Daily Horoscope: ನಿಮ್ಮನ್ನ ಜಡ್ಜ್ ಮಾಡುವವರನ್ನು ನೆಗ್ಲೆಕ್ಟ್ ಮಾಡಿ, ಕಳೆದುಕೊಂಡಿದ್ದ ವಸ್ತು ನಿಮಗೆ ಸಿಗಲಿದೆ
ಸಿತಾರಾ ಹೆಸರಿನ ವೆಲ್ನೆಸ್ ಸ್ಟುಡಿಯೋ (Sitara Wellness Studio) ವೆಬ್ಸೈಟ್ ಅನ್ನು ನಡೆಸುತ್ತಿರುವ ಪೂಜಾ ಚಂದ್ರ (Puja Chandra) ಆಧ್ಯಾತ್ಮಿಕ ನೆಲೆಯಲ್ಲಿ ಜೀವನದ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಿದ್ದಾರೆ. ಹರೆಯದಿಂದಲೂ ರಾಶಿ ಭವಿಷ್ಯ, ಆಧ್ಯಾತ್ಮಿಕತೆಗೆ ಒತ್ತು ನೀಡುತ್ತಾ ಬಂದಿರುವ ಇವರು ಹೀಲಿಂಗ್ ಸೆಶನ್ಗಳನ್ನು ಕೂಡ ನಡೆಸುತ್ತಾರೆ. ರಾಶಿ ಭವಿಷ್ಯಗಳನ್ನು ಮಾಹಿತಿಪೂರ್ಣವಾಗಿ ತಿಳಿಸುವುದರಲ್ಲೂ ನಿಷ್ಣಾತರಾಗಿರುವ ಇವರು ರಾಶಿಯ ವಿಶೇಷತೆಯನ್ನು ಧನಾತ್ಮಕವಾಗಿ ತಿಳಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ.
ಮೇಷ: ಸರಿಯಾದ ದಾರಿಯಲ್ಲಿ ಮಾಡಿದ ನಿಮ್ಮ ಹಿಂದಿನ ಎಲ್ಲಾ ಪ್ರಯತ್ನಗಳಿಗೆ ಇಂದು ಲಾಭ ಸಿಗಲಿದೆ. ಯಾರಾದರೂ ನಿಮ್ಮನ್ನು ಅನಗತ್ಯವಾಗಿ ಜಡ್ಜ್ ಮಾಡಲು ಬಂದರೆ ಅದನ್ನು ನಿರ್ಲಕ್ಷಿಸಿ. ಅದೃಷ್ಟದ ಚಿಹ್ನೆ - ಚಪ್ಪಲಿಗಳು
2/ 12
ವೃಷಭ: ಟ್ರಿಪ್ ಪ್ಲ್ಯಾನ್ ಮಾಡುವುದು ನಿಮಗೆ ಸ್ವಲ್ಪ ನೆಮ್ಮದಿ ಸಿಗುತ್ತದೆ. ಒಂದೊಂದಾಗಿ ಸಮಸ್ಯೆಗಳು ಮುಗಿಯುವ ಸಮಯ ಇದು. ಬಹಳ ದಿನಗಳಿಂದ ನಿಂತಿದ್ದ ಹಣ ಮರಳಿ ಸಿಗಲಿದೆ. ಅದೃಷ್ಟದ ಚಿಹ್ನೆ - ಹೂವು
3/ 12
ಮಿಥುನ: ನೀವು ಏನು ಮಾಡಲು ಬಯಸುತ್ತೀರೋ ಅದನ್ನು ಮಾಡಿ ಅಷ್ಟೇ. ಒಬ್ಬ ಸಹೋದರ ಅಥವಾ ಸಂಬಂಧಿಗೆ ನಿಮ್ಮ ಮಾರ್ಗದರ್ಶನ ಬೇಕಾಗಬಹುದು. ನೀವು ವಿಶೇಷ ವ್ಯಕ್ತಿಯನ್ನು ಸಂಜೆ ಅನಿರೀಕ್ಷಿತ ಭೇಟಿ ಆಗಬಹುದು. ಅದೃಷ್ಟದ ಚಿಹ್ನೆ - ಬೆಳ್ಳಿ ತಂತಿ
4/ 12
ಕಟಕ: ಶಾಪಿಂಗ್ ಮಾಡಲು ಇಂದು ಸೂಕ್ತವಾದ ದಿನ ಎನ್ನಬಹುದು. ಕೆಲಸದಲ್ಲಿ ಸ್ವಲ್ಪ ಒತ್ತಡ ಹೆಚ್ಚಾಗಲಿದೆ. ಮನೆಯಲ್ಲಿನ ಕೊರತೆಯು ದಿನನಿತ್ಯದ ಕೆಲಸದಲ್ಲಿ ಅಡೆತಡೆಗಳನ್ನು ಉಂಟುಮಾಡಬಹುದು. ಅದೃಷ್ಟದ ಚಿಹ್ನೆ - ಫೋಟೋ
5/ 12
ಸಿಂಹ: ಟೀಮ್ವರ್ಕ್ ಕಡೆ ಇಂದಿನ ನಿಮ್ಮ ಗಮನ ಅಗತ್ಯವಿದೆ. ನೀವು ಹಣ ಮಾಡಲು ಹೊಸ ಅವಕಾಶ ಪಡೆಯುವ ಸಾಧ್ಯತೆ ಇದೆದೆ. ಕೆಲಸದಲ್ಲಿ ಸ್ವಲ್ಪ ವಾದ-ವಿವಾದಗಳು ಉಂಟಾಗಬಹುದು, ಇದು ಸಣ್ಣ ಸಮಸ್ಯೆಗೆ ಕಾರಣವಾಗುತ್ತದೆ. ಅದೃಷ್ಟದ ಚಿಹ್ನೆ - ಬಣ್ಣದ ಬಾಟಲಿ
6/ 12
ಕನ್ಯಾ: ನಿಮ್ಮ ಕೆಲಸ ಇಂದು ಮುಗಿಯಲಿದೆ, ಅಹಂಕಾರದಿಂದ ಯಾವುದು ಸಾಧ್ಯವಾಗುವುದಿಲ್ಲ ನೆನಪಿಡಿ. ಸಣ್ಣ ಯೋಜನೆಗಳನ್ನು ಮಾಡುವುದು ನಿಮಗೆ ಸಹಾಯ ಮಾಡುತ್ತದೆ. ಅದೃಷ್ಟದ ಚಿಹ್ನೆ - ಮರದ ಪೆಟ್ಟಿಗೆ
7/ 12
ತುಲಾ: ಕುಟುಂಬದೊಂದಿಗೆ ಸ್ವಲ್ಪ ಸಮಯವನ್ನು ಕಳೆಯಲು ಇದು ಒಳ್ಳೆಯ ದಿನವಾಗಿದೆ. ಕೆಲಸದಲ್ಲಿ ನಿಮ್ಮ ಅವಶ್ಯಕತೆ ಹೆಚ್ಚಿರಲಿದೆ. ಅತಿಯಾದ ಒತ್ತಡವು ನಿಮ್ಮನ್ನು ಆಯಾಸಗೊಳಿಸಬಹುದು. ಅದೃಷ್ಟದ ಚಿಹ್ನೆ – ಹೂವಿನಕುಂಡ
8/ 12
ವೃಶ್ಚಿಕ: ನಿಮ್ಮ ಹಳೆಯ ಉತ್ಸಾಹವನ್ನು ಎಂದಿಗೂ ಸಾಯಲು ಬಿಡುವುದಿಲ್ಲ ಎಂದು ನೀವೇ ಪ್ರತಿಜ್ಞೆ ಮಾಡಿಕೊಳ್ಳುವುದು ಉತ್ತಮ. ನಿಮ್ಮ ಕೆಲಸವನ್ನು ಮರುಪರಿಶೀಲಿಸುವ ಸಮಯ. ಅದೃಷ್ಟದ ಚಿಹ್ನೆ - ಐಸ್ ಕ್ರೀಮ್
9/ 12
ಧನುಸ್ಸು: ದೂರದ ಅಥವಾ ವಿದೇಶದಿಂದ ಬರುವ ಕರೆ ನಿಮ್ಮ ದಿನವನ್ನು ಬದಲಾಯಿಸಬಹುದು. ನಿಮಗೆ ಸರ್ಪ್ರೈಸ್ ಸಿಗಲಿದೆ. ಜೀವನ ಸಂಗಾತಿಯ ಬಗ್ಗೆ ಸ್ವಲ್ಪ ಗಮನ ಕೊಡುವುದು ಅಗತ್ಯ. ಅದೃಷ್ಟದ ಚಿಹ್ನೆ - ಚೆಂಡು
10/ 12
ಮಕರ: ಆರೋಗ್ಯದ ಬಗ್ಗೆ ಇಂದು ಕಾಳಜಿ ತೆಗೆದುಕೊಳ್ಳುವ ದಿನ ಎನ್ನಬಹುದು. ಇಂದು ಪುಸ್ತಕ ಓದುವುದು ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಕಳೆದುಹೋಗಿದ್ದ ವಸ್ತು ನಿಮಗೆ ಸಿಗಲಿದೆ. ಅದೃಷ್ಟದ ಚಿಹ್ನೆ - ನೊಣ
11/ 12
ಕುಂಭ: ನಿಮ್ಮ ಜೀವನದ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಲು ಇಂದು ಸೂಕ್ತವಾದ ದಿನ. ಮನಸ್ಸಿನ ಭಾವನೆಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳಿ. ಮಿಶ್ರ ಫಲಿತಾಂಶಗಳನ್ನು ಹೊಂದಿರುವ ದಿನ ಇದು. ಅದೃಷ್ಟದ ಚಿಹ್ನೆ - ಇಬ್ಬನಿ ಹನಿಗಳು
12/ 12
ಮೀನ: ಹೊರಗಿನವರ ಸಕಾಲಿಕ ಸಲಹೆಯು ಬಹಳಷ್ಟು ಸಮಯವನ್ನು ಉಳಿಸುತ್ತದೆ. ನೀವು ಈಗ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಬೇಕು. ಸ್ನೇಹಿತರು ಮತ್ತು ಕುಟುಂಬದವರಿಗೆ ಆದ್ಯತೆ ನೀಡಬೇಕು. ಅದೃಷ್ಟದ ಚಿಹ್ನೆ - ಸರೋವರ