Daily Horoscope: ಆಸೆಯೊಂದು ಇಂದು ನಿಮ್ಮ ನಿರಾಸೆಗೆ ಕಾರಣವಾಗುತ್ತದೆ, ಮರೆತು ಮುನ್ನಡೆಯಿರಿ
ಸಿತಾರಾ ಹೆಸರಿನ ವೆಲ್ನೆಸ್ ಸ್ಟುಡಿಯೋ (Sitara Wellness Studio) ವೆಬ್ಸೈಟ್ ಅನ್ನು ನಡೆಸುತ್ತಿರುವ ಪೂಜಾ ಚಂದ್ರ (Puja Chandra) ಆಧ್ಯಾತ್ಮಿಕ ನೆಲೆಯಲ್ಲಿ ಜೀವನದ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಿದ್ದಾರೆ. ಹರೆಯದಿಂದಲೂ ರಾಶಿ ಭವಿಷ್ಯ, ಆಧ್ಯಾತ್ಮಿಕತೆಗೆ ಒತ್ತು ನೀಡುತ್ತಾ ಬಂದಿರುವ ಇವರು ಹೀಲಿಂಗ್ ಸೆಶನ್ಗಳನ್ನು ಕೂಡ ನಡೆಸುತ್ತಾರೆ. ರಾಶಿ ಭವಿಷ್ಯಗಳನ್ನು ಮಾಹಿತಿಪೂರ್ಣವಾಗಿ ತಿಳಿಸುವುದರಲ್ಲೂ ನಿಷ್ಣಾತರಾಗಿರುವ ಇವರು ರಾಶಿಯ ವಿಶೇಷತೆಯನ್ನು ಧನಾತ್ಮಕವಾಗಿ ತಿಳಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ.
ಮೇಷ: ಹೊಸ ವಿಷಯಕ್ಕೆ ಒಪ್ಪಿಗೆ ಕೊಡುವ ಮೊದಲು ನಿಮ್ಮ ಬಗ್ಗೆ ನಂಬಿಕೆ ಇರಲಿ. ಕೆಲವೊಮ್ಮೆ ಅನುಭವವನ್ನು ನೆನಪು ಮಾಡಿಕೊಳ್ಳುವುದು ಉತ್ತಮ. ಉತ್ತಮ ಅವಕಾಶ ಬರುವ ದಿನ ಇದು. ಅದೃಷ್ಟದ ಚಿಹ್ನೆ: ಬುಕ್
2/ 12
ವೃಷಭ: ಈ ದಿನ ನಿಮಗೆ ಎಲ್ಲಾ ಕೆಲಸದಲ್ಲೂ ಯಶಸ್ಸು ಸಿಗುತ್ತದೆ. ನಿಮ್ಮ ಸುತ್ತ ನಡೆಯುತ್ತಿರುವ ಗೊಂದಲದಿಂದ ದೂರವಿರಿ. ನಿಮ್ಮ ಅವಶ್ಯಕತೆಗಳತ್ತ ಗಮನಕೊಡಿ. ಅದೃಷ್ಟದ ಚಿಹ್ನೆ - ಚೀಲ
3/ 12
ಮಿಥುನ: ನಿಮ್ಮ ಮಾತನ್ನು ಮೊದಲೇ ಹೇಳಿರುವುದರಿಂದ ಇಂದು ಲಾಭ ಸಿಗಲಿದೆ. ಇತರರಿಂದ ಗೌರವ ಮತ್ತು ವಿಶ್ವಾಸ ಸಿಗಲಿದೆ. ಸ್ಟಾರ್ಟ್ಅಪ್ಗಳಲ್ಲಿರುವವರು ಕೆಲಸದಲ್ಲಿ ಹೆಚ್ಚಿನ ಲಾಭ ಸಿಗಲಿದೆ. ಅದೃಷ್ಟದ ಚಿಹ್ನೆ - ಒಳಾಂಗಣ ಸಸ್ಯ
4/ 12
ಕಟಕ: ಈ ದಿನ ಸ್ವಲ್ಪ ನಿಧಾನಗತಿಯಲ್ಲಿ ಇರಲಿದೆ. ನಿಮ್ಮ ಚೈತನ್ಯ ಮತ್ತು ಶಕ್ತಿಯನ್ನು ಪುನರುಜ್ಜೀವನಗೊಳಿಸುವ ದಿನ ಇದು. ನಿಮ್ಮ ನಿಗದಿತ ಕಾರ್ಯಗಳನ್ನು ಪೂರ್ಣಗೊಳಿಸಿದರೆ ಸಂತೋಷವಾಗುತ್ತದೆ. ನಿಮ್ಮ ಸಂಗಾತಿ ಯಾವಾಗಲೂ ವ್ಯಕ್ತಪಡಿಸದಿರುವ ಮಾತನ್ನ ಇಂದು ಹೇಳಬಹುದು. ಅದೃಷ್ಟದ ಚಿಹ್ನೆ - ಗಾಜಿನ ಟೇಬಲ್
5/ 12
ಸಿಂಹ: ನೀವು ಇಂದು ಅನೇಕರಿಗೆ ವಿವಿಧ ರೀತಿಯಾಗಿ ಸಹಾಯ ಮಾಡುವ ಸಾಧ್ಯತೆ ಇದೆ. ಆರಂಭದಲ್ಲಿ ನಿರಾಶೆಯನ್ನು ವ್ಯಕ್ತಪಡಿಸಿದ ನಿಮ್ಮ ಪೋಷಕರು ಈಗ ನಿಮ್ಮ ಆಲೋಚನೆಯನ್ನು ಒಪ್ಪಬಹುದು. ಅದೃಷ್ಟದ ಚಿಹ್ನೆ -ಮನೆ
6/ 12
ಕನ್ಯಾ: ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಶಾಂತವಾಗಿರುವುದು ಸಮಸ್ಯೆ ಉಂಟುಮಾಡುತ್ತದೆ ಇದು ಉತ್ತಮವಾಗಿ ಕೆಲಸ ಮಾಡಲು ಹಾಗೂ ನಿಮ್ಮ ಶಕ್ತಿ ಸಾಬೀತುಪಡಿಸಲು ಒಳ್ಳೆಯ ಸಮಯ. ಅದೃಷ್ಟದ ಚಿಹ್ನೆ - ಸಾಕುಪ್ರಾಣಿಗಳ ಅಂಗಡಿ
7/ 12
ತುಲಾ: ಈ ದಿನ ನಿಮಗೆ ಎಲ್ಲಾ ಕಡೆಯಿಂದ ಲಾಭ ಸಿಗಲಿದೆ. ನಿಮಗೆ ಅನಿರೀಕ್ಷಿತ ಅವಕಾಶವ ಸಿಗುವ ಸಾಧ್ಯತೆ ಇದೆ. ಕುಟುಂಬ ಅಥವಾ ಸ್ನೇಹಿತರ ಜೊತೆ ಸಮಯ ಕಳೆಯಿರಿ. ಸಣ್ಣ ಆರೋಗ್ಯ ಸಮಸ್ಯೆ ನಿಮ್ಮನ್ನು ಕಾಡಬಹುದು. ಅದೃಷ್ಟದ ಚಿಹ್ನೆ - ಬೆಳ್ಳಿಯ ಪಾತ್ರೆಗಳು
8/ 12
ವೃಶ್ಚಿಕ: ನಿರಾಶೆಯು ನಿಮ್ಮನ್ನು ಕತ್ತಲೆಗೆ ದೂಡಬಹುದು. ಆದರೆ ಅದನ್ನು ಮರೆತು ಮುಂದುವರಿಯುವುದು ನಿಮಗೆ ಉತ್ತಮ. ನಿಮಗೆ ನೀಡಿರುವ ಆಯ್ಕೆಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ಅದೃಷ್ಟದ ಚಿಹ್ನೆ - ಹೂವು
9/ 12
ಧನುಸ್ಸು: ಬಾಕಿಯಿರುವ ಕೆಲಸಗಳು ಇಂದು ಬೇಗ ಮುಗಿಯಲಿದೆ. ಅದೃಷ್ಟವು ಇಂದು ನಿಮ್ಮ ಕಡೆ ಇದೆ. ವಯಸ್ಸಾದ ವ್ಯಕ್ತಿಯು ಕೆಲವು ಉತ್ತಮ ಸಲಹೆಗಳನ್ನು ನೀಡಬಹುದು. ಅದೃಷ್ಟದ ಚಿಹ್ನೆ: ಒಂದು ಪೇಪರ್ ಬಂಡಲ್
10/ 12
ಮಕರ: ಸ್ವಲ್ಪ ದೂರದ ಪ್ರಯಾಣ ಮಾಡುವ ಸಾಧ್ಯತೆ ಇದೆ. ನಿಮ್ಮ ಬಾಸ್ ಅಥವಾ ಮೇಲಧಿಕಾರಿ ನಿಮ್ಮ ಹೆಗಲ ಮೇಲೆ ದೊಡ್ಡ ಜವಾಬ್ದಾರಿಯನ್ನು ಹಾಕಬಹುದು. ನಿಮ್ಮ ಸಂಗಾತಿಯು ಸಹ ಸಣ್ಣ ಬ್ರೇಕ್ ಬೇಕು ಎನ್ನಬಹುದು. ಅದೃಷ್ಟದ ಚಿಹ್ನೆ - ಹಳದಿ ನೀಲಮಣಿ
11/ 12
ಕುಂಭ: ಯಾವುದೇ ಹೊಸ ಯೋಜನೆಗೆ ಸ್ವಲ್ಪ ಹೆಚ್ಚು ಪ್ರಯತ್ನ ಮತ್ತು ತಾಳ್ಮೆ ಬೇಕಾಗಬಹುದು. ನಿಮ್ಮ ಮಗು ನಿಮ್ಮನ್ನು ಮತ್ತು ನಿಮ್ಮ ಜೀವನಶೈಲಿಯನ್ನು ಗಮನಿಸುತ್ತಿರುತ್ತದೆ ನೆನಪಿರಲಿ. ಬೇರೆಯವರ ರಹಸ್ಯವನ್ನು ಇಟ್ಟುಕೊಳ್ಳುವುದು ಸವಾಲನ್ನು ಸೃಷ್ಟಿ ಮಾಡುತ್ತದೆ. ಅದೃಷ್ಟದ ಚಿಹ್ನೆ - ಕೇಕ್
12/ 12
ಮೀನ: ಕೆಲವು ತುರ್ತು ದಾಖಲೆಗಳು ನಿಮಗೆ ಇಂದು ಬೇಕಾಗುತ್ತದೆ. ನಿಮಗೆ ಅತ್ಯಂತ ಅನಿರೀಕ್ಷಿತ ವ್ಯಕ್ತಿಯಿಂದ ಕರೆ ಬರಬಹುದು. ಆಪ್ತ ಸ್ನೇಹಿತರ ಕಾರಣದಿಂದ ಸಂಜೆ ಮಜಾವಾಗಿರುತ್ತದೆ. ಹಣಕಾಸು ಲಾಭ ಆಗಲಿದೆ. ಅದೃಷ್ಟದ ಚಿಹ್ನೆ: ಡೈರಿ