Numerology: ನಿಮ್ಮ ಹೆಸರು I ಅಥವಾ J ಇಂದ ಸ್ಟಾರ್ಟ್ ಆಗುತ್ತಾ? ಹೀಗೆ ಮಾಡಿದ್ರೆ ನಿಮ್ಮ ಲೈಫ್ ಬ್ಯೂಟಿಫುಲ್ ಆಗಿರುತ್ತೆ!
Numerology Suggestion: ಒಂದೊಂದು ಹೆಸರಿನ ಒಂದೊಂದು ಅಕ್ಷರಕ್ಕೂ ಅರ್ಥಗಳಿರುತ್ತವೆ ಎಂದರೆ ತಪ್ಪಲ್ಲ. ಅದರಲ್ಲೂ ಮೊದಲನೇಯ ಅಕ್ಷರಕ್ಕೆ ಬಹಳ ಮಹತ್ವ ಇರುತ್ತದೆ. ನಿಮ್ಮ ಹೆಸರು I ಮತ್ತು J ಅಕ್ಷರದಿಂದ ಆರಂಭವಾಗುತ್ತಿದ್ದರೆ, ನಿಮ್ಮ ವ್ಯಕ್ತಿತ್ವ ಹೇಗಿರಲಿದೆ ಎಂಬುದು ಇಲ್ಲಿದೆ.
ಆಲ್ಫಾಬೆಟ್ I: ಈ ವರ್ಣಮಾಲೆಯ ಹೆಸರುಗಳನ್ನು ಹೊಂದಿರುವ ಜನರು ಕಷ್ಟಪಟ್ಟು ಕೆಲಸ ಮಾಡುತ್ತಾರೆ ಮತ್ತು ಸೋಮಾರಿತನ ಮಾಡುವುದು ಎಂದರೆ ಇವರಿಗೆ ಸ್ವಲ್ಪವೂ ಇಷ್ಟವಾಗುವುದಿಲ್ಲ. ಅಲ್ಲದೇ ವಿಷಯಗಳ ಬಗ್ಗೆ ಆಳವಾದ ಜ್ಞಾನವನ್ನು ಹೊಂದಿರುತ್ತಾರೆ.
2/ 7
ಅವರು ಯಾವುದೇ ಪರಿಸ್ಥಿತಿಗಳಲ್ಲಿ ಬದುಕುಳಿಯುವ ಈ ವಿಶಿಷ್ಟ ಸಾಮರ್ಥ್ಯವನ್ನು ಹೊಂದಿದ್ದಾರೆ ಮತ್ತು ಇನ್ನೂ ಹೆಚ್ಚಿನ ಯಶಸ್ಸನ್ನು ಸಾಧಿಸುತ್ತಾರೆ. ಆದರೆ ತಮ್ಮ ಒತ್ತಡವನ್ನು ನಿರ್ವಹಿಸಿ ಆಗಾಗ ಮಾನಸಿಕ ನೆಮ್ಮದಿಗಾಗಿ ಸಮಯ ಮೀಸಲಿಡುವುದು ಅಗತ್ಯವಾಗುತ್ತದೆ. ಇಲ್ಲದಿದ್ದರೆ ಗಂಭೀರ ಪರಿಣಾಮಗಳಿಗೆ ಕಾರಣವಾಗಬಹುದು.
3/ 7
I ವರ್ಣಮಾಲೆಯು ಮಂಗಳ ಗ್ರಹದ ಸಂಖ್ಯೆ 9 ರ ಸಂಕೇತವಾಗಿದ್ದು, ಆಸ್ತಿಯ ವ್ಯವಹಾರ, ಗೃಹೋಪಯೋಗಿ, ಕ್ರೀಡಾ ಕಾರ್ಯಕ್ರಮಗಳು, ಟೆಲಿಕಾಂ, ಮನರಂಜನೆಯ ಕ್ಷೇತ್ರದಲ್ಲಿ ಇವರಿಗೆ ಹೆಚ್ಚು ಲಾಭ ಸಿಗಲಿದೆ.
4/ 7
ಆಲ್ಫಾಬೆಟ್ J: ಈ ವರ್ಣಮಾಲೆಯಿಂದ ಹೆಸರು ಪ್ರಾರಂಭವಾಗುವ ಜನರು ವಿಶಾಲ ಮನಸ್ಸಿನವರು, ಸ್ವಾತಂತ್ರ್ಯ ಪ್ರೇಮಿಗಳು, ಪ್ರಾಯೋಗಿಕ ಮನಸ್ಥಿತಿಯವರು ಎನ್ನಲಾಗುತ್ತದೆ. ಅವರು ತಮ್ಮ ಸುತ್ತಲೂ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡಿರುತ್ತಾರೆ.
5/ 7
ಅಲ್ಲದೇ ಇವರು ಅತ್ಯಂತ ಬುದ್ಧಿವಂತರು ಎನ್ನಲಾಗುತ್ತದೆ. ಅವರಿಗೆ ಮೋಸ ಮಾಡುವುದು ಬಹುತೇಕ ಅಸಾಧ್ಯ ಎಂದರೆ ತಪ್ಪಲ್ಲ. ಅವರು ಸಮಾನ ಮನಸ್ಸಿನ ಜನರೊಂದಿಗೆ ಚೆನ್ನಾಗಿ ಹೊಂದಿಕೊಳ್ಳುತ್ತಾರೆ ಆದರೆ ಸಂದರ್ಭಗಳ ಬೇಡಿಕೆಗೆ ಅನುಗುಣವಾಗಿ ಅವರ ಮನಸ್ಸನ್ನು ಬದಲಾಯಿಸುತ್ತಾರೆ.
6/ 7
ಭೌತಿಕ ಸಂತೋಷವು ತಾತ್ಕಾಲಿಕವಾಗಿದೆ ಎಂದು ಅವರು ನೆನಪಿಟ್ಟುಕೊಳ್ಳಬೇಕು. ಸ್ವಲ್ಪ ಭಾವನಾತ್ಮಕವಾಗಿ ಯೋಚನೆ ಮಾಡುವುದನ್ನ ಬಿಡುವುದು ಇವರಿಗೆ ಒಳ್ಳೆಯದಾಗುತ್ತದೆ. ಗ್ಲಾಮರ್ ಜಗತ್ತಿನಲ್ಲಿ ಅದೃಷ್ಟ ಪರೀಕ್ಷೆ ಮಾಡಿ.
7/ 7
ಆಲ್ಫಾಬೆಟ್ I: ನಿಮ್ಮ ಬ್ಯಾಗ್ನಲ್ಲಿ ಯಾವಾಗಲೂ ಕೆಂಪು ಧಾನ್ಯವನ್ನು ಇಟ್ಟುಕೊಳ್ಳಿ. ಅದೃಷ್ಟದ ಬಣ್ಣ ಕೆಂಪು. ಆಲ್ಫಾಬೆಟ್ J: ಭಗವಾನ್ ಸೂರ್ಯನಿಗೆ ನೀರನ್ನು ಅರ್ಪಿಸಿ. ಅದೃಷ್ಟ ಬಣ್ಣ ಹಳದಿ