Astrological Prediction 2023: ಮಿಥುನ ರಾಶಿಯವರು ಹೊಸವರ್ಷದಲ್ಲಿ ತಪ್ಪದೇ ಈ ಕೆಲಸ ಮಾಡಬೇಕು, ಇಲ್ಲಿದೆ ನೋಡಿ ವರ್ಷ ಭವಿಷ್ಯ
Gemini 2023: ಹೊಸವರ್ಷದ ಹೊಸ್ತಿಲಲ್ಲಿ ನಿಂತಿರುವ ನಮಗೆ ನಮ್ಮ ಭವಿಷ್ಯ ಹೇಗಿರಲಿದೆ ಎಂಬುದನ್ನ ತಿಳಿದುಕೊಳ್ಳುವ ಬಹಳ ಆಸಕ್ತಿ ಇರುತ್ತದೆ. ಒಂದೊಂದು ರಾಶಿಗೂ ಒಂದೊಂದು ಫಲಾಫಲಗಳಿರುತ್ತದೆ. ಸದ್ಯ ಮಿಥುನ ರಾಶಿಯವರಿಗೆ 2023 ಹೇಗಿರಲಿದೆ ಎಂಬುದು ಇಲ್ಲಿದೆ. ಇನ್ನು ಸುಧಾಮ ಎಚ್.ಎಸ್. ಇವರು ರಾಶಿ ಭವಿಷ್ಯವನ್ನು ನೀಡಿರುತ್ತಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.
ಮಿಥುನ ರಾಶಿಯವರಿಗೆ 2023ರಲ್ಲಿ ಬಹಳ ಒಳ್ಳೆಯದಾಗುತ್ತದೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ. ಈ ವರ್ಷ ಕೇವಲ ಸಣ್ಣ ಪುಟ್ಟ ಎಚ್ಚರಿಕೆಗಳನ್ನು ತೆಗೆದುಕೊಳ್ಳುವ ಮೂಲಕ ಆರಾಮವಾಗಿ ಜೀವನ ನಡೆಸಬಹುದು. ಈ ವರ್ಷ ಹೇಗಿರಲಿದೆ ಎಂಬುದು ಇಲ್ಲಿದೆ.
2/ 7
ಈ ಸಂವತ್ಸರದಲ್ಲಿ ನಿಮಗೆ ಬಹುಪಾಲು ಶುಭಫಲ ಹೆಚ್ಚಾಗಿ ಇರುತ್ತದೆ. ಲಾಭದ ಸ್ಥಾನದಲ್ಲಿ ರಾಹು ಇದ್ದು, ಗುರುಗಳು ನಿಮಗೆ ಎಲ್ಲಾ ವಿಚಾರ ಹಾಗೂ ಕೆಲಸದಲ್ಲಿ ಯಶಸ್ಸನ್ನು ದಯಪಾಲಿಸಲಿದ್ದಾರೆ. ಹಾಗಾಗಿ ಗುರುಗಳ ಆರಾಧನೆ ಮಾಡಿ.
3/ 7
ನಿರಂತರವಾದ ಧನಾಗಮನದ ಕಾರಣ ಅಭಾವ ಎಂಬ ಶಬ್ದವೇ ನಿಮ್ಮ ಬದುಕಿನಲ್ಲಿ ಮಾಯವಾಗುತ್ತದೆ. ಏಕಕಾಲದಲ್ಲಿ ಹಲವಾರು ಕಾರ್ಯಗಳನ್ನು ನಿರ್ವಹಿಸುವ ಒತ್ತಡ ಅನಿವಾರ್ಯತೆಗಳು ಎದುರಾಗುತ್ತದೆ. ಆದರೆ ಶಾಂತಿಯಿಂದ ಎಲ್ಲವನ್ನೂ ಮಾಡಿಕೊಂಡು ಹೋಗಲು ಸಾಧ್ಯವಾಗುತ್ತದೆ.
4/ 7
ಪಿತ್ರಾರ್ಜಿತವಾದ ಆಸ್ತಿಪಾಸ್ತಿಗಳು ನಿಮಗೆ ಕೇಳದೆ ಸಿಗುವುದಲ್ಲದೇ ಪಾರಂಪರಿಕವಾಗಿ ವೃತ್ತಿ ಆಚರಣೆಗಳನ್ನು ನೀವು ನಿರ್ವಹಿಸಲಿದ್ದೀರಿ. ಈ ವರ್ಷ ನಿಮ್ಮ ಹಾಗೂ ನಿಮ್ಮ ಕುಟುಂಬ ಸದಸ್ಯರ ನಡುವೆ ಸಂಬಂಧ ಗಟ್ಟಿಯಾಗುತ್ತದೆ.
5/ 7
ಪುತ್ರ ಸಂತಾನ ಯೋಗವು ನಿಚ್ಚಳವಾಗಿರುತ್ತದೆ ನೂರಾರು ಜನ ನಿಮ್ಮಿಂದ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ. ದೈವಾನುಗ್ರಹದಿಂದ ಆತ್ಮಬಲ ವೃದ್ಧಿಯು ಆಗುತ್ತದೆ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಹಂಬಲ ನಿಮಗೆ ಜಾಸ್ತಿಯಾಗಲಿದೆ.
6/ 7
ಈ ವರ್ಷ ಮಿತ್ರ ವರ್ಗದಿಂದ ಸ್ವಲ್ಪ ದುಃಖವನ್ನೇ ನಿರೀಕ್ಷೆ ಮಾಡಬೇಕಾಗುತ್ತದೆ. ಮನಸ್ಸು ಮಾತ್ರ ಯಾವತ್ತೂ ಒಂದು ವಿರಕ್ತ ಭಾವನೆಯಲ್ಲಿ ತಲ್ಲಿನ ವಾಗಿರುತ್ತದೆ. ಅತಿಯಾಗಿ ಯಾರ ಬಗ್ಗೆಯೂ ನೀವು ಚಿಂತೆ ಮಾಡುವ ಅವಶ್ಯಕತೆ ಇಲ್ಲ. ಕೇವಲ ನಿಮ್ಮ ಬಗ್ಗೆ ಆಲೋಚನೆ ಮಾಡಿ ಸಾಕು.
7/ 7
ಅರ್ಧ ವರ್ಷದ ನಂತರ ವಿದೇಶ ಪ್ರವಾಸ ತೀರ್ಥಯಾತ್ರ ಪಯಣ ಮುಂತಾದ ಸಂಚಾರ ಯೋಗವಿದೆ. ಈ ವರ್ಷ ನೀವು ಲಕ್ಷ್ಮೀನಾರಾಯಣನನ್ನು ಸಹ ಆರಾಧಿಸಬೇಕು.