ಮೇಷ :ಯಾವುದೇ ಮನರಂಜನಾ ಚಟುವಟಿಕೆಯ ಬಗೆಗಿರುವ ನಿಮ್ಮ ಆಸಕ್ತಿಯು ನಿಮ್ಮನ್ನು ಇನ್ನಷ್ಟು ಉತ್ತುಂಗಕ್ಕೇರಿಸುತ್ತದೆ. ಗಡುವನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ಕೆಲಸಗಳನ್ನು ಪೂರೈಸಿ. ತಮ್ಮ ತಂಡದಲ್ಲಿ ನಿಮ್ಮನ್ನು ಇರಿಸಿಕೊಳ್ಳಲು ಇಚ್ಛಿಸುವವರು ನಿಮ್ಮ ಬಳಿ ಲಾಭಿ ಮಾಡಬಹುದು. ಮುಂಬರುವ ಕಾರ್ಯಕ್ರಮಕ್ಕೆ ನಿಮ್ಮ ತಯಾರಿ ಅಂದುಕೊಂಡಷ್ಟು ಚೆನ್ನಾಗಿರಲಿಕ್ಕಿಲ್ಲ. ಕುರಿತು ನಿಮ್ಮ ಸಿದ್ಧತೆ ಸಾಕಷ್ಟು ಉತ್ತಮವಾಗಿಲ್ಲದಿರಬಹುದು. ಅದೃಷ್ಟದ ಚಿಹ್ನೆ - ಮಾಸ್ಕ್
ವೃಷಭ: ಹಳೆಯ ಸ್ನೇಹಿತರಿಂದ ಸಿಗುವ ತ್ವರಿತ ಪ್ರತಿಕ್ರಿಯೆ ನಿಮ್ಮ ದಿನವನ್ನು ಮತ್ತಷ್ಟು ಯಶಸ್ವಿಯಾಗಿಸಬಹುದು. ನಿಮ್ಮ ಸಾಮರ್ಥ್ಯದ ಬಗ್ಗೆ ನಿಮಗೆ ವಿಶ್ವಾಸವಿರಬಹುದು, ಅದಕ್ಕಾಗಿಯೇ ನೀವು ನಿರ್ದಿಷ್ಟ ಗುರಿಯನ್ನು ಸಾಧಿಸುವ ನಿರೀಕ್ಷೆಯಲ್ಲಿರಬಹುದು. ಈ ನಿಟ್ಟಿನಲ್ಲಿ ಅವಕಾಶಗಳೂ ಉಜ್ವಲವಾಗಿವೆ. ಕುಟುಂಬದಲ್ಲಿನ ಹಿರಿಯರ ಬೆಂಬಲ ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಲು ಬಹಳ ಸಹಾಯ ಮಾಡುತ್ತದೆ. ನಿಮ್ಮ ಹಣಕಾಸು ಸ್ಥಿತಿಯೂ ಸುಧಾರಿಸಬಹುದು. ಅದೃಷ್ಟದ ಚಿಹ್ನೆ - ಕೊಳವೆಬಾವಿ
ಮಿಥುನ: ನಿಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸುವ ನಿಮ್ಮ ಕನಸು ಶೀಘ್ರದಲ್ಲೇ ಫಲ ನೀಡುತ್ತದೆ. ಯಾವುದೇ ವಿಚಾರ ನಿಮ್ಮ ಮನಸ್ಸನ್ನು ಚಂಚಲಗೊಳಿಸಲ್ಲ. ಬೇರೆಯವರಿಗೆ ತಿಳಿಸುವ ಮುನ್ನ ಭವಿಷ್ಯದ ನಿಮ್ಮೆಲ್ಲಾ ಯೋಜನೆಗಳನ್ನು ಮರು ಪರಿಶೀಲಿಸಿ. ಇದೇ ವೇಳೆ ಬೇರೆ ಸಲಹೆಗಳು ಬಂದರೆ ಸ್ವೀಕರಿಸಬಹುದು. ಕೆಲ ಸಮಯ ಚಿಂತೆ ಇಲ್ಲದೇ ಬದುಕು ಸಾಗಿಸಲು ಬೇಕಾದ ಆರ್ಥಿಕ ಹಿಡಿತ ಇರುತ್ತದೆ. ಅದೃಷ್ಟದ ಚಿಹ್ನೆ - ಸ್ಪೋರ್ಟ್ಸ್ ಮಾಡೆಲ್.
ಕರ್ಕಾಟಕ: ನಿಮ್ಮ ಊಹೆ ಅತ್ಯುತ್ತಮ ಮಾರ್ಗದರ್ಶಿಯಾಗಿರಬಹುದು. ಇದು ನಿಮಗೆ ಏನನ್ನು ಅನುಸರಿಸಬೇಕು ಮತ್ತು ಯಾವುದನ್ನು ತಪ್ಪಿಸಬೇಕು ಎಂಬ ದಿಕ್ಕನ್ನು ಸೂಚಿಸಲಿದೆ. ಈ ಚಿಂತನೆ ಮುಂದಿನ ದಿನಗಳಲ್ಲಿ ಸೂಕ್ತ ಮಾರ್ಗದರ್ಶನ ನೀಡಲಿದೆ. ಕಾರ್ಪೊರೇಟ್ ಜಗತ್ತಿನಲ್ಲಿ ನಿಮ್ಮಲ್ಲಿ ಕೆಲವರು ಸಾಧನೆ ಮಾಡಬಹುದು. ಒಂದು ವಿಚಾರಕ್ಕಾಗಿ ಪ್ರಯತ್ನಿಸುವವರು ಅಥವಾ ಅದಕ್ಕಾಗಿ ಕಾಯುವವರಿಗೆ ಯಶಸ್ಸು ಸಿಗಲಿದೆ. ಶೀಘ್ರದಲ್ಲೇ ಪ್ರವಾಸಕ್ಕೆ ಹೋಗುವ ಅವಕಾಶ ಸಿಗಲಿದೆ. ಅದೃಷ್ಟದ ಚಿಹ್ನೆ - ಸೆರಾಮಿಕ್ ಹೂದಾನಿ
ಸಿಂಹ : ಸಾರ್ವಜನಿಕ ಸ್ಥಳಗಳಲ್ಲಿ ಖಾಸಗಿ ಸಂಭಾಷಣೆ ಮಾಡುವುದನ್ನು ತಪ್ಪಿಸಿ. ನಿಮಗರಿವಿಲ್ಲದೇ ನೀವು ಕೆಲವು ವಿಷಯದಲ್ಲಿ ತೊಡಗಿಸಿಕೊಳ್ಳಬಹುದು. ನಿಮ್ಮತ್ತ ಆಕರ್ಷಿತರಾದವರಿಗೆ ಇದು ಮಿಶ್ರ ಭಾವನೆ ನೀಡಬಹುದು. ನೀವು ಭಾವನಾತ್ಮಕವಾಗಿ ದುರ್ಬಲರಾಗಬಹುದು. ಯಾವುದೇ ಆತುರದ ಅಥವಾ ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳದಿರಿ. ಒಂದು ವೇಳೆ ಗೊಂದಲವಾಗುತ್ತಿದ್ದರೆ, ಈ ಬಗ್ಗೆ ಯೋಚಿಸಲು ಕೊಂಚ ಸಮಯ ತೆಗೆದುಕೊಳ್ಳಿ. ಅದೃಷ್ಟದ ಚಿಹ್ನೆ - ಕೆಂಪು ಬಣ್ಣ
ತುಲಾ: ಸ್ಪರ್ಧಾತ್ಮಕವಾಗಿರುವುದು ಉತ್ತಮ. ಆದರೆ ಇದಕ್ಕಾಗಿ ಯೋಜನೆ ಅಥವಾ ಸಂಚು ರೂಪಿಸದಿರಿ. ನಿಮ್ಮ ಸಂವಹನದಲ್ಲಿ ನೀವು ಸ್ಥಿರ ಮತ್ತು ಸ್ಪಷ್ಟವಾಗಿರಿ. ನಿಮ್ಮ ಆಪ್ತರು ಹೃದಯಾಘಾತದಿಂದ ಬಳಲಬಹುದು. ಇಂತಹ ಸಂದರ್ಭದಲ್ಲಿ ನಿಮ್ಮ ಸಲಹೆಯನ್ನು ಪಡೆಯುವ ಸಾಧ್ಯತೆಯಿದೆ. ನಿಮಗೂ ಆರೋಗ್ಯ ಸಮಸ್ಯೆ ಕಾಡಬಹುದು, ಕಡೆಗಣಿಸಿದರೆ ಚಿಂತಾಜನಕ ಸ್ಥಿತಿ ತಲುಪಬಹುದು. ಇದು ತಾತ್ಕಾಲಿಕ ಹಾಗೂ ಕೆಲ ಸಮಯದ ಬಳಿಕ ಆರೋಗ್ಯ ಉತ್ತಮವಾಗುತ್ತದೆ. ಅದೃಷ್ಟದ ಚಿಹ್ನೆ - ಕುಶನ್
ವೃಶ್ಚಿಕ: ನಿಮ್ಮ ಆಕರ್ಷಕ ವರ್ತನೆಯು ನಿಮ್ಮನ್ನು ಮತ್ತಷ್ಟು ಎತ್ತರಕ್ಕೇರಿಸಬಹುದು. ನಿಮಗಿರುವ ಸಂಪರ್ಕದ ಮೂಲಕ ಉತ್ತಮ ಅವಕಾಶ ಸಿಗಲಿದೆ. ಹೀಗಿದ್ದರೂ ಜನರ ಮೇಲಿನ ನಿಮಗಿರುವ ನಂಬಿಕೆ ಕೊಂಚ ಕಡಿಮೆಯಾಗಬಹುದು. ಅಧಿಕಾರದಲ್ಲಿರುವವರು ಕೆಲ ಸವಾಲಿನ ಸಂದರ್ಭಗಳನ್ನು ಎದುರಿಸಬಹುದು. ನಿಮ್ಮ ಸಂಗಾತಿಯು ನಿಮ್ಮ ಜೀವನದ ದೊಡ್ಡ ವಿಮರ್ಶಕ ಹಾಗೂ ಬೆಂಬಲಿಗರಾಗುತ್ತಾರೆ. ವ್ಯವಹಾರ ಸಂಬಂಧ ಮಾತುಕತೆ ನಡೆಯಬಹುದು. ಅದೃಷ್ಟದ ಚಿಹ್ನೆ - ಎಂಬ್ರಾಯ್ಡರಿ ವರ್ಕ್
ಧನುಸ್ಸು: ಹಲವಾರು ಬಾರಿ ನಿಮ್ಮ ಕ್ಷಮತೆ ಬಗ್ಗೆ ನಿಮಗೇ ಅನುಮಾನ ಮೂಡಬಹುದು. ಆತ್ಮವಿಶ್ವಾಸವನ್ನು ಮರಳಿ ಪಡೆಯುವುದರೊಂದಿಗೆ ಅವಕಾಶ ಸದುಪಯೋಗಪಡಿಸಿಕೊಳ್ಳಬೇಕು. ಉದ್ವೇಗಗೊಳ್ಳಬೇಡಿ, ಇದರಿಂದ ನಿಮಗೆ ಮತ್ತಷ್ಟು ಯಶಸ್ಸು ಸಿಗಬಹುದು. ಅಲ್ಲದೆ, ಯಾವುದನ್ನಾದರೂ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳದೆ ತಿರಸ್ಕರಿಸಬೇಡಿ. ಮುಂದಿನ ದಿನಗಳಲ್ಲಿ ನೀವು ಹೆಚ್ಚು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಿದ್ದೀರಿ. ಅದೃಷ್ಟದ ಚಿಹ್ನೆ - ನವಿಲು
ಮಕರ: ಹಿಂದಿನ ಕಹಿ ಅನುಭವ ಮತ್ತೆ ಮರುಕಳಿಸಬಹುದು. ಆದರೆ ನಿಮ್ಮ ಪ್ರತಿಕ್ರಿಯೆ ಈ ಹಿಂದಿನಂತಿರುವುದಿಲ್ಲ. ಈ ಬಗ್ಗೆ ನೀವು ಭಯಪಡುವ ಅಗತ್ಯವಿಲ್ಲ, ಆದರೆ ಇದರಿಂದ ಉತ್ತಮ ಪಾಠ ಕಲಿಯುತ್ತೀರಿ. ಹೊಸ ನಿದರ್ಶನಗಳು ಉತ್ತಮ ಅನುಭವ ಪಡೆಯಲು ದಾರಿ ಮಾಡಿಕೊಡಲಿವೆ. ನಿಮ್ಮ ಕೆಲಸವನ್ನು ಪ್ರಸ್ತುತಪಡಿಸಲು ನಿಮಗೆ ದೊಡ್ಡ ಅವಕಾಶ ಸಿಗಲಿದೆ. ಈ ವೇಳೆ ಪಾರದರ್ಶಕವಾಗಿರಿ, ಯಾಕೆಂದರೆ ಇದರಿಂದ ನಿಮ್ಮ ಅನುಯಾಯಿಗಳ ಸಂಖ್ಯೆ ಹೆಚ್ಚಲಿದೆ. ಅದೃಷ್ಟದ ಚಿಹ್ನೆ - ಸೆಲೆಬ್ರಿಟಿ
ಕುಂಭ: ಯಾವುದೇ ಬಿಕ್ಕಟ್ಟು ಸಂಭವಿಸಿದಾಗ ನಿಮ್ಮನ್ನು ದೂರ ಇಡುತ್ತಾರೆ ಎಂಬ ಅಂಶ ಭಯಗೊಳ್ಳರಿ. ಹೀಗಾಗುವುದಿಲ್ಲ. ಸಮಯ ಬದಲಾಗುತ್ತಿರುತ್ತದೆ. ಹಿಂತಿರುಗಿ ನೋಡಬೇಕು ಮತ್ತು ನಿಮ್ಮ ಹಳೆಯ ತಪ್ಪುಗಳನ್ನು ಪರಿಶೀಲಿಸಿ, ಇದು ನಿಮಗೆ ಇದು ಹಾದಿ ತೋರಿಸಲಿವೆ. ರೂಪಾಂತರದ ಪ್ರವಾಸವು ಕಾರ್ಡ್ಗಳಲ್ಲಿದೆ ಮತ್ತು ಪೂರ್ವಸಿದ್ಧತೆಯಿಲ್ಲದೆ ಯೋಜಿಸಬಹುದು. ನೀವು ಕಳೆದುಕೊಂಡಿರುವ ಶಕ್ತಿ, ಹುರುಪು ನಿಮ್ಮ ಗೆಳೆಯರ ಜೊತೆ ಮಾತನಾಡಿ ಸಿಗಲಿದೆ. ಅದೃಷ್ಟದ ಚಿಹ್ನೆ - ಫ್ಯಾನ್ಸಿ ಕಾರು.
ಮೀನ : ಮದುವೆ ಅವಕಾಶಗಳು ಅತ್ಯಂತ ಹೆಚ್ಚು ಈಗಾಗಲೇ ಮಾತುಕತೆ ನಡೆದಿದ್ದರೆ, ಇದು ಫಲದಾಯಕವಾಗಲಿದೆ. ಯಾರನ್ನಾದರೂ ಇಷ್ಟಪಡುತ್ತಿದ್ದರೆ ಅವರೊಂದಿಗೇ ಮುಂದುವರೆಯಬಹುದು. ನೀವೇನು ಬಯಸುತ್ತಿದ್ದೀರೋ ಅದನ್ನೇ ನಿಮಗೆ ಆಪ್ತರಾಗಿರುವವರೂ ಬಯಸುತ್ತಿರಬಹುದು. ಇಂತಹ ಅಸೂಯೆ ಇರುವ ವ್ಯಕ್ತಿಗಳಿಂದ ಕೊಂಚ ಎಚ್ಚರದಿಂದಿರಿ. ಗೊಂದಲದ ವಾತಾವರಣ ಜೀವನದಲ್ಲಿ ಕೆಲವು ಹೆಜ್ಜೆಗಳನ್ನು ಹಿಂದಕ್ಕೆ ಇಡುವಂತೆ ಮಾಡುತ್ತದೆ. ಅದೃಷ್ಟದ ಚಿಹ್ನೆ - ಮರ