Daily Horoscope: ನಿಮ್ಮ ಬಗ್ಗೆ ಓಡಾಡುತ್ತಿದ್ದ ಗಾಸಿಪ್ ಏನು ಅಂತ ಇಂದು ಗೊತ್ತಾಗಲಿದೆ! ಹೇಗಿರಲಿದೆ ಇಂದಿನ ಭವಿಷ್ಯ?
ಸಿತಾರಾ ಹೆಸರಿನ ವೆಲ್ನೆಸ್ ಸ್ಟುಡಿಯೋ (Sitara Wellness Studio) ವೆಬ್ಸೈಟ್ ಅನ್ನು ನಡೆಸುತ್ತಿರುವ ಪೂಜಾ ಚಂದ್ರ (Puja Chandra) ಆಧ್ಯಾತ್ಮಿಕ ನೆಲೆಯಲ್ಲಿ ಜೀವನದ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಿದ್ದಾರೆ. ಹರೆಯದಿಂದಲೂ ರಾಶಿ ಭವಿಷ್ಯ, ಆಧ್ಯಾತ್ಮಿಕತೆಗೆ ಒತ್ತು ನೀಡುತ್ತಾ ಬಂದಿರುವ ಇವರು ಹೀಲಿಂಗ್ ಸೆಶನ್ಗಳನ್ನು ಕೂಡ ನಡೆಸುತ್ತಾರೆ. ರಾಶಿ ಭವಿಷ್ಯಗಳನ್ನು ಮಾಹಿತಿಪೂರ್ಣವಾಗಿ ತಿಳಿಸುವುದರಲ್ಲೂ ನಿಷ್ಣಾತರಾಗಿರುವ ಇವರು ರಾಶಿಯ ವಿಶೇಷತೆಯನ್ನು ಧನಾತ್ಮಕವಾಗಿ ತಿಳಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ.
ಮೇಷ: ಬದಲಾಗುತ್ತಿರುವ ಪರಿಸ್ಥಿತಿಯಿಂದ ನಿಜವಾಗಿಯೂ ಏನನ್ನು ಬಯಸುತ್ತೀರಿ ಎಂಬುದನ್ನು ನೀವು ಮರುಪರಿಶೀಲಿಸಬೇಕಾಗಬಹುದು. ಅನಿರೀಕ್ಷಿತ ಫೋನ್ ಕರೆ ನಿಮ್ಮ ದಿನವನ್ನು ಖುಷಿಯ ದಿನವಾಗಿಸಲಿದೆ. ಅಪೇಕ್ಷಿತ ಫಲಿತಾಂಶಕ್ಕಾಗಿ ನಿಮಗೆ ಸ್ವಲ್ಪ ತಾಳ್ಮೆ ಬೇಕಾಗಬಹುದು.ಅದೃಷ್ಟದ ಚಿಹ್ನೆ: ನಂಬರ್ ಪ್ಲೇಟ್
2/ 12
ವೃಷಭ: ಇಂದು ಆರಾಮದಾಯಕ ದಿನವಾಗಲಿದ್ದು, ನಿಮಗೆ ಇಷ್ಟವಾಗುವ ಕೆಲಸಗಳನ್ನು ಮಾಡಿ. ಮನಸ್ಸಿಗೆ ಮುದ ನೀಡುವ ಕೆಲಸವನ್ನು ನಿಮ್ಮ ಸ್ನೇಹಿತರೊಂದಿಗೆ ಮಾಡಲಿದ್ದೀರಿ. ಬೇರೆಯವರ ಬಳಿ ಸಾಲ ಪಡೆಯಲು ಇದು ಒಳ್ಳೆಯ ಸಮಯ ಅಲ್ಲ. ಅದೃಷ್ಟದ ಚಿಹ್ನೆ: ನೀರಿನ ಹೂಜಿ
3/ 12
ಮಿಥುನ:ಪ್ರತಿದಿನ ಉತ್ಸಾಹದ ದಿನವಾಗಿರುವುದಿಲ್ಲ, ಇಂದು ನೀವು ಕೊಂಚ ಮಂಕಾಗಿ ಕಾಣಬಹುದು.ಯಾವುದಾದರೂ ಮುಖ್ಯವಾದ ಕೆಲಸ ಮಾಡುವ ದಿನ ಇದಾಗಿರಬಹುದು. ಇಂದು ದೃಷ್ಟಿಕೋನಗಳನ್ನು ಬದಲಾಯಿಸುವ ದಿನ. ಅದೃಷ್ಟದ ಚಿಹ್ನೆ: ಬಣ್ಣದ ಸ್ಕಾರ್ಫ್
4/ 12
ಕಟಕ: ನೀವು ಹಳೆಯ ಸ್ನೇಹಿತರನ್ನು ಭೇಟಿಯಾಗುವ ಸಾಧ್ಯತೆ ಇದೆ. ನಿಂತು ಹೋಗಿದ್ದ ಕೆಲಸವನ್ನು ಇಂದು ಮಾಡುವ ದಿನ. ಉತ್ಸಾಹ ಹೆಚ್ಚಿರುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಿರಬೇಕು. ನೀವು ಕೆಲವು ತಜ್ಞರನ್ನು ಸಂಪರ್ಕಿಸಬಹುದು. ಅದೃಷ್ಟದ ಚಿಹ್ನೆ: ಬುಕ್
5/ 12
ಸಿಂಹ: ನಿಮ್ಮ ಬಗ್ಗೆ ಹರಿದಾಡುತ್ತಿರುವ ಗಾಸಿಪ್ ಇಂದು ನಿಮಗೆ ಗೊತ್ತಾಗಲಿದೆ. ಈ ಹಿಂದೆ ಆಸಕ್ತಿಯುಕ್ತವಾಗಿ ಕಾಣದ ವಿಷಯಗಳು ಈಗ ನಿಮ್ಮ ಗಮನ ಸೆಳೆಯಬಹುದು. ನಿಮ್ಮ ಪೋಷಕರು ನಿಮ್ಮ ಜೊತೆ ಗಂಭೀರ ಚರ್ಚೆ ನಡೆಸಲಿದ್ದಾರೆ. ಅದೃಷ್ಟದ ಚಿಹ್ನೆ: ಸೆಣಬಿನ ಚೀಲ
6/ 12
ಕನ್ಯಾ: ಅನಾವಶ್ಯಕ ಭಯದಿಂದ ಮುಕ್ತಿ ಪಡೆಯುವ ಸಾಧ್ಯತೆ ಇದೆ. ಈ ಭಯ ನಿಮಗೆ ಬಹಳ ಸಮಯದಿಂದ ಚಿಂತೆಗೀಡು ಮಾಡಿರಬಹುದು. ಕೆಲವರನ್ನು ಭೇಟಿ ಮಾಡಲು ನೀವು ಹಿಂದೇಟು ಹಾಕುತ್ತಿದ್ದರೆ, ಇಂದು ಭೇಟಿ ಮಾಡಬೇಕು. ಚರ್ಮದ ಅಲರ್ಜಿಯು ಸಮಸ್ಯೆಯನ್ನು ಉಂಟು ಮಾಡುತ್ತದೆ. ಅದೃಷ್ಟದ ಚಿಹ್ನೆ: ಸ್ಫಟಿಕ
7/ 12
ತುಲಾ: ಪ್ರಾಕ್ಟಿಕಲ್ ಆಗಿ ಇರುವುದು ಕೆಲವೊಮ್ಮೆ ಕೆಲ ಸಮಸ್ಯೆಗಳನ್ನು ತರಬಹುದು. ನಿಮ್ಮ ನಡವಳಿಕೆಯಿಂದ ಹತ್ತಿರದಲ್ಲಿರುವವರಿಗೆ ನೋವಾಗಬಹುದು. ಮಾಡಬೇಕಾದ ಕೆಲಸದ ಮಾಡಲು ಇದು ಒಳ್ಳೆಯ ದಿನವಾಗಿದೆ. ಅದೃಷ್ಟದ ಚಿಹ್ನೆ: ಸಿನಿಮಾ
8/ 12
ವೃಶ್ಚಿಕ: ಇತರರಿಗೆ ಸಹಾಯ ಮಾಡುವ ಸಾಧ್ಯತೆಗಳಿವೆ. ಮನೆಯಲ್ಲಿ ವಾಗ್ವಾದಗಳು ನಡೆಯಬಹುದು ಎಚ್ಚರ. ಜಗಳವನ್ನು ಮನೆಯಲ್ಲೇ ಬಿಡಿ. ನಿಮ್ಮ ಮಕ್ಕಳು ನಿಮಗಾಗಿ ಪ್ಲಾನ್ ಮಾಡುವ ಸಾಧ್ಯತೆಗಳಿವೆ. ಅದೃಷ್ಟದ ಚಿಹ್ನೆ: ಕ್ರಿಕೆಟ್ ಮ್ಯಾಚ್
9/ 12
ಧನಸ್ಸು: ನಿಮ್ಮ ಕೆಲಸ ಈಗ ಬೇರೆಯವರಿಗೆ ಹೆಚ್ಚು ಆಸಕ್ತಿದಾಯಕವಾಗಿ ಕಾಣಬಹುದು. ಕೆಲವೊಂದು ಕೌಶಲ್ಯಗಳನ್ನು ಕಲಿಯಬೇಕಾಗಬಹುದು. ಮನೆಯಲ್ಲಿ ಕೆಲವೊಂದು ಕೆಲಸಗಳನ್ನು ಮಾಡಲು ಇದು ಒಳ್ಳೆಯ ಸಮಯ. ಅದೃಷ್ಟದ ಚಿಹ್ನೆ: ನವಿಲು
10/ 12
ಮಕರ: ಇತ್ತೀಚೆಗೆ ನೀವು ತೆರಳಿದ್ದ ಪ್ರವಾಸದಿಂದ ಹೊಸ ಬ್ಯುಸಿನೆಸ್ ಐಡಿಯಾ ಬರಬಹುದು. ಹಳೆಯ ಸಂಪರ್ಕ ಸಿಗುವ ಸಾಧ್ಯತೆ. ಹೊಸ ಸವಾಲುಗಳು ನಿಮ್ಮನ್ನು ಬ್ಯುಸಿ ಇಡಲಿವೆ. ಅದೃಷ್ಟದ ಚಿಹ್ನೆ: ಬಾಕ್ಸ್
11/ 12
ಕುಂಭ: ನಿಮಗೆ ಇಂದು ಆರಾಮದಾಯಕ ದಿನ. ನಿಮ್ಮ ಪೋಷಕರು ನಿಮ್ಮಿಂದ ಸಮಯವನ್ನು ಅಪೇಕ್ಷಿಸುತ್ತಿದ್ದಾರೆ, ಅವರೊಂದಿಗೆ ಮಾತನಾಡಿ. ವಿನಾಕಾರಣ ಕಾಲಹರಣವನ್ನು ತಪ್ಪಿಸಿ. ಅದೃಷ್ಟದ ಚಿಹ್ನೆ: ಲ್ಯಾಂಪ್
12/ 12
ಮೀನ: ನೀವು ಕೆಲವು ಪ್ರಭಾವಿ ವ್ಯಕ್ತಿಗಳೊಂದಿಗೆ ಬೆರೆಯುವ ಸಾಧ್ಯತೆಗಳಿವೆ. ಮನೆಯಿಂದ ದೂರ ಇರುವುದು ಬೇಸರ ತರಿಸಬಹುದು. ನೀವು ಕಾಯುತ್ತಿದ್ದ ವಿಷಯ ಸಕಾರಗೊಳ್ಳಲಿದೆ ಆದರೆ ಬೇರೆ ರೂಪದಲ್ಲಿ ನಡೆಯುವ ಸಾಧ್ಯತೆಯಿದೆ. ಅದೃಷ್ಟದ ಚಿಹ್ನೆ: ಒಳಾಂಗಣ ಗಿಡ