Daily Horoscope: ಈ ರಾಶಿಯವರಿಗೆ ಇಂದು ಮದುವೆ ಆಫರ್ ಬರುವ ಸಾಧ್ಯತೆ! ನಿಮ್ಮ ದಿನಭವಿಷ್ಯ ಹೀಗಿದೆ
ಸಿತಾರಾ ಹೆಸರಿನ ವೆಲ್ನೆಸ್ ಸ್ಟುಡಿಯೋ (Sitara Wellness Studio) ವೆಬ್ಸೈಟ್ ಅನ್ನು ನಡೆಸುತ್ತಿರುವ ಪೂಜಾ ಚಂದ್ರ (Puja Chandra) ಆಧ್ಯಾತ್ಮಿಕ ನೆಲೆಯಲ್ಲಿ ಜೀವನದ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಿದ್ದಾರೆ. ಹರೆಯದಿಂದಲೂ ರಾಶಿ ಭವಿಷ್ಯ, ಆಧ್ಯಾತ್ಮಿಕತೆಗೆ ಒತ್ತು ನೀಡುತ್ತಾ ಬಂದಿರುವ ಇವರು ಹೀಲಿಂಗ್ ಸೆಶನ್ಗಳನ್ನು ಕೂಡ ನಡೆಸುತ್ತಾರೆ. ರಾಶಿ ಭವಿಷ್ಯಗಳನ್ನು ಮಾಹಿತಿಪೂರ್ಣವಾಗಿ ತಿಳಿಸುವುದರಲ್ಲೂ ನಿಷ್ಣಾತರಾಗಿರುವ ಇವರು ರಾಶಿಯ ವಿಶೇಷತೆಯನ್ನು ಧನಾತ್ಮಕವಾಗಿ ತಿಳಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ
ಮೇಷ ನಿಮ್ಮ ಸುತ್ತಲು ಗೊಂದಲಗಳು ತುಂಬಿಕೊಂಡಿದೆ ಎಂದು ನಿಮಗೆ ಅನಿಸುತ್ತದೆ. ಬೇರೆಯವರ ಗಮನ ಸೆಳೆಯಲು ಹೊಸ ಮಾರ್ಗವನ್ನು ಹುಡುಕಬೇಕಾಗುತ್ತದೆ. ನಿಮ್ಮ ಜನ ತಪ್ಪಾಗಿ ಅರ್ಥ ಮಾಡಿಕೊಳ್ಳುವ ಸಾಧ್ಯತೆ ಇದೆ. ಸ್ವಲ್ಪ ಎಚ್ಚರಿಕೆಯಿಂದ ಮಾತನಾಡಿ. ಅದೃಷ್ಟದ ಚಿಹ್ನೆ: ಟೆಕ್ನಿಕಲರ್ ಫೋಟೋ
2/ 12
ವೃಷಭ ನಿಮ್ಮ ಹಳೆಯ ಸ್ನೇಹಿತರು ಮರಳಿ ಬರಲು ಹೊಸ ತಂತ್ರದ ಬಗ್ಗೆ ಯೋಚಿಸಬಹುದು. ನೀವು ಹೊಸ ಉದ್ಯೋಗವನ್ನು ಹುಡುಕುತ್ತಿದ್ದರೆ, ಬಹು ಬೇಗ ನಿರ್ಧಾರ ಮಾಡುವುದು ನಿಮಗೆ ಉತ್ತಮ. ಅದೃಷ್ಟದ ಚಿಹ್ನೆ: ಕಾರ್ಡ್ಬೋರ್ಡ್
3/ 12
ಮಿಥುನ ಈ ದಿನ ಬಹಳ ಉತ್ಸಾಹಭರಿತವಾಗಿರುತ್ತದೆ. ಆದರೆ ಹೆಚ್ಚಿನ ಪ್ರಯತ್ನ ಅಗತ್ಯವಿದೆ. ಆರೋಗ್ಯದ ವಿಚಾರದಲ್ಲಿ ಸ್ವಲ್ಪ ಎಚ್ಚರಿಕೆ. ನಿಮ್ಮ ಸಂಗಾತಿಯು ಕೊಡುವ ಒಂದು ವ್ಯಾಪಾರದ ಸಲಹೆ ನಿಮಗೆ ಲಾಭದಾಯಕವಾಗುತ್ತದೆ. ಅದೃಷ್ಟದ ಚಿಹ್ನೆ: ಒಂದು ಗೊಂಬೆ
4/ 12
ಕಟಕ ಹೊಸ ಆಲೋಚನೆಗಳು ನಿಮ್ಮ ಮನಸ್ಸಿನಲ್ಲಿ ತುಂಬಿಕೊಂಡು ಗೊಂದಲ ಸೃಷ್ಟಿಯಾಗಿದೆ. ದಿಕ್ಕು ತೋಚದ ಪರಿಸ್ಥಿತಿಯಂತಾಗಿದೆ. ಹಿರಿಯ ಸಲಹೆ ಪಡೆಯುವುದು ಸಹಾಯಕವಾಗಬಹುದು. ಸಂಗಾತಿಯ ಬಳಿ ನಿಮ್ಮ ಮನಸ್ಸಿನ ಭಾವನೆ ಹೇಳಿಕೊಳ್ಳಿ. ಅದೃಷ್ಟದ ಚಿಹ್ನೆ – ಹಳೆಯ ಲೇಖನ
5/ 12
ಸಿಂಹ ನಿಮ್ಮ ಸುತ್ತಲಿರುವ ಕೆಲವರಿಗೆ ನೀವು ಕಿರಿಕಿರಿ ಉಂಟುಮಾಡಿರಬಹುದು. ನಿಮ್ಮ ಉದ್ದೇಶ ಒಳ್ಳೆಯದಿದ್ದರೂ ಸಹ ಅವರಿಗೆ ತಿಳಿಸುವ ವಿಧಾನದಲ್ಲಿ ಬದಲಾವಣೆ ಮಾಡಿಕೊಳ್ಳುವ ಅಗತ್ಯವಿದೆ. ಅದೃಷ್ಟದ ಚಿಹ್ನೆ: ರೋಲರ್
6/ 12
ಕನ್ಯಾ ಹಿಂದಿನ ಕೆಲವು ನಿರ್ಧಾರಗಳು ಹೊಸ ವಿಧಾನಕ್ಕೆ ಸರಿಹೊಂದುವುದಿಲ್ಲ. ಕೆಲ ವಿಚಾರಗಳಲ್ಲಿ ಸ್ಪಷ್ಟತೆ ಸಿಗುವುದು ಕಷ್ಟವಾಗುತ್ತದೆ. ನಿಮಗೆ ಗೊಂದಲವಿದ್ದರೆ, ಆ ವಿಚಾರವನ್ನು ಅಲ್ಲಿಗೆ ಬಿಟ್ಟುಬಿಡುವುದು ಸೂಕ್ತ. ಆರ್ಥಿಕ ಪ್ರಗತಿಯ ಸಾಧ್ಯತೆ ಇದೆ. ಅದೃಷ್ಟದ ಚಿಹ್ನೆ: ಜೇನು
7/ 12
ತುಲಾ ನಿಮ್ಮ ಕೆಲಸ ಎಲ್ಲರ ಮೆಚ್ಚುಗೆಗೆ ಪಾತ್ರವಾಗಬಹುದು. ನಿಮ್ಮ ಆಸಕ್ತಿಯ ಅನುಸಾರ ನಿಮಗೆ ಹೊಸ ಅವಕಾಶ ಸಿಗುತ್ತದೆ. ನಿಮ್ಮ ವ್ಯಕ್ತಿತ್ವದಲ್ಲಿ ಬದಲಾವಣೆ ಆಗಬಹುದು. ಅದೃಷ್ಟದ ಚಿಹ್ನೆ - ಕೆಂಪು ಹೂವು
8/ 12
ವೃಶ್ಚಿಕ ನಿಮ್ಮ ಆಯ್ಕೆಯ ಬಗ್ಗೆ ನಿಮಗೆ ವಿಶ್ವಾಸವಿದ್ದರೂ ಸ, ಬೇರೆಯವರು ಒಪ್ಪುವಂತೆ ನೋಡಿಕೊಳ್ಳುವುದು ನಿಮಗೆ ಅಗತ್ಯ. ಕೆಲಸದಲ್ಲಿ ಸ್ವಲ್ಪ ಕಿರಿಕಿರಿ ಉಂಟಾಗಬಹುದು. ಮೇಲಾಧಿಕಾರಿಯಿಂದ ಬರುವ ಕೆಲ ಮಾತಿಗೆ ತಲೆಕೆಡಿಸಿಕೊಳ್ಳಬೇಡಿ. ಅದೃಷ್ಟದ ಚಿಹ್ನೆ - ನಿಮ್ಮ ಫೇವರೇಟ್ ಸ್ವೀಟ್
9/ 12
ಧನುಸ್ಸು ನೀವು ಕೆಲ ದಿನಗಳ ಹಿಂದೆ ತೆಗೆದುಕೊಂಡು ಒಂದು ನಿರ್ಧಾರ ಈಗ ಸರಿ ಎನಿಸುತ್ತದೆ. ಸಣ್ಣ ಸಮಸ್ಯೆಗಳು ಬಂದರು ಅದು ಐಸ್ನಂತೆ ಕರಗಿ ಹೋಗುತ್ತದೆ. ಹತ್ತಿರವಿರುವ ಯಾರಾದರೂ ನಿಮ್ಮ ಬಗ್ಗೆ ಮಾಹಿತಿಯನ್ನುಬೇರೆ ಯಾರಿಗಾದರೂ ನೀಡುತ್ತಿರಬಹುದು ಎಚ್ಚರ. ಅದೃಷ್ಟದ ಚಿಹ್ನೆ - ಯಾವುದಾದರು ಸಸ್ಯ
10/ 12
ಮಕರ ನೀವು ಬಹಳ ದಿನಗಳಿಂದ ಮಾಡಬೇಕು ಎಂದುಕೊಂಡಿರುವ ಸಾಹಸವನ್ನು ಇಂದು ಮಾಡಲು ಉತ್ತಮ ಸಮಯ. ವ್ಯಾಪಾರದ ಆರಂಭದಲ್ಲಿ ಉತ್ತಮ ಫಲಿತಾಂಶ ಸಿಗುತ್ತದೆ. ಆಕಸ್ಮಿಕವಾಗಿ ಬಂದ ಮದುವೆಯ ಪ್ರಸ್ತಾಪ ನಿಮಗೆ ಲಾಭದಾಯಕವಾಗುತ್ತದೆ. ಅದೃಷ್ಟದ ಚಿಹ್ನೆ - ಬೆರಿಹಣ್ಣುಗಳು
11/ 12
ಕುಂಭ ಕೆಲವು ಅಗ್ನಿಪರೀಕ್ಷೆಯನ್ನು ಎದುರಾಗುವ ಸಾಧ್ಯತೆ ಇರುತ್ತದೆ. ಕೆಲವರು ನಿಮ್ಮ ಸಹಾಯಕ್ಕೆ ಬರುವ ಸಾಧ್ಯತೆ ಇದೆ. ಮನೆಯಿಂದ ದೂರದಲ್ಲಿ ವಾಸಿಸುತ್ತಿದ್ದರೆ, ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯ ಅವಶ್ಯಕತೆ ಇದೆ. ಅದೃಷ್ಟದ ಚಿಹ್ನೆ - ಹಳದಿ ಮಣ್ಣಿನ ಮಡಕೆ
12/ 12
ಮೀನ ಕೆಲಸದ ವಿಚಾರವಾಗಿ ಸ್ನೇಹಿತರು ಹಾಗೂ ಕುಟುಂಬದವರು ನೀಡುವ ಸಲಹೆ ಪಡೆಯಿರಿ. ಕೆಲಸದ ಮೇಲೆ ನಿಮ್ಮ ಗಮನವನ್ನು ಇಟ್ಟುಕೊಳ್ಳುವುದು ನಿಮಗೆ ಉತ್ತಮ ಫಲಿತಾಂಶವನ್ನು ನೀಡುತ್ತದೆ. ಕೆಲವು ಹೊಸ ಜನರ ಪರಿಚಯವಾಗುವ ಸಾಧ್ಯತೆಯಿದೆ. ಅದೃಷ್ಟದ ಚಿಹ್ನೆ - ರೇಷ್ಮೆ ಬಟ್ಟೆ