ಸಂಖ್ಯೆ 1: ಇದು ಸಡಗರದ ದಿನವಾಗಿದೆ, ಪ್ರಶಂಸೆ ನಿಮ್ಮನ್ನ ಹುಡುಕಿ ಬರಲಿದೆ. ಆಫೀಸ್ನಲ್ಲಿ ಜನರು ನಿಮ್ಮ ಬಗ್ಗೆ ಗೌರವ ಹೊಂದಿರುತ್ತಾರೆ. ಸಂಗೀತ ಕಛೇರಿಗಳಿಗೆ ಹಾಜರಾಗುವುದು, ಕಾರ್ಯಕ್ರಮಗಳನ್ನು ಆಯೋಜಿಸುವುದು ಅಥವಾ ಸಂದರ್ಶನಗಳಿಗೆ ಅರ್ಜಿ ಸಲ್ಲಿಸುವುದು ನಿಮ್ಮ ಮನಸ್ಸಿಗೆ ಸಂತೋಷ ನೀಡುತ್ತದೆ. ಆಸ್ತಿಯನ್ನು ಖರೀದಿಸುವುದು ಮತ್ತು ಆಸ್ತಿಗಳನ್ನು ಮಾರಾಟ ಮಾಡುವುದು ನಿಮಗೆ ಲಾಭ ನೀಡುತ್ತದೆ. ಬಣ್ಣ: ಕಿತ್ತಳೆ, ಅದೃಷ್ಟದ ದಿನ: ಗುರುವಾರ, ಅದೃಷ್ಟ ಸಂಖ್ಯೆ: 3, ಭಿಕ್ಷುಕರಿಗೆ ಕಿತ್ತಳೆ ಹಣ್ಣನ್ನು ದಾನ ಮಾಡಿ
ಸಂಖ್ಯೆ 2: ನಿಜವಾದ ಪ್ರೀತಿಯ ಸಂಗಾತಿಯನ್ನು ಹುಡುಕುವ ಸಮಯ ಇದು. ಎಲ್ಲರಿಗೂ ಹೆಚ್ಚು ಹೊಂದಿಕೊಳ್ಳುವ ಗುಣ ನಿಮಗೆ ಸಮಸ್ಯೆ ತರಬಹುದು. ವಿದ್ಯಾರ್ಥಿಗಳು ಮತ್ತು ಕ್ರೀಡಾಪಟುಗಳು ಇಂದು ಹಿರಿಯರ ಟೀಕೆಗಳನ್ನು ನಿರ್ಲಕ್ಷಿಸಬೇಕು. ಜವಾಬ್ದಾರಿಗಳನ್ನು ಪೂರೈಸಲು ಹಣವನ್ನು ಬಳಸುವ ದಿನ ಇದು. ಬಣ್ಣ: ಆಕ್ವಾ, ಅದೃಷ್ಟದ ದಿನ: ಸೋಮವಾರ, ಅದೃಷ್ಟ ಸಂಖ್ಯೆ: 2, ಅನಾಥಾಶ್ರಮಕ್ಕೆ ವಸ್ತ್ರದಾನ ಮಾಡಿ.
ಸಂಖ್ಯೆ 3: ವಿಜ್ಞಾನಿಗಳು ಮತ್ತು ಸಂಶೋಧಕರು ಉಜ್ವಲ ಭವಿಷ್ಯಕ್ಕಾಗಿ ಹೊಸ ಯೋಜನೆ ಮಾಡಬಹುದು. ಇಂದು ಸ್ಟಾಕ್‌ಗೆ ಸಂಬಂಧಿಸಿದ ಹೂಡಿಕೆಗಳು ಆದಾಯ ನೀಡುವುದಿಲ್ಲ. ಸಂಗಾತಿಗೆ ಉಡುಗೊರೆ ಕೊಟ್ಟು ಸಂತೋಷಪಡಿಸಿ. ನಿಮ್ಮ ದಿನವನ್ನು ಪ್ರಾರಂಭಿಸುವ ಮೊದಲು ನಿಮ್ಮ ಗುರುಗಳನ್ನು ನೆನಪಿಸಿಕೊಳ್ಳಿ. ಬಣ್ಣ: ಕಿತ್ತಳೆ, ಅದೃಷ್ಟದ ದಿನ: ಗುರುವಾರ, ಅದೃಷ್ಟ ಸಂಖ್ಯೆ: 3 ಮತ್ತು 1, ಮಹಿಳಾ ಸಹಾಯಕರಿಗೆ ಕುಂಕುಮವನ್ನು ದಾನ ಮಾಡಿ
ಸಂಖ್ಯೆ 4: ಚರ್ಮದ ಉತ್ಪನ್ನಗಳನ್ನು ಬಳಸುವುದನ್ನು ತಪ್ಪಿಸಿ. ಈ ದಿನ ನೀವು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ವಿಶೇಷವಾಗಿ ರಾಜಕೀಯ ಮತ್ತು ಮನರಂಜನಾ ಉದ್ಯಮದಲ್ಲಿರುವವರಿಗೆ ಉತ್ತಮ ದಿನವಾಗಿದೆ. ದಯವಿಟ್ಟು ಇಂದು ನಾನ್ ವೆಜ್ ಮತ್ತು ಮದ್ಯ ಸೇವಿಸುವುದನ್ನು ತಪ್ಪಿಸಿ. ಮುಖ್ಯ ಬಣ್ಣ: ನೀಲಿ, ಅದೃಷ್ಟದ ದಿನ: ಶನಿವಾರ, ಅದೃಷ್ಟ ಸಂಖ್ಯೆ: 9, ಭಿಕ್ಷುಕನಿಗೆ ಹಸಿರು ಅಥವಾ ಕೆಂಪು ಬಟ್ಟೆಗಳನ್ನು ದಾನ ಮಾಡುವುದು ಅತ್ಯಗತ್ಯ
ಸಂಖ್ಯೆ 6: ಇಂದು ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡಬೇಕಾಗುತ್ತದೆ. ಸಂಗಾತಿ ಮತ್ತು ಮಕ್ಕಳೊಂದಿಗೆ ಸಮಯ ಕಳೆಯಲು ಉತ್ತಮ ದಿನ. ವಿದ್ಯಾರ್ಥಿಗಳು ಮತ್ತು ರಾಜಕಾರಣಿಗಳು ಹೊಸ ಅವಕಾಶವನ್ನು ಪಡೆಯಬಹುದು. ಹೊಸ ಕಾರ್ಖಾನೆಯನ್ನು ಸ್ಥಾಪಿಸಲು ಜಾಗ ಹುಡುಕುತ್ತಿರವವರಿಗೆ ಉತ್ತಮ ಆಯ್ಕೆ ಸಿಗುತ್ತದೆ. ಬಣ್ಣ: ನೀಲಿ, ಅದೃಷ್ಟದ ದಿನ: ಶುಕ್ರವಾರ, ಅದೃಷ್ಟ ಸಂಖ್ಯೆ: 6, ಆಶ್ರಮಗಳಿಗೆ ಬಿಳಿ ಸಿಹಿತಿಂಡಿಗಳನ್ನು ದಾನ ಮಾಡಿ.