ಮಿಥುನ ರಾಶಿ: ಈ ವಾರ ಈ ರಾಶಿಯವರಿಗೆ ಹಣದ ಒಳಹರಿವು ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ. ವೃತ್ತಿಯಲ್ಲಿ ಹಣ ಸಂಪಾದನೆ ಹೆಚ್ಚುತ್ತದೆ. ಆಸ್ತಿ ವಿಚಾರದಲ್ಲಿ ಸಂತೋಷಕರ ಸುದ್ದಿಗಳು ಕೇಳಿ ಬರುತ್ತವೆ. ಹಿರಿಯರು ನಡೆಸುತ್ತಿದ್ದ ವ್ಯಾಪಾರವನ್ನು ಮುಂದುವರಿಸುವುದು ಬಹಳ ಒಳ್ಳೆಯದು. ವ್ಯಾಪಾರ-ವ್ಯವಹಾರಗಳಲ್ಲಿ ನಿಮಗೆ ಹೆಚ್ಚಿನ ಮಾನ್ಯತೆ ದೊರೆಯುತ್ತದೆ. ಅದೃಷ್ಟದ ಚಿಹ್ನೆ: ಗಾಜಿನ ಆಮೆ
ವೃಶ್ಚಿಕ ರಾಶಿ: ಈ ರಾಶಿಯವರಿಗೆ ಹಣದ ಒಳಹರಿವು ಅಪೇಕ್ಷೆಗೆ ತಕ್ಕಂತೆ ಇರುತ್ತದೆ. ವೃತ್ತಿಯಲ್ಲಿ ಮೇಲ್ದರ್ಜೆಗೇರುವ ಸಂಭವ ಹೆಚ್ಚಾಗಿದೆ. ಮಾನಸಿಕ ಶಾಂತಿಗಾಗಿ ನೀವು ಒತ್ತಡವನ್ನು ಜಯಿಸಲು ಮಾರ್ಗಗಳನ್ನು ಕಂಡುಕೊಳ್ಳಬೇಕು. ದೂರದ ಸಂಬಂಧಿಯಿಂದ ಕೆಲವು ಒಳ್ಳೆಯ ಸುದ್ದಿಗಳು ನಿಮ್ಮ ಇಡೀ ಕುಟುಂಬಕ್ಕೆ ಸಂತೋಷದ ಕ್ಷಣಗಳನ್ನು ತರುವ ಸಾಧ್ಯತೆಯಿದೆ. ಅದೃಷ್ಟದ ಚಿಹ್ನೆ: ಖಾಲಿ ಆಕಾಶ
ಮಕರ ರಾಶಿ: ಈ ರಾಶಿಯವರಿಗೆ ಹಣದ ಹರಿವು ನಿಮ್ಮ ಅಗತ್ಯವನ್ನು ಪೂರೈಸುತ್ತದೆ. ಒಡಹುಟ್ಟಿದವರಿಂದ ಸಮಸ್ಯೆಗಳು ಎದುರಾಗಬಹುದು. ಉಸಿರಾಟದ ತೊಂದರೆ, ಕಣ್ಣಿನ ತೊಂದರೆ ಇರುವವರು ಹೆಚ್ಚು ಎಚ್ಚರಿಕೆಯನ್ನು ತೆಗೆದುಕೊಳ್ಳುವುದು ಒಳ್ಳೆಯದು. ಈ ವಾರ ಹೊಸ ವಾಹನ ಕೊಳ್ಳುವ ಯೋಗವಿದೆ. ವೃತ್ತಿಪರ ದೃಷ್ಟಿಕೋನದಿಂದ ಈ ವಾರ ನಿಮಗೆ ಉತ್ತಮವಾಗಿದೆ. ಅದೃಷ್ಟದ ಚಿಹ್ನೆ: ಆಟವಾಡುತ್ತಿರುವ ಮಗು
ಕುಂಭ ರಾಶಿ: ಈ ರಾಶಿಯವರಿಗೆ ಆದಾಯ ಸ್ಥಿತಿ ಸಾಮಾನ್ಯವಾಗಿ ಇರುತ್ತದೆ. ಸಂಗಾತಿ ಆದಾಯದಲ್ಲಿ ಸ್ವಲ್ಪ ಏರಿಕೆಯನ್ನು ಕಾಣಬಹುದು. ಉದ್ಯೋಗ ಸ್ಥಳದಲ್ಲಿ ಮಹಿಳಾ ಹಿರಿಯ ಅಧಿಕಾರಿಗಳಿಂದ ಸಾಕಷ್ಟು ಸಹಾಯ ದೊರೆಯುತ್ತದೆ. ಗೃಹ ನಿರ್ಮಾಣದ ಬಗ್ಗೆ ಸಾಕಷ್ಟು ಚಿಂತನೆಯನ್ನು ಮಾಡುವಿರಿ. ವಾರದ ಕೊನೆಯ ಭಾಗದಲ್ಲಿ ಅಚಾನಕ್ಕಾಗಿ ದೂರದ ಸಂಬಂಧಿಯಿಂದ ಬರುವ ಯಾವುದೋ ಶುಭ ಸುದ್ದಿ ಇಡೀ ಕುಟುಂಬಕ್ಕೆ ಸಂತಸ ನೀಡುತ್ತದೆ. ಅದೃಷ್ಟದ ಚಿಹ್ನೆ: ಗಿಡದಲ್ಲಿರುವ ಹಳದಿ ಹೂವು
ಮೀನ ರಾಶಿ: ಈ ರಾಶಿಯವರಿಗೆ ಹಣದ ಒಳಹರಿವು ತೃಪ್ತಿಕರವಾಗಿರುತ್ತದೆ. ಹಿರಿಯರಿಂದ ನಿಮಗೆ ಸಾಕಷ್ಟು ಸಹಾಯ ದೊರೆಯುತ್ತದೆ. ಹೆಚ್ಚು ಮಸಾಲೆಯುಕ್ತ ಮತ್ತು ಕರಿದ ಆಹಾರವನ್ನು ಸೇವಿಸುವಂತಹ ಅಭ್ಯಾಸಗಳು ನಿಮಗೆ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. . ಸ್ಥಿರಾಸ್ತಿ ಮಾಡುವ ವಿಚಾರದಲ್ಲಿ ಈಗ ಆತುರ ಬೇಡ. ಸಂಗಾತಿಯು ನಡೆಸುವ ವ್ಯವಹಾರಗಳಲ್ಲಿ ಸಾಕಷ್ಟು ಅಭಿವೃದ್ಧಿ ಇರುತ್ತದೆ. ಅದೃಷ್ಟದ ಚಿಹ್ನೆ: ಬಾಳೆಹಣ್ಣು