Horoscope: ಇಂದು ಯಾರೊಂದಿಗೂ ಗುಟ್ಟನ್ನು ಹಂಚಿಕೊಳ್ಳಬೇಡಿ! ರಹಸ್ಯ ಒಳಗಿದ್ದರೆ ಉತ್ತಮವಾಗುತ್ತೆ ನಿಮ್ಮ ಭವಿಷ್ಯ!
Horoscope, Dec. 12, 2022: ಶುಭ ಕೃತ್ ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಸೌರಮಾಸ, ವೃಶ್ಚಿಕ, ಚಾಂದ್ರ ಮಾಸ, ಮಾರ್ಗಶಿರ ಕೃಷ್ಣ ಪಕ್ಷ, ಚತುರ್ಥಿ ತಿಥಿ, ನಕ್ಷತ್ರ ಇಂದ್ರ, ಯೋಗ ಬಾಲವ, ಕರಣ ಸೋಮವಾರವಾಗಿರುತ್ತದೆ. ಇನ್ನು ರಾಹುಕಾಲ 8.05am ಇಂದ 9.30amವರೆಗೆ, ಗುಳಿಕಕಾಲ 1.46pm ಇಂದ 3.11pm ವರೆಗೆ ಹಾಗೂ ಯಮಗಂಡ ಕಾಲ 10.55am ಇಂದ 12.21pm ವರೆಗೆ ಇರುತ್ತದೆ. ಇನ್ನು ಸೂರ್ಯೋದಯ 6.40am ಆಗಿದ್ದರೆ, ಸೂರ್ಯಾಸ್ತ 6.01am ಆಗಿದೆ. ಹಾಗೆಯೇ ಚಂದ್ರೋದಯ 9.34pm, ಚಂದ್ರಾಸ್ತ 9.59am ಆಗಿರುತ್ತದೆ. ಶ್ರೀ ಸುಧಾಮ ಎಚ್.ಎಸ್. ಇವರು ಇಂದಿನ ರಾಶಿ ಭವಿಷ್ಯವನ್ನು ನೀಡಿರುತ್ತಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.
ಮೇಷ ರಾಶಿ: ಈ ರಾಶಿಯವರಿಗೆ ಹಳೆಯ ರೋಗದಿಂದ ಮುಕ್ತಿ ದೊರೆಯಲಿದೆ. ನಿಮ್ಮ ಇಷ್ಟಾರ್ಥಗಳು ಈಡೇರುವ ಸಾಧ್ಯತೆ ಇದೆ. ಆದರೆ ನಿಮ್ಮ ಭಾವನೆಯನ್ನು ನಿಯಂತ್ರಿಸಿ.
2/ 12
ವೃಷಭ ರಾಶಿ: ವ್ಯಾಪಾರ ಪಾಲುದಾರರೊಂದಿಗೆ ನಿಮ್ಮ ಸಂಬಂಧ ಬಲವಾಗಿರುತ್ತದೆ. ನಿಮ್ಮ ವೈವಾಹಿಕ ಜೀವನ ತುಂಬಾ ಅನುಕೂಲಕರವಾಗಿರುತ್ತದೆ.
3/ 12
ಮಿಥುನ ರಾಶಿ: ವಿದೇಶದಲ್ಲಿ ಕೆಲಸ ಮಾಡುವ ಈ ರಾಶಿಯವರ ಆದಾಯ ಹೆಚ್ಚಾಗುವ ಸಾಧ್ಯತೆ ಇದೆ. ಹಾಗಂತ ಕೆಟ್ಟ ಆಲೋಚನೆಗಳು ನಿಮ್ಮ ಮನಸ್ಸಿನಲ್ಲಿ ಬರಲು ಬಿಡಬೇಡಿ.
4/ 12
ಕರ್ಕಾಟಕ ರಾಶಿ: ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ದೊರೆಯಲಿದೆ. ನಿಮ್ಮ ಪ್ರತಿಯೊಂದು ಕೆಲಸದಲ್ಲೂ ಯಶಸ್ಸು ದೊರೆಯಲಿದೆ. ಮನಸ್ಸಿನಲ್ಲಿರುವ ವೃತ್ತಿಯ ಚಿಂತೆ ಇಂದು ದೂರ ಆಗುವುದು.
5/ 12
ಸಿಂಹ ರಾಶಿ: ನಿಮಗೆ ಇಂದು ಶುಭ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಯೋಗವಿದೆ. ಗಂಭೀರ ಸಮಸ್ಯೆ ಬಗ್ಗೆ ನಿಮ್ಮ ಆಪ್ತ ಸ್ನೇಹಿತರೊಂದಿಗೆ ಚರ್ಚಿಸಿ, ಅದರ ಪರಿಹಾರಕ್ಕೆ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಿ.
6/ 12
ಕನ್ಯಾ ರಾಶಿ: ಕಮಿಷನ್ಗೆ ಸಂಬಂಧಿತ ಕೆಲಸಗಳಲ್ಲಿ ಇಂದು ಹೂಡಿಕೆ ಮಾಡುವುದು ಸೂಕ್ತವಲ್ಲ. ಕೆಲಸದಿಂದ ನಿಮಗೆ ಅತಿಯಾದ ಆಯಾಸ ಆಗುತ್ತದೆ, ಗಮನವಿರಲಿ.
7/ 12
ತುಲಾ ರಾಶಿ: ಇಂದು ನಿಮ್ಮ ಕುಟುಂಬದ ಸದಸ್ಯರ ಅನುಮತಿ ಇಲ್ಲದೇ ಯಾವುದೇ ಕೆಲಸ ಮಾಡಬೇಡಿ. ಸರ್ಕಾರಿ ಕೆಲಸದಲ್ಲಿ ಅಡೆತಡೆ ಉಂಟಾಗಬಹುದು.
8/ 12
ವೃಶ್ಚಿಕ ರಾಶಿ: ನೀವು ಇಂದು ಆಸ್ಪತ್ರೆಗೆ ಹೋಗುವ ಸಾಧ್ಯತೆ ಇದೆ. ಆದರೂ ನೀವು ಅಂದುಕೊಂಡ ಕೆಲಸಗಳು ಸುಲಭ ರೀತಿಯಲ್ಲಿ ನಡೆಯುತ್ತದೆ. ಇಂದು ನಿಮ್ಮ ವ್ಯಕ್ತಿತ್ವದಲ್ಲಿ ಬದಲಾವಣೆ ಆಗಬಹುದು.
9/ 12
ಧನು ರಾಶಿ: ನಿಮ್ಮ ಜೀವನದ ಸತ್ಯಾಂಶಗಳನ್ನು ಹೊರಗಿನವರೊಂದಿಗೆ ಹಂಚಿಕೊಳ್ಳಬೇಡಿ. ವಿವಾಹಕ್ಕೆ ವಧುವನ್ನು ಹುಡುಕುವ ಸಲುವಾಗಿ ಅನುಕೂಲ ಆಗುವುದು.
10/ 12
ಮಕರ ರಾಶಿ: ಕೆಲಸದಲ್ಲಿ ನಿಮ್ಮ ತಂದೆಯ ಮಾರ್ಗದರ್ಶನ ಸಿಗಬಹುದು. ಆದರೆ ಇಂದು ನೀವು ನಿಮ್ಮ ಸ್ನೇಹಿತರನ್ನು ಹೆಚ್ಚು ನಂಬಬೇಡಿ.
11/ 12
ಕುಂಭ ರಾಶಿ: ಯಾವುದೇ ಕೆಲಸದಲ್ಲಿ ಆತುರ ಪಡದಿದ್ದರೆ ಯಶಸ್ಸು ದೊರೆಯಲಿದೆ. ನಿಮ್ಮಿಂದ ಕಿರಿಯರ ಆರೋಗ್ಯ ಹದಗೆಡಬಹುದು, ಹುಷಾರಾಗಿರಿ.
12/ 12
ಮೀನ ರಾಶಿ: ಇಂದು ಈ ರಾಶಿಯ ವಿದ್ಯಾರ್ಥಿಗಳಿಗೆ ಓದಿನಲ್ಲಿ ಸಮಸ್ಯೆ ಆಗಬಹುದು. ನೀವು ಯಾವುದೇ ಕಾರಣಕ್ಕೂ ಮನೆಯ ಸದಸ್ಯರನ್ನು ಅವಮಾನಿಸಬೇಡಿ.