Daily Horoscope: ಸಣ್ಣ ತಪ್ಪಿನಿಂದ ಅನಾಹುತವಾಗಬಹುದು, ಈ ದಿನ ಸ್ವಲ್ಪ ಎಚ್ಚರಿಕೆಯಿರಲಿ
ಸಿತಾರಾ ಹೆಸರಿನ ವೆಲ್ನೆಸ್ ಸ್ಟುಡಿಯೋ (Sitara Wellness Studio) ವೆಬ್ಸೈಟ್ ಅನ್ನು ನಡೆಸುತ್ತಿರುವ ಪೂಜಾ ಚಂದ್ರ (Puja Chandra) ಆಧ್ಯಾತ್ಮಿಕ ನೆಲೆಯಲ್ಲಿ ಜೀವನದ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಿದ್ದಾರೆ. ಹರೆಯದಿಂದಲೂ ರಾಶಿ ಭವಿಷ್ಯ, ಆಧ್ಯಾತ್ಮಿಕತೆಗೆ ಒತ್ತು ನೀಡುತ್ತಾ ಬಂದಿರುವ ಇವರು ಹೀಲಿಂಗ್ ಸೆಶನ್ಗಳನ್ನು ಕೂಡ ನಡೆಸುತ್ತಾರೆ. ರಾಶಿ ಭವಿಷ್ಯಗಳನ್ನು ಮಾಹಿತಿಪೂರ್ಣವಾಗಿ ತಿಳಿಸುವುದರಲ್ಲೂ ನಿಷ್ಣಾತರಾಗಿರುವ ಇವರು ರಾಶಿಯ ವಿಶೇಷತೆಯನ್ನು ಧನಾತ್ಮಕವಾಗಿ ತಿಳಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ.
ಮೇಷ: ಆಲಸ್ಯದ ಭಾವನೆ ಮತ್ತೆ ಮೂಡಬಹುದು. ನೀವು ಅನಗತ್ಯವಾಗಿ ಕೆಲಸ ಮಾಡುತ್ತಾ ಕಾಲಹರಣ ಮಾಡಬಹುದು. ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿ ಇರಲಿ. ಅದೃಷ್ಟದ ಚಿಹ್ನೆ - ಕನ್ನಡಿ
2/ 12
ವೃಷಭ: ನಿಮ್ಮ ಸಂಗಾತಿಗಾಗಿ ಈ ದಿನ ಸಮಯ ಮೀಸಲಿಡಿ. ಕೆಲವೊಂದು ಕೆಲಸ ನಿಮಗೆ ನಿರಾಸೆ ಮೂಡಿಸಬಹುದು. ಆದರೆ ಚಿಂತೆ ಬೇಡ. ವೈಯಕ್ತಿಕ ಬದುಕಿನ ಬಗ್ಗೆ ಸ್ವಲ್ಪ ಗಮನಕೊಡಿ.ಅದೃಷ್ಟದ ಚಿಹ್ನೆ - ಹಸಿರು ಗಾಜಿನ ಬಾಟಲಿ
3/ 12
ಮಿಥುನ: ಹೊಸ ವ್ಯಕ್ತಿಯ ಆಗಮನದಿಂದ ಕೆಲಸದಲ್ಲಿ ಅಗತ್ಯವಾದ ವಿಶ್ರಾಂತಿ ಲಭಿಸುತ್ತದೆ. ನಿಮ್ಮ ನೆನಪಿನ ಶಕ್ತಿ ಅನಗತ್ಯ ಹೆಚ್ಚುವರಿ ಕೆಲಸದಿಂದ ನಿಮ್ಮನ್ನು ಉಳಿಸುತ್ತದೆ. ಕೆಲವು ಕ್ರೀಡಾ ಚಟುವಟಿಕೆಗಳನ್ನು ಮಾಡುವುದು ನಿಮಗೆ ಸಹಾಯ ಮಾಡುತ್ತದೆ. ಅದೃಷ್ಟದ ಚಿಹ್ನೆ - ಕಾರಂಜಿ
4/ 12
ಕಟಕ: ನಿಮ್ಮ ಕುಟುಂಬದ ಜೊತೆ ಉತ್ತಮ ಸಮಯ ಕಳೆಯುವುದು ನಿಮ್ಮ ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಆರೋಗ್ಯಕ್ಕೆ ಸಂಬಂಧಿಸಿದ ಕೆಲ ಚಟುವಟಿಕೆಗಳು ನಿಮಗೆ ಶಕ್ತಿ ನೀಡುತ್ತದೆ. ಅದೃಷ್ಟದ ಚಿಹ್ನೆ - ಪುರಾತನ ಗಡಿಯಾರ
5/ 12
ಸಿಂಹ: ನಿಮ್ಮ ತಪ್ಪಿನಿಂದ ಬೇಸರಗೊಂಡಿರುವ ವ್ಯಕ್ತಿಯನ್ನು ಮತ್ತೆ ಮನವೊಲಿಸುವ ಅಗತ್ಯವಿದೆ. ಅವರ ಆಶೀರ್ವಾದ ನಿಮಗೆ ಬಹಳ ಅಗತ್ಯ ನೆನಪಿರಲಿ. ಸಣ್ಣ ಟ್ರಿಪ್ ಹೋಗಿ ಬನ್ನಿ. ಅದೃಷ್ಟದ ಚಿಹ್ನೆ - ಆಕಾಶ
6/ 12
ಕನ್ಯಾ: ನಿಮ್ಮ ಕೆಲಸಕ್ಕೆ ಇಂದು ಪ್ರಶಂಸೆ ವ್ಯಕ್ತವಾಗಲಿದೆ. ಅಭಿಮಾನಿಗಳು ಹೆಚ್ಚಾಗಬಹುದು. ಸೆಲೆಬ್ರಿಟಿಯೊಬ್ಬರ ಸಂಪರ್ಕ ಮಾಡಲಿದ್ದೀರಿ. ನಿಮ್ಮ ಕೆಲಸದ ಬಗ್ಗೆ ನೀವು ಸಂದೇಹ ಇಟ್ಟುಕೊಳ್ಳಬಾರದು. ಅದೃಷ್ಟದ ಚಿಹ್ನೆ – ಸಂಖ್ಯೆಗಳ ಬೋರ್ಡ್
7/ 12
ತುಲಾ: ಸಣ್ಣ ತಪ್ಪಿನ ಕಾರಣದಿಂದ ಕೆಲಸದ ಸ್ಥಳದಲ್ಲಿ ಶಾಂತಿ ಹದಗೆಡಬಹುದು. ಹಳೆಯ ಸ್ನೇಹಿತರ ಭೇಟಿಯಾಗುವ ಸಾಧ್ಯತೆ ಇದೆ. ಈ ದಿನ ಹೆಚ್ಚು ಕೆಲಸ ಮಾಡಬೇಕಾಗುವ ಸಾಧ್ಯತೆ ಇರುತ್ತದೆ. ಅದೃಷ್ಟದ ಚಿಹ್ನೆ - ರೇಷ್ಮೆ ಸ್ಕಾರ್ಫ್
8/ 12
ವೃಶ್ಚಿಕ: ಈಗ ಆಫೀಸ್ನಲ್ಲಿ ಆಗುತ್ತಿರುವ ಘಟನೆ ಹಾಗೈ ಪರಿಸ್ಥಿತಿಯ ಬಗ್ಗೆ ಗಮನವಿರಲಿ. ನಿಮ್ಮ ಸಲಹೆ ಮುಂದಿನ ದಿನಗಳಲ್ಲಿ ನಿಮಗೆ ಪ್ರಯೋಜನಕಾರಿಯಾಗಬಹುದು. ರೊಮ್ಯಾಂಟಿಕ್ ದಿನ ಇದು. ಅದೃಷ್ಟದ ಚಿಹ್ನೆ –ಬುಕ್
9/ 12
ಧನುಸ್ಸು: ಈ ದಿನ ಒಳ್ಳೆಯ ಸುದ್ದಿ ನಿಮಗೆ ಸಿಗಲಿದೆ. ನಿಧಾನವಾದರೂ ಕೆಲಸದಲ್ಲಿ ಪ್ರಗತಿ ಕಾಣಲಿದೆ. ದೂರದ ಸಂಬಂಧಿ ಜೊತೆ ಮಾತನಾಡುವ ಸಾಧ್ಯತೆ ಇರುತ್ತದೆ. ಅದೃಷ್ಟ ಚಿಹ್ನೆ - ಹೂವು
10/ 12
ಮಕರ: ಪಾಲುದಾರಿಕೆಯಲ್ಲಿ ಹೊಸ ಯೋಜನೆ ಆರಂಭ ಮಾಡಬಹುದು. ನಿಮ್ಮ ಗುರಿ ತಲುಪಲು ರಸ್ತೆಯು ಸ್ಪಷ್ಟವಾಗಿ ಮತ್ತು ನೇರವಾಗಿ ಕಾಣಿಸಬಹುದು. ನಿಮ್ಮ ಟೀಂನಲ್ಲಿ ಕೆಲ ಸಮಸ್ಯೆಗಳು ಕಾಣಿಸಬಹುದು. ಅದೃಷ್ಟದ ಚಿಹ್ನೆ - ನೀಲಿ ಬೂಟುಗಳು
11/ 12
ಕುಂಭ: ಕೆಲ ಸಲಹೆಗಳನ್ನು ಪಾಲಿಸುವುದು ಅಗತ್ಯವಾಗುತ್ತದೆ. ಈ ದಿನ ಆಯಾಸವಾಗುವುದು ಸಹಜ, ಸ್ವಲ್ಪ ವಿಶ್ರಾಂತಿ ಪಡೆಯುವುದು ಮುಖ್ಯ. ಕೆಲವರ ಬಗ್ಗೆ ಸತ್ಯ ಅರ್ಥ ಆಗುತ್ತದೆ. ಅದೃಷ್ಟದ ಚಿಹ್ನೆ - ನೀರಿನ ದೇಹ
12/ 12
ಮೀನ: ಸ್ನೇಹಿತನಿಗೆ ಕುಟುಂಬದ ವಿಷಯಗಳಲ್ಲಿ ಸಹಾಯ ಬೇಕಾಗಬಹುದು. ಯಾವುದೇ ಮಾಹಿತಿ ಇಲ್ಲದೇ ಇತರರ ಬಗ್ಗೆ ಟೀಕೆ ಮಾಡಲು ಹೋಗಬೇಡಿ. ಉಳಿಸಿದ ಹಣ ಈಗ ಸಹಾಯಕ್ಕೆ ಬರುತ್ತದೆ. ಅದೃಷ್ಟದ ಚಿಹ್ನೆ - ಹೂದಾನಿ