Astrology: ಮಕರ ರಾಶಿಯವರು ಈ ದಿನ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸಬೇಕು- ಉಳಿದ ರಾಶಿಗಳ ದಿನ ಹೇಗಿರಲಿದೆ
Daily Horoscope: ಸಿತಾರಾ ಹೆಸರಿನ ವೆಲ್ನೆಸ್ ಸ್ಟುಡಿಯೋ (Sitara Wellness Studio) ವೆಬ್ಸೈಟ್ ಅನ್ನು ನಡೆಸುತ್ತಿರುವ ಪೂಜಾ ಚಂದ್ರ (Puja Chandra) ಆಧ್ಯಾತ್ಮಿಕ ನೆಲೆಯಲ್ಲಿ ಜೀವನದ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಿದ್ದಾರೆ. ಹರೆಯದಿಂದಲೂ ರಾಶಿ ಭವಿಷ್ಯ, ಆಧ್ಯಾತ್ಮಿಕತೆಗೆ ಒತ್ತು ನೀಡುತ್ತಾ ಬಂದಿರುವ ಇವರು ಹೀಲಿಂಗ್ ಸೆಶನ್ಗಳನ್ನು ಕೂಡ ನಡೆಸುತ್ತಾರೆ. ರಾಶಿ ಭವಿಷ್ಯಗಳನ್ನು ಮಾಹಿತಿಪೂರ್ಣವಾಗಿ ತಿಳಿಸುವುದರಲ್ಲೂ ನಿಷ್ಣಾತರಾಗಿರುವ ಇವರು ರಾಶಿಯ ವಿಶೇಷತೆಯನ್ನು ಧನಾತ್ಮಕವಾಗಿ ತಿಳಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ.
ಮೇಷ: ನಿಮ್ಮ ಸುತ್ತಲಿರುವ ಕೆಲವು ಜನರಿಗೆ ನಿಮ್ಮ ಸಹಾಯ ನಿಜವಾಗಿಯೂ ಬೇಕಾಗಬಹುದು. ಹಣಕಾಸಿನ ಸಹಾಯ ಕೇಳುವುದು ಸಹ ತಪ್ಪಲ್ಲ. ನಿಮ್ಮ ಹವ್ಯಾಸವನ್ನು ನಿಮ್ಮ ಕೆಲಸವಾಗಿ ಮುಂದುವರಿಸಲು ನೀವು ಯೋಚಿಸುತ್ತಿದ್ದರೆ, ಧುಮುಕಿ
2/ 12
ವೃಷಭ: ಸಣ್ಣ ಪ್ರವಾಸವು ಲಾಭದಾಯಕ ಎನ್ನುವುದು ಸಾಬೀತಾಗುತ್ತದೆ. ನೀವು ನಿಮ್ಮೊಂದಿಗೆ ಏಕಾಂಗಿಯಾಗಿ ಸ್ವಲ್ಪ ಸಮಯವನ್ನು ಕಳೆಯಬೇಕು. ನಿಮ್ಮ ಪೋಷಕರ ಮಾತನ್ನ ಕೇಳುವುದು ಮುಖ್ಯ.
3/ 12
ಮಿಥುನ : ನಿಮ್ಮ ಹತ್ತಿರ ಬಂದ ಹಳೆಯ ಅವಕಾಶ ಮತ್ತೆ ಕಾಣಿಸಿಕೊಳ್ಳಬಹುದು. ನಿಮ್ಮ ದಿನಚರಿ ಒಂದೇ ರೀತಿ ಇದೇ ಅನಿಸಿದರೆ, ಅದು ಉತ್ತಮವಾಗಿ ಬದಲಾಗಬಹುದು. ನಿಮ್ಮ ಆರೋಗ್ಯದಲ್ಲಿ ಸ್ವಲ್ಪ ಅಸ್ವಸ್ಥತೆ ನಿಮ್ಮ ಸಮಯವನ್ನು ಹಾಳು ಮಾಡುತ್ತದೆ.
4/ 12
ಕಟಕ: ನೆರೆಹೊರೆಯಲ್ಲಿರುವ ಕೆಲವರು ನಿಮ್ಮ ಬಗ್ಗೆ ಒಂದು ನಿರ್ದಿಷ್ಟ ಅನಿಸಿಕೆ ಹೊಂದಿರುವುದರಿಂದ ನಿಮ್ಮ ಬಗ್ಗೆ ಮಾತನಾಡಬಹುದು. ಒಂದು ವೇಳೆ ಏನಾದರೂ ಕಾನೂನಾತ್ಮಕವಾಗಿ ಬಾಕಿ ಉಳಿದಿದ್ದರೆ ಅದು ಈಗ ಸಮಸ್ಯೆ ತರಬಹುದು. ಆಹಾರದ ಬಗ್ಗೆ ಗಮನವಿರಲಿ.
5/ 12
ಸಿಂಹ: ರಜೆಯ ದಿನಗಳನ್ನು ನೀವು ಅನುಭವಿಸಬಹುದು. ಉತ್ತಮ ಮತ್ತು ಪರಿಣಾಮಕಾರಿ ಮಾತುಕತೆ ದಿನವನ್ನು ಉತ್ತಮಗೊಳಿಸುತ್ತದೆ. ನಿಮ್ಮ ತಾಯಿಗೆ ಸ್ವಲ್ಪ ಹಣಕಾಸಿನ ನೆರವು ಬೇಕಾಗಬಹುದು.
6/ 12
ಕನ್ಯಾ: ಮುಂದಿನ ದಿನಗಳಲ್ಲಿ ಕೆಲಸದ ಒತ್ತಡ ಹೆಚ್ಚಾಗಬಹುದು. ಸ್ವಲ್ಪ ಸಮಯದ ನಂತರ ವಿರಾಮ ಮಾಡಬಹುದು. ಆಪ್ತ ಸ್ನೇಹಿತ ನಿಮ್ಮೊಂದಿಗೆ ಪೂರ್ವಸಿದ್ಧತೆಯಿಲ್ಲದ ಪ್ರವಾಸ ಹೋಗುವುದನ್ನ ನಿರ್ಧರಿಸಬಹುದು.
7/ 12
ತುಲಾ: ನಿಮ್ಮ ವರ್ತನೆಯು ಕೆಲವು ಆಪ್ತರನ್ನು ಅಸಮಾಧಾನಗೊಳಿಸಬಹುದು. ನಿಮ್ಮ ಸಂಗಾತಿಯು ಉತ್ತಮ ಉಪಾಯ ನೀಡಬಹುದು. ಅತ್ಯಾಧುನಿಕ ವಿಧಾನವನ್ನು ಹೊಂದಿರುವ ಒಂದು ಬದಲಾವಣೆಯನ್ನು ಮಾಡಬಹುದು.
8/ 12
ವೃಶ್ಚಿಕ: ಕೆಲಸದಲ್ಲಿರುವ ಕೆಲವು ಹಿರಿಯರು ನಿಮ್ಮನ್ನು ಸೂಕ್ಷ್ಮವಾಗಿ ಗಮನಿಸಬಹುದು ಮತ್ತು ನಿಮ್ಮ ವಿಧಾನವನ್ನು ಮೆಚ್ಚಬಹುದು. ಯೋಜನೆ ಮಾಡುವಾಗ ನಿಮ್ಮ ಗುರಿಗಳನ್ನು ನೆನಪಿನಲ್ಲಿಡಿ. ಮಿತಿಮೀರಿದ ಬದ್ಧತೆ ನಂತರ ಎಡವಟ್ಟುಗಳಿಗೆ ಕಾರಣವಾಗಬಹುದು. ನಿದ್ರೆಯ ಕೊರತೆ ಉಂಟಾಗಬಹುದು.
9/ 12
ಧನಸ್ಸು: ನೀವು ಮಾಡುತ್ತಿರುವ ಕೆಲಸಕ್ಕೆ ನಿಜವಾದ ಕ್ರೆಡಿಟ್ ಸಿಗದೇ ಇರಬಹುದು. ಮನಸ್ಸಿನಲ್ಲಿ ಕೆಲ ತಳಮಳ ಉಂಟಾಗಬಹುದು. ನಿಮ್ಮ ಕೆಲಸ ಮತ್ತು ಆಲೋಚನೆಗಳು ಮೆಚ್ಚುಗೆಯನ್ನು ಪಡೆಯಬಹುದು.
10/ 12
ಮಕರ : ವಿಶೇಷ ವ್ಯಕ್ತಿ ನಿಮ್ಮನ್ನು ತಾತ್ಕಾಲಿಕವಾಗಿ ಅಸಮಾಧಾನಗೊಳಿಸಬಹುದು. ನೀವು ಸಹ ಉದ್ವೇಗ ಸಮಸ್ಯೆಗಳನ್ನು ಅನುಭವಿಸಬಹುದು. ಶೀಘ್ರದಲ್ಲೇ ನಿಮ್ಮ ಹಣಕಾಸಿನ ಪರಿಸ್ಥಿತಿಯಲ್ಲಿ ಬದಲಾವಣೆಯಾಗಲಿದೆ. ತಲೆನೋವು ಬರಬಹುದು.
11/ 12
ಕುಂಭ: ಬೇರೊಬ್ಬರು ಮಾಡಿದ ಬದ್ಧತೆ ನಿಮ್ಮ ತಲೆ ಮೇಲೆ ಬರಬಹುದು. ಕೆಟ್ಟ ಕನಸು ಬೀಳುತ್ತಿದ್ದರೆ ಅದು ನಿಮಗೆ ಸೂಚನೆ ಎಂದು ತಿಳಿದುಕೊಳ್ಳಿ.ನಿಮ್ಮ ಮಾತು ಮತ್ತು ಅಭಿವ್ಯಕ್ತಿ ಪ್ರಭಾವಶಾಲಿಯಾಗಿರಬೇಕು.
12/ 12
ಮೀನಾ: ಹಿಂದಿನ ಕ್ಷಣಗಳು ವಿವಿಧ ರೀತಿಯಲ್ಲಿ ಮರುಕಳಿಸಬಹುದು. ಕುಟುಂಬದಲ್ಲಿ ಸತ್ತವರನ್ನು ಎಲ್ಲರೂ ನೆನಪಿಸಿಕೊಳ್ಳಬಹುದು. ಹೊಸ ಪರಿಸ್ಥಿತಿಯನ್ನು ಒಪ್ಪಿಕೊಳ್ಳಲು ಇದು ಉತ್ತಮ ಸಮಯ. ಹೊಸ ಒಪ್ಪಂದವು ಲಾಭದಾಯಕವೆಂದು ಸಾಬೀತಾಗುತ್ತದೆ