Daily Horoscope: ಇಂದು ಸ್ವಲ್ಪ ನಷ್ಟವಾಗುವ ಸಾಧ್ಯತೆ, ಆರೋಗ್ಯದ ಬಗ್ಗೆ ಕಾಳಜಿ ಇರಲಿ
ಸಿತಾರಾ ಹೆಸರಿನ ವೆಲ್ನೆಸ್ ಸ್ಟುಡಿಯೋ (Sitara Wellness Studio) ವೆಬ್ಸೈಟ್ ಅನ್ನು ನಡೆಸುತ್ತಿರುವ ಪೂಜಾ ಚಂದ್ರ (Puja Chandra) ಆಧ್ಯಾತ್ಮಿಕ ನೆಲೆಯಲ್ಲಿ ಜೀವನದ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಿದ್ದಾರೆ. ಹರೆಯದಿಂದಲೂ ರಾಶಿ ಭವಿಷ್ಯ, ಆಧ್ಯಾತ್ಮಿಕತೆಗೆ ಒತ್ತು ನೀಡುತ್ತಾ ಬಂದಿರುವ ಇವರು ಹೀಲಿಂಗ್ ಸೆಶನ್ಗಳನ್ನು ಕೂಡ ನಡೆಸುತ್ತಾರೆ. ರಾಶಿ ಭವಿಷ್ಯಗಳನ್ನು ಮಾಹಿತಿಪೂರ್ಣವಾಗಿ ತಿಳಿಸುವುದರಲ್ಲೂ ನಿಷ್ಣಾತರಾಗಿರುವ ಇವರು ರಾಶಿಯ ವಿಶೇಷತೆಯನ್ನು ಧನಾತ್ಮಕವಾಗಿ ತಿಳಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ.
ಮೇಷ ರಾಶಿ: ಇಂದು ಮೇಷ ರಾಶಿಯವರಿಗೆ ನಷ್ಟವಾಗುವ ಸಾಧ್ಯತ ಇದೆ. ಅತಿಯಾದ ಖರ್ಚುಗಳನ್ನು ನಿಯಂತ್ರಿಸಿದರೆ ಮಾತ್ರ ಲಾಭದ ನಿರೀಕ್ಷೆ ಮಾಡಬಹುದು. ನಿಮ್ಮಿಷ್ಟದ ಕ್ಷೇತ್ರದಲ್ಲಿ ಇಂದು ಸಾಧನೆ ಮಾಡುವ ದಿನ ಇದು. ಅದೃಷ್ಟದ ಚಿಹ್ನೆ: ಕಪ್
2/ 12
ವೃಷಭ ರಾಶಿ: ಇಂದು ನಿಮ್ಮ ಆರೋಗ್ಯದಲ್ಲಿ ಸ್ವಲ್ಪ ಏರಿಳಿತ ಕಾಣಿಸಬಹುದು. ವೈದ್ಯರ ಬಳಿ ಹೋಗುವುದು ಉತ್ತಮ. ಹಾಗೆಯೇ ಹೂಡಿಕೆ ಮಾಡುವಾಗ ಎಚ್ಚರ ಕೆಲವೊಂದು ನಷ್ಟ ಉಂಟಾಗಬಹುದು. ಇಂದು ಸಂಗಾತಿಯ ಜೊತೆ ಸಮಯ ಕಳೆಯಲು ಉತ್ತಮ ದಿನ. ಅದೃಷ್ಟದ ಚಿಹ್ನೆ: ಬುಕ್
3/ 12
ಮಿಥುನ ರಾಶಿ: ಇಂದು ನಿಮಗೆ ಒಳ್ಳೆಯ ದಿನವಾಗಿದ್ದು, ಹೂಡಿಕೆಯಲ್ಲಿ ಲಾಭ ಸಿಗಲಿದೆ. ವಿದ್ಯಾರ್ಥಿಗಳಿಗೆ ಇಂದು ಶುಭದಿನ ಎನ್ನಬಹುದು. ಇಂದು ನಿಮ್ಮ ಆದಾಯ ಹೆಚ್ಛಾಗಲಿದೆ. ಅದೃಷ್ಟದ ಚಿಹ್ನೆ: ಹೂವು
4/ 12
ಕರ್ಕಾಟಕ ರಾಶಿ: ಶೈಕ್ಷಣಿಕ ರಂಗದಲ್ಲಿ ವಿದ್ಯಾರ್ಥಿಗಳನ್ನು ಯಶಸ್ಸು ಹುಡುಕಿ ಬರಲಿದೆ. ನಿಮ್ಮ ಕಾರ್ಯಕ್ಷಮತೆಯಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗುತ್ತೀರಿ. ಈ ರಾಶಿಯವರಿಗಿಂದು ಒಳ್ಳೆಯ ದಿನ ಎಂದರೆ ತಪ್ಪಲ್ಲ. ಇಂದು ಮನೆಯಲ್ಲಿ ಸಂಭ್ರಮದ ದಿನವಾಗಿರಲಿದೆ. ಅದೃಷ್ಟದ ಚಿಹ್ನೆ: ಬಾಟಲಿ
5/ 12
ಸಿಂಹ ರಾಶಿ: ನಿಮಗೆ ಇಂದು ಆರ್ಥಿಕವಾಗಿ ಸ್ವಲ್ಪ ಸಮಸ್ಯೆ ಉಂಟಾಗಬಹುದು. ಹಾಗೆಯೇ ಆರೋಗ್ಯದ ವಿಚಾರದಲ್ಲಿ ಸಹ ಸ್ವಲ್ಪ ಎಚ್ಚರಿಕೆಯ ಅಗತ್ಯವಿದ್ದು, ನಿಮ್ಮ ಪ್ರೀತಿಗೆ ಇಂದು ಮನೆಯವರ ಒಪ್ಪಿಗೆ ಸಿಗಲಿದೆ. ಅದೃಷ್ಟದ ಚಿಹ್ನೆ: ಲ್ಯಾಪ್ ಟಾಪ್
6/ 12
ಕನ್ಯಾ ರಾಶಿ: ಮನೆಯಲ್ಲಿ ಸ್ವಲ್ಪ ಕಿರಿಕಿರಿ ಆಗಲಿದ್ದು, ಮನಸ್ಸಿನಲ್ಲಿ ತಳಮಳವಾಗಲಿದೆ. ಇಂದು ಖರ್ಚು ಹೆಚ್ಚಾಗುವ ಸಾಧ್ಯತೆ ಇದ್ದು, ಸ್ವಲ್ಪ ಕಷ್ಟಪಡಬೇಕಾಗುತ್ತದೆ. ಹಣದ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಅದೃಷ್ಟದ ಚಿಹ್ನೆ: ಬ್ಯಾಗ್
7/ 12
ತುಲಾ ರಾಶಿ: ನೀವು ಮನೆಯಲ್ಲಿ ದೊಡ್ಡ ಕಾರ್ಯಕ್ರಮವನ್ನು ಆಯೋಜನೆ ಮಾಡುವ ಸಮಯ ಬಂದಿದೆ. ಮಕ್ಕಳಿಂದ ಅಥವಾ ಸಂಗಾತಿಯಿಂದ ಗುಡ್ ನ್ಯೂಸ್ ಸಿಗಲಿದೆ. ಅನಗತ್ಯವಾಗಿ ಹೊರಗೆ ಹೋಗುವುದನ್ನ ತಪ್ಪಿಸಿ. ಅಲ್ಲದೇ ಅತಿಯಾಗಿ ಯಾರನ್ನೂ ನಂಬಬೇಡಿ. ಅದೃಷ್ಟದ ಚಿಹ್ನೆ: ಪೆನ್
8/ 12
ವೃಶ್ಚಿಕ ರಾಶಿ: ಇಂದು ನಿಮ್ಮ ಮನಸ್ಸಿಗೆ ಬಹಳ ನೆಮ್ಮದಿ ಸಿಗಲಿದೆ. ಜೀವನದಲ್ಲಿ ಈ ದಿನವನ್ನು ಎಂದಿಗೂ ಮರೆಯುವುದಿಲ್ಲ. ಸಣ್ಣ-ಪುಟ್ಟ ಸಮಸ್ಯೆ ಬಂದರೂ ಬೇಗ ಪರಿಹಾರವಾಗುತ್ತದೆ. ಕೋರ್ಟ್ ಕೇಸ್ನಲ್ಲಿ ಜಯ ಸಿಗಲಿದೆ. ಅದೃಷ್ಟದ ಚಿಹ್ನೆ: ಪೇಪರ್
9/ 12
ಧನು ರಾಶಿ: ನಿಮ್ಮ ಸಂಗಾತಿಗೆ ಇಂದು ಸಮಯ ಮೀಸಲಿಡುವುದು ಬಹಳ ಅಗತ್ಯವಾಗುತ್ತದೆ. ಸ್ವಲ್ಪ ಒತ್ತಡ ಬರುವ ಸಾಧ್ಯತೆ ಇದ್ದು, ಕೂಲ್ ಆಗಿ ನಿಭಾಯಿಸಿಕೊಂಡು ಹೋಗಿ. ಕೆಲಸದ ವಿಚಾರದಲ್ಲಿ ಲಾಭ ಸಿಗಲಿದೆ. ಅದೃಷ್ಟದ ಚಿಹ್ನೆ: ಹೂಜಿ
10/ 12
ಮಕರ ರಾಶಿ: ಮನೆಗೆ ಹೊಸ ಅತಿಥಿಗಳ ಆಗಮನವಾಗಬಹುದು. ಹಳೆಯ ದಿನಗಳ ನೆನಪು ಸ್ವಲ್ಪ ಕಾಡಲಿದೆ, ಈ ದಿನ ನೆಮ್ಮದಿ ಕಳೆದುಕೊಳ್ಳುವ ಸಾಧ್ಯತೆ ಇದೆ. ನಿಮ್ಮ ಪ್ರಯತ್ನ ಬಿಡದೇ ಮುಂದುವರೆಯಿರಿ. ವೈಯಕ್ತಿಕ ಜೀವನದಲ್ಲಿ ಕಿರಿಕಿರಿ ಇರಲಿದೆ. ಅದೃಷ್ಟದ ಚಿಹ್ನೆ: ಬಾಕ್ಸ್
11/ 12
ಕುಂಭ ರಾಶಿ: ಇಂದು ನಿಮಗೆ ಒಳ್ಳೆಯ ದಿನ ಎಂದು ಸಾಬೀತಾಗುತ್ತದೆ. ನಿಂತು ಹೋಗಿದ್ದ ಕೆಲಸಗಳು ಇಂದು ಮುಗಿಯಲಿದೆ. ಹಳೆಯ ಹೂಡಿಕೆ ಸಹ ನಿಮಗೆ ಲಾಭ ನೀಡುತ್ತದೆ. ಮದುವೆಯ ಆಫರ್ ಬರಬಹುದು. ಅದೃಷ್ಟದ ಚಿಹ್ನೆ: ಸೇಬು ಹಣ್ಣು
12/ 12
ಮೀನ ರಾಶಿ: ಇಂದು ಆದಾಯವನ್ನು ಹೆಚ್ಚಿಸುವ ಆಫರ್ಸ್ ಸಿಗಲಿದೆ ಎನ್ನಬಹುದು. ಆಫೀಸ್ನಲ್ಲಿ ಪ್ರಶಂಸೆಗೆ ಪಾತ್ರರಾಗುತ್ತಿರಿ. ಇಂದು ಮನಸ್ಸಿಗೆ ಖುಷಿಯಾಗುವ ದಿನ. ಅದೃಷ್ಟದ ಚಿಹ್ನೆ: ಗಾಜಿನ ಬಾಟಲಿ