Horoscope Today, 19 December 2022: ನಿಮ್ಮ ಏಳಿಗೆ ಬಗ್ಗೆ ಆತ್ಮೀಯರೇ ಅಸೂಯೆಪಡಬಹುದು! ಹುಷಾರಾಗಿರಿ ಅಂತಿದೆ ಇಂದಿನ ಜಾತಕಫಲ!
Horoscope Today, 19 December 2022: ಇಂದು ಶುಭ ಕೃತ್ ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಸೌರಮಾಸ, ಧನು, ಚಂದ್ರ ಮಾಸ, ಮಾರ್ಗಶಿರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಸ್ವಾತಿ ನಕ್ಷತ್ರ, ಅತಿಗಂಡ ಯೋಗ, ಬವ ಕರಣ, ಸೋಮವಾರ ಆಗಿರುತ್ತದೆ. ಹಾಗೆಯೇ ರಾಹುಕಾಲ 8.09am ಇಂದ 9.34pm ವರೆಗೆ, ಗುಳಿಕಕಾಲ 1.49pm ಇಂದ 3.14pm ವರೆಗೆ, ಯಮಗಂಡ ಕಾಲ 10.59am ಇಂದ 12.24pm ವರೆಗೆ ಇರಲಿದೆ. ಇಂದು ಸೂರ್ಯೋದಯ 6.44am, ಸೂರ್ಯಾಸ್ತ 6.04pm ಹಾಗೂ ಚಂದ್ರೋದಯ 3.19am, ಚಂದ್ರಾಸ್ತ 2.28pm ಆಗಿರುತ್ತದೆ. ಇನ್ನು ಸುಧಾಮ ಎಚ್.ಎಸ್. ಇವರು ಇಂದಿನ ರಾಶಿ ಭವಿಷ್ಯವನ್ನು ನೀಡಿರುತ್ತಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.
ಮೇಷ ರಾಶಿ: ಇಂದು ನಿಮ್ಮ ಕಚೇರಿಯಲ್ಲಿ ಕೆಲಸ ಹೆಚ್ಚಾಗಬಹುದು. ಆದರೂ ಕೆಲಸದ ದಕ್ಷತೆ ಹೆಚ್ಚಾಗುತ್ತದೆ. ಷೇರು ಮಾರುಕಟ್ಟೆಯಿಂದ ಆರ್ಥಿಕ ಲಾಭ ಆಗುವುದು.
2/ 12
ವೃಷಭ ರಾಶಿ: ನಿಮ್ಮ ವೈವಾಹಿಕ ಜೀವನ ಸುಖಮಯವಾಗಿರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅನುಕೂಲಕರ ಪಲಿತಾಂಶ ದೊರೆಯಲಿದೆ.
3/ 12
ಮಿಥುನ ರಾಶಿ: ನಿಮ್ಮ ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಮನೆಯ ಅಲಂಕಾರಕ್ಕೆ ಹಣ ಖರ್ಚಾಗಬಹುದು. ನೀವಿಂದು ಉದ್ಯೋಗ ಬದಲಾವಣೆಯಲ್ಲಿ ಆಸಕ್ತಿ ಹೊಂದಿರುವಿರಿ.
4/ 12
ಕರ್ಕಾಟಕ ರಾಶಿ: ಇಂದು ನೀವು ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ನಿಮಗೆ ಪೂರ್ವಿಕರ ಆಸ್ತಿ ದೊರೆಯಲಿದೆ. ಜೊತೆಗೆ ಹಿರಿಯರ ಆಶೀರ್ವಾದ ಸಿಗಲಿದೆ.
5/ 12
ಸಿಂಹ ರಾಶಿ: ನೀವಿಂದು ವ್ಯವಹಾರಕ್ಕೆ ಸಂಬಂಧಿಸಿದಂತೆ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಸಹೋದ್ಯೋಗಿಗಳ ಭೇಟಿಯಿಂದ ಮನಸ್ಸು ಸಂತೋಷವಾಗಿರುತ್ತದೆ.
6/ 12
ಕನ್ಯಾ ರಾಶಿ: ಸ್ಥಗಿತಗೊಂಡ ಕೆಲಸವು ಇಂದು ಪೂರ್ಣಗೊಳ್ಳಲಿದೆ. ಆದರೂ ಹಣದ ಕೊರತೆಯಿಂದ ಕೆಲವು ಕೆಲಸ ನಿಲ್ಲಬಹುದು. ನಿಮ್ಮ ಆಹಾರದಲ್ಲಿ ಬದಲಾವಣೆಯನ್ನು ಮಾಡಬೇಕು.
7/ 12
ತುಲಾ ರಾಶಿ: ಕೆಲಸದಲ್ಲಿ ದೊಡ್ಡ ಜವಾಬ್ದಾರಿ ನಿಮ್ಮದಾಗಲಿದೆ. ಹವಾಮಾನದ ತೊಂದರೆಯಿಂದಾಗಿ ಆರೋಗ್ಯ ಕೆಡಬಹುದು, ಜಾಗೃತರಾಗಿರಿ.
8/ 12
ವೃಶ್ಚಿಕ ರಾಶಿ: ಆರೋಗ್ಯದ ಸಮಸ್ಯೆ ಇದ್ದವರಿಗೆ ಆರೋಗ್ಯ ಸುಧಾರಿಸುತ್ತದೆ. ನಿಮಗೆ ಇಂದು ಅನೇಕ ಮೂಲಗಳಿಂದ ಹಣ ದೊರೆಯುವುದು.
9/ 12
ಧನು ರಾಶಿ: ಕೆಲಸದ ಸ್ಥಳದಲ್ಲಿ ನಿಮಗೆ ಅನುಕೂಲಕರ ವಾತಾವರಣ ಇರುತ್ತದೆ. ಭವಿಷ್ಯದ ಯೋಜನೆಗಳನ್ನು ಸ್ನೇಹಿತರೊಂದಿಗೆ ಚರ್ಚಿಸಬಹುದು. ಪೂರ್ವಿಕರ ಆಸ್ತಿ ವಿಷಯಗಳು ಬಗೆ ಹರಿಯಲಿದೆ.
10/ 12
ಮಕರ ರಾಶಿ: ನಿಮ್ಮ ಏಳಿಗೆಯ ಬಗ್ಗೆ ನಿಮ್ಮ ಆತ್ಮೀಯರು ಅಸೂಯೆ ಪಡಬಹುದು. ಆದರೂ ಇಂದು ನೀವು ತಾಳ್ಮೆಯಿಂದಿರಿ. ದೇಹಕ್ಕೆ ಇಂದು ಆಯಾಸ ಆಗುವುದು.
11/ 12
ಕುಂಭ ರಾಶಿ: ಆರ್ಥಿಕ ಪರಿಸ್ಥಿತಿ ಸ್ವಲ್ಪ ದುರ್ಬಲವಾಗಿರುತ್ತದೆ. ಆದರೆ ನಿಮಗೆ ನಿಮ್ಮ ಸ್ನೇಹಿತರು ಬೆಂಬಲವಾಗಿ ನಿಲ್ಲುತ್ತಾರೆ. ವ್ಯವಹಾರದ ನಿರ್ಧಾರವನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಿ.
12/ 12
ಮೀನ ರಾಶಿ: ಅನುಭವಿಗಳ ಸಲಹೆಯನ್ನು ಪಡೆಯುವುದು ತುಂಬಾ ಒಳ್ಳೆಯದು. ತಂತ್ರಜ್ಞಾನಕ್ಕೆ ಸಂಬಂಧಿಸಿದ ಜನರಿಗೆ ದಿನವೂ ತುಂಬಾ ಅನುಕೂಲಕರವಾಗಿರುತ್ತದೆ.