Daily Horoscope: ಸಮಸ್ಯೆಗಳಿಗೆ ಫುಲ್ ಸ್ಟಾಪ್ ಇಡುವ ದಿನ, ನಿಶ್ಚಿಂತೆಯಿಂದಿರಿ!
ಸಿತಾರಾ ಹೆಸರಿನ ವೆಲ್ನೆಸ್ ಸ್ಟುಡಿಯೋ (Sitara Wellness Studio) ವೆಬ್ಸೈಟ್ ಅನ್ನು ನಡೆಸುತ್ತಿರುವ ಪೂಜಾ ಚಂದ್ರ (Puja Chandra) ಆಧ್ಯಾತ್ಮಿಕ ನೆಲೆಯಲ್ಲಿ ಜೀವನದ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಿದ್ದಾರೆ. ಹರೆಯದಿಂದಲೂ ರಾಶಿ ಭವಿಷ್ಯ, ಆಧ್ಯಾತ್ಮಿಕತೆಗೆ ಒತ್ತು ನೀಡುತ್ತಾ ಬಂದಿರುವ ಇವರು ಹೀಲಿಂಗ್ ಸೆಶನ್ಗಳನ್ನು ಕೂಡ ನಡೆಸುತ್ತಾರೆ. ರಾಶಿ ಭವಿಷ್ಯಗಳನ್ನು ಮಾಹಿತಿಪೂರ್ಣವಾಗಿ ತಿಳಿಸುವುದರಲ್ಲೂ ನಿಷ್ಣಾತರಾಗಿರುವ ಇವರು ರಾಶಿಯ ವಿಶೇಷತೆಯನ್ನು ಧನಾತ್ಮಕವಾಗಿ ತಿಳಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ.
ಮೇಷ: ಕೆಲವು ತಿಂಗಳ ಹಿಂದೆ ನೀವು ತೆಗೆದುಕೊಂಡಿರುವ ಕೆಲವು ನಿರ್ಧಾರಗಳು ಈಗ ಧನಾತ್ಮಕ ಫಲಿತಾಂಶಗಳನ್ನು ನೀಡಬಹುದು. ನಿಮ್ಮ ಸ್ನೇಹಿತರ ವಲಯದಲ್ಲಿರುವ ಕೆಲವರು ನಿಮ್ಮ ಬಗ್ಗೆ ತಪ್ಪು ಮಾಹಿತಿ ಹರಡುತ್ತಿರಬಹುದು. ನೀವು ವಾದಗಳನ್ನು ತಪ್ಪಿಸಬೇಕು ಮತ್ತು ನಿಮ್ಮ ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಅದೃಷ್ಟದ ಚಿಹ್ನೆ - ಹಡಗು
2/ 12
ವೃಷಭ: ನಿಮ್ಮ ಸಮಸ್ಯೆಗಳಿಗೆ ಪರಿಹಾರ ನೀಡುವ ಮಾರ್ಗದರ್ಶಕರು ಸಿಗಬಹುದು. ಒಳ್ಳೆಯ ಜನರ ತಂಡದೊಂದಿಗೆ ಕೆಲಸ ಮಾಡಲು ನೀವು ಅದೃಷ್ಟವಂತರು. ಸಂಬಂಧದಲ್ಲಿ ಸಮಸ್ಯೆಗಳು ಬರಬಹುದು. ಅದೃಷ್ಟದ ಚಿಹ್ನೆ - ಗುಬ್ಬಚ್ಚಿ
3/ 12
ಮಿಥುನ: ಕಳೆದ ವರ್ಷದವರೆಗೆ ಕೇವಲ ಕನಸಾಗಿದ್ದ ಯಾವುದೋ ಆಸೆ ನನಸಾಗಬಹುದು. ವಿಶ್ವಾಸಾರ್ಹ ಜನರು ನಿಮ್ಮನ್ನ ಹುಡುಕಿಬರಬಹುದು. ಅನುಮಾನಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ನಿಮ್ಮ ಜೀವನದಲ್ಲಿ ಸಮಸ್ಯೆ ಉಂಟು ಮಾಡುತ್ತದೆ. ಅದೃಷ್ಟದ ಚಿಹ್ನೆ - ಕಟ್ಟಡ
4/ 12
ಕಟಕ: ನೀವು ಹಿಂದೆ ಕೆಲಸ ಮಾಡುತ್ತಿದ್ದಂತೆಯೇ ಅದೇ ಉತ್ಸಾಹದಿಂದ ಕೆಲಸ ಮಾಡಬೇಕು. ಆರೋಗ್ಯ ವಿಚಾರದಲ್ಲಿ ವ್ಯಾಯಾಮ ನಿಜವಾಗಿಯೂ ಸಹಾಯ ಮಾಡಬಹುದು. ನಿಮ್ಮ ಪೋಷಕರು ನಿಮಗೆ ಸಹಾಯ ಮಾಡಬಹುದು. ಅದೃಷ್ಟದ ಚಿಹ್ನೆ - ಸೂರ್ಯೋದಯ
5/ 12
ಸಿಂಹ: ನಿಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಲು ಹೂಡಿಕೆ ಮಾಡಬೇಕು. ಯೋಜನೆಗಳನ್ನು ಒಪ್ಪಿಕೊಳ್ಳುವ ಮೊದಲು ಸರಿಯಾದ ಮಾಹಿತಿ ಪಡೆದಿರಬೇಕು. ಕೌಟುಂಬಿಕ ಜೀವನ ಶಾಂತಿಯುತವಾಗಿರುತ್ತದೆ. ಅದೃಷ್ಟದ ಚಿಹ್ನೆ - ನೀಲಿ ಕಿರಣ
6/ 12
ಕನ್ಯಾ: ಬಹಳ ಆಳವಾಗಿ ಆಲೋಚನೆ ಮಾಡಿ ನಿರ್ಧಾರ ಮಾಡುವುದು ನಿಮಗೆ ಸಹಾಯ ಮಾಡುತ್ತದೆ. ಒಂದು ವೇಳೆ ನೀವು ಹೊಸದನ್ನು ಪ್ರಾರಂಭಿಸಲು ಮನಸ್ಸು ಮಾಡಿದ್ದರೆ, ಈಗಿನಿಂದಲೇ ಪ್ಲ್ಯಾನ್ ಮಾಡಿ. ಅದೃಷ್ಟದ ಚಿಹ್ನೆ - ಹಿತ್ತಾಳೆ
7/ 12
ತುಲಾ: ದಿನವು ಇತರ ದಿನಗಳಿಗಿಂತ ವಿಭಿನ್ನವಾಗಿರುತ್ತದೆ. ಸಮಯವನ್ನು ವ್ಯರ್ಥ ಮಾಡದೆ, ನೀವು ಧುಮುಕಬೇಕು. ಅನಗತ್ಯ ಹಣ ಖರ್ಚು ಮಾಡಬೇಡಿ. ನೀವು ಕಾಯುತ್ತಿರುವ ಯಾವುದೋ ವಿಷಯಕ್ಕೆ ಇನ್ನೂ ಸ್ವಲ್ಪ ಸಮಯ ಕಾಯಬೇಕಾಗುತ್ತದೆ. ಅದೃಷ್ಟದ ಚಿಹ್ನೆ - ಟೈ
8/ 12
ವೃಶ್ಚಿಕ: ಯಾವುದೋ ಪ್ರಮುಖ ವಿಷಯದ ಬಗ್ಗೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವುದು ಬೇಡ. ನೀವು ಮನದ ಮಾತನ್ನು ಹೇಳದಿರುವುದು ಉತ್ತಮ. ಬೇರೆಯವರ ವಿಷಯಗಳಲ್ಲಿ ಹಸ್ತಕ್ಷೇಪ ಮಾಡಬೇಡಿ. ಈಗ ತೆಗೆದುಕೊಂಡಿರುವ ಕಠಿಣ ನಿರ್ಧಾರವು ನಿಮ್ಮನ್ನು ನಂತರ ಪಶ್ಚಾತ್ತಾಪ ಪಡುವಂತೆ ಮಾಡಬಹುದು. ಅದೃಷ್ಟದ ಚಿಹ್ನೆ - ನೇರಳೆ ಹೂವುಗಳು
9/ 12
ಧನುಸ್ಸು: ಮದುವೆಯ ಪ್ರಸ್ತಾಪಗಳು ಬರಬೇಕು, ಮುರಿದ ಸಂಬಂಧಗಳು ಸರಿಯಾಗುತ್ತದೆ. ನೀವು ಕೆಲವು ಪ್ರಭಾವಿ ವ್ಯಕ್ತಿಗಳನ್ನು ಭೇಟಿಯಾಗಬಹುದು, ಅವರು ಮುಂಬರುವ ದಿನಗಳಲ್ಲಿ ಹೆಚ್ಚು ಸಹಾಯ ಮಾಡುತ್ತಾರೆ. ಅದೃಷ್ಟದ ಚಿಹ್ನೆ - ಚಿಟ್ಟೆ
10/ 12
ಮಕರ: ನಿಮ್ಮ ಪ್ರಾಮಾಣಿಕ ಉದ್ದೇಶ ಮತ್ತು ಪ್ರಾಮಾಣಿಕ ಕಾಳಜಿಯಿಂದ ನಿಮ್ಮ ಸುತ್ತಲಿರುವ ಪ್ರತಿಯೊಬ್ಬರು ನಿಮ್ಮನ್ನ ಇಷ್ಟಪಡುತ್ತಾರೆ. ಯಾವುದೇ ಕಾರಣವಿಲ್ಲದೆ ಕೆಲವೊಮ್ಮೆ ಜನರನ್ನು ನೀವೇ ಹತ್ತಿರ ಸೇರಿಸುವುದು ಒಳ್ಳೆಯದು. ಅದೃಷ್ಟದ ಚಿಹ್ನೆ - ಕ್ಯಾಂಡಲ್ ಸ್ಟ್ಯಾಂಡ್
11/ 12
ಕುಂಭ: ಇಂದು ಹೆಚ್ಚು ಜನರ ಭೇಟಿಯಾಗಬೇಡಿ. ಸ್ನೇಹಿತರಿಂದ ದೂರ ಇರಿ. ಇದರಿಂದ ನಿಮ್ಮ ಕೆಲಸ ಮತ್ತು ಮನಸ್ಸಿನ ಶಾಂತಿ ಹಾಳಾಗಬಹುದು. ನಿಮ್ಮ ಕೌಶಲ್ಯವನ್ನು ಹೆಚ್ಚಿಸಿಕೊಳ್ಳುವ ದಿನ. ಆರೋಗ್ಯದ ಬಗ್ಗೆ ಕಾಳಜಿವಹಿಸಿ. ಅದೃಷ್ಟದ ಚಿಹ್ನೆ: ಸಂಗೀತ
12/ 12
ಮೀನ: ನೀವು ಈಗ ಅನೇಕ ತಂತ್ರಗಳನ್ನು ಕರಗತ ಮಾಡಿಕೊಂಡಿರಬಹುದು ಆದರೆ ನಿಮಗೆ ಇನ್ನೂ ಬೇಕಾಗಿರುವುದು ತಾಳ್ಮೆ ಅಷ್ಟೇ. ಕೆಲವೊಮ್ಮೆ ಅಹಂಕಾರ ತೋರಿಸುತ್ತೀರಿ. ಅದೃಷ್ಟದ ಚಿಹ್ನೆ: ಬುಕ್