಾವುದೇ ಪ್ರಮುಖ ನಿರ್ಧಾರ ಕೈಗೊಳ್ಳುವ ಮುನ್ನ ಯೋಚಿಸಿ. ಕುಟುಂಬದಿಂದ ಬೆಂಬಲ. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು. ಹವಾಮಾನ ಬದಲಾವಣೆಯಿಂದ ಆರೋಗ್ಯದಲ್ಲಿ ಏರುಪೇರು.
ನಿಮ್ಮ ಜನ್ಮ ದಿನಾಂಕ 7, 16, 25 ರಲ್ಲಿ ಒಂದಾಗಿದ್ದಾರೆ, ಫೆಬ್ರವರಿ 8 ರಂದು ನಿಮ್ಮ ಲಕ್ಕಿ ನಂಬರ್ 7 ಆಗಿರುತ್ತದೆ. ಲಕ್ಕಿ ನಂಬರ್ 7 ಹೊಂದಿರುವವರಿಗೆ ಈ ದಿನ ಮಿಶ್ರಫಲ ಇರಲಿದೆ. ಉದ್ಯೋಗ ಸ್ಥಳದಲ್ಲಿ ಅನುಕೂಲತೆ. ಹೊಸ ಕಾರ್ಯಗಳಿಗೆ ಕೈ ಹಾಕಬೇಡಿ. ದುಡುಕಿ ನಿರ್ಧಾರ ಕೈಗೊಳ್ಳಬೇಡಿ. ಮನಸ್ಸಿಗೆ ನೋವಾಗಬಹುದು. ಕುಟುಂಬದಲ್ಲಿ ಬಿರುಕು ಮೂಡುವ ಸಾಧ್ಯತೆ. ಮಾನಸಿಕ ಒತ್ತಡ. ವಾಹನ ಚಾಲಯಿಸುವಾಗ ಜಾಗರೂಕರಾಗಿರಿ.
ನಿಮ್ಮ ಜನ್ಮ ದಿನಾಂಕ 8, 17, 28 ಆಗಿದ್ದರೆ, ಫೆಬ್ರವರಿ 8 ರಂದು ನಿಮ್ಮ ಲಕ್ಕಿ ನಂಬರ್ 8 ಆಗಿರುತ್ತದೆ. ಈ ದಿನ ನಿಮಗೆ ಶುಭಕರವಾಗಿರಲಿದೆ. ಉದ್ಯೋಗ ಸ್ಥಳದಲ್ಲಿ ಅನುಕೂಲತೆ. ಆಸ್ತಿ ಸಂಬಂಧಿತ ವಿಚಾರದಲ್ಲಿ ಉತ್ತಮ ನಿರ್ಧಾರ ಕೈಗೊಳ್ಳುವಿರಿ. ಉದ್ಯೋಗ ಸ್ಥಳದಲ್ಲಿ ಹೊಸ ಜವಾಬ್ದಾರಿ ಸಿಗಲಿದೆ. ಕುಟುಂಬದಲ್ಲಿ ಸಂತಸದ ವಾತಾವರಣ. ವೈವಾಹಿಕ ಜೀವನದಲ್ಲಿ ಸಂತಸ. ಉತ್ತಮ ಆರೋಗ್ಯ.