Daily Horoscope: ಹೊಸ ಅವಕಾಶವೊಂದು ಹುಡುಕಿ ಬರಲಿದೆ, ವಿವಿಧ ರಾಶಿಗಳ ದಿನ ಭವಿಷ್ಯ ಹೀಗಿದೆ
ಸಿತಾರಾ ಹೆಸರಿನ ವೆಲ್ನೆಸ್ ಸ್ಟುಡಿಯೋ (Sitara Wellness Studio) ವೆಬ್ಸೈಟ್ ಅನ್ನು ನಡೆಸುತ್ತಿರುವ ಪೂಜಾ ಚಂದ್ರ (Puja Chandra) ಆಧ್ಯಾತ್ಮಿಕ ನೆಲೆಯಲ್ಲಿ ಜೀವನದ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಿದ್ದಾರೆ. ಹರೆಯದಿಂದಲೂ ರಾಶಿ ಭವಿಷ್ಯ, ಆಧ್ಯಾತ್ಮಿಕತೆಗೆ ಒತ್ತು ನೀಡುತ್ತಾ ಬಂದಿರುವ ಇವರು ಹೀಲಿಂಗ್ ಸೆಶನ್ಗಳನ್ನು ಕೂಡ ನಡೆಸುತ್ತಾರೆ. ರಾಶಿ ಭವಿಷ್ಯಗಳನ್ನು ಮಾಹಿತಿಪೂರ್ಣವಾಗಿ ತಿಳಿಸುವುದರಲ್ಲೂ ನಿಷ್ಣಾತರಾಗಿರುವ ಇವರು ರಾಶಿಯ ವಿಶೇಷತೆಯನ್ನು ಧನಾತ್ಮಕವಾಗಿ ತಿಳಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ
ಮೇಷ ನಿಮ್ಮ ತಲೆಯಲ್ಲಿರುವ ಹೊಸ ವಿಚಾರ ಸದ್ಯ ಬೆರೆ ಎಲ್ಲಾ ವಿಚಾರಗಳನ್ನು ಹಿಂದಿಕ್ಕಬಹುದು. ಕೇವಲ ಒಂದು ಕೆಲಸಕ್ಕೆ ಹೆಚ್ಚಿನ ಮನ್ನಣೆ ನೀಡುವ ಸಾಧ್ಯತೆ ಇದೆ. ನಿಮ್ಮ ಪ್ರೀತಿ-ಪಾತ್ರರ ಜೊತೆ ಇಂದು ಸಮಯ ಕಳೆಯುವುದರಿಂದ ಮಾನಸಿಕ ಒತ್ತಡ ನಿವಾರಣೆಯಾಗುತ್ತದೆ. ಅದೃಷ್ಟದ ಚಿಹ್ನೆ: ಸೂರ್ಯಕಾಂತಿ ಹೂವು
2/ 12
ವೃಷಭ ನೀವು ಹುಡುಕಾಟ ಮಾಡದೇ ಇದ್ದರೂ ಸಹ ಹೊಸ ಅವಕಾಶವೊಂದು ನಿಮ್ಮ ಗಮನಸೆಳೆಯಲಿದೆ. ಈ ದಿನ ನೀವು ಬಹುತೇಕ ಸಮಯವನ್ನು ಒಂಟಿಯಾಗಿ ಕಳೆಯುವ ಸಾಧ್ಯತೆ ಇದೆ. ಹಾಗೆಯೇ ಹಣ ಉಳಿಸುವ ಯೋಜನೆಯ ಬಗ್ಗೆ ಆಸಕ್ತಿ ಹೆಚ್ಚಾಗುತ್ತದೆ. ಅದೃಷ್ಟ ಚಿಹ್ನೆ: ಹಳದಿ ಮೇಣದ ಬತ್ತಿ
3/ 12
ಮಿಥುನ ನಿಮಗೆ ಹೇಳದೇ ಸಡನ್ ಆಗಿ ಹಳೆಯ ಸ್ನೇಹಿತರು ಅಥವಾ ಸಹೋದ್ಯೋಗಿಗಳು ನಿಮ್ಮ ಭೇಟಿಗೆ ಬರಬಹುದು. ಒಂದೇ ಸಮಯದಲ್ಲಿ ಹಲವು ಕೆಲಸಗಳು ಸ್ವಲ್ಪ ಗೊಂದಲ ಉಂಟುಮಾಡುತ್ತದೆ. ತುಂಬಾ ವೇಗವಾಗಿ ವಾಹನ ಚಾಲನೆ ಮಾಡಬೇಡಿ. ಅದೃಷ್ಟದ ಚಿಹ್ನೆ: ಬುದ್ಧನ ವಿಗ್ರಹ
4/ 12
ಕಟಕ ನಿಮ್ಮ ಆತ್ಮವಿಶ್ವಾಸ ಇಂದು ಹೆಚ್ಚಾಗಲಿದೆ ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಕೆಲ ದಿನಗಳ ಹಿಂದೆ ಹೂಡಿಕೆ ಮಾಡಿದ್ದ ಹಣಕ್ಕೆ ಈಗ ಪ್ರತಿಫಲ ಸಿಗುತ್ತದೆ. ಅದೃಷ್ಟದ ಚಿಹ್ನೆ: ಗಿಟಾರ್
5/ 12
ಸಿಂಹ ಇಂದು ನಿಮ್ಮ ವ್ಯಕ್ತಿತ್ವದಲ್ಲಿ ಮಾತ್ರವಲ್ಲದೇ ಸುತ್ತ ಮುತ್ತಲೂ ಹಲವಾರು ಬದಲಾವಣೆಗಳು ಆಗಲಿದೆ. ನಿಮ್ಮ ಗೆಳೆಯರಿಂದ ಸಿಗುವ ಉತ್ತಮ ಬೆಂಬಲವು ಧೈರ್ಯವನ್ನು ಹೆಚ್ಚಿಸುತ್ತದೆ. ಉಳಿದ ಕೆಲಸಗಳ ಬಗ್ಗೆ ಗಂಭೀರವಾದ ನಿರ್ಧಾರ ತೆಗೆದುಕೊಳ್ಳುವುದು ಮುಖ್ಯ. ಅದೃಷ್ಟದ ಚಿಹ್ನೆ: ಏಣಿ
6/ 12
ಕನ್ಯಾ: ಗೊಂದಲದ ಗೂಡಾಗಿದ್ದ ನಿಮಗೆ ಸ್ವಲ್ಪ ಭರವಸೆಯ ಬೆಳಕೊಂದು ಕಾಣಿಸುತ್ತದೆ. ಆದರೂ ಸಹ ಸ್ವಲ್ಪ ಒತ್ತಡ ಉಂಟಾಗಬಹುದು. ಟ್ರಿಪ್ ಪ್ಲ್ಯಾನ್ ಮಾಡಿ. ಅದೃಷ್ಟದ ಚಿಹ್ನೆ: ಕತ್ತರಿ
7/ 12
ತುಲಾ ನೀವು ಕೆಲವೊಂದು ವಿಚಾರಗಳನ್ನು ಈಗ ಚರ್ಚೆ ಮಾಡುವುದು ಅನಗತ್ಯ. ನಿಮ್ಮ ಕುಟುಂಬದ ಸದಸ್ಯರಿಂದ ಬಂದ ಸಲಹೆಯನ್ನು ಕೇಳುವುದು ಉತ್ತಮ. ಹೊಸ ವಾಹನ ಖರೀದಿಯ ಬಗ್ಗೆ ಚಿಂತನೆ ಮಾಡುವ ಸಾಧ್ಯತೆ ಇದೆ. ಅದೃಷ್ಟದ ಚಿಹ್ನೆ: ಫೋಟೋ
8/ 12
ವೃಶ್ಚಿಕ ಕೆಲವೊಂದು ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವುದಿಲ್ಲ. ಯಾವುದೇ ವ್ಯಕ್ತಿಯನ್ನು ಪ್ರಶ್ನೆ ಮಾಡುವಾಗ ಸ್ವಲ್ಪ ಯೋಚನೆ ಮಾಡಿ ಪದ ಬಳಸಿ. ಕೆಲ ವಿಚಾರಗಳು ಚಿಂತೆಗೀಡು ಮಾಡಬಹುದು. ಅದೃಷ್ಟದ ಚಿಹ್ನೆ-ಕಪ್ಪು ಡೈರಿ
9/ 12
ಧನುಸ್ಸು ಕೆಲ ವಿಚಾರಗಳನ್ನು ನಿರ್ವಹಿಸುವುದು ಕಷ್ಟಕರ ಅನಿಸುತ್ತದೆ. ಆರ್ಥಿಕವಾಗಿ ಕೆಲ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಇದೆ. ನಿಮ್ಮ ಮಗುವಿಗೆ ನಿಮ್ಮ ಸಹಾಯದ ಅವಶ್ಯಕತೆ ಇದೆ. ಅದೃಷ್ಟದ ಚಿಹ್ನೆ: ನೀಲಿ ಸ್ಫಟಿಕ
10/ 12
ಮಕರ ನಿಮಗೆ ಸಮಯ ಸಾಕಾಗುತ್ತಿಲ್ಲ ಅಂತ ಅನಿಸಬಹುದು. ಆದರೆ, ನಿಮಗಾಗಿ ಸ್ವಲ್ಪ ಸಮಯ ಮೀಸಲಿಡುವುದು ಅಗತ್ಯ. ನಿಮಗೆ ಸಾವಿರ ಜನರ ಮಧ್ಯೆ ಕಳೆದುಹೋದಂತೆ ಭಾಸವಾಗಬಹುದು. ಧ್ಯಾನ ಮಾಡಿ ಸಾಕು. ಅದೃಷ್ಟದ ಚಿಹ್ನೆ: ಟೀ ಕಪ್
11/ 12
ಕುಂಭ ಯಾವುದೋ ಒಂದು ದೈವಿಕ ಶಕ್ತಿ ನಿಮಗೆ ದಿನವನ್ನು ಆರಂಭಿಸಲು ಸಹಾಯ ಮಾಡುತ್ತದೆ. ನಿಮ್ಮ ಇಂದು ಗಮನ ಬೇರೆಡೆ ಹರಿಯುವ ಸಾಧ್ಯತೆ ಇದೆ. ಶಾಪಿಂಗ್ ಮಾಡಿ, ರಿಲ್ಯಾಕ್ಸ್ ಆಗಿ.ಅದೃಷ್ಟದ ಚಿಹ್ನೆ: ಚೆಸ್ ಬೋರ್ಡ್
12/ 12
ಮೀನ ಪೋಷಕರ ಜೊತೆ ವಾದ ವಿವಾದಗಳು ಉಂಟಾಗುವ ಸಾಧ್ಯತೆ ಇದೆ. ನಿಮಗೆ ಹತ್ತಿರವಾಗಿದ್ದ ವ್ಯಕ್ತಿಯೊಬ್ಬರು ನಿಮ್ಮನ್ನ ನೆಗ್ಲೆಕ್ಟ್ ಮಾಡುವ ಸಾಧ್ಯತೆ ಇದೆ. ಕೊನೆಯ ಕ್ಷಣದ ಒಂದು ನಿರ್ಧಾರ ನಿಮಗೆ ಸಹಾಯ ಮಾಡುತ್ತದೆ. ಅದೃಷ್ಟದ ಚಿಹ್ನೆ: ಬುಕ್