Astrology: ಈ ರಾಶಿಯವರಿಗೆ ಆರ್ಥಿಕ ಲಾಭ, ಉಳಿದ ರಾಶಿಗೇನು ಫಲ?
ಸಿತಾರಾ ಹೆಸರಿನ ವೆಲ್ನೆಸ್ ಸ್ಟುಡಿಯೋ (Sitara Wellness Studio) ವೆಬ್ಸೈಟ್ ಅನ್ನು ನಡೆಸುತ್ತಿರುವ ಪೂಜಾ ಚಂದ್ರ (Puja Chandra) ಆಧ್ಯಾತ್ಮಿಕ ನೆಲೆಯಲ್ಲಿ ಜೀವನದ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಿದ್ದಾರೆ. ಹರೆಯದಿಂದಲೂ ರಾಶಿ ಭವಿಷ್ಯ, ಆಧ್ಯಾತ್ಮಿಕತೆಗೆ ಒತ್ತು ನೀಡುತ್ತಾ ಬಂದಿರುವ ಇವರು ಹೀಲಿಂಗ್ ಸೆಶನ್ಗಳನ್ನು ಕೂಡ ನಡೆಸುತ್ತಾರೆ. ರಾಶಿ ಭವಿಷ್ಯಗಳನ್ನು ಮಾಹಿತಿಪೂರ್ಣವಾಗಿ ತಿಳಿಸುವುದರಲ್ಲೂ ನಿಷ್ಣಾತರಾಗಿರುವ ಇವರು ರಾಶಿಯ ವಿಶೇಷತೆಯನ್ನು ಧನಾತ್ಮಕವಾಗಿ ತಿಳಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ.
ಮೇಷ: ನಿಮ್ಮ ಸಾಮರ್ಥ್ಯ ನೀವಂದುಕೊಂಡಕ್ಕಿಂತ ಬಹಳಷ್ಟು ಹೆಚ್ಚಿದೆ. ಬಹಳ ಸುಲಭವೆಂದು ತೋರುವ ಸಮಸ್ಯೆಗಳು ಅನೇಕ ತಿರುವುಗಳೊಂದಿಗೆ ನಿಮ್ಮೆದುರು ಬರಲಿವೆ. ಮನೆಯಲ್ಲಿ ಪೂಜಾ ಸ್ಥಳವನ್ನು ನಿರ್ಮಿಸಿ. ಅದೃಷ್ಟದ ಚಿಹ್ನೆ - ಕನ್ನಡಿ ಚಿತ್ರ
2/ 11
ವೃಷಭ: ನೀವು ಪಾಲಿಸಿಕೊಂಡು ಬಂದ ಮೂಲಭೂತ ಅಂಶಗಳಿಂದ ದೂರ ಸರಿಯದಿರಿ. ಇದರಿಂದ ನೀವು ಪ್ರಗತಿ ಸಾಧಿಸಲು ಒಂದು ವಿಚಾರದ ಬಗ್ಗೆ ಸ್ಪಷ್ಟತೆ ಪಡೆಯಲು ಸಾಧ್ಯವಾಗುತ್ತದೆ. ನಿರ್ಧಾರವನ್ನು ತೆಗೆದುಕೊಳ್ಳಲು ತಡ ಮಾಡಬಹುದು, ನಿಮಗೊಂದು ಉತ್ತಮ ಆಫರ್ ಬರಲಿದೆ. ಅದೃಷ್ಟದ ಚಿಹ್ನೆ - ಬೆಳ್ಳಿಯ ಮೇಣದ ಬತ್ತಿ
3/ 11
ಮಿಥುನ: ನೀವು ಯಾರೊಂದಿಗಾದರೂ ಪಾಲುದಾರರಾಗಲು ಯೋಚಿಸುತ್ತಿದ್ದರೆ ಇದು ಸೂಕ್ತ ಸಮಯ. ನಿಮ್ಮ ಪ್ಲಾನ್ಗಳನ್ನು ದೊಡ್ಡ ವೇದಿಕೆಯಲ್ಲಿ ಎಲ್ಲರೊಂದಿಗೆ ಹಂಚಿಕೊಳ್ಳದಿರುವುದು ಸೂಕ್ತ. ನೀವು ಅನಗತ್ಯವಾಗಿ ಒತ್ತಡ ತೆಗೆದುಕೊಳ್ಳಬೇಡಿ. ಅದೃಷ್ಟದ ಚಿಹ್ನೆ - ರತ್ನದ ಕಲ್ಲು
4/ 11
ಸಿಂಹ: ಐಷಾರಾಮಿ ವಸ್ತುಗಳು ಇರಬೇಕೆಂಬಆಸೆ ನಿಮ್ಮಲ್ಲಿರಬಹುದು, ದೀರ್ಘ ಕಾಲದಿಂದ ಈ ಆಸೆ ನಿಮ್ಮಲ್ಲಿರಬಹುದು. ನಿಮ್ಮಲ್ಲಿ ಕೆಲವರು ಶೀಘ್ರದಲ್ಲೇ ವಿದೇಶ ಪ್ರವಾಸ ಕೈಗೊಳ್ಳಲು ಪ್ಲಾನ್ ಮಾಡುತ್ತಿರಬಹುದು. ಸದ್ಯಕ್ಕೆ ಅಡುಗೆ ಮಾಡುವ ಅಭ್ಯಾಸ ನಿಮ್ಮ ಮನಸ್ಸನ್ನು ಶಾಂತಗೊಳಿಸಬಹುದು. ಅದೃಷ್ಟದ ಚಿಹ್ನೆ - ಮೇಣದಬತ್ತಿ
5/ 11
ಕನ್ಯಾ: ನೀವು ದೂರ ಹೋಗುತ್ತಿರುವ ಅಥವಾ ಸ್ಥಳಾಂತರಗೊಳ್ಳುವ ಯಾರೊಂದಿಗಾದರೂ ನಿಕಟ ಬಂಧವನ್ನು ಹೊಂದಿದ್ದರೆ, ಭಾವನಾತ್ಮಕವಾಗಿರುವ ಸಂಬಂಧ ಇದಕ್ಕೆ ತೊಡಕಾಗಬಹುದು. ನಗದು ವ್ಯವಹಾರ ಮಾಡುತ್ತಿದ್ದರೆ, ಎಚ್ಚರ ವಹಿಸಿ, ಹೆಚ್ಚು ಮಧ್ಯಸ್ಥಿಕೆ ವಹಿಸಿ. ಅದೃಷ್ಟದ ಚಿಹ್ನೆ - ಬುದ್ಧನ ಪ್ರತಿಮೆ
6/ 11
ತುಲಾ: ನಿಮ್ಮ ನಾಯಕತ್ವದ ಗುಣಗಳು ಹೆಚ್ಚಾಗಲಿದೆ. ಪರಿಪೂರ್ಣತೆ ವಿಚಾರದಲ್ಲಿ ಹೆಚ್ಚು ಗಮನವಹಿಸುವುದರಿಂದ ನಿಮ್ಮ ಮೌಲ್ಯ ಹೆಚ್ಚಾಗಲಿದೆ. ಯಾರಾದರೂ ನಿಮ್ಮ ಗುಣಗಾನ ಮಾಡುತ್ತಾರೆಂದರೆ ಅವರಿಂದ ಕೊಂಚ ದೂರವಿರಿ. ಅದೃಷ್ಟದ ಚಿಹ್ನೆ - ಒಳಾಂಗಣ ಸಸ್ಯ
7/ 11
ವೃಶ್ಚಿಕ: ನೀವು ಏನನ್ನು ಪ್ಲಾನ್ ಮಾಡಲು ಯತ್ನಿಸುತ್ತಿದ್ದೀರಿ ಹಾಗೂ ಜನರು ಏನು ಅರ್ಥಮಾಡಿಕೊಳ್ಳುತ್ತಿದ್ದಾರೆ ಎಂಬ ವಿಚಾರವಾಗಿ ಒಂದು ನಿರ್ದಿಷ್ಟ ಹೊಂದಾಣಿಕೆ ಇದೆ. ವಿತ್ತೀಯ ಲಾಭಗಳು ಮುಂದುವರಿಯಲಿವೆ. ನೀವು ಶೀಘ್ರದಲ್ಲೇ ಹೊಸ ಆಸ್ತಿಗಾಗಿ ಸೈನ್ ಅಪ್ ಮಾಡಬಹುದು. ಅದೃಷ್ಟದ ಚಿಹ್ನೆ - ಒಂದು ಕೋಣೆ
8/ 11
ಧನುಸ್ಸು: ಸೀಮಿತ ಸಮಯದಲ್ಲಿ ನಿಮ್ಮ ಮಾನಸಿಕ ಸಾಮರ್ಥ್ಯ ಮತ್ತು ಚುರುಕುತನದಿಂದ ನೀವು ಸೃಷ್ಟಿಸಿದ ಪ್ರಭಾವವು ಪ್ರಶಂಸೆಗೆ ಅರ್ಹವಾಗಿದೆ. ನೀವು ಹೊಸ ವ್ಯವಹಾರ ಕಲ್ಪನೆಯ ಬಗ್ಗೆ ಯೋಚಿಸುತ್ತಿದ್ದರೆ, ಶೀಘ್ರದಲ್ಲೇ ನೀವು ಯಶಸ್ಸು ಗಳಿಸುತ್ತೀರಿ. ಪಾಲುದಾರಿಕೆಯೂ ಲಾಭ ತಂದುಕೊಡಲಿದೆ. ಅದೃಷ್ಟದ ಚಿಹ್ನೆ - ಪರ್ವತಾರೋಹಣ
9/ 11
ಮಕರ: ಗೊಂದಲಮಯ ದಿನವಾಗಲಿದೆ. ನೀಬು ನಂಬುವ, ನಿಮಗೆ ಆಪ್ತರಾಗಿರುವವರು ನಿಮ್ಮ ಬಗ್ಗೆ ಅನೇಕ ವಿಷಯಗಳನ್ನು ಸೋರಿಕೆ ಮಾಡುತ್ತಿರಬಹುದು. ನೀವು ಶೀಘ್ರದಲ್ಲೇ ರಸ್ತೆ ಪ್ರವಾಸಕ್ಕೆ ಹೋಗುವ ಸಾಧ್ಯತೆಯಿದೆ. ಅದೃಷ್ಟದ ಚಿಹ್ನೆ - ಚಿಟ್ಟೆ
10/ 11
ಕುಂಭ: ಇಂದು, ಬಾಕಿ ಉಳಿದ ನಿಮ್ಮ ಕೆಲಸವನ್ನು ಪೂರ್ಣಗೊಳಿಸಲು ನೀವು ಉತ್ತಮವಾದ ಯೋಜನೆಗಳನ್ನು ಮಾಡುವಿರಿ. ಆದರೂ ಈ ಕೆಲಸಗಳು ಪೋಸ್ಟ್ಪೋನ್ ಆಗಲಿವೆ. ಕುಟುಂಬ ಅಥವಾ ಸಂಗಾತಿಯಿಂದ ಬರುವ ಯಾವುದೇ ಸಲಹೆಯು ಸದ್ಯಕ್ಕೆ ನಿಮಗೆ ಪ್ರಸ್ತುತವೆನಿಸಬಹುದು. ಅದೃಷ್ಟದ ಚಿಹ್ನೆ - ಕ್ಯಾನ್ವಾಸ್
11/ 11
ಮೀನ: ನಿಮ್ಮ ಹಿಂದಿನ ಕೃತ್ಯಗಳ ಬಗ್ಗೆ ನಿಮಗೆ ಸಾಕಷ್ಟು ಪಶ್ಚಾತಾಪವಾಗಲಿದೆ. ನಿಮ್ಮೊಂದಿಗೆ ಪಾಲುದಾರರಾಗಿರುವ ಯಾರೋ ಒಬ್ಬರು ಅದನ್ನು ನಿಮಗೆ ನೆನಪಿಸುತ್ತಲೇ ಇರುತ್ತಾರೆ. ಸಮಯವು ಶೀಘ್ರದಲ್ಲೇ ನಿಮಗೆ ಮತ್ತೊಂದು ಅವಕಾಶವನ್ನು ನೀಡುತ್ತದೆ ಎಂದು ತೋರುತ್ತಿದೆ. ಅದೃಷ್ಟದ ಚಿಹ್ನೆ - ಎರಡು ಗರಿಗಳು