Horoscope Today 22 December 2022: ಈ ರಾಶಿಯವರು ಇಂದು ಹೊಸ ಕೆಲಸ ಆರಂಭ ಮಾಡಬೇಡಿ, ನಿಮ್ಮ ದಿನಭವಿಷ್ಯ ಹೀಗಿದೆ
Horoscope Today 22 December 2022: ಇಂದು ಶುಭಕೃತ್ ನಾಮ ಸಂವತ್ಸರ ದಕ್ಷಿಣಾಯನ ಹೇಮಂತ ಋತು ಸೌರಮಾಸ ಧನು ಚಾಂದ್ರ ಮಾಸ ಮಾರ್ಗಶಿರ ಕೃಷ್ಣಪಕ್ಷ ಚತುರ್ದಶಿ ಜ್ಯೇಷ್ಠ ನಕ್ಷತ್ರ ಶೂಲ ಯೋಗ ವಿಸ್ತಿ ಕರಣ ಗುರುವಾರ ಆಗಿದೆ. ಈ ದಿನ ರಾಹುಕಾಲ 4. 42 ಪಿಎಂ ನಿಂದ 6. 07ಪಿಎಂ ವರೆಗೆ, ಗುಳಿಕಕಾಲ 3.17pm ನಿಂದ 4.42pm ವರೆಗೆ, ಯಮಗಂಡಕಾಲ 12. 27pm ನಿಂದ 1.52pm ವರೆಗೆ . ಹಾಗೆಯೇ. ಸೂರ್ಯೋದಯ 6.47am ಸೂರ್ಯಾಸ್ತ 6.07pm, ಚಂದ್ರೋದಯ 8.41am ಚಂದ್ರಾಸ್ತ 8.20pm ಆಗಿದೆ. ಇನ್ನು ಸುಧಾಮ ಎಚ್.ಎಸ್. ಇವರು ಇಂದಿನ ರಾಶಿ ಭವಿಷ್ಯವನ್ನು ನೀಡಿರುತ್ತಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.
ಮೇಷ ರಾಶಿ: ಈ ದಿನ ವ್ಯಾಪಾರವನ್ನು ವಿಸ್ತರಿಸಲು ನೀವು ಸಾಲವನ್ನು ತೆಗೆದುಕೊಳ್ಳಬಹುದು. ಅಲ್ಲದೇ ಈ ದಿನ ನೀವು ಯಶಸ್ಸನ್ನು ಪಡೆಯುತ್ತೀರಿ ಸಂತೋಷದ ಭಾವನೆ ಇರುತ್ತದೆ.
2/ 12
ವೃಷಭ ರಾಶಿ: ಸಂಗಾತಿಯ ಕಡೆಗೆ ಪ್ರೀತಿ ಹೆಚ್ಚಾಗುತ್ತದೆ. ವ್ಯಾಪಾರದ ಉದ್ದೇಶದಿಂದ ಪ್ರವಾಸ ಕೈಗೊಳ್ಳಬೇಕಾಗುತ್ತದೆ. ಈ ದಿನ ನಿಮಗೆ ಶುಭವಾಗಿರುತ್ತದೆ.
3/ 12
ಮಿಥುನ ರಾಶಿ: ಇಂದು ನೀವು ಹೊಸ ಕೆಲಸವನ್ನು ಪ್ರಾರಂಭಿಸಬೇಡಿ. ಹಣಕ್ಕೆ ಸಂಬಂಧಿಸಿದ ಚಿಂತೆಗಳು ನಿಮ್ಮನ್ನು ತೊಂದರೆಗೊಳಿಸಬಹುದು. ವ್ಯಾಪಾರದಲ್ಲಿ ಸ್ವಲ್ಪ ನಷ್ಟ ಉಂಟಾಗಬಹುದು
4/ 12
ಕರ್ಕಾಟಕ ರಾಶಿ: ಕೆಲಸದ ಸ್ಥಳದಲ್ಲಿ ದೊಡ್ಡ ಯೋಜನೆ ಪ್ಲ್ಯಾನ್ ಮಾಡಬಹುದು. ಸ್ನೇಹಿತರು ನಿಮ್ಮ ಬೆನ್ನೆಲುಬಾಗಿ ನಿಲ್ಲುತ್ತಾರೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸನ್ನು ಗಳಿಸುತ್ತಾರೆ
5/ 12
ಸಿಂಹ ರಾಶಿ: ಮನೆಯಲ್ಲಿ ಸಂತಸದ ವಾತಾವರಣ ಇರುತ್ತದೆ. ನೀವು ಕುಟುಂಬ ಮತ್ತು ಕೆಲಸದ ನಡುವೆ ಸಮತೋಲನವನ್ನು ಕಾಪಾಡಿಕೊಳ್ಳುವುದು ಮುಖ್ಯ.
6/ 12
ಕನ್ಯಾ ರಾಶಿ: ಹಳೆಯ ಹೂಡಿಕೆಯಿಂದ ಹಣವನ್ನು ಪಡೆಯುತ್ತೀರಿ. ಹೊಸ ವಾಹನವನ್ನು ಖರೀದಿಸುವ ಯೋಚನೆ ಮಾಡಬಹುದು
7/ 12
ತುಲಾ ರಾಶಿ: ಪ್ರಯಾಣವು ನಿಮ್ಮನ್ನು ಬಹಳ ಆಯಾಸಗೊಳಿಸಬಹುದು. ಹೊಸ ಆದಾಯದ ಮೂಲವನ್ನು ಸೃಷ್ಟಿಯಾಗುವ ಸಾಧ್ಯತೆ ಇದೆ.
8/ 12
ವೃಶ್ಚಿಕ ರಾಶಿ: ಆನ್ಲೈನ್ ವ್ಯಾಪಾರಿಗಳು ಪಾವತಿಯ ಬಗ್ಗೆ ಜಾಗರೂಕರಾಗಿರಬೇಕು. ಹೊಸ ವ್ಯವಹಾರವನ್ನು ಪ್ರಾರಂಭಿಸುವಲ್ಲಿ ನೀವು ಯಶಸ್ವಿಯಾಗುತ್ತೀರಿ.
9/ 12
ಧನು ರಾಶಿ: ವೈಯಕ್ತಿಕ ಸಮಸ್ಯೆಗಳು ಇಂದು ಬಗೆಹರಿಯುತ್ತವೆ. ಆದರೂ ನಿಮ್ಮ ಆತ್ಮವಿಶ್ವಾಸ ಕಡಿಮೆ ಆಗಬಹುದು. ಎದೆಗುಂದಬೇಡಿ. ಧೈರ್ಯವಾಗಿರುವುದು ಮುಖ್ಯ.
10/ 12
ಮಕರ ರಾಶಿ: ಕೆಲಸಕ್ಕೆ ಸಂಬಂಧಿಸಿದಂತೆ ನೀವು ಗುರಿಯನ್ನು ತಲುಪುತ್ತೀರಿ. ನಿಮ್ಮ ದಿನ ತುಂಬಾ ಅನುಕೂಲಕರವಾಗಿರುತ್ತದೆ.
11/ 12
ಕುಂಭ: ಬುದ್ಧಿವಂತರ ಸಲಹೆಯಿಂದ ಹೆಚ್ಚಿನ ಲಾಭಗಳಿಸುತ್ತೀರಿ. ನಿಮ್ಮ ಜೀವನ ಶೈಲಿಯನ್ನು ಸುಧಾರಿಸಿಕೊಳ್ಳಬೇಕು.
12/ 12
ಮೀನ ರಾಶಿ: ಉದ್ಯೋಗದಲ್ಲಿ ಕಿರಿ ಕಿರಿ ಇರುತ್ತದೆ. ನಿಮ್ಮ ಮಕ್ಕಳ ಯಶಸ್ಸಿನ ಕಡೆಗೆ ಗಮನ ಕೊಡುವುದು ಒಳಿತು.