Astrology: ವೃಶ್ಚಿಕ ರಾಶಿಯವರು ಇಂದು ತಮಗೆ ಇಷ್ಟವಾದ ವ್ಯಕ್ತಿಯನ್ನು ಭೇಟಿಯಾಗಲಿದ್ದಾರೆ: 12 ರಾಶಿಗಳ ದಿನಭವಿಷ್ಯ ಹೀಗಿದೆ
ಸಿತಾರಾ ಹೆಸರಿನ ವೆಲ್ನೆಸ್ ಸ್ಟುಡಿಯೋ (Sitara Wellness Studio) ವೆಬ್ಸೈಟ್ ಅನ್ನು ನಡೆಸುತ್ತಿರುವ ಪೂಜಾ ಚಂದ್ರ (Puja Chandra) ಆಧ್ಯಾತ್ಮಿಕ ನೆಲೆಯಲ್ಲಿ ಜೀವನದ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಿದ್ದಾರೆ. ಹರೆಯದಿಂದಲೂ ರಾಶಿ ಭವಿಷ್ಯ, ಆಧ್ಯಾತ್ಮಿಕತೆಗೆ ಒತ್ತು ನೀಡುತ್ತಾ ಬಂದಿರುವ ಇವರು ಹೀಲಿಂಗ್ ಸೆಶನ್ಗಳನ್ನು ಕೂಡ ನಡೆಸುತ್ತಾರೆ. ರಾಶಿ ಭವಿಷ್ಯಗಳನ್ನು ಮಾಹಿತಿಪೂರ್ಣವಾಗಿ ತಿಳಿಸುವುದರಲ್ಲೂ ನಿಷ್ಣಾತರಾಗಿರುವ ಇವರು ರಾಶಿಯ ವಿಶೇಷತೆಯನ್ನು ಧನಾತ್ಮಕವಾಗಿ ತಿಳಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ.
ಮೇಷ: ಮಾರ್ಚ್ 21-ಏಪ್ರಿಲ್ 19 : ಇಂದು ನಿಮಗೆ ಸಾಕಷ್ಟು ಕೆಲಸ ಎದುರಾಗಬಹುದು. ಅತಿಯಾದ ಕೆಲಸದಿಂದ ನೀವು ಕೆಲವೊಂದು ಪ್ರಯೋಗಗಳಿಗೂ ಮುಂದಾಗಬಹುದು. ಮಾನಸಿಕ ಒತ್ತಡಗಳಿಂದ ಮುಕ್ತರಾಗೋದು ಒಳಿತು. ಅದೃಷ್ಟದ ಚಿಹ್ನೆ - ಲೋಹದ ಹೂದಾನಿ.
2/ 12
ವೃಷಭ : ಏಪ್ರಿಲ್ 20-ಮೇ 20: ನಿಮ್ಮ ನಿಜವಾದ ಭಾವನೆಗಳು ಹೊರ ಬರುವ ಸಮಯ ಇದೆ. ನಿಮ್ಮ ಪ್ರಮಾಣಿಕ ಅನಿಸಿಕೆಗಳನ್ನು ಮತ್ತೊಬ್ಬರೊಂದಿಗೆ ಹಂಚಿಕೊಳ್ಳಲು ಮುಂದಾಗುತ್ತೀರಿ. ನೀವು ಮಾಡಿರುವ ಒಳ್ಳೆಯ ಕೆಲಸ ನಿಮ್ಮ ಸಹಾಯಕ್ಕೆ ಬರುತ್ತದೆ. ಅದೃಷ್ಟದ ಚಿಹ್ನೆ - ಮಾರಿಗೋಲ್ಡ್ ಹೂವುಗಳು.
3/ 12
ಮಿಥುನ : ಮೇ 21- ಜೂನ್ 21 : ಪಾಲುದಾರಿಕೆ ಪ್ರಸ್ತಾವನೆ ನಿಮಗೆ ಲಾಭವನ್ನು ತರಬಹುದು. ಬೆಳಗ್ಗೆ ಕೊಂಚ ಗಡಿಬಿಡಿ ಇದ್ದರೂ ಸಂಜೆ ವೇಳೆಗೆ ಎಲ್ಲೂ ಶಾಂತವಾಗುತ್ತದೆ. ಒಂದೊಳ್ಳೆ ಆಲೋಚನೆ ರೂಪಗೊಳ್ಳುತ್ತದೆ. ಅದೃಷ್ಟದ ಚಿಹ್ನೆ: ಗಿಫ್ಟ್ ಬಾಕ್ಸ್.
4/ 12
ಕಟಕ : ಜೂನ್ 22- ಜುಲೈ 22 : ನಿಮ್ಮ ಕೆಲಸವನ್ನು ಗುರುತಿಸುತ್ತಾರೆ. ಇದರಿಂದ ನಿಮ್ಮಲ್ಲಿ ಅನೇಕ ಐಡಿಯಾಗಳು ಬರಬಹುದು. ಅವು ಭವಿಷ್ಯದಲ್ಲಿ ನಿಮ್ಮನ್ನು ಉದ್ಯಮಿ ಆಗಲು ಪ್ರೇರೇಪಿಸಬಹುದು. ಅದೃಷ್ಟದ ಚಿಹ್ನೆ: ಗಿಳಿ.
5/ 12
ಸಿಂಹ : ಜುಲೈ 23- ಆಗಸ್ಟ್ 22 : ನೀವು ಇಂದು ಭೇಟಿಯಾಗುವ ವ್ಯಕ್ತಿ ನಿಮಗೆ ಗುರು ಆಗಬಹುದು, ಇಲ್ಲವೇ ಅವರು ನಿಮ್ಮ ಮೇಲೆ ಪ್ರಭಾವ ಬೀರಬಹುದು. ಮನೆಯಲ್ಲಿನ ಕೆಲ ಸಮಯಗಳು ನಿಮ್ಮ ಮನದಲ್ಲಿ ಇಡೀ ದಿನ ಸುಳಿಯುತ್ತವೆ. ಸಮಯ ಹೊಂದಾಣಿಕೆ ಕಷ್ಟವಾಗುತ್ತದೆ. ಅದೃಷ್ಟದ ಚಿಹ್ನೆ: ಉದ್ಯಾನವನ.
6/ 12
ಕನ್ಯಾ : ಆಗಸ್ಟ್ 23-ಸೆಪ್ಟೆಂಬರ್ 22 : ಇಂದು ನಿಮ್ಮ ಪಾಲಿಗೆ ಅಷ್ಟೇನು ಒಳ್ಳೆಯ ದಿನವಾಗಿಲ್ಲ. ಆದರೆ ಮಧ್ಯಾಹ್ನನ ನಂತರ ಪರಿಸ್ಥಿತಿ ಕೊಂಚ ತಿಳಿಯಾಗುವ ನಿರೀಕ್ಷೆ ಇದೆ. ಅದೃಷ್ಟದ ಚಿಹ್ನೆ - ಬೆಳ್ಳಿಯ ಚಮಚ.
7/ 12
ತುಲಾ: ಸೆಪ್ಟೆಂಬರ್ 23- ಅಕ್ಟೋಬರ್ 23 : ಸಣ್ಣಪುಟ್ಟ ವಿಷಯಗಳ ಸಂಬಂಧ ಅನಗತ್ಯವಾಗಿ ಒತ್ತಡಕ್ಕೆ ಒಳಗಾವುದನ್ನು ತಪ್ಪಿಸಿ. ನಿಮ್ಮ ಸಂಗಾತಿಯ ಸಲಹೆಯನ್ನು ಸ್ವೀಕರಿಸುವುದರಿಂದ ಒಳಿತಾಗಲಿದೆ. ಅದೃಷ್ಟದ ಚಿಹ್ನೆ: ಮಲ್ಟಿ ಕಲರ್ ಕಾರ್ಪೆಟ್.
8/ 12
ವೃಶ್ಚಿಕ : ಅಕ್ಟೋಬರ್ 24 - ನವೆಂಬರ್ 21 : ನಿಮ್ಮ ಮನಸ್ಸನ್ನು ಸೆಳೆದಿರುವ ವ್ಯಕ್ತಿ ಇಂದು ನಿಮ್ಮನ್ನು ಭೇಟಿಯಾಗಲಿದ್ದಾರೆ. ಮುಂದಿನ ದಿನಗಳಲ್ಲಿ ನಿಮ್ಮ ಮೇಲೆ ಹೆಚ್ಚಿನ ಕೆಲಸದ ಒತ್ತಡ ಬೀಳುವ ಸಾಧ್ಯತೆ ಇದೆ. ಅದೃಷ್ಟದ ಚಿಹ್ನೆ: alarm clock.
9/ 12
ಧನು ರಾಶಿ: ನವೆಂಬರ್ 22 – ಡಿಸೆಂಬರ್ 21 : ಸೋಮಾರಿತನದಿಂದ ಹೊರ ಬರುವುದು ಉತ್ತಮ. ಸುಲಭವಾಗಿರೋದನ್ನು ಮಾತ್ರ ಮಾಡುವ ಮನಸ್ಥಿತಿಯನ್ನು ಹತ್ತಿಕ್ಕಿ. ಅದೃಷ್ಟದ ಚಿಹ್ನೆ: ಹೂವಿನ ಚಿತ್ತಾರ.
10/ 12
ಮಕರ : ಡಿಸೆಂಬರ್ 22 - ಜನವರಿ 19 : ವಿಳಂಬಗಳು ಮತ್ತು ಮುಂದೂಡಿಕೆಗಳಲ್ಲೇ ದಿನ ಕಳೆದು ಹೋಗಲಿದೆ. ನೀವು ಒಂದೆರಡು ಪ್ರಮುಖ ಕಾರ್ಯಗಳನ್ನು ಮರುಹೊಂದಿಸಬೇಕಾಗಬಹುದು. ಹೊಸ ನಿಯಮಗಳನ್ನು ಅನುಸರಿಸಲು ಲಾಭದಾಯಕವಾಗಿ ಕಾಣಿಸುವುದಿಲ್ಲ. ಅದೃಷ್ಟದ ಚಿಹ್ನೆ: ಹಣ್ಣಿನ ಬುಟ್ಟಿ.
11/ 12
ಕುಂಭ : ಜನವರಿ 20- ಫೆಬ್ರವರಿ 18: ದಿನವು ನಿಧಾನಗತಿಯಲ್ಲಿದೆ ಎಂದು ತೋರುತ್ತದೆ. ನೀವು ಕೆಲವು ವಿಶೇಷ ಸಂದರ್ಭಗಳಿಗಾಗಿ ಸ್ಥಳವನ್ನು ಕಾಯ್ದಿರಿಸಲು ಯೋಜಿಸುತ್ತಿದ್ದರೆ, ಇದೀಗ ಒಳ್ಳೆಯ ಸಮಯ. ಅದೃಷ್ಟದ ಚಿಹ್ನೆ - ಗಾಜಿನ ಬೌಲ್.
12/ 12
ಮೀನ : ಫೆಬ್ರವರಿ 19 - ಮಾರ್ಚ್ 20 : ಹಳೆಯ ಘಟನೆಯ ನೆನಪು ನಿಮ್ಮನ್ನು ಭಾವುಕರನ್ನಾಗಿ ಮಾಡಬಹುದು. ಶೀಘ್ರದಲ್ಲೇ ಸ್ನೇಹಿತರೊಂದಿಗೆ ರೋಡ್ ಟ್ರಿಪ್ ಗೆ ಹೋಗಲು ಯೋಚಿಸುತ್ತೀರಿ. ಕೆಲಸದಲ್ಲಿ ಆಂತರಿಕವಾಗಿ ಸ್ಪಷ್ಟವಾದ ಸಂವಹನವನ್ನು ಇರಿಸಿಕೊಳ್ಳಿ. ಅದೃಷ್ಟದ ಚಿಹ್ನೆ: ಹಳೆಯ ಫೋಟೋ.