Astrology: ವೃಷಭ ರಾಶಿಯವರಿಗೆ ಇಂದು ಅನಿರೀಕ್ಷಿತ ಧನಾಗಮನ: ಉಳಿದ 12 ರಾಶಿಗಳ ದಿನಭವಿಷ್ಯ ಹೀಗಿದೆ
Horoscope Today September 2 :ಪ್ಲವನಾಮ ಸಂವತ್ಸರದ ದಕ್ಷಿಣಾಯಣ ವರ್ಷ ಋತು - ಸಿಂಹ ಮಾಸದ 16 ನೇ ದಿನ. ತಿಥಿ: (ಶ್ರಾವಣ ಕೃಷ್ಣ) ದಶಮಿ, ನಕ್ಷತ್ರ: ಆದ್ರಾ, ಯೋಗ: ಸಿದ್ಧಿ, ಕರಣ: ವಿಷ್ಟಿ, ರಾಹುಕಾಲ : ಮಧ್ಯಾಹ್ನ 01-30 ರಿಂದ 3 ಗಂಟೆರವರೆಗೆ ಇರಲಿದೆ. ಈ ದಿನದ ದ್ವಾದಶ ರಾಶಿ ದಿನ ಭವಿಷ್ಯ ಕುರಿತು ಕೆ.ಎಲ್ ವಿದ್ಯಾಶಂಕರ ಸೋಮಯಾಜಿ ತಿಳಿಸಿದ್ದಾರೆ. ಇವರ ಸಂಪರ್ಕಕ್ಕೆ : 9449186129
ಆರ್ಥಿಕ ಸ್ಥಿತಿಯಲ್ಲಿ ಮತ್ತು ಉದ್ಯೋಗದಲ್ಲಿ ಏರಿಳಿತದ ನಡುವೆ ಸಿಕ್ಕಿಹಾಕಿಕೊಳ್ಳುವ ಸಾಧ್ಯತೆ ಇದೆ. ವಾಹನ ಮಾರಾಟಗಾರರಿಗೆ ಉದ್ಯೋಗದಲ್ಲಿ ಬಿಡುವಿಲ್ಲದ ಕಾರ್ಯ. ವಿದ್ಯಾರ್ಥಿಗಳು ವ್ಯಾಸಾಂಗಕ್ಕಾಗಿ ವಿದೇಶಕ್ಕೆ ತೆರಳುವ ಅವಕಾಶ ಒದಗಲಿದೆ.
3/ 13
ಕೌಟುಂಬಿಕ ಕಲಹಗಳು ಆಗಾಗ ಗೋಚರಕ್ಕೆ ಬಂದಾವು. ನ್ಯಾಯಾಲಯದದ ಮೊರೆ ಹೋಗುವಂತಹ ಕೃತ್ಯಗಳು ನೆಡೆಯಲಿದೆ. ಗೃಹದಲ್ಲಿ ಹಂತ ಹಂತವಾಗಿ ಸುಖ ಶಾಂತಿ ಹೆಚ್ಚಲಿದೆ. ಅನಿರೀಕ್ಷಿತ ಧನಾಗಮನದಿಂದ ಸಂತಸ ಮೂಡಲಿದೆ.
4/ 13
ಹಣಕಾಸಿನ ವ್ಯವಹಾರದಲ್ಲಿ ಪಾಲುದಾರಿಕೆ ಪಡೆಯುವ ಬಗ್ಗೆ ಯೋಚಿಸಲು ಸರಿಯಾದ ಸಮಯ. ರಾಜಕೀಯ ಪರಿಣಿತರ ಹುದ್ದೆ ಏರುವ ಆಸೆಯು, ಈ ದಿನ ರಾಜಕೀಯ ಗುರುವಿನ ನೆರೆವಿನಿಂದ ಮತ್ತು ಆರ್ಥಿಕ ಬಲದಿಂದ ನೆರವೇರುವುದು.
5/ 13
ಪ್ರಯಾಣದಲ್ಲಿ ಅಪವಾದದ ಸನ್ನಿವೇಶಗಳು ಎದುರಾಗಬಹುದು. ಜಾಗ್ರತರಾಗಿರಿ. ಆರ್ಥಿಕವಾಗಿ ಖರ್ಚಿನ ಮೇಲೆ ನಿಯಂತ್ರಣವಿರಲಿ. ವಿದ್ಯಾಭ್ಯಾಸದಲ್ಲಿ ಉದಾಸೀನ ತೋರುತ್ತಿದ್ದ ವಿದ್ಯಾರ್ಥಿಗಳಿಗೆ ವ್ಯಾಸಾಂಗದಲ್ಲಿ ಹೆಚ್ಚಿನ ಆಸಕ್ತಿ ಉಂಟಾಗಲಿದೆ.
6/ 13
ನಿಮ್ಮ ಸ್ವಯಂ ಸಾಮಥ್ರ್ಯದ ಬಗ್ಗೆ ಹೆಚ್ಚಿನ ವಿಶ್ವಾಸವಿರಲಿ. ಅದರಿಂದಾಗಿ ಮಾನಸಿಕ ವ್ಯಥೆಗಳು ನಿವಾರಣೆಯಾಗುತ್ತದೆ. ಉದ್ಯೋಗದಲ್ಲಿ ಸಿಗುವಂತಹ ವರ್ಗಾವಣೆಯ ಅವಕಾಶಗಳನ್ನು ಬಿಟ್ಟುಕೊಳ್ಳಬೇಡಿ. ಮಡದಿ ಮತ್ತು ಮಕ್ಕಳ ಆರೋಗ್ಯದಲ್ಲಿ ಗಮನ ನೀಡಿ.
7/ 13
ಈ ದಿನ ನಿಮಗೆ ಸರ್ವರಂಗದಲ್ಲೂ ಜಯಶಾಲಿಯ ಪಟ್ಟ ಹೊಂದುವ ಯೋಗವಿದೆ. ಸಜ್ಜನರ ಒಡನಾಟದಿಂದ ಯಶೋಭಿವೃದ್ಧಿ ಉಂಟಾಗಲಿದೆ. ಕುಲದೇವತಾ ದರ್ಶನ ಹಾಗು ದೇವರ ಸೇವೆಗಳಿಂದ ಮತ್ತಷ್ಟು ಶುಭ ಫಲವನ್ನು ಪಡೆಯಬಹುದು.
8/ 13
ಹೂವು-ಹಣ್ಣುಗಳ ಮಾರಾಟಗಾರರಿಗೆ ತಾವು ನಿರೀಕ್ಷಿಸಿದಕ್ಕಿಂತ ಹೆಚ್ಚಿನ ಲಾಭವನ್ನು ವ್ಯಾಪಾರದಲ್ಲಿ ಪಡೆದಕೊಳ್ಳುವುದರಿಂದ ಸಂತೋಷ ಇರುವುದು. ದಾಂಪತ್ಯದಲ್ಲಿ ಹೊಂದಾಣಿಕೆಯಿಂದ ಜೀವನ ಹಸನವಾಗಲಿದೆ. ಪಾಕಪ್ರವೀಣರಿಗೆ ಬೇಡಿಕೆ ಹೆಚ್ಚಾಗುವುದು.
9/ 13
ಕೆಲವೊಂದು ಸೂಕ್ಷ್ಮ ವಿಚಾರಗಳನ್ನು ಅರ್ಥ ಮಾಡಿಕೊಂಡು ಹಿರಿಯರ ಮಾರ್ಗದರ್ಶನದಂತೆ ನಡೆದರೆ ಉತ್ತಮ. ಜವಬ್ದಾರಿಯುತವಾದ ಊರಿನ ಕಾರ್ಯಗಳು ನಿಮ್ಮ ಮುಂದಾಳತ್ವದಲ್ಲಿ ನೆಡೆಯಲಿದೆ. ನಿಮ್ಮಲ್ಲಿರುವ ಸೃಜನ ಶೀಲತೆಗೆ ಉತ್ತಮ ವೇದಿಕೆ ಪ್ರಾಪ್ತಿಯಾಗುವುದು.
10/ 13
ಋಣಬಾಧೆಯಿಂದ ಮುಕ್ತರಾಗಲು ಹೆಚ್ಚಿನ ಗಮನನೀಡಿ. ವಸ್ತ್ರ ವಿನ್ಯಾಸ, ಚಿತ್ರಕಲೆ, ಕಥೆ-ಕವನಗಳ ಬರವಣಿಗೆಯಲ್ಲಿ ಹೆಚ್ಚಿನ ಆಸಕ್ತಿ ಮೂಡಲಿದೆ. ಶ್ರೀ ಮಲ್ಲಿಕಾರ್ಜುನನ ಅನುಗ್ರಹ ಸಂಪಾದಿಸಿದಲ್ಲಿ ಮತ್ತಷ್ಟು ಸಿಹಿ ಫಲಗಳನ್ನು ಅನುಭವಿಸುವ ಯೋಗವಿದೆ.
11/ 13
ಸೇವಕ ವರ್ಗದವರಿಗೆ ಆದಾಯ ಹೆಚ್ಚಿದಂತೆ ಕೆಲಸದ ವಿಸ್ತೀರ್ಣವೂ ಹೆಚ್ಚುವುದು. ಕ್ರೀಡಾಪಟುಗಳಿಗೆ ಸಂಗೀತಗಾರರಿಗೆ ಸಾಧನೆಯ ಅವಕಾಶ ಸಿಕ್ಕಿದರೂ ಅನಾರೋಗ್ಯ ಎದುರಾಗಬಹುದು. ವೃತ್ತಿಗಿಂತ ಪ್ರವೃತ್ತಿಯಲ್ಲಿ ಆಸಕ್ತಿ ಹೆಚ್ಚಲಿದೆ. ಮಕ್ಕಳ ವಿದ್ಯಾಭ್ಯಾಸದ ಪ್ರಗತಿಯಿಂದ ಹರ್ಷವಿರುವುದು.
12/ 13
ಸಂಘ ಸಂಸ್ಥೆಗಳ ಪದಾಧಿಕಾರ ಆಕಸ್ಮಿಕವಾಗಿ ದೊರಕುವುದು. ಸುಖ ಸಂಪತ್ತಿನ ಜೊತೆಯಲ್ಲಿ ಚಿಂತೆಯು ನಿದ್ದೆಗೆಡೆಸುತ್ತದೆ. ತಂದೆ ಅಥವಾ ಕುಟುಂಬದ ಹಿರಿಯರ ಆರೋಗ್ಯ ನಷ್ಟದಿಂದಾಗಿ ಆಸ್ಪತ್ರೆಯ ತಿರುಗಾಟದ ಕ್ಲೇಶ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿಬರಲಿದೆ.
13/ 13
ಈ ದಿನ ಕೆಲಸಗಳನ್ನು ಸಮರ್ಪಕವಾಗಿ ಮಾಡಿದ ತೃಪ್ತಿಕರ ಭಾವ ನಿಮ್ಮಲ್ಲುಂಟಾಗಲಿದೆ. ಎಲೆಕ್ಟ್ರಾನಿಕ್ ಮತ್ತು ಹಾರ್ಡ್ವೇರ್ ವಸ್ತುಗಳಿಂದ ಅಧಿಕ ಲಾಭ ಪಡೆಯಲಿದ್ದೀರಿ. ಬಣ್ಣ ಮಾರಾಟಗಾರರಿಗೆ ಉತ್ತಮ ವ್ಯಾಪಾರವಿದೆ. ದಿನದಲ್ಲಿ ಅಧಿಕ ಸಮಯ ಸಂತೋಷವಿರುವುದು.